ಕೊರೋನಾ ಕಾರಣ ಸ್ಟ್ರೀಟ್ ಫುಡ್ , ಪಾನಿಪೂರಿ ಮಿಸ್ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ ಇದರ ನಡುವೆ ಹಸು ಹಾಗೂ ಕರು ಗೋಲ್‌ಗಪ್ಪಾ ತಿಂದು ಸಂಭ್ರಮಿಸಿದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ

ಲಖನೌ(ಜೂ.05): ಕೊರೋನಾ ವೈರಸ್ ಕಾರಣ ಹಲವರು ಸ್ಟ್ರೀಟ್ ಫುಡ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಸಾಲ್ ಪೂರಿ, ಪಾನಿಪೂರಿ ಸೇರಿದಂತೆ ಬಾಯಲ್ಲಿ ನೀರೂರಿಸುವ ಹತ್ತು ಹಲವು ತಿನಿಸುಗಳು ಸಿಗದೆ ಸೊರಗಿ ಹೋದವರೂ ಇದ್ದಾರೆ. ಇದೀಗ ಗೋಲ್‌ಗಪ್ಪಾ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಇಲ್ಲೊಂದು ವಿಡಿಯೋ ಇದೆ. ಇದು ಹಸು ಹಾಗೂ ಕರು ಗೋಲ್‌ಗಪ್ಪ ತಿಂದು ಸಂಭ್ರಮಿಸಿದ ವೈರಲ್ ವಿಡಿಯೋ.

Add Asianetnews Kannada as a Preferred SourcegooglePreferred

ಮಾಲೀಕನ ಕಾರು ಪಾರ್ಕ್ ಮಾಡಲು ನೆರವಾದ ಮುದ್ದು ನಾಯಿ; ವಿಡಿಯೋ ವೈರಲ್!

ಸ್ನೇಹಿತರೆಲ್ಲಾ ಗೋಲ್‌ಗಪ್ಪಾ ಸ್ಟ್ರೀಟ್ ಶಾಪ್‌ಗೆ ತೆರಳಿದಾಗ ಅದೆಷ್ಟು ವೇಗದಲ್ಲಿ ಗೋಲ್‌ಗಪ್ಪಾ ರೆಡಿ ಮಾಡಿ ಹಂಚುತ್ತಾರೆ ಅನ್ನೋದನ್ನು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಅದೇ ರೀತಿ ಹಸು ಹಾಗೂ ಕರು ಗೋಲ್‌ಗಪ್ಪಾ ಮಾರಾಟಗಾರನತ್ತ ತೆರಳಿದೆ. ಹಸು ಹಾಗೂ ಕರುವಿಗೆ ಒಂದೊಂದೆ ಗೋಲ್‌ಗಪ್ಪಾ ತಿನ್ನಿಸಿದ ಈ ವಿಡಿಯೋ ಇದೀಗ ಬಾರಿ ಸಂಚಲನ ಸೃಷ್ಟಿಸಿದೆ.

View post on Instagram

ತಾಯಿ ಜೊತೆ ನದಿ ದಾಟಿದ ಸಿಂಹದ ಮರಿ; ಮುದ್ದಾದ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ!

ಈ ಗೋಲ್‌ಗಪ್ಪಾ ಸಂಭ್ರಮ ವಿಡಿಯೋ ಲಖನೌದ ರೆಡ್ ಹಿಲ್ ಕಾನ್ವೆಂಟ್ ಸ್ಕೂಲ್ ಬಳಿ ನಡೆದಿದೆ. ಈ ಗೋಲ್‌ಗಪ್ಪಾ ಅಂಗಡಿಯಾತ ಪ್ರತಿ ದಿನ ಬೀದಿ ನಾಯಿಗಳಿಗೆ ಬ್ರೆಡ್, ಬಿಸ್ಕಡ್ ನೀಡುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಇದೀಗ ಗೋಲ್‌ಗಪ್ಪಾ ವಿಡಿಯೋ ಮೂಲಕ ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ.