ಮಲ್ಲಿಗೆ ಇಡ್ಲಿಯಂತೆ ಸಾಫ್ಟ್ ಆಗಿ ಮಟನ್ ಬೇಯಿಸೋದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್
ಭಾನುವಾರ ಬಂದ್ರೆ ಬಹುತೇಕರ ಮನೆಯಲ್ಲಿ ಬಾಡೂಟ ಫಿಕ್ಸ್, ಆದ್ರೆ ಬಾಡೂಟ್ ಆಂದ್ರೆ ಮಟನ್. ಆದರೆ ಮಟನ್ ಅಡುಗೆ ಮಾಡಲು ತುಂಬಾ ಸಮಯ ಬೇಕಾಗುತ್ತೆ ಅಂತ ಬಹುತೇಕರು ಚಿಕನ್ ಮೊರೆ ಹೋಗುತ್ತಾರೆ.
ಮಟನ್ ಅಡುಗೆ ಮಾಡೋದು ಅಂದ್ರೆ ಅಷ್ಟು ಸರಳ ಅಲ್ಲ. ಬಿರಿಯಾನಿ, ಕಬಾಬ್, ಕರ್ರಿ ಹೀಗೆ ಹಲವು ಬಗೆ ಬಗೆಯಲ್ಲಿ ಮಟನ್ ಅಡುಗೆ ಮಾಡಬಹುದು. ಚಿಕನ್ ಮಾಡಿದಂತೆ ಅಲ್ಲ ಮಟನ್ ಅಡುಗೆ ತಯಾರಿಸೋದು. ಮಟನ್ ಮಾಡೋವಾಗ ಕೆಲವೊಂದು ಸರಳ ವಿಧಾನ ಅನುಸರಿಸಿದ್ರೆ ಮಾತ್ರ ಮಾಂಸ ಹದವಾಗಿ ಬೇಯುತ್ತದೆ. ಆದ್ರೆ ಬಹುತೇಕರಿಗೆ ಮಟನ್ ಹೇಗೆ ಬೇಯಿಸುಬೇಕು ಎಂಬುದರ ಬಗ್ಗೆ ಗೊತ್ತಿಲ್ಲದೇ ತಪ್ಪು ಮಾಡುತ್ತಿರುತ್ತಾರೆ. ಚಿಕನ್ ಅಥವಾ ಮಟನ್ ನಲ್ಲಿ ಯಾವುದು ಬೆಸ್ಟ್ ಅಂತ ಕೇಳಿದ್ರೆ ಬಹುತೇಕರು ಹೇಳುವುದು ಮಟನ್. ಹದವಾಗಿ ಬೇಯುತ್ತಿರುವ ಮಟನ್ ಪರಿಮಳ ಪಕ್ಕದ್ಮನೆಯವರೆಗೂ ಹರಡುತ್ತದೆ. ಆದ್ರೆ ಮಟನ್ ಬೇಯಿಸಲು ತುಂಬಾ ಸಮಯ ಬೇಕಾಗುತ್ತೆ ಅಂತ ಚಿಕನ್ ಮೊರೆ ಹೋಗುತ್ತಾರೆ. ಆದ್ರೆ ಮಟನ್ ರುಚಿಯೇ ತುಂಬಾ ವಿಶೇಷ ಮತ್ತು ಭಿನ್ನವಾಗಿರುತ್ತದೆ. ಇಂದು ನಾವು ನಿಮಗೆ ಹೇಗೆ ಸರಳವಾಗಿ ಮಟನ್ ಬೇಯಿಸಬೇಕು ಎಂಬುದರ ಬಗ್ಗೆ ಹೇಳುತ್ತಿದ್ದೇವೆ. ಈ ರೀತಿ ಬೇಯಿಸಿದ್ರೆ ನಿಮ್ಮ ಮಟನ್ ಮಲ್ಲಿಗೆ ಇಡ್ಲಿಯಂತೆ ಮೃದುವಾಗಿರುತ್ತದೆ.
1.ಮಾರುಕಟ್ಟೆಯಿಂದ ಮಾಂಸ ಖರೀದಿ ಮಾಡುವಾಗ ಅದು ಯಾವ ಪ್ರಾಣಿಯದ್ದು ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಮೇಕೆ, ಕುರಿ, ಟಗರು ಎಂಬುದನ್ನು ತಿಳಿದುಕೊಂಡು ಖರೀದಿ ಮಾಡಿಕೊಂಡ್ರೆ ಎಷ್ಟು ಸಮಯದವರೆಗೆ ಬೇಯಿಸಬೇಕು ಎಂಬುದರ ಬಗ್ಗೆ ಅಂದಾಜು ಲೆಕ್ಕ ಹಾಕಬಹುದು.
2.ಮಾರುಕಟ್ಟೆಯಿಂದ ತಂದ ಮಾಂಸವನ್ನು ಚಿಕ್ಕ ಚಿಕ್ಕ ಪೀಸ್‌ಗಳಾಗಿ ಕತ್ತರಿಸಿಕೊಳ್ಳಿ. ನಂತರ ಅದನ್ನು ಬಿಸಿನೀರಿನಲ್ಲಿ ತೊಳೆದುಕೊಳ್ಳಿ. ಮಟನ್ ಕತ್ತರಿಸುವಾಗ ಅಂಗಡಿಯವರು ತಣ್ಣೀರು ಬಳಸಿರುವ ಕಾರಣ ಮಾಂಸ ಹಾರ್ಡ್ ಆಗಿರುತ್ತದೆ. ಹಾಗಾಗಿ ನೀವು ಮಾಂಸ ತೊಳೆಯುವಾಗ ಉಗುರು ಬೆಚ್ಚಗಿನ ನೀರು ಬಳಸಬೇಕು. ಇದರಿಂದ ಮಾಂಸ ಮೃದುವಾಗುತ್ತದೆ. ಹಾಗಾಗಿ ಮಾಂಸವನ್ನು ಎರಡರಿಂದ ಮೂರು ಬಾರಿ ಬಿಸಿನೀರಿನಲ್ಲಿಯೇ ತೊಳೆದುಕೊಳ್ಳಬೇಕು.
ಭಾನುವಾರದ ಬಾಡೂಟ ಬಲು ಜೋರು; ಪಾಪಣ್ಣ ಮಟನ್ ಸ್ಟಾಲ್ ಮುಂದೆ ಜನವೋ ಜನ..!
ಯಾವುದೇ ಕಾರಣಕ್ಕೂ ತಣ್ಣೀರು ಬಳಸಬಾರದು. ಒಂದು ವೇಳೆ ನೀವು ಮಟನ್ ತೊಳೆಯಲು ತಣ್ಣೀರು ಬಳಸಿದ್ರೆ ಮಾಂಸ ಹದವಾಗಿ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುವದರ ಜೊತೆ ರುಚಿಯೂ ಸಹ ಕಡಿಮೆಯಾಗುತ್ತದೆ.
3.ಇನ್ನು ಮೂರನೇಯದಾಗಿ ಮಟನ್ ಬೇಯಿಸುವಾಗ ಅಥವಾ ಅಡುಗೆ ಮಾಡುವಾಗಲೂ ಬಿಸಿನೀರನ್ನೇ ಬಳಸಬೇಕು. ಇದರಿಂದ ಮಾಂಸ ಹದವಾಗಿ ಬೇಯುತ್ತದೆ. ಅಷ್ಟು ಮಾತ್ರವಲ್ಲದೇ ಮಟನ್ ಒಂದು ಹದಕ್ಕೆ ಬೆಂದ ಮೇಲೆಯೇ ಕೊಬ್ಬರಿ, ಖಾರ, ಮಸಾಲೆ, ತರಕಾರಿಯನ್ನು ಸೇರಿಸಬೇಕು. ಟೊಮೆಟೋವನ್ನು ಕೊನೆಗೆ ಸೇರಿಸೋದರಿಂದ ಮಟನ್ ರುಚಿ ಹೆಚ್ಚಾಗುತ್ತದೆ.
4.ಕುಕ್ಕರ್‌ನಲ್ಲಿ ಮಟನ್ ಬೇಯಿಸುವುದು ಉತ್ತಮ. ಇದರಿಂದ ಸಮಯವೂ ಉಳಿತಾಯವಾಗುತ್ತದೆ. ಚಿಕ್ಕ ಚಿಕ್ಕ ಪೀಸ್‌ಗಳನ್ನಾಗಿ ಮಾಡಿದ್ರೆ ಮಟನ್ ಕಡಿಮೆ ಸಮಯದಲ್ಲಿ ಬೇಯುತ್ತದೆ.
ದೇಶದಲ್ಲಿ ಗರಿಷ್ಠ ಆರ್ಡರ್ ಮಾಡುವ ಫುಡ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಮಟನ್ ಬಿರಿಯಾನಿ!