Viral Video: ಬಾಯಲ್ಲಿ ನೀರೂರಿಸೋ ಮಿರಿಂಡಾ ಗೋಲ್‌ಗಪ್ಪಾ ಬಗ್ಗೆ ಕೇಳಿದ್ದೀರಾ..!
ಗೋಲ್‌ಗಪ್ಪಾ (Gol Gappe) ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ..ಸಿಹಿ..ಹುಳಿ..ಖಾರದ ಗೋಲ್‌ಗಪ್ಪಾವನ್ನು ಸವಿದು ವಾರೆವ್ಹಾ ಎನ್ನದವರಿಲ್ಲ. ಆದ್ರೆ ಇಲ್ಲೊಬ್ಬರು ಇದೆಲ್ಲಕ್ಕಿಂತ ಡಿಫರೆಂಟ್ ಆಗಿ ಮಿರಿಂಡಾ ಗೋಲ್‌ಗಪ್ಪಾ ಸ್ಟಾಲ್ ಇಟ್ಟುಕೊಂಡಿದ್ದಾರೆ. ಅರೆ, ಮಿರಿಂಡಾ (Mirinda) ಗೋಲ್‌ಗಪ್ಪಾನ ಅಂತ ಹುಬ್ಬೇರಿಸಬೇಡಿ..ಅಚ್ಚರಿ ಅನಿಸಿದರೂ ಇದು ನಿಜ,,
ಗೋಲ್‌ಗಪ್ಪಾ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..ಅದ್ರಲ್ಲೂ ಹುಡುಗೀರಂತೂ ಗೋಲ್‌ಗಪ್ಪಾ ಸ್ಟಾಲ್‌ನ ಹತ್ತಿರ ಎಷ್ಟು ಹೊತ್ತು ಬೇಕಾದ್ರೂ ಕ್ಯೂ ನಿಂತು ಗೋಲ್‌ಗಪ್ಪಾ ತಿನ್ತಾರೆ. ಸ್ಪಲ್ಪ ಹುಳಿ...ಸ್ಪಲ್ಪ ಖಾರ..ಸ್ಪಲ್ಪ ಸಿಹಿಯಾಗಿರೋ ಟೇಸ್ಟ್‌ಗೆ ಬೇರ್ಯಾವುದೂ ಸಾಟಿಯಾಗಲಾರದು. ಅದರಲ್ಲೂ ಕೆಲವೊಬ್ರು ಭಯ್ಯಾ ಕುಚ್ ಆರ್ ಟೀಕಾ ಅಂತ್ಹೇಳಿ ಮತ್ತಷ್ಟು ಖಾರ ಹಾಕಿಸಿಕೊಂಡು ಕಣ್ಣಲ್ಲಿ, ಬಾಯಲ್ಲಿ ನೀರು ಬರಿಸಿಕೊಂಡು ಗೋಲ್‌ಗಪ್ಪಾ ತಿನ್ನೋದನ್ನು ನೋಡಿರಬಹುದು. ಖಾರ ಕಡಿಮೆ ಹಾಕಿಸಿಕೊಂಡು ಗೋಲ್‌ಗಪ್ಪಾ ಸ್ವಾದ ಸವಿಯುವವರು ಇನ್ನು ಕೆಲವರು. ಇವಿಷ್ಟೇ ಅಲ್ದೆ ಗೋಲ್‌ಗಪ್ಪಾದಲ್ಲಿ ಮಿಂಟ್, ಜೀರಾ, ಮಿರ್ಚಿ ಅಂತ ಕೆಲವೊಂದು ಸ್ಟಾಲ್‌ಗಳಲ್ಲಿ ಇನ್ನಷ್ಟು ವೆರೈಟಿಯಾಗಿ ಕೊಡ್ತಾರೆ.
ಭಾರತ ಅಂದ್ರೆ ವೈವಿಧ್ಯತೆಯಲ್ಲಿ ಏಕತೆಯಿರುವ ದೇಶ..ಇಲ್ಲಿ ಹಲವು ರಾಜ್ಯಗಳಲ್ಲಿ ಭಿನ್ನ-ವಿಭಿನ್ನ ಭಾಷೆ, ಆಚಾರ-ವಿಚಾರ, ಉಡುಗೆ-ತೊಡುಗೆಗಳು ಇರುವಂತೆ ವೈವಿಧ್ಯಮಯ ಆಹಾರಪದ್ಧತಿಗಳೂ ಇವೆ. ಭಾರತೀಯರು ಮೊದಲೇ ಆಹಾರ ಪ್ರಿಯರು. ಹೀಗಾಗಿ ಆಹಾರದಲ್ಲಿ ಹೊಸ ಹೊಸ ಎಕ್ಸ್‌ಪರಿಮೆಂಟ್ ಮಾಡುತ್ತಲೇ ಇರುತ್ತಾರೆ. ಒಂದು ಆಹಾರವನ್ನು ಇನ್ನೊಂದರೊಂದಿಗೆ ಮಿಕ್ಸ್ ಮಾಡಿ ಹೊಸ ರೆಸಿಪಿ ಟ್ರೈ ಮಾಡ್ತಾರೆ. ಈ ಹಿಂದೆಯೂ ಓರಿಯೋ ಪಕೋಡಾ, ಚಾಕೋಲೇಟ್ ಮ್ಯಾಗಿ, ಕಚ್ಚಾ ಮ್ಯಾಂಗೋ ಕೂಲ್ ಡ್ರಿಂಕ್, ಮೊಮೋಸ್ ಪರೋಟಾ ಮೊದಲಾದ ಎಕ್ಸ್‌ಪರಿಮೆಂಟ್ ಗಳು ಎಲ್ಲರನ್ನೂ ಅಚ್ಚರಿಗೊಳಿಸಿದ್ದವು. ಹಾಗೆಯೇ ಈಗೊಂದು ಡಿಫರೆಂಟ್ ಗೋಲ್‌ಗಪ್ಪಾ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹುಳಿ ಹುಳಿ ಖಾರ ಖಾರ- ನಾಲಿಗೆ ಮೇಲೆ ಸ್ವರ್ಗ ತಂದಿಡುವ ಗೋಲ್ಗಪ್ಪಾ
ಫುಡ್‌ನಲ್ಲಿ ಹೊಸ ಹೊಸ ರೆಸಿಪಿಯನ್ನು ಎಲ್ರೂ ಟ್ರೈ ಮಾಡ್ತಾರೆ. ಡಿಫರೆಂಟ್ ಆಗಿರೋ ಎರಡು ಪದಾರ್ಥಗಳನ್ನು ಮಿಕ್ಸ್ ಮಾಡಿ ಟೇಸ್ಟ್ ಮಾಡ್ತಾರೆ. ಆದರೆ, ಜೈಪುರದಲ್ಲೊಬ್ಬ ಗೋಲ್‌ಗಪ್ಪಾ (Gol Gappe) ವ್ಯಾಪಾರಿ, ಸಿಹಿ-ಹುಳಿ-ಖಾರ ಬಿಟ್ಟು ಗೋಲ್‌ಗಪ್ಪಾವನ್ನು ಡಿಫರೆಂಟ್ ಆಗಿ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ. ಹೌದು, ಇಲ್ಲಿ ಸರ್ವ್ ಮಾಡ್ತಿರೋದು ಕಲರ್ ಫುಲ್ ಮಿರಿಂಡಾ (Mirinda) ಗೋಲ್‌ಗಪ್ಪಾವನ್ನು..
ಸಾಮಾನ್ಯವಾಗಿ ಪೂರಿಗೆ ಬೇಯಿಸಿದ ಆಲೂಗಡ್ಡೆ, ಕತ್ತರಿಸಿದ ಈರುಳ್ಳಿಯ ಸ್ಟಫಿಂಗ್‌ನ್ನು ಸೇರಿಸಿ ಸಿಹಿ-ಹುಳಿ ಪಾನಿಗಳಿಗೆ ಮುಳುಗಿಸಿ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತದೆ. ಆದರೆ ಇಲ್ಲಿ ಫುಲ್ ಸ್ಟಫಿಂಗ್ ಪೂರಿಯನ್ನು ಮಿರಿಂಡಾದಲ್ಲಿ ಮುಳುಗಿಸಿ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತದೆ. ಇಂಟರ್‌ನೆಟ್ (Internet)ನಲ್ಲಿ ವೈರಲ್ ಆದ ವೀಡಿಯೋದಲ್ಲಿ ವ್ಯಾಪಾರಿ ಈ ಡಿಫರೆಂಟ್ ಮಿರಿಂಡಾ ಗೋಲ್‌ಗಪ್ಪಾಗಳನ್ನು ತಯಾರಿಸುವುದನ್ನು ನೋಡಬಹುದು..ಮಿರಿಂಡಾ ಬಾಟಲಿಯನ್ನು ಫುಲ್ ಅಲುಗಾಡಿಸಿ ನಂತರ ಅದನ್ನು ದೊಡ್ಡ ಪಾತ್ರೆಗೆ ಸುರಿಯುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಪೂರಿಗೆ ಆಲೂ ಸ್ಟಪಿಂಗ್‌ನ್ನು ಸೇರಿಸುತ್ತಾರೆ. ಬಳಿಕ ಮಿರಿಂಡಾದಲ್ಲಿ ಮುಳುಗಿಸಿ ಗ್ರಾಹಕರಿಗೆ ಸರ್ವ್ ಮಾಡುತ್ತಾರೆ. ಚಟೋರೆ ಬ್ರದರ್ಸ್ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಕಾಂಪಿಟೀಶನ್‌ಗೆ ಬಿದ್ದು ಗೋಲ್‌ಗಪ್ಪಾ ತಿಂದು ಸಂಭ್ರಮಿಸಿದ ಹಸು-ಕರು; ವಿಡಿಯೋ ವೈರಲ್!
ಸದ್ಯ ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ (Viral) ಆಗ್ತಿದೆ. ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಗಿರೋ ಈ ವೀಡಿಯೋಗೆ 3 ಮಿಲಿಯನ್ ವೀಕ್ಷಣೆಗಳು, 127ಕ್ಕೂ ಹೆಚ್ಚು ಲೈಕ್ಸ್‌ಗಳು ಮತ್ತು ಹಲವಾರು ಕಾಮೆಂಟ್‌ಗಳು ಬಂದಿವೆ. ಕೆಲವೊಬ್ಬರು ಈ ಮಿರಿಂಡಾ ಗೋಲ್‌ಗಪ್ಪಾಗೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಇದೆಂಥಾ ಕಾಂಬಿನೇಶನ್, ನಾನ್‌ಸೆನ್ಸ್ ಎಂದು ಬೈದಿದ್ದಾರೆ. ಜನರು ತಿನ್ನುವ ಫುಡ್‌ನಲ್ಲೂ ಎಕ್ಸ್‌ಪರಿಮೆಂಟ್ ಮಾಡಿಕೊಂಡು ಜೋಕ್ ಮಾಡಲು ಆರಂಭಿಸಿದ್ದಾರೆ, ಈ ವೀಡಿಯೋ ನೋಡಿ ನನ್ನ ಮೂಡೇ ಹಾಳಾಯಿತು ಎಂದೆಲ್ಲಾ ಕಮೆಂಟಿಸಿದ್ದಾರೆ. ಇನ್ನೂ ಕೆಲವರು ಗೋಲ್‌ಗಪ್ಪೆ ಕಿ ತೋ ಇಜ್ಜತ್ ರಖೋ(ಗೋಲ್‌ಗಪ್ಪಾದ ಗೌರವವನ್ನಾದರೂ ಉಳಿಸಿಕೊಳ್ಳಿ' ಎಂದು ಗೋಗರೆದಿದ್ದಾರೆ.
ವೀಡಿಯೋದಲ್ಲಿ ಗ್ರಾಹಕರೊಬ್ಬರು ಮಾತ್ರ ಮಿರಿಂಡಾ ಗೋಲ್‌ಗಪ್ಪಾವನ್ನು ಬಾಯಿ ಚಪ್ಪರಿಸಿಕೊಂಡು ತಿಂದು ಸೂಪರ್ ಎಂದು ಹೇಳುವುದನ್ನು ನೋಡಬಹುದು. ಅದೇನೆ ಇರ್ಲಿ, ಒಂದೇ ರೀತಿಯ ಗೋಲ್‌ಗಪ್ಪಾ ತಿಂದು ಬೋರಾಗಿರೋರಿಗೆ ಇದು ಸಿಕ್ಕಾಪಟ್ಟೆ ಖುಷಿಯ ವಿಚಾರ ಅಂತ್ಹೇಳಬಹುದು. ಗೋಲ್‌ಗಪ್ಪಾ ಗೀಳು ಹತ್ತಿಸಿಕೊಂಡೋರು ಮಾತ್ರ ಈ ಡಿಫರೆಂಟ್ ಮಿರಿಂಡಾ ಗೋಲ್‌ಗಪ್ಪಾ ಟ್ರೈ ಮಾಡೋದನ್ನು ಮಾತ್ರ ಮರೀಬೇಡಿ.