ಕುಕ್ಕರ್‌ನಲ್ಲಿ ಬೇಳೆ ಬೇಯಿಸುವಾಗ ಉತ್ಪತ್ತಿಯಾಗುವ ಬಿಳಿ ನೊರೆ ವಿಷಕಾರಿ ಸಪೋನಿನ್‌ಗಳನ್ನು ಹೊಂದಿರುತ್ತದೆ. ತೆರೆದ ಪಾತ್ರೆಯಲ್ಲಿ ಬೇಯಿಸಿದಾಗ ಈ ನೊರೆಯನ್ನು ತೆಗೆಯಬಹುದು, ಆದರೆ ಕುಕ್ಕರ್‌ನಲ್ಲಿ ಅದು ಬೇಳೆಯೊಂದಿಗೆ ಬೆರೆಯುತ್ತದೆ. ಹಾಗಾಗಿ, ಬೇಳೆಯನ್ನು ನೆನೆಸಿ ತೆರೆದ ಪಾತ್ರೆಯಲ್ಲಿ ಬೇಯಿಸಿ ನೊರೆಯನ್ನು ತೆಗೆದು ಬಳಸುವುದು ಆರೋಗ್ಯಕರ. ಇಲ್ಲದಿದ್ದರೆ, ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಅಡುಗೆ ಸಂದರ್ಭದಲ್ಲಿ ನಮ್ಮ ಅರಿವಿಗೆ ಬಾರದೇ ಎಷ್ಟೋ ತಪ್ಪುಗಳನ್ನು ಮಾಡುವುದು ಇದೆ. ಅದು ಕೆಲವೊಮ್ಮೆ ಮಾರಣಾಂತಿಕವಾಗಿಯೂ ಸಂಭವಿಸಿದರೆ, ಕೆಲವೊಮ್ಮೆ ನಿಧಾನವಾಗಿ ಸ್ಲೋ ಪಾಯ್ಸನ್‌ಗೆ ನಮ್ಮ ದೇಹವನ್ನು ಗುರಿ ಮಾಡುತ್ತಿರುತ್ತೇವೆ. ಅಷ್ಟಕ್ಕೂ ಈಗ ಕುಕ್ಕರ್ ಎನ್ನುವುದು ಸರ್ವೇ ಸಾಮಾನ್ಯವಾಗಿದೆ. ಕುಕ್ಕರ್‌ನಲ್ಲಿ ಅನ್ನ ಮಾಡುವುದು ಸೇರಿದಂತೆ ಬೇಳೆಕಾಳುಗಳನ್ನು ಬೇಯಿಸುವುದು ಕೂಡ ಅಪಾಯಕಾರಿಯೇ. ಆದರೆ, ಗೊತ್ತಿದ್ದರೂ ಧಾವಂತದ ಈ ಬದುಕಿನಲ್ಲಿ ಕುಕ್ಕರ್ ನಮ್ಮ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅದರಲ್ಲಿಯೂ ಗಂಟೆಗಟ್ಟಲೆ ಗ್ಯಾಸ್ ಮೇಲೆ ಪಾತ್ರೆಯಲ್ಲಿ ಅನ್ನ, ಬೇಳೆ ಬೇಯಿಸಿದರೆ ಗ್ಯಾಸ್ ಕೂಡ ನಷ್ಟ, ಟೈಮೂ ವೇಸ್ಟು ಎನ್ನುವುದು ಎಲ್ಲರ ಅನಿಸಿಕೆ, ಇದು ನಿಜ ಕೂಡ.
ಅದೇನೇ ಇರಲಿ. ಆದರೆ ನಿಮಗೆ ಗೊತ್ತಾ? ಬೇಳೆಗಳನ್ನು ಅದರಲ್ಲಿಯೂ ಹೆಚ್ಚಾಗಿ ತೊಗರಿಬೇಳೆ ದಿನನಿತ್ಯ ಬಳಕೆಯಾಗುತ್ತಲೇ ಇರುತ್ತದೆ. ಇದನ್ನು ಬೇಯಿಸುವಾಗ ಮೇಲೆ ಬಿಳಿಯ ನೊರೆ ಬರುವುದನ್ನು ನೀವು ಗಮನಿಸಿದರಬಹುದು. ಪಾತ್ರೆಯಲ್ಲಿ ಬೇಳೆ ಬೇಯಿಸಿದಾಗ ಈ ನೊರೆ ಸ್ಪಷ್ಟವಾಗಿ ಕಂಡರೆ, ಕುಕ್ಕರ್‌ನಲ್ಲಿ ಇದು ಬೆಂದ ಬೇಳೆಯ ಜೊತೆ ಮಿಕ್ಸ್ ಆಗಿ ನಮ್ಮ ಗಮನಕ್ಕೆ ಬರುವುದೇ ಇಲ್ಲ. ಆದರೆ ಆತಂಕಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಈ ನೊರೆಯು ವಿಷಕ್ಕೆ ಸಮಾನ ಎನ್ನುವುದು.
ಲೈಂಗಿಕ ಆಟಿಕೆ ಬಳಸೋ ಮುನ್ನ ತಿಳಿದುಕೊಳ್ಳಿ ಈ ಟಿಪ್