Asianet Suvarna News Asianet Suvarna News

ಇಡ್ಲಿ ಪ್ರಿಯರಿಗೆ ಈ ಲೇಖನ ಸಮರ್ಪಣೆ!

ಇಡ್ಲಿ ಇಲ್ಲದೇ ಬ್ರೇಕ್ ಫಾಸ್ಟ್ ಸಂಪೂರ್ಣವಾಗುವುದೇ ಇಲ್ಲ. ಬಿಸಿಬಿಸಿ ಹಬೆಯಾಡುತ್ತಿರುವ, ಮುಟ್ಟಿದರೆ ಮಲ್ಲಿಗೆಯಂತೆ ಹಗುರವಾಗಿರುವ, ತಿನ್ನಲೂ ಕೂಡಾ ರುಚಿಯಾಗಿರುವ ಇಡ್ಲಿಯೆಂದರೆ ಎಲ್ಲರಿಗೂ ಇಷ್ಟ. ಇಡ್ಲಿ ಜೊತೆ ರುಚಿಯಾದ ಚಟ್ನಿ/ ಸಾಂಬಾರ್ ಇದ್ದರಂತೂ ವಾಹ್..! ಎನಿಸುವಂತಿರುತ್ತದೆ. ಇಂದು ವಿಶ್ವ ಇಡ್ಲಿ ದಿನ. ಇಡ್ಲಿ ಪ್ರಿಯರಿಗೆಲ್ಲಾ ಈ ಇಡ್ಲಿ ಲೇಖನ ಸಮರ್ಪಣೆ!

Karnataka most favorite breakfast Soft and spongy idliees
Author
Bengaluru, First Published Mar 30, 2019, 1:58 PM IST

ಇಡ್ಲಿ ಇಲ್ಲದೇ ಬ್ರೇಕ್ ಫಾಸ್ಟ್ ಸಂಪೂರ್ಣವಾಗುವುದೇ ಇಲ್ಲ. ಬಿಸಿಬಿಸಿ ಹಬೆಯಾಡುತ್ತಿರುವ, ಮುಟ್ಟಿದರೆ ಮಲ್ಲಿಗೆಯಂತೆ ಹಗುರವಾಗಿರುವ, ತಿನ್ನಲೂ ಕೂಡಾ ರುಚಿಯಾಗಿರುವ ಇಡ್ಲಿಯೆಂದರೆ ಎಲ್ಲರಿಗೂ ಇಷ್ಟ. ಇಡ್ಲಿ ಜೊತೆ ರುಚಿಯಾದ ಚಟ್ನಿ/ ಸಾಂಬಾರ್ ಇದ್ದರಂತೂ ವಾಹ್..! ಎನಿಸುವಂತಿರುತ್ತದೆ. ಇಂದು ವಿಶ್ವ ಇಡ್ಲಿ ದಿನ. ಇಡ್ಲಿ ಪ್ರಿಯರಿಗೆಲ್ಲಾ ಈ ಇಡ್ಲಿ ಲೇಖನ ಸಮರ್ಪಣೆ!

ಇಡ್ಲಿ ಯಾಕೆ ಎಲ್ಲರಿಗೂ ಇಷ್ಟವಾಗುತ್ತದೆ? ಇಲ್ಲಿದೆ ಕಾರಣ. 

ತೂಕ ಇಳಿಸಲು 

ಇಡ್ಲಿ ನ್ಯೂಟ್ರಿಶಿಯಸ್ ಫುಡ್ ಆಗಿದ್ದು ಇದರಲ್ಲಿ ಹೆಚ್ಚು ಕ್ಯಾಲರಿ ಇರುವುದಿಲ್ಲ. ಒಂದು ಸಿಂಗಲ್ ಇಡ್ಲಿಯಲ್ಲಿ 39 ಕ್ಯಾಲರಿ ಇದ್ದು, ಒಂದು ಪ್ಲೇಟ್ ನಲ್ಲಿ 100 ಕ್ಯಾಲರಿ ಒಳಗಿರುತ್ತದೆ. 

ಸುಲಭವಾಗಿ ಜೀರ್ಣವಾಗುತ್ತದೆ

ಬೇರೆ ತಿಂಡಿಗಳಿಗೆ ಹೋಲಿಸಿದರೆ ಇಡ್ಲಿ ಬೇಗ ಜೀರ್ಣವಾಗುವ ಆಹಾರ. ಹೊಟ್ಟೆಗೂ ಹಿತವಾಗಿರುತ್ತದೆ. 

ಮಲಬದ್ಧತೆಗೆ ಬೆಸ್ಟ್ ಫುಡ್! 

ಇಡ್ಲಿಯಲ್ಲಿ ಹೈ ಫೈಬರ್ ಅಂಶವಿರುತ್ತದೆ. ಅಜೀರ್ಣದಿಂದ ಬಳಲುತ್ತಿದ್ದವರು ಇಡ್ಲಿ ತಿಂದರೆ ಬೇಗ ಆರಾಮವಾಗುತ್ತದೆ. 

ಹೃದಯದ ಆರೋಗ್ಯಕ್ಕೂ ಮದ್ದು 

ಇಡ್ಲಿಯಲ್ಲಿ ಕಡಿಮೆ ಸೋಡಿಯಂ ಇರುತ್ತದೆ. ಹಾಗೂ ಕೊಲೆಸ್ಟ್ರಾಲ್ ಅಂಶವೂ ಕಡಿಮೆ ಇರುತ್ತದೆ. ಹಾಗಾಗಿ ಹೃದಯದ ಆರೋಗ್ಯಕ್ಕೂ ಒಳ್ಳೆಯದು. 

ಪ್ಯಾಕ್ ಮಾಡುವುದು ಸುಲಭ 

ಹೊಟೇಲಿಗೆ ಹೋಗಿ ಇಡ್ಲಿ ಪಾರ್ಸೆಲ್ ತರುವುದು ಸುಲಭ. ಪ್ರಯಾಣ ಮಾಡುವಾಗ ತೆಗೆದುಕೊಂಡು ಹೋಗುವುದು ಸುಲಭ. 

ಇಡ್ಲಿ ಇತಿಹಾಸವೇನು? 
ಇದರ ಮೂಲವೇನು ಎಂದು ಹುಡುಕುತ್ತಾ ಹೋದರೆ ಖಚಿತವಾದ ಮಾಹಿತಿ ಸಿಗುವುದಿಲ್ಲ. ಕ್ರಿ. ಶ 800 ರಿಂದ 1200 ನೇ ಇಸವಿಯಲ್ಲಿ ಇದು ಹುಟ್ಟಿದ್ದು ಎಂದು ಇತಿಹಾಸ ಹೇಳುತ್ತದೆ. ಅರಬ್ಬಿಯನ್ನರು ಭಾರತಕ್ಕೆ ಇಡ್ಲಿಯನ್ನು ಪರಿಚಯಿಸಿದರು. ಪ್ರತಿ ವರ್ಷ ಮಾರ್ಚ್ 30 ರಂದು ಇಡ್ಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಮೊದಲು ಶುರುವಾಗಿದ್ದು ಚೆನ್ನೈನಲ್ಲಿ.

ಬೆಂಗಳೂರಿನ ಮಂದಿ ಬ್ರೇಕ್‌ಫಾಸ್ಟ್‌ಗೆ ಇಡ್ಲಿಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಅಧ್ಯಯನವೊಂದು ಹೇಳುತ್ತದೆ.

Follow Us:
Download App:
  • android
  • ios