Asianet Suvarna News Asianet Suvarna News

ನೀವು ಬಾಯಿ ಚಪ್ಪರಿಸಿ ತಿನ್ನೋ ಈ ಆಹಾರ ಕೊಕೇನ್‌ಗಿಂತ ಡೇಂಜರ್!

ಐಸ್ ಕ್ರೀಮ್ ಹಾಗೂ ಆಲೂ ಚಿಪ್ಸ್ ಯಾರಿಗೆ ಇಷ್ಟವಿಲ್ಲ ಹೇಳಿ? ಇದ್ರ ಬಗ್ಗೆ ಸಂಶೋಧನೆ ನಡೆಸಿರುವ ಸಂಶೋಧಕರು ಆಘಾತಕಾರಿ ವಿಷ್ಯ ಹೊರಹಾಕಿದ್ದಾರೆ. ಪ್ರತಿ ದಿನ ಅದರ ಸೇವನೆ ಮಾಡೋದು ಎಷ್ಟು ಅಪಾಯಕಾರಿ ಎಂಬ ಸತ್ಯ ಹೊರಹಾಕಿದ್ದಾರೆ. 
 

Icecream And Potato Chips Harmfull For Body Addictive As Cocaine Know From Research roo
Author
First Published Mar 19, 2024, 11:19 AM IST

ಬೇಸಿಗೆ ಇರಲಿ ಚಳಿಗಾಲವಿರಲಿ ಐಸ್ ಕ್ರೀಂ ಬಹುತೇಕರ ಫೆವರೆಟ್. ಚುಮು ಚುಮು ಚಳಿಯಲ್ಲಿ ಐಸ್ ಕ್ರೀಂ ತಿನ್ನುವ ಮಜವೇ ಬೇರೆ ಎನ್ನುವ ಜನರಿದ್ದಾರೆ. ಬೇಸಿಗೆಯಲ್ಲಂತೂ ಕೇಳೋದೇ ಬೇಡ ಬಿಡಿ. ಈ ಸೆಕೆಯಲ್ಲಿ ಐಸ್ ಕ್ರೀಂ ತಿಂದ್ರೆ ನಾವು ಸ್ವಲ್ಪ ಕೂಲ್ ಆಗ್ಬಹುದು ಎಂಬ ಸಬೂಬನ್ನು ಐಸ್ ಕ್ರೀಂ ಪ್ರೇಮಿಗಳು ನೀಡ್ತಾರೆ. ರಾತ್ರಿ ಊಟವಾದ್ಮೇಕೆ ನಿತ್ಯ ಐಸ್ ಕ್ರೀಂ ತಿನ್ನುವ ಜನರಿದ್ದಾರೆ. 

ಈ ಐಸ್ ಕ್ರೀಂ (Ice Cream) ಜೊತೆ ಜನರು ಅತಿ ಹೆಚ್ಚು ತಿನ್ನುವ ಇನ್ನೊಂದು ಆಹಾರ ಅಂದ್ರೆ ಅದು ಆಲೂಗಡ್ಡೆ (Potato) ಚಿಪ್ಸ್. ಆಲೂಗಡ್ಡೆ ಚಿಪ್ಸ್ (Chips) ತಿಂದಷ್ಟು ಮತ್ತೆ ಬಾಯಿ ಬಯಸುತ್ತೆ. ಒಂದಾದ್ಮೇಲೆ ಒಂದರಂತೆ ಚಿಪ್ಸ್ ಬಾಯಿ ಒಳಗೆ ಹೋಗಿದ್ದು ಗೊತ್ತೇ ಆಗೋದಿಲ್ಲ.  

ಸಾವಿನ ಸೂಚನೆ ಕೊಡ್ತಾಳೆ ಈ ನರ್ಸ್, ಹೇಗೆ ಗೊತ್ತಾಗುತ್ತೆ ಈಕೆಗೆ?

ಐಸ್ ಕ್ರೀಂ ಮತ್ತು ಆಲೂಗಡ್ಡೆ ಚಿಪ್ಸ್ ಪ್ರಿಯ ಅಂದುಕೊಂಡ್ರೆ ಅದು ತಪ್ಪು ಕಲ್ಪನೆ. ಅದನ್ನು ನೀವು ನಿಮ್ಮಿಷ್ಟಕ್ಕೆ ತಿನ್ನೋದಲ್ಲ, ಅದು ಚಟವಾಗಿ ಮಾರ್ಪಟ್ಟಿರುತ್ತೆ. ಹಾಗಂತ ನಾವು ಹೇಳ್ತಿಲ್ಲ, ಸಂಶೋಧಕರು ಈ ಬಗ್ಗೆ ಅಧ್ಯಯನ ಮಾಡಿದ್ದಾರೆ. ಜನರಿಗೆ ಐಸ್ ಕ್ರೀಂ ಹಾಗೂ ಚಿಪ್ಸ್ ಚಟವಾಗಿ ಮಾರ್ಪಡುತ್ತಿದೆ ಎನ್ನುವ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. 

ಮದ್ಯಪಾನ, ಧೂಮಪಾನ ಹೇಗೆ ಚಟವಾಗಿದೆಯೋ ಅದೇ ರೀತಿ ಆಲೂಗಡ್ಡೆ ಚಿಪ್ಸ್, ಐಸ್ ಕ್ರೀಂ ಕೂಡ ವ್ಯಸನವಾಗಿದೆ. ಒಂದೆರಡು ದಿನ ಅದನ್ನು ತಿಂದಿಲ್ಲ ಅಂದ್ರೆ ಏನೋ ಚಡಪಡಿಕೆ ಶುರುವಾಗುತ್ತೆ. ಅಲ್ಟ್ರಾ ಸಂಸ್ಕರಿತ ಆಹಾರಗಳು 10 ಜನರಲ್ಲಿ ಇಬ್ಬರನ್ನು ಕಾಡುತ್ತಿದೆ. ಈ ಆಹಾರಗಳು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಹೊಂದಿರುತ್ತವೆ. ಇದೇ ನಮಗೆ ಚಟವಾಗಿ ಮಾರ್ಪಡಲು ಕಾರಣ.

