Asianet Suvarna News Asianet Suvarna News

ಬೇಯಿಸಿದ ಮೊಟ್ಟೆ ದೇಹಕ್ಕೇಕೆ ಬೇಕು? ಯಾವಾಗ ಇದರ ಅಗತ್ಯವಿರೋಲ್ಲ?

ಮೊಟ್ಟೆಯಲ್ಲಿ ಆರೋಗ್ಯದ ಗುಟ್ಟಿದೆ. ಪ್ರತಿ ದಿನ ಮೊಟ್ಟೆ ಸೇವನೆ ಮಾಡ್ಬೇಕು ಅಂತಾ ಕೆಲವರು ಮಿತಿ ಮೀರಿ ಸೇವನೆ ಮಾಡಿ ಆರೋಗ್ಯ ಕೆಡಿಸಿಕೊಳ್ತಾರೆ. ತಜ್ಞರ ಪ್ರಕಾರ, ಆರೋಗ್ಯ ವೃದ್ಧಿಸುವ ಈ ಮೊಟ್ಟೆ ಸೇವನೆ ಮಿತಿಯಲ್ಲಿದ್ರೆ ಒಳ್ಳೆಯದು.
 

Is It Safe To Eat Eggs Daily
Author
First Published Jan 9, 2023, 12:38 PM IST

ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿವಹಿಸುವ ಅಗತ್ಯತೆ ಈಗಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಆರೋಗ್ಯ ಸಮಸ್ಯೆಯಿಂದಲೂ ಸಾವು ಸಂಭವಿಸುತ್ತಿದೆ. ಇದಕ್ಕೆ ಹದಗೆಟ್ಟ ವಾತಾವರಣದ ಜೊತೆ ನಾವು ಸೇವನೆ ಮಾಡುವ ಆಹಾರ ಕೂಡ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ. 

ಮೊಟ್ಟೆ (Egg) ಸಂಪೂರ್ಣ ಆಹಾರ. ಇದೇ ಕಾರಣಕ್ಕೆ ಅನೇಕರು ಮೊಟ್ಟೆ ಸೇವನೆಯನ್ನು ತಮ್ಮ ಡಯಟ್ (Diet) ನಲ್ಲಿ ಸೇರಿಸಿಕೊಂಡಿದ್ದಾರೆ. ಮೊಟ್ಟೆ ತಿನ್ನುವ ಮೊದಲು ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಂಗತಿಯನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರ ದೇಹ ರಚನೆಯೂ ಭಿನ್ನ. ನಮ್ಮ ದೇಹ ತನಗೆ ಬೇಕಾದ ಕೆಲ ಅಂಶವನ್ನು ತಾನೇ ಉತ್ಪತ್ತಿ ಮಾಡಿಕೊಳ್ಳುತ್ತದೆ. ಮತ್ತೆ ಕೆಲವನ್ನು ಆಹಾರ (food) ದ ಮೂಲಕ ದೇಹಕ್ಕೆ ನಾವು ನೀಡಬೇಕಾಗುತ್ತದೆ. ನಮ್ಮ ದೇಹಕ್ಕೆ ಬೇಕಾಗುವ ಎಲ್ಲ ಎಸೆನ್ಶಿಯಲ್ಸ್ ಮೊಟ್ಟೆ ಹೊಂದಿದೆ. ಮೊಟ್ಟೆಯಲ್ಲಿ ಹೈ ಕ್ವಾಲಿಟಿ ಪ್ರೋಟೀನ್ (Protein)  ಇರುತ್ತದೆ. ಅಂದ್ರೆ ಮೊಟ್ಟೆ ಸೇವನೆ ಮಾಡೋದ್ರಿಂದ ನಿಮಗೆ ಶೇಕಡಾ 100ರಷ್ಟು ಪ್ರೋಟೀನ್ ಸಿಗುತ್ತೆ ಎನ್ನಬಹುದು. ತಜ್ಞರ ಪ್ರಕಾರ ಒಂದು ಮೊಟ್ಟೆಯಲ್ಲಿ ನಿಮಗೆ 6.30 ಗ್ರಾಂ ಪ್ರೋಟೀನ್ ಸಿಗುತ್ತದೆ. 

ಇದಲ್ಲದೆ ಮೊಟ್ಟೆಯಲ್ಲಿ ಕೋಲೀನ್ ಅಂಶವನ್ನು ಕೂಡ ನಾವು ನೋಡ್ಬಹುದು. ಈ ಕೋಲೀನ್ ನರದ ಆರೋಗ್ಯ, ಮೆದುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುತ್ತಾರೆ ತಜ್ಞರು. ಒಂದು ಮೊಟ್ಟೆಯಲ್ಲಿ ನಿಮಗೆ 147 ಮಿಲಿಗ್ರಾಂ ಕೋಲೀನ್ ಸಿಗುತ್ತದೆ. ಇದು  ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. 

ಗರ್ಭಿಣಿಯರಿಗೂ ಮೊಟ್ಟೆ ಒಳ್ಳೇಯದು, ಇತಿ ಮಿತಿಯಲ್ಲಿರುವಂತೆ ಇರಲಿ ಎಚ್ಚರ!

ನಮ್ಮ ಆರೋಗ್ಯವೇ ಮೊಟ್ಟೆಯಲ್ಲಿ ಅಡಗಿದೆ ಅಂದ್ರೆ ಅತಿಶಯೋಕ್ತಿಯಲ್ಲ. ಯಾಕೆಂದ್ರೆ ಮೊಟ್ಟೆ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ನಮ್ಮ ದೃಷ್ಟಿಯನ್ನು ಆರೋಗ್ಯವಾಗಿಡಬಲ್ಲ ಆಂಟಿ ಆಕ್ಸಿಡೆಂಟ್ ಇದ್ರಲ್ಲಿದೆ. ಮೊಟ್ಟೆಯಲ್ಲಿ ನ್ಯೂಟೆಲ್ ಪ್ರಮಾಣ ಕೂಡ ಇದೆ. ಮೊಟ್ಟೆಯಲ್ಲಿ ವಿಟಮಿನ್ ಇ, ವಿಟಮಿನ್ ಡಿ ಕೂಡ ಲಭ್ಯವಿದೆ. ವಿಟಮಿನ್ ಬಿ 12 ಮತ್ತು ಕಬ್ಬಿಣಾಂಶದಿಂದ ಕೂಡಿರುವ ಮೊಟ್ಟೆ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಅತ್ಯತ್ತಮ. ಹಿಮೋಗ್ಲೋಬಿನ್ ಹೆಚ್ಚಿಸುವ ಕೆಲಸವನ್ನು ಈ ಮೊಟ್ಟೆ ಮಾಡುತ್ತದೆ. ನಮ್ಮ ದೇಹಕ್ಕೆ ಶಕ್ತಿ ನೀಡುವ ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇದೆ.

ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಎಷ್ಟು ಒಳ್ಳೆಯದು? : ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇದೆ ಎನ್ನುವ ಕಾರಣಕ್ಕೆ ಅನೇಕರು ಸೇವನೆ ಮಾಡೋದಿಲ್ಲ. ಆದ್ರೆ ತಜ್ಞರ ಪ್ರಕಾರ ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಒಳ್ಳೆಯ ಕೊಲೆಸ್ಟ್ರಾಲ್. ನಮ್ಮ ದೇಹದಲ್ಲಿ ಒಳ್ಳೆಯ ಹಾಗೂ ಕೆಟ್ಟ ಎರಡು ಕೊಲೆಸ್ಟ್ರಾಲ್ ಇರುತ್ತದೆ. ನಾವು ಆಹಾರದ ಮೂಲಕ ಹೆಚ್ಚಿನ ಕೊಲೆಸ್ಟ್ರಾಲ್ ನೀಡಿದಾಗ ದೇಹ ಕೊಲೆಸ್ಟ್ರಾಲ್ ಉತ್ಪತ್ತಿ ಮಾಡುವುದಿಲ್ಲ. ನಾವು ಕೊಲೆಸ್ಟ್ರಾಲ್ ನೀಡದೆ ಹೋದಾಗ ದೇಹ ಉತ್ಪತ್ತಿ ಮಾಡುತ್ತದೆ.

 

Winter Food: ಚಳಿಗಾಲದಲ್ಲಿ ಹೃದಯಾಘಾತ ಅಪಾಯ ತಪ್ಪಿಸಲು ಮೊಟ್ಟೆ ತಿನ್ನಿ

ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಇರೋದ್ರಿಂದ ಅದು ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಅದ್ರ ಸೇವನೆಯಲ್ಲಿ ಮಿತಿಯಿರಬೇಕು. ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಮೊಟ್ಟೆ ಸೇವನೆ ಮಾಡ್ಬೇಕು ಎಂಬುದು ಆತನ ದೇಹ ಪ್ರಕೃತಿಯನ್ನು ಅವಲಂಭಿಸಿದೆ. ಆದ್ರೆ ಒಂದು ಮೊಟ್ಟೆಯನ್ನು ಆರಾಮವಾಗಿ ಪ್ರತಿ ದಿನ ತಿನ್ನಬಹುದು ಎನ್ನುತ್ತಾರೆ ತಜ್ಞರು. ಒಂದು ಮೊಟ್ಟೆ ತಿಂದಾಗ 212 ಎಂಜಿ ಕೊಲೆಸ್ಟ್ರಾಲ್ ನಿಮಗೆ ಸಿಗುತ್ತದೆ. 
ಆರೋಗ್ಯವಾಗಿರುವ ವ್ಯಕ್ತಿ ದಿನಕ್ಕೆ ಒಂದು ಮೊಟ್ಟೆ ಸೇವನೆ ಮಾಡ್ಬಹುದು. ಇದ್ರಿಂದ ಯಾವುದೇ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಇದಕ್ಕಿಂತ ಹೆಚ್ಚಿನ ಮೊಟ್ಟೆ ಸೇವನೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು. 

ಮೊಟ್ಟೆ ಸೇವನೆ ಮಾಡುವುದ್ರಿಂದ ಚರ್ಮ, ಕೂದಲು ಮತ್ತು ಉಗುರಿನ ಆರೋಗ್ಯ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮೂಳೆಗಳು ಬಲ ಪಡೆಯುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಹೃದಯಾಘಾತವಾಗುತ್ತದೆ. ಆದ್ರೆ ಸರಿಯಾದ ಪ್ರಮಾಣದಲ್ಲಿ ಒಳ್ಳೆ ಕೊಲೆಸ್ಟ್ರಾಲ್ ಇರುವ ಮೊಟ್ಟೆ ಸೇವನೆ ಮಾಡಿದ್ರೆ ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ. 
 

Follow Us:
Download App:
  • android
  • ios