ಕೆಜಿಗೆ ₹35000 ಇಂಗಿನಿಂದ ತಯಾರಾಗೋ ಈ ಆಹಾರದ ಬೆಲೆ ಹತ್ತು ರೂಪಾಯಿ!
ನಮ್ಮಲ್ಲಿರುವ ರುಚಿ ಆಹಾರ, ಖಾದ್ಯ ಪ್ರೇಮಿಗಳನ್ನು ಸೆಳೆಯುತ್ತೆ. ದೂರದೂರಿಗೆ ಹೋಗಿ ಅಲ್ಲಿನ ಪ್ರಸಿದ್ಧ ಆಹಾರ ಸೇವನೆ ಮಾಡ್ತೇವೆ. ರಾಜಸ್ಥಾನಕ್ಕೆ ನೀವು ಹೋದ್ರೆ ಅಲ್ಲಿನ ಕಧಿ ಕಚೋರಿ ಮಿಸ್ ಮಾಡ್ಬೇಡಿ. ಮನೆಯಲ್ಲಿ ಅದನ್ನು ತಯಾರಿಸೋದು ಹೇಗೆ ಎಂಬ ವಿವರ ಇಲ್ಲಿದೆ.
ಭಾರತೀಯರು ಆಹಾರ ಪ್ರೇಮಿಗಳು. ಬಗೆ ಬಗೆ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡ್ತಾರೆ. ದಕ್ಷಿಣ ಭಾರತ, ಉತ್ತರ ಭಾರತ ಎರಡೂ ಕಡೆ ಭಿನ್ನ ಆಹಾರಗಳಿವೆ. ದಕ್ಷಿಣ ಭಾರತದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ದೋಸೆ, ಇಡ್ಲಿ, ಉಪ್ಪಿಟ್ಟು, ಪುಲಾವ್ ಘಮ ಮೂಗಿಗೆ ಬಡಿಯುತ್ತಿದ್ದರೆ ಉತ್ತರ ಭಾರತೀಯರ ಆಹಾರಗಳೇ ಬೇರೆ. ರಾಜಸ್ಥಾನದಲ್ಲಿ ಬಹುತೇಕರು ಬೆಳಿಗ್ಗೆ ಕಧಿ ಕಚೋರಿ ಸೇವನೆ ಮಾಡ್ತಾರೆ. ಕಧಿ ಕಚೋರಿ ಬೀದಿ ಆಹಾರವಾಗಿದೆ. ಇದನ್ನು ಸೇವನೆ ಮಾಡಲು ಜನರು ಅಂಗಡಿ ಮುಂದೆ ಸಾಲುಗಟ್ಟಿ ನಿಲ್ಲೋದಿದೆ. ಬೆಳ್ಳಂಬೆಳಿಗೆ ಅವರು ತಿನ್ನುವ ಈ ಕಧಿ ಕಚೋರಿ ಎರಡು ಆಹಾರವಾಗಿದೆ.
ಕಧಿ (Kadhi) ಯನ್ನು ಅರಿಶಿನ, ಜೀರಿಗೆ, ಕೊತ್ತಂಬರಿ, ಮೊಸರು ಸೇರಿದಂತೆ ಮಸಾಲೆ ಪದಾರ್ಥ ಸೇರಿಸಿ ಸಾಸ್ ರೀತಿಯಲ್ಲಿ ತಯಾರಿಸಲಾಗುತ್ತದೆ. ಇನ್ನು ಕಚೋರಿ (Kachori) ಕರಿದ ತಿಂಡಿ. ಆಲೂಗಡ್ಡೆ, ಬಟಾಣಿ ಸೇರಿದಂತೆ ಹಿಟ್ಟನ್ನು ಬೆರೆಸಿ ತಯಾರಿಸುವ ಆಹಾರವಾಗಿದೆ. ಈ ಕಧಿ ಕಚೋರಿ ರಾಜಸ್ಥಾನದ ಭರತ್ಪುರದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ನಾವು ಇಡ್ಲಿ ಸೇವನೆ ಮಾಡಲು ದೂರದ ಹೊಟೇಲ್ ಗಳಿಗೆ ಹೋದಂತೆ ಅಲ್ಲಿ ಕಧಿ ಕಚೋರಿ ತಿನ್ನಲು ಭರತ್ಪುರದ ಬ್ರಹ್ಮಾಬಾದ್ ಪಟ್ಟಣದ ಅಂಗಡಿಗೆ ಬರ್ತಾರೆ. ದೂರದೂರುಗಳಿಂದ ಈ ಅಂಗಡಿಗೆ ಬರುವ ಜನರು, ರುಚಿ ರುಚಿ ಕಧಿ ಕಚೋರಿ ಎಂಜಾಯ್ ಮಾಡ್ತಾರೆ.