ಐಸ್ ಕ್ರೀಂ ಹಾಗೂ ಆಲೂಗಡ್ಡೆ ಚಿಪ್ಸ್ ಅತಿಯಾಗಿ ಸೇವನೆ ಮಾಡುವ ಕಾರಣ ಅದು ನಿಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ನಾನಾ ರೋಗಕ್ಕೆ ನೀವು ತುತ್ತಾಗುತ್ತೀರಿ. ಅದ್ರಲ್ಲಿ ಮಧುಮೇಹ ಮೊದಲ ಸ್ಥಾನದಲ್ಲಿದೆ. ಇದಲ್ಲದೆ ಜನರು ಹೃದಯ ಸಂಬಂಧಿ ಖಾಯಿಲೆ, ಕೊಲೆಸ್ಟ್ರಾಲ್ ಹೆಚ್ಚಳ, ರಕ್ತದೊತ್ತಡ, ಹಲ್ಲುಗಳ ಹಾನಿ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಐಸ್ ಕ್ರೀಂ ಹಾಗೂ ಆಲೂಗಡ್ಡೆ ಚಿಪ್ಸ್ ಸೇವನೆ ಚಟವಾಗಿದ್ದರೆ ಅದನ್ನು ಬಿಡೋದು ಬಹಳ ಕಷ್ಟ. ಬಾಯಿಗೆ ಬೀಗ ಹಾಕಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ನೀವು ಅಪರೂಪಕ್ಕೆ ಇದರ ಸೇವನೆ ಮಾಡ್ತಿದ್ದರೆ ಅದ್ರಿಂದ ಹೆಚ್ಚಿನ ನಷ್ಟವಿಲ್ಲ. ಪ್ರತಿ ದಿನ, ಎರಡು, ಮೂರು ದಿನಕ್ಕೆ ಒಮ್ಮೆ ಇದ್ರ ಸೇವನೆ ಮಾಡುತ್ತಿದ್ದರೆ ಸ್ವಲ್ಪ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. 

Health Tips : ಈ ಲಕ್ಷಣ ಕಂಡು ಬಂದ್ರೆ ನಿರ್ಲಕ್ಷ್ಯಿಸಬೇಡಿ ಎನ್ನುತ್ತಾರೆ ಕ್ಯಾನ್ಸರ್ ರೋಗಿ

ನಿಮಗೆ ಆಲೂಗಡ್ಡೆ ಚಿಪ್ಸ್ (Potato Chips) ತಿನ್ನುವ ಆಸೆ ಬಂದಾಗೆಲ್ಲ ನೀವು ಅದಕ್ಕೆ ಪರ್ಯಾಯವಾದ ಆಹಾರವನ್ನು (Alternativ Food) ಹುಡುಕಬೇಕು. ಚಿಪ್ಸ್ ತಿನ್ನುವ ಬಯಕೆಯಾದ್ರೆ ಹುರಿದ ಕಡಲೆ ಅಥವಾ ಮಖನಾವನ್ನು ನೀವು ತಿನ್ನಲು ಶುರು ಮಾಡಿ. ಚಿಪ್ಸ್ ಪ್ಯಾಕೆಟ್ ಹರಿದು, ಪ್ಯಾಕೆಟ್ ಕೈನಲ್ಲಿಟ್ಟುಕೊಂಡು ಟಿವಿ ಅಥವಾ ಮೊಬೈಲ್ ನೋಡೋದನ್ನು ತಪ್ಪಿಸಿ. ಈ ಸಮಯದಲ್ಲಿ ನೀವು ಎಷ್ಟು ತಿನ್ನುತ್ತಿದ್ದೀರಿ ಎಂಬ ಅರಿವು ನಿಮಗಿರೋದಿಲ್ಲ. ಒಂದು ಪ್ಲೇಟ್ ಗೆ ಚೀಪ್ಸ್ ಹಾಕಿಕೊಂಡು, ಅಷ್ಟನ್ನು ಮಾತ್ರ ತಿನ್ನಿ. ಆದಷ್ಟು ಆಲೂಗಡ್ಡೆ ಚಿಪ್ಸ್ ಖರೀದಿಯನ್ನೇ ನಿಲ್ಲಿಸೋದು ಒಳ್ಳೆಯದು. ಮನೆಯಲ್ಲಿ ಚಿಪ್ಸ್ ಸ್ಟಾಕ್ ಇಲ್ಲ ಎಂದಾಗ ನೀವು ಅದ್ರ ಸೇವನೆ ಕಡಿಮೆ ಮಾಡುತ್ತೀರಿ. ಒಂದೇ ಬಾರಿ ಐಸ್ ಕ್ರೀಂ ಹಾಗೂ ಚಿಪ್ಸ್ ಸೇವನೆ ಕಡಿಮೆ ಮಾಡಲು ಅಥವಾ ಬಿಡಲು ಸಾಧ್ಯವಿಲ್ಲ. ನಿಧಾನವಾಗಿ ಕಡಿಮೆ ಮಾಡ್ತಾ ಬಂದ್ರೆ ಕೆಲವೇ ದಿನಗಳಲ್ಲಿ ನೀವು ಸಂಪೂರ್ಣ ಚಟದಿಂದ ದೂರ ಉಳಿಯಬಹುದು.  

Follow Us:
Download App:
  • android
  • ios