ಗೋಡಂಬಿ ದೇಹಕ್ಕೊಳಿತು ಹೌದು, ಆದ್ರೆ ಬೇಕಾ ಬಿಟ್ಟಿ ತಿಂದ್ರೇನಾಗುತ್ತೆ ಗೊತ್ತಾ?
ಗೋಡಂಬಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದನ್ನು ಪ್ರತಿ ದಿನ ಸೇವನೆ ಮಾಡ್ಬೇಕು ಅಂತಾ ತಜ್ಞರು ಹೇಳ್ತಾರೆ. ಆದ್ರೆ ದಿನಕ್ಕೆ ಎಷ್ಟು ಸೇವನೆ ಮಾಡ್ಬೇಕು, ಎಷ್ಟು ತಿಂದ್ರೆ ಆರೋಗ್ಯ ಹಾಳಾಗುತ್ತೆ ಎಂಬುದು ನಿಮಗೆ ಗೊತ್ತಾ?
ಡ್ರೈ ಫ್ರೂಟ್ಸ್ ಹೆಸರು ಬಂದಾಗ ನಮ್ಮ ನೆನಪಿಗೆ ಬರುವ ಮೊದಲ ಹೆಸರು ಗೋಡಂಬಿ. ಇದನ್ನು ನಾವು ಹಾಗೇ ತಿನ್ನೋದು ಮಾತ್ರವಲ್ಲ ಬರ್ಫಿ, ಮಸಾಲಾ, ಖೀರ್ ಹೀಗೆ ನಾನಾ ವಿಧಗಳಲ್ಲಿ ಅದನ್ನು ತಿನ್ನಲು ಜನರು ಇಷ್ಟಪಡ್ತಾರೆ. ಡ್ರೈ ಫ್ರೂಟ್ಸ್ ನಲ್ಲಿ ಅತ್ಯಂತ ರುಚಿಕರ ಡ್ರೈ ಫ್ರೂಟ್ಸ್ ಕೂಡ ಗೋಡಂಬಿ. ಜನರು ಗೋಡಂಬಿಯನ್ನು ಒಂದಾದ್ಮೇಲೆ ಒಂದರಂತೆ 15 -20 ತಿನ್ನುತ್ತಾರೆ. ಅದಕ್ಕಿಂತ ಹೆಚ್ಚು ತಿನ್ನುವ ಜನರೂ ಇದ್ದಾರೆ. ಒಂದು ರುಚಿ ಹಾಗೂ ಇನ್ನೊಂದು ಆರೋಗ್ಯಕ್ಕೆ ಒಳ್ಳೆಯದು ಅಂತಾ ನಾವು ತಿನ್ನುತ್ತೇವೆ. ಆದ್ರೆ ಆರೋಗ್ಯಕ್ಕೆ ಒಳ್ಳೆಯದಾಗಿರುವ ಇದನ್ನು ಅತಿ ಹೆಚ್ಚು ತಿನ್ನೋದು ಕೂಡ ಒಳ್ಳೆಯದಲ್ಲ. ಗೋಡಂಬಿ ಇಷ್ಟಪಡುವವರಿಗೆ ಅದನ್ನು ದಿನಕ್ಕೆ ಎಷ್ಟು ತಿನ್ನಬೇಕು ಎಂಬುದು ಗೊತ್ತಿರಬೇಕು. ಇದ್ರ ಬಗ್ಗೆ ವೈದ್ಯರು ಏನು ಹೇಳ್ತಾರೆ ಗೊತ್ತಾ?
ಪ್ರತಿ ದಿನ ಇಷ್ಟು ಗೋಡಂಬಿ (Cashew) ಸೇವನೆ ಮಾಡ್ಬೇಕು : ಗೋಡಂಬಿ ಅಥವಾ ಇತರ ಯಾವುದೇ ವಸ್ತುವನ್ನು ತಿನ್ನುವಾಗ ಅದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ತಿನ್ನಬೇಕು ಎಂಬುದು ಎಲ್ಲರಿಗೂ ತಿಳಿದಿರಬೇಕು ಸೀಮಿತ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ದೇಹದ ಮೇಲೆ ನಾವು ಸೇವನೆ ಮಾಡಿದ ಆಹಾರ (Food) ಪರಿಣಾಮ ಬೀರುತ್ತದೆ. ಇದಕ್ಕೆ ಗೋಡಂಬಿ ಕೂಡ ಹೊರತಾಗಿಲ್ಲ. ನಾವು ಪ್ರತಿ ದಿನ ಕೇವಲ 10 -15 ಗೋಡಂಬಿಯನ್ನು ಮಾತ್ರ ತಿನ್ನಬೇಕು ಎನ್ನುತ್ತಾರೆ ವೈದ್ಯರು.
ಜಪಾನೀಯರ ಸುದೀರ್ಘ ಬದುಕಿನ ಸೂತ್ರ, ನೀವೂ ಆಯುಷ್ಯ ಹೆಚ್ಚಿಸಿಕೊಳ್ಳಿ!
ತೂಕ (Weight) ಹೆಚ್ಚಿಸಲು ನೆರವಾಗುತ್ತೆ ಗೋಡಂಬಿ : ಗೋಡಂಬಿಯನ್ನು ಮಿತಿಗಿಂತ ಹೆಚ್ಚು ತಿನ್ನುವುದು ದೇಹದ ತೂಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ತೂಕ ಇಳಿಸಲು ಮುಂದಾಗಿರುವವರು, ಈಗಾಗಲೇ ಡಯಟ್ ಮಾಡ್ತಿರುವವರು ಯಾವುದೇ ಕಾರಣಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿ ಸೇವನೆ ಮಾಡಬೇಡಿ. ತೂಕ ಇಳಿಕೆ ಪ್ಲಾನ್ ಇದ್ದವರು, ತೂಕ ಹೆಚ್ಚಾಗಬಾರದು ಎನ್ನುವವರು ಪ್ರತಿದಿನ 10-15 ಗೋಡಂಬಿಗಳನ್ನು ಮಾತ್ರ ಸೇವಿಸಿ.
ನೀವು ಫಿಟ್ ಮತ್ತು ಆರೋಗ್ಯಕರವಾಗಿರಲು ಬಯಸಿದರೆ ಅಲ್ಲದೆ, ನಿಮಗೆ ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಅಗತ್ಯವಿದ್ದರೆ ನೀವು 15-30 ಗೋಡಂಬಿಗಳನ್ನು ತಿನ್ನಬಹುದು ಎನ್ನುತ್ತಾರೆ ವೈದ್ಯರು. ಆದ್ರೆ ಅದಕ್ಕಿಂತ ಹೆಚ್ಚು ಗೋಡಂಬಿಯನ್ನು ಸೇವನೆ ಮಾಡಬಾರದು. ಮಿತಿ ಮೀರಿ ಗೋಡಂಬಿ ತಿನ್ನುವುದ್ರಿಂದ ಹೊಟ್ಟೆ ಭಾರವಾದ ಅನುಭವವಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಗಣೇಶನಿಗೆ ಏನಿಷ್ಟ? ಹಬ್ಬಕ್ಕೆ ಏನು ಸ್ವೀಟ್ಸ್ ಮಾಡಬೇಕು ಅಂದು ಕೊಂಡಿದ್ದೀರಿ?
ಗೋಡಂಬಿ ಅತಿಯಾದ ಸೇವನೆಯಿಂದಾಗುವ ನಷ್ಟ : ಗೋಡಂಬಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾಗುತ್ತದೆ. ಸೋಡಿಯಂ ಮಟ್ಟ ಹೆಚ್ಚಾದಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡುತ್ತದೆ.
ಗೋಡಂಬಿಯಲ್ಲಿ ಇರುವ ನಾರಿನಂಶವು ದೇಹದಲ್ಲಿ ಹೆಚ್ಚಾದರೆ, ಅದು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು, ಉದಾಹರಣೆಗೆ ವಾಯು, ಅನಿಲ ರಚನೆ ಇತ್ಯಾದಿ.
ಗೋಡಂಬಿಯಲ್ಲಿ ಇರುವ ಪೊಟ್ಯಾಶಿಯಂ ಪ್ರಮಾಣ ದೇಹದಲ್ಲಿ ಹೆಚ್ಚಾದರೆ ಕಿಡ್ನಿ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಗೋಡಂಬಿಯನ್ನು ಸೂಕ್ತ ಪ್ರಮಾಣದಲ್ಲಿ ಮಾತ್ರ ಸೇವಿಸಿ.
ಗೋಡಂಬಿಯಲ್ಲಿ ಏನೆಲ್ಲ ಪೋಷಕಾಂಶವಿದೆ : ಗೋಡಂಬಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಫೈಬರ್, ಪ್ರೋಟೀನ್, ವಿಟಮಿನ್ ಎ, ಸಿ, ಇ, ಕೆ, ಬಿ6, ನಿಯಾಸಿನ್, ರೈಬೋಫ್ಲಾವಿನ್, ತಾಮ್ರ, ರಂಜಕ, ಆರೋಗ್ಯಕರ ಕೊಬ್ಬುಗಳು, ಪೊಟ್ಯಾಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿವೆ. ಈ ಎಲ್ಲಾ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅನೇಕ ರೀತಿಯ ರೋಗಗಳನ್ನು ದೂರವಿರಿಸಿ ದೇಹವನ್ನು ಆರೋಗ್ಯವಾಗಿರಿಸುತ್ತದೆ.
ಗೋಡಂಬಿ ಸೇವನೆ ಮಾಡುವುದ್ರಿಂದಾಗುವ ಆರೋಗ್ಯ ಲಾಭ :
ಮಲಬದ್ಧತೆ ಸಮಸ್ಯೆ ಮುಕ್ತಿ : ಗೋಡಂಬಿಯಲ್ಲಿ ಹೇರಳವಾದ ನಾರಿನಂಶವಿದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಗೋಡಂಬಿ ತಿಂದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಗೋಡಂಬಿಯನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.
ಮೆಮೊರಿ (Memory) ಸುಧಾರಣೆ : ಗೋಡಂಬಿಯಲ್ಲಿ ಮೆಗ್ನೀಸಿಯಮ್ ಕಂಡುಬರುತ್ತದೆ. ಮೆಗ್ನೀಸಿಯಮ್ ಸೇವನೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಜ್ಞಾಪಕಶಕ್ತಿ ಸಮಸ್ಯೆ ಇರುವವರು ಗೋಡಂಬಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ಬಲಗೊಳ್ಳುವ ಮೂಳೆ : ಮೂಳೆಗಳನ್ನು ಬಲಪಡಿಸುವಲ್ಲಿ ಗೋಡಂಬಿ ತುಂಬಾ ಪರಿಣಾಮಕಾರಿಯಾಗಿದೆ. ಸೋಡಿಯಂ ಮತ್ತು ಕ್ಯಾಲ್ಸಿಯಂ ಮೂಳೆಗಳ ದೌರ್ಬಲ್ಯವನ್ನು ತೆಗೆದುಹಾಕಲು ಉಪಯುಕ್ತವಾಗಿದೆ.