ಬಿಲ್ ಬೇಡ, ಚಿಕನ್ ಇರೋದನ್ನ ಹೇಳೋದೂ ಬೇಡ, ಮನೆಯಲ್ಲಿ ನಾನ್ ವೆಜ್ ತಿನ್ನೋ ಹಾಗಿಲ್ಲ; ಗ್ರಾಹಕರೊಬ್ಬರ ಅಳಲು ವೈರಲ್
ಇಲ್ಲಿ ಕಧಿ ಕಚೋರಿಯನ್ನು ಪುಷ್ಪೇಂದ್ರ ಸಿಂಗ್ ತಯಾರಿಸುತ್ತಾರೆ. ಕಧಿ ಕಚೇರಿ ತಯಾರಿಸೋದು ಸುಲಭವಲ್ಲ. ಅವರು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ತಮ್ಮ ಕೆಲಸ ಶುರು ಮಾಡ್ತಾರೆ. ಮನೆಯಲ್ಲಿಯೇ ಮಸಾಲೆ ತಯಾರಿಸಿ ಎರಡರಿಂದ ಮೂರು ಗಂಟೆ ಕಧಿಯನ್ನು ಕುದಿಸುತ್ತಾರೆ. ಈ ಕಧಿಯ ಇನ್ನೊಂದು ವಿಶೇಷ ಅಂದ್ರೆ ಅದಕ್ಕೆ ಹಾಕುವ ಇಂಗು. ಪುಷ್ಪೇಂದ್ರ ಸಿಂಗ್, ಕಧಿ ತಯಾರಿಸಲು ಕೆ.ಜಿಗೆ 35,000 ಸಾವಿರ ರೂಪಾಯಿ ಇರುವ ಇಂಗನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕುತ್ತಾರೆ. ಇದು ಕಧಿಯ ರುಚಿಯನ್ನು ದುಪ್ಪಟ್ಟುಗೊಳಿಸುತ್ತದೆ. ಇಲ್ಲಿ ಸಿಗುವ ಕಧಿ ತುಂಬಾ ರುಚಿಯಾಗಿದ್ದು, ಅದ್ರ ಬೆಲೆ ಒಂದು ಪ್ಲೇಟ್ ಗೆ ಹತ್ತು ರೂಪಾಯಿಯಿಂದ ನಲವತ್ತು ರೂಪಾಯಿವರೆಗೆ ಇದೆ.
