ಪಾನಿ ಪುರಿ ಮನೆದಲ್ಲಿ ತಯಾರಿಸುವುದು ಸುಲಭ ಮತ್ತು ರುಚಿಯಾಗಿಯೂ ಇರುತ್ತದೆ. 

ಪಾನಿಪುರಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ, ಬಹುತೇಕ ಎಲ್ಲರೂ ಇಷ್ಟಪಡುವ ಸ್ನಾಕ್ಸ್ ರೆಸಿಪಿ ಇದು. ಇದನ್ನು ಗೋಲ್ಗಪ್ಪ, ಪುಚ್ಕಾ ಅಥವಾ ಫುಲ್ಕಾ ಎಂದೂ ಕರೆಯುತ್ತಾರೆ. ಹೊರಗಿನಿಂದ ಗರಿಗರಿಯಾಗಿ ಮತ್ತು ಒಳಗಿನಿಂದ ಖಾರ ಖಾರವಾಗಿ ಇರುವ ಪಾನಿಪುರಿಯ ರುಚಿಯೇ ಬೇರೆ. ನೀವು ಅದನ್ನು ಮನೆಯಲ್ಲಿಯೇ ಮಾಡಿಕೊಂಡರೆ ಎಲ್ಲಿಯೂ ಹೋಗಬೇಕಾಗಿಲ್ಲ. ಹಾಗಾದರೆ ಇವತ್ತು ನಾವು ನಿಮಗೆ ಪಾನಿಪುರಿ ಮಾಡೋದನ್ನು ಹೇಳ್ತೇವೆ...ಅದನ್ನು ನೀವು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು.

ಪಾನಿ ಪುರಿ ಮಾಡಲು ಬೇಕಾಗುವ ಪದಾರ್ಥಗಳು
* ಪಾನಿಪುರಿಗೆ, ನಿಮಗೆ ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ನಿಂಬೆ ರಸ ಇತ್ಯಾದಿ ಬೇಕಾಗುತ್ತದೆ. 

* ಪುರಿ ಮಾಡಲು ಸೂಜಿ ರವೆ, ಹಿಟ್ಟು ಮತ್ತು ನೀರು ಬೇಕಾಗುತ್ತದೆ. 

* ಇದಲ್ಲದೆ, ಹುಣಸೆಹಣ್ಣು, ಕಪ್ಪು ಉಪ್ಪು, ಹುರಿದ ಜೀರಿಗೆ, ಪುದೀನಾ ಎಲೆಗಳು, ಉಪ್ಪು, ಸಕ್ಕರೆ ಮತ್ತು ನೀರನ್ನು ಬಳಸಿ ಮಸಾಲೆಯುಕ್ತ ನೀರನ್ನು ತಯಾರಿಸಬಹುದು.

* ಇಲ್ಲಿ ಪ್ರಮಾಣವನ್ನು ಕೊಟ್ಟಿಲ್ಲ, ಹಾಗಾಗಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಪದಾರ್ಥಗಳನ್ನು ಬಳಸಿ) 

ಪಾನಿಪುರಿ ಹಿಟ್ಟನ್ನು ತಯಾರಿಸುವುದು ಹೇಗೆ? 
ಪಾನಿಪುರಿ ಹಿಟ್ಟನ್ನು ತಯಾರಿಸಲು ಒಂದು ಬಟ್ಟಲಿನಲ್ಲಿ ರವೆ, ಹಿಟ್ಟು, ಉಪ್ಪು ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಾದಿ ಅದನ್ನು ಮುಚ್ಚಿ 20 ನಿಮಿಷಗಳ ಕಾಲ ಬಿಡಿ.
(ಕೆಲವರು ರವೆಗೆ ಮೈದಾ ಹಿಟ್ಟನ್ನು ಸ್ವಲ್ಪ ಸೇರಿಸುತ್ತಾರೆ. ಆರೋಗ್ಯದ ದೃಷ್ಟಿಯಿಂದ ಹಲವರು ಗೋಧಿ ಹಿಟ್ಟಿನಿಂದ ಪುರಿ ಮಾಡುತ್ತಾರೆ. ಆದರೆ ಇದರಿಂದ ಪುರಿ ಅಷ್ಟು ಕುರುಕಾಗಲ್ಲ.) 

ಇದಾದ ನಂತರ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ಪಾನಿಪುರಿಗೆ, ರವೆ ಮತ್ತು ಹಿಟ್ಟಿನ ಮಿಶ್ರಣವು ಉತ್ತಮವಾಗಿದೆ. ಏಕೆಂದರೆ ಇದು ಪಾನಿಪುರಿಯನ್ನು ಗರಿಗರಿಯಾಗಿಸುತ್ತದೆ.

ಉಂಡೆಗಳನ್ನು ಎಣ್ಣೆಯಲ್ಲಿ ಫ್ರೈ ಮಾಡಿದ ನಂತರ, ಅವುಗಳನ್ನು ತಟ್ಟೆಯಲ್ಲಿ ಎತ್ತಿಟ್ಟುಕೊಳ್ಳಿ.

ಪಾನಿಪುರಿಗೆ ಖಾರ-ಹುಳಿ ನೀರು ತಯಾರಿಸುವುದು ಹೇಗೆ?
ಪಾನಿಪುರಿಗೆ ಖಾರದ ನೀರು ತಯಾರಿಸಲು, ಮೊದಲು ಹುಣಸೆಹಣ್ಣು, ಕಪ್ಪು ಉಪ್ಪು, ಹುರಿದ ಜೀರಿಗೆ, ಪುದೀನ ಎಲೆಗಳು, ಉಪ್ಪು, ಸಕ್ಕರೆ ಮತ್ತು ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ತಣ್ಣಗಿನ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನೀವು ಖಾರವಾದ ನೀರನ್ನು ಹೆಚ್ಚು ಇಷ್ಟಪಡುತ್ತಿದ್ದರೆ, ನೀವು ಅದಕ್ಕೆ ಸ್ವಲ್ಪ ಕೆಂಪು ಮೆಣಸಿನ ಪುಡಿಯನ್ನು ಕೂಡ ಸೇರಿಸಬಹುದು. 

ಪಾನಿಪುರಿ ರೆಡಿ 
ಈಗ ಕರಿದುಕೊಂಡ ಪುರಿಯನ್ನು ಒಂದು ತಟ್ಟೆಯಲ್ಲಿ ಇರಿಸಿ, ನಂತರ ಮಧ್ಯದಲ್ಲಿ ರಂಧ್ರ ಮಾಡಿ, ಇದಕ್ಕೆ ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ನಿಂಬೆ ರಸದಿಂದ ಮಾಡಿದ ಮಿಶ್ರಣವನ್ನು ತುಂಬಿಸಿ. ಕೊನೆಯಲ್ಲಿ ಪಾನಿಪುರಿಗೆ ಮಸಾಲೆಯುಕ್ತ ನೀರನ್ನು ತುಂಬಿಸಿ ಸೇವಿಸಿ, ಇದನ್ನು ತಿಂತಾ ಇದ್ರೆ ಸಿಗುವ ಆನಂದವೇ ಬೇರೆ.

ಮಸಾಲೆ ಪುರಿ ಕೂಡ ಮಾಡಿಕೊಳ್ಳಬಹುದು 
ಟೊಮೆಟೊ, ಈರುಳ್ಳಿ, ಪುದೀನಾ, ಕೊತ್ತಂಬರಿ, ಹಸಿಮೆಣಸನ್ನು ಮಿಕ್ಸಿಯಲ್ಲಿ ರುಬ್ಬಿ. ಕಾದ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡ ಪೇಸ್ಟ್ ಹಾಕಿ ಬೇಯಿಸಿ. ಇದಕ್ಕೆ ಬೇಯಿಸಿದ ಬಟಾಣಿಕಾಳು, ಉಪ್ಪು, ಖಾರದ ಪುಡಿ, ಧನಿಯಾ ಪುಡಿ ಸೇರಿಸಿ ನೀರು ಹಾಕಿ ಚೆನ್ನಾಗಿ ಕುದಿಸಿ. ಕೊನೆಗೆ ಲಿಂಬೆರಸ ಅಥವಾ ಇಂಗು ಹಾಕಬಹುದು. ಈಗ ಮಸಾಲೆ ಸಿದ್ಧವಾಗುತ್ತದೆ. 

ಸೇವಿಸುವ ವಿಧಾನ 
ಪುರಿಯನ್ನು ತಳಭಾಗದಲ್ಲಿ ಮುರಿದು, ಇದರ ಮೇಲೆ ಮಸಾಲೆ ಹಾಕಿ. ಮೇಲೆ ತುರಿದ ಈರುಳ್ಳಿ, ಕ್ಯಾರೆಟ್ ತುರಿ, ಸೇವ್ ಪುರಿ, ಕೊತ್ತಂಬರಿ ಸೊಪ್ಪು ಹಾಗೂ ಲಿಂಬೆರಸ ಹಾಕಿ. ತಕ್ಷಣವೇ ಸೇವಿಸಿ.