ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಬಟರ್ ಚಿಕನ್: ಇಲ್ಲಿದೆ ರೆಸಿಪಿ
ಬಟರ್ ಚಿಕನ್ ಒಂದು ರುಚಿಕರವಾದ ಖಾದ್ಯವಾಗಿದ್ದು, ಇದನ್ನು ರೊಟ್ಟಿ, ಚಪಾತಿ, ಇಡ್ಲಿ, ದೋಸೆ, ಪರೋಟ ಮುಂತಾದವುಗಳ ಜೊತೆಗೆ ತಿನ್ನಬಹುದು. ಈ ಲೇಖನದಲ್ಲಿ ಮನೆಯಲ್ಲಿಯೇ ಸುಲಭವಾಗಿ ಬಟರ್ ಚಿಕನ್ ತಯಾರಿಸುವ ವಿಧಾನವನ್ನು ವಿವರಿಸಲಾಗಿದೆ.
ಹೊಸ ವರ್ಷಕ್ಕೆ ಸುಲಭವಾಗಿ ಮಾಡಿ ಬಟರ್ ಚಿಕನ್: ಇಲ್ಲಿದೆ ರೆಸಿಪಿ
ಬಟರ್ ಚಿಕನ್ ತನ್ನ ರುಚಿಯಿಂದಾಗಿ ಭಾರತೀಯರು ಮಾತ್ರವಲ್ಲದೇ ವಿದೇಶಿಗರನ್ನು ಸೆಳೆದಿರುವಂತಹ ಒಂದು ಚಿಕನ್‌ನ ರುಚಿಕರವಾದ ತಿನಿಸಾಗಿದೆ. ರೊಟ್ಟಿ, ಚಪಾತಿ ಇಡ್ಲಿ, ದೋಸೆ ಪರೋಟಾ ಮುಂತಾದವುಗಳ ಜೊತೆಗೆ ತಿನ್ನಲು ಸಖತ್ ಟೇಸ್ಟಿ ಎನಿಸುವ ಬಟರ್ ಚಿಕನ್ ಅನ್ನು ಮನೆಯಲ್ಲೇ ತಯಾರಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಬಟರ್ ಚಿಕನ್ ಮಾಡುವುದಕ್ಕೆ ಬೇಕಾದ ಸಾಮಗ್ರಿಗಳು
- ಒಂದು ಕೇಜಿ ಸ್ಕಿನ್‌ಲೆಸ್ ಚಿಕನ್ ಫೀಸ್ (chicken thighs)ಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ,
- 1/4 ಕಪ್ ಪ್ಲೈನ್ ಆಗಿರುವ ಗ್ರೀಕ್ ಯೋಗರ್ಟ್ ಅಥವಾ ಮೊಸರು
- 6 ಕೊಚ್ಚಿದ ಬೆಳ್ಳುಳ್ಳಿ ಎಸಳುಗಳು
- 2 ಟೀ ಸ್ಪೂನ್ ತಾಜಾ ತುರಿದ ಶುಂಠಿ
- 1 ಟೇಬಲ್ ಸ್ಪೂನ್ ಗರಂ ಮಸಾಲಾ
- 2 ಟೇಬಲ್ ಸ್ಪೂನ್ ಜೀರಿಗೆ
- 1 ಟೇಬಲ್ ಸ್ಪೂನ್ ಅರಶಿಣ (ಹಳದಿ)
- 1ರಿಂದ 2 ಸ್ಪೂನ್ ಕೆಂಪು ಮೆಣಸಿನ ಹುಡಿ ಅಥವಾ ನಿಮ್ಮ ರುಚಿಗಾಗಿ ಕಾಳು ಮೆಣಸಿನ ಹುಡಿಯನ್ನು ಬಳಸಬಹುದು
- 2 ಟೇಬಲ್ ಸ್ಪೂನ್ ಆಲಿವ್ ಎಣ್ಣೆ
- 4 ಟೇಬಲ್ ಸ್ಪೂನ್ ಉಪ್ಪು ಮಿಶ್ರಿತ ಬೆಣ್ಣೆ
- ಒಂದು ದೊಡ್ಡದಾದ ಈರುಳ್ಳಿ/ನೀರುಳ್ಳಿ
- 1 ರಿಂದ 2 ಟೇಬಲ್ ಸ್ಪೂನ್ ಕೆಂಪು ಮೆಣಸಿನ ಹುಡಿ
- 1/2 ಕಪ್ ಟೊಮೆಟೋ ಪೇಸ್ಟ್
- 1 (14 ಔನ್ಸ್) ತೆಂಗಿನ ಹಾಲು (ಅಥವಾ 1 ಕಪ್ ಹಾಲಿನ ಕೆನೆ ಅಥವಾ ಕ್ರೀಮ್)
- ಅರ್ಧ ಕಪ್ ಕೊತ್ತಂಬರಿ ಸೊಪ್ಪು
ಬಟರ್ ಚಿಕನ್ ಮಾಡುವ ವಿಧಾನ
.ಒಂದು ಬಟ್ಟಲಿನಲ್ಲಿ ಚಿಕನ್, ಮೊಸರು, ಲವಂಗ ಬೆಳ್ಳುಳ್ಳಿ, ಶುಂಠಿ, ಗರಂ ಮಸಾಲಾ, ಜೀರಿಗೆ, ಅರಿಶಿನ, ಮೆಣಸಿನಕಾಯಿ ಮತ್ತು ಉಪ್ಪನ್ನು ಒಟ್ಟಿಗೆ ಸೇರಿಸಿ ಕಲಸಿ 5 ರಿಂದ 10 ನಿಮಿಷ ಬಿಡಿ. ನಂತರ ದೊಡ್ಡ ಬಾಣಲೆಗೆ ತುಸು ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಎಣ್ಣೆ ಬಿಸಿ ಮಾಡಿ ನಂತರ ಇದಕ್ಕೆ ಮಿಕ್ಸ್ ಮಾಡಿಟ್ಟ ಚಿಕನ್ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ಬೆಣ್ಣೆಯನ್ನು ಸೇರಿಸಿ ಸ್ವಲ್ಪ ಹೊತ್ತು ಬಿಟ್ಟು ಬಾಣಲೆಯಿಂದ ಬೇರೆ ಪಾತ್ರಕ್ಕೆ ಚಿಕನ್ ಅನ್ನು ತೆಗೆದು ಹಾಕಿ.
ನಂತರ ಅದೇ ಬಾಣಲೆಗೆ ಬಾಣಲೆಗೆ, ಈರುಳ್ಳಿ ಹಾಕಿ ಮೃದುವಾಗುವವರೆಗೆ 5 ನಿಮಿಷ ಹುರಿಯಿರಿ. ಇದಕ್ಕೆ ನಂತರ ಬೆಣ್ಣೆ, ಲವಂಗ ಬೆಳ್ಳುಳ್ಳಿ, ಶುಂಠಿ, ಗರಂ ಮಸಾಲಾ, ಜೀರಿಗೆ, ಅರಿಶಿನ, ಮೆಣಸಿನಕಾಯಿ ಮತ್ತು ಚಿಲ್ಲಿ ಪೌಡರ್ ಅಗತ್ಯವಿದ್ದಲ್ಲಿ ರುಚಿ ನೋಡಿಕೊಂಡು ಉಪ್ಪು ಮತ್ತು ಖಾರ ಬೆರೆಸಿ . ಸುಮಾರು 5 ನಿಮಿಷಗಳ ಕಾಲ ಬಹಳ ಒಳ್ಳೆಯ ಘಮ ಬರುವವರೆಗೆ ಬೇಯಿಸಿ. ನಂತರ ಇದಕ್ಕೆ ಟೊಮೆಟೊ ಪೇಸ್ಟ್ ಸೇರಿಸಿ ಇನ್ನೊಂದು 3-4 ನಿಮಿಷ ಬೇಯಿಸುವುದನ್ನು ಮುಂದುವರಿಸಿ.
ಈಗ ಗ್ಯಾಸ್ ಉರಿ ಕಡಿಮೆ ಮಾಡಿ ನಂತರ ಇದಕ್ಕೆ 1 ಕಪ್ ನೀರು ಮತ್ತು ತೆಂಗಿನ ಹಾಲನ್ನು ಸೇರಿಸಿ ಕುದಿಸಿ, 5 ನಿಮಿಷ ಬೇಯಿಸಿದ ನಂತರ ನೀರು ಹೀರಿಕೊಂಡು ಗಸಿ ದಪ್ಪವಾಗುವವರೆಗೆ. ಕುದಿಸಿ ಜೊತೆಗೆ ಬೆಣ್ಣೆಯನ್ನು ಸೇರಿಸಿ ಗಸಿ ನಿಮಗೆ ದಪ್ಪವಾಗಿದೆ ಎನಿಸಿದರೆ ಮತ್ತೆ 1 ಕಪ್ ಹೆಚ್ಚುವರಿ ತೆಂಗಿನ ಹಾಲನ್ನು ಬೆರೆಸಿ ತೆಳುಗೊಳಿಸಿ ಅಥವಾ ನೀರನ್ನು ಬೇಕಾದರೂ ಸೇರಿಸಬಹುದು ಇದಾದ ನಂತರ ಕುದಿಸಿ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹರಡಿ. ಈಗ ಬಟರ್ ಚಿಕನ್ ರೆಡಿ. ಈ ಬಟರ್ ಚಿಕನ್‌ನ್ನು ನೀವು ಅನ್ನದ ಜೊತೆಗೆ ಅಥವಾ ಚಪಾತಿ ರೋಟಿಯ ಜೊತೆಗೂ ಸೇವಿಸಬಹುದು.