ಬಿಲ್ ಬೇಡ, ಚಿಕನ್ ಇರೋದನ್ನ ಹೇಳೋದೂ ಬೇಡ, ಮನೆಯಲ್ಲಿ ನಾನ್ ವೆಜ್ ತಿನ್ನೋ ಹಾಗಿಲ್ಲ; ಗ್ರಾಹಕರೊಬ್ಬರ ಅಳಲು ವೈರಲ್
ಆಹಾರದಲ್ಲಿ ಚಿಕನ್ ಇದ್ದರೂ ಅದನ್ನು ಎಲ್ಲಿಯೂ ಉಲ್ಲೇಖಿಸದೇ ಮನೆಗೆ ತಲುಪಿಸಿ ಹಾಗೂ ಜತೆಗೆ ಬಿಲ್ ಕೂಡ ಇಡಬೇಡಿ ಎಂದು ಮನೆಯಲ್ಲಿ ಅಪ್ಪಟ ಸಸ್ಯಾಹಾರ ಪಾಲನೆ ಮಾಡುವ ಗ್ರಾಹಕರೊಬ್ಬರು ಆನ್ ಲೈನ್ ಫುಡ್ ಡೆಲಿವರಿ ಸಂದರ್ಭ ಮಾಡಿರುವ ಮನವಿಯೊಂದು ತಮಾಷೆಯಾಗಿ ಪರಿಣಮಿಸಿದೆ.
ಆನ್ ಲೈನ್ ಮೂಲಕ ಆಹಾರ ಆರ್ಡರ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಅನಿವಾರ್ಯ ಎಂಬಂತಾಗಿದೆ. ಹಬ್ಬಗಳಲ್ಲಿ, ವೀಕೆಂಡ್ ಗಳಲ್ಲಿ, ಮನೆಗೆ ಅತಿಥಿಗಳು ಬಂದಾಗ ಸೀದಾ ಹೋಟೆಲ್ ನಿಂದ ಆಹಾರ ತರಿಸುವುದು ಸಾಮಾನ್ಯವಾಗಿದೆ. ಇದು ಒಂದು ರೀತಿಯಲ್ಲಿ ಅನುಕೂಲವಾಗಿರುವುದು ನಿಜವಾದರೂ ಗಡಿಬಿಡಿಯಲ್ಲಾದರೂ ವಿಶೇಷ ಆಹಾರ ಸಿದ್ಧಪಡಿಸುವ ಪರಿಪಾಠವೇ ದೂರವಾಗುತ್ತಿದೆ. ಅದಿರಲಿ. ಝೊಮ್ಯಾಟೊ ಮತ್ತಿತರ ವೇದಿಕೆ ಮೂಲಕ ಆಹಾರ ತರಿಸುವಾಗ ಗ್ರಾಹಕರು ವಿಧವಿಧದ ಮನವಿಗಳನ್ನು ಮಾಡುತ್ತಾರೆ. ಗ್ರಾಹಕರ ನೋಟ್ಸ್ ಎನ್ನುವ ಒಂದು ಕಾಲಂ ನೀಡಿರುವುದರಿಂದ ಅವರಿಗೆ ಅನಿಸಿದ್ದನ್ನು ಬರೆದುಕೊಳ್ಳುವ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಈ ಕಾಲಂನಲ್ಲಿ ಭಾರೀ ವಿಚಿತ್ರ ಎನಿಸುವ ನೋಟ್ ಗಳನ್ನು ಬರೆಯುವ ಗ್ರಾಹಕರೂ ಇದ್ದಾರೆ. ಇದೊಂದು ವರ್ಚ್ಯುವಲ್ ಕಾಮಿಡಿ ಕ್ಲಬ್ ನಂತಾಗಿದೆ ಎನ್ನುವ ಮಾತೂ ಇದೆ. ಏಕೆಂದರೆ, ಇಲ್ಲಿನ ಗ್ರಾಹಕರು ಅಂತಿಂಥವರಲ್ಲ. ಮನೆಯ ರೀತಿನೀತಿ, ಸಂಸ್ಕಾರಗಳಿಗೆ ತಕ್ಕಂತೆ ಹೋಟೆಲ್ ಆಹಾರವೂ ಇರಬೇಕು ಎಂದು ಬಯಸುವುದು ಕಂಡುಬರುತ್ತದೆ. ಕೆಲವರು “ಕಡ್ಡಾಯವಾಗಿ ಈರುಳ್ಳಿ ಬಳಸುವಂತಿಲ್ಲ, ಈರುಳ್ಳಿ ಬೇಡ, ಸೀರಿಯಸ್ಲಿ ಈರುಳ್ಳಿ ಬೇಡ’ ಎಂದು ಅತಿ ಗಂಭೀರವಾಗಿ ಮನವಿ ಮಾಡಿಕೊಳ್ಳುವುದೂ ಇದೆ. “ನಮ್ಮ ಮನೆಯಲ್ಲಿ ನಾಯಿಯಿದೆ. ಅದು ಭಾರೀ ನಿದ್ರೆಪ್ರಿಯವಾಗಿದ್ದು, ಗದ್ದಲ ಮಾಡದೇ ಬ್ಯಾಗ್ ಇಟ್ಟು ಹೋಗಿ’ ಎಂದು ತಮ್ಮ ನಾಯಿ ಪ್ರೀತಿಯನ್ನು ವ್ಯಕ್ತಪಡಿಸಿದ್ದ ಜನರೂ ಇದ್ದಾರೆ. ಇದೀಗ ಇಂಥದ್ದೇ ಒಂದು ನೋಟ್ಸ್ ಭಾರೀ ತಮಾಷೆಯಾಗಿದ್ದು, ವೈರಲ್ ಆಗಿದೆ.
ಝೋಮ್ಯಾಟೊ (Zomato) ಸಂಸ್ಥೆ ಗ್ರಾಹಕರ (Customers) ಜತೆಗಿನ ಚುರುಕು ಹಾಗೂ ಫನ್ನಿ (Funny) ಎನ್ನಿಸುವ ಸಂವಾದಗಳನ್ನು ಆಗಾಗ ಬಹಿರಂಗಗೊಳಿಸುತ್ತದೆ. ಇತ್ತೀಚೆಗೆ ಇಂಥದ್ದೇ ತಮಾಷೆಯ ನೋಟ್ಸ್ (Notes) ದೊರೆತಿದೆ. ಮನೆಯಲ್ಲಿ ಕಟ್ಟುನಿಟ್ಟಾಗಿ ಸಸ್ಯಾಹಾರ (Vegetarian) ಪಾಲನೆ ಮಾಡು ಗ್ರಾಹಕರೊಬ್ಬರು ಝೋಮ್ಯಾಟೊ ಸಂಯೋಜಿತ ರೆಸ್ಟೋರೆಂಟ್ ಗೆ ಭಾರೀ ಮಜವಾದ ಮನವಿ (Request) ಮಾಡಿದ್ದಾರೆ.
ಗಂಡನ ಮಾಜಿ ಗೆಳತಿಯೇ ನಂಗೆ ಪ್ರೇರಣೆ ಎಂದ ಆಲಿಯಾ ಭಟ್
ಆಹಾರದ (Food) ಜತೆಗೆ ಬಿಲ್ (Bill) ಇಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಹಾಗೆಯೇ, ಇಡೀ ಪ್ಯಾಕೇಜ್ ನಲ್ಲಿ ಎಲ್ಲೂ ಸಹ ಚಿಕನ್ (Chicken) ಇದೆ ಎನ್ನುವ ರೀತಿಯಲ್ಲಿ ಉಲ್ಲೇಖಿಸಬೇಡಿ ಎಂದು ತಿಳಿಸಿದ್ದಾರೆ. ಆದರೆ, ಅದು ಚಿಕನ್ ಯುಕ್ತ ಆಹಾರವೇ ಆಗಿದ್ದು, ಅದನ್ನವರು ಮನೆಯಲ್ಲಿ ಬಹಿರಂಗಪಡಿಸಲು ಇಚ್ಛಿಸಿಲ್ಲ. ಬಿಲ್ ನಲ್ಲಿ ಹಾಗೂ ಪ್ಯಾಕೇಜ್ ನಲ್ಲಿ ಚಿಕನ್ ಹೆಸರು ಉಲ್ಲೇಖವಿಲ್ಲದೇ ಹೋದರೆ ಮನೆಯಲ್ಲಿ ತಿಳಿಯುವುದಿಲ್ಲ ಎನ್ನುವ ಪ್ಲಾನ್ ಅವರದ್ದು. ಆದರೆ, ಇಲ್ಲೊಂದು ದುರ್ಘಟನೆ ನಡೆದುಹೋಗಿದೆ. ಆ ಗ್ರಾಹಕರ ಆಶಯಕ್ಕೆ ವಿರುದ್ಧವಾಗಿ ಅವರಿಗೆ ಬಿಲ್ ಕಳುಹಿಸಿದ್ದೂ ಅಲ್ಲದೆ, ಪ್ಯಾಕೇಜ್ ನಲ್ಲಿ ಚಿಕನ್ ಇರುವುದನ್ನು ಹೈಲೈಟ್ ಮಾಡಿಯಾಗಿತ್ತು. ಈ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಾಕಷ್ಟು ವೈರಲ್ ಆಗಿದೆ.
ತಂದೆತಾಯಿಗೆ ಮೊದಲ ಅಂತಾರಾಷ್ಟ್ರೀಯ ಪ್ರವಾಸದ ಸರ್ಪ್ರೈಸ್ ನೀಡಿದ ಮಗ; ಪೋಷಕರ ಪ್ರತಿಕ್ರಿಯೆ ನೋಡಿ!
ಕಸ್ಟಮರ್ ನೋಟ್
ಕಸ್ಟಮರ್ ನೋಟ್ ನಲ್ಲಿ ಸ್ಪಷ್ಟವಾಗಿ ಈ ಬಗ್ಗೆ ಮನವಿ ಮಾಡಲಾಗಿದೆ. “ಬಿಲ್ ಕಳುಹಿಸಬೇಡಿ. ಹಾಗೆಯೇ ಈ ತಿನಿಸಿನಲ್ಲಿ ಚಿಕನ್ ಇರುವ ಬಗ್ಗೆ ಎಲ್ಲಿಯೂ ಮೆನ್ಷನ್ (Mention) ಮಾಡಬೇಡಿ. ಮನೆಯಲ್ಲಿ ಅದಕ್ಕೆ ಅನುಮತಿಯಿಲ್ಲ. ಪ್ಲೀಸ್’ ಎನ್ನುವ ಮನವಿ ಮಾಡಲಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾ ಸಿಕ್ಕಾಪಟ್ಟೆ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದೆ.
ಓದಲ್ಲ, ಸ್ಪಂದಿಸಲ್ಲ: ಒಬ್ಬರು ತಮಾಷೆಯಾಗಿ, “ಗುಜರಾತಿನಲ್ಲಿ ಕೇವಲ ನಾನ್ ವೆಜ್ (Non Veg) ವಿದ್ಯಾರ್ಥಿಗಳು ಇದ್ದಾರೆ ಅಥವಾ ಜೈನ್ ಸೊಸೈಟಿ ಜನರಿದ್ದಾರೆ’ ಎಂದು ಹೇಳಿದ್ದರೆ, ಮತ್ತೊಬ್ಬರು, “ಅಲ್ಲಿಯೇ ಇದ್ದು ಮಾಡಿಸಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ. ಬಹಳಷ್ಟು ಜನ ಈ ಕಸ್ಟಮರ್ ನೋಟ್ ಗಳನ್ನು ಯಾರೂ ಸಹ ಓದುವುದಿಲ್ಲ ಹಾಗೂ ಅದಕ್ಕೆ ಸ್ಪಂದಿಸುವುದಿಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.