ಕದಿ ಕಚೋರಿ ತಯಾರಿಸುವ ವಿಧಾನ : ಕಧಿ ತಯಾರಿಸಲು ಎಣ್ಣೆ, ಇಂಗು, ನೀರು, ಕಡಲೆ ಹಿಟ್ಟು, ಮಾವಿನ ಪೌಡರ್, ಮೆಣಸಿನ ಪುಡಿ ಮತ್ತು ಅರಿಶಿನ ಪುಡಿಯನ್ನು ಬಳಸಬೇಕಾಗುತ್ತದೆ. ನೀವು ಮೊದಲು ಕಡಲೆ ಹಿಟ್ಟಿಗೆ ನೀರು, ಮಾವಿನ ಪೌಡರ್, ಮೆಣಸಿನ ಪುಡಿ ಮತ್ತು ಅರಿಶಿನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ ಒಗ್ಗರಣೆ ನೀಡಿ, ಇಂಗು ಹಾಕಿ. ಆ ನಂತ್ರ ಕಡಲೆ ಹಿಟ್ಟಿನ ಮಿಶ್ರಣವನ್ನು ಒಗ್ಗರಣೆಗೆ ಹಾಕಿ 45 ನಿಮಿಷಗಳ ಕಾಲ ಕುದಿಸಿ. ಕುದ್ದ ನಂತರ ಉಪ್ಪು ಸೇರಿಸಿ, ಎರಡು ನಿಮಿಷ ಬಿಟ್ಟು ಗ್ಯಾಸ್ ಆಫ್ ಮಾಡಿ.
ಕಚೋರಿ ಮಾಡುವ ವಿಧಾನ : ಕಚೋರಿ ಮಾಡಲು ಮೈದಾ ಹಿಟ್ಟು, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಸೋಂಪು, ಕೊತ್ತಂಬರಿ ಬೀಜ, ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ, ಕರಿ ಮೆಣಸು, ನೆನೆಸಿದ ಉದ್ದಿನಬೇಳೆ, ಒಣಗಿದ ಮಾವಿನ ಪುಡಿ, ಮೆಣಸಿನ ಪುಡಿ, ಉಪ್ಪು, ಹಸಿರು ಕೊತ್ತಂಬರಿ ಸೊಪ್ಪು ಅಗತ್ಯವಿದೆ. ನೀವು ಇದಕ್ಕೆ ಆಲೂಗಡ್ಡೆ, ಈರುಳ್ಳಿ ಸೇರಿದಂತೆ ನಿಮ್ಮಿಷ್ಟದ ತರಕಾರಿಯನ್ನು ಸ್ಪಪ್ಪಿಂಗ್ ಗೆ ಬಳಸಬಹುದು.
ಈ ಪೂರಿಗಳನ್ನು ಎಷ್ಟ್ ಬೇಕಾದ್ರೂ ತಿನ್ನಿ, ಏಕಂದ್ರೆ ಇದನ್ನು ಫ್ರೈ ಮಾಡಿದ್ದು ಎಣ್ಣೇಲಲ್ಲ, ನೀರಲ್ಲಿ!
ನಾನ್ ಸ್ಟಿಕ್ ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಜೀರಿಗೆ, ಶುಂಡಿ, ಬೆಳ್ಳುಳ್ಳಿ, ಸೋಂಪು, ಕೊತ್ತಂಬರಿ ಬೀಜ, ಹಸಿರು ಮೆಣಸಿನಕಾಯಿ ಮತ್ತು ಪುಡಿ ಮಾಡಿದ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ. ಈಗ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಫ್ರೈ ಮಾಡಿ. ಒಣ ಮಾವಿನಕಾಯಿ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಮಸಾಲೆ ತಣ್ಣಗಾಗಲು ಬಿಡಿ. ಮೈದಾ ಹಿಟ್ಟನ್ನು ನೀರು ಹಾಕಿ ಕಲಸಿಕೊಳ್ಳಿ. ನಂತ್ರ ಮೈದಾ ಹಿಟ್ಟಿನಲ್ಲಿ ಈ ಮಸಾಲೆಯನ್ನು ಸ್ಟಪ್ ಮಾಡಿ, ಪುರಿಯ ಆಕಾರ ನೀಡಿ, ಎಣ್ಣೆಯಲ್ಲಿ ಫ್ರೈ ಮಾಡಿ. ಕಚೋರಿ ಮೇಲೆ ಕಧಿ ಹಾಕಿ ಅದನ್ನು ಸಾರ್ವ್ ಮಾಡಿ.