ಬೆಂಗಳೂರು (ಜು. 19): ನಮ್ಮ ಜನ ಏನೇ ಆಗಲಿ ಕೆಲವೊಂದನ್ನ ಮಾತ್ರ ಮಿಸ್ ಮಾಡ್ಕೋಳಲ್ಲ. ಮನೆಯಿಂದ ಹೊರಬರಬೇಡಿ. ಮನೆಯಲ್ಲಿಯೇ ಸೇಫ್ ಆಗಿರಿ ಎಂದು ಸರ್ಕಾರ ಎಷ್ಟೇ ಕೇಳಿಕೊಂಡರೂ ಜನ ಮಾತ್ರ ಮಾತು ಕೇಳುತ್ತಿಲ್ಲ. ಇಂದು ಭಾನುವಾರದ ಬಾಡೂಟಕ್ಕೆ ಅಂಗಡಿ ಮುಂದೆ ಜನ ಕ್ಯೂ ನಿಂತಿದ್ದಾರೆ. 

ಮಟನ್, ಚಿಕನ್‌ಗೆ ಭರ್ಜರಿ ಡಿಮ್ಯಾಂಡ್..! ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ. ಒಟ್ಟಿನಲ್ಲಿ ಬಾಡೂಟ ಮಾಡಬೇಕಷ್ಟೇ..!

ಭಾನುವಾರದ ಬಾಡುಟಕ್ಕೆ ಬೇಕಾದ ಅಡುಗೆ ಸಾಮಗ್ರಿಗಳನ್ನು ಖರೀದಿಸುವಲ್ಲಿ ಜನ ಬ್ಯುಸಿಯೋ ಬ್ಯುಸಿ..!

ಲಾಕ್‌ಡೌನ್ ನಡುವೆಯೇ ಬೀದಿಗಿಳಿದ ಜನ. ಕೆಲವರಿಗೆ ಪೊಲೀಸರಿಂದ ಕ್ಲಾಸ್, ಇನ್ನು ಕೆಲವರಿಗೆ ಲಾಠಿ ಏಟು..!

ಬಾಡೂಟಕ್ಕೆ ಪಾಪಣ್ಣ ಮಟನ್ ಸ್ಟಾಲ್ ಎದುರು ಜನವೋ ಜನ..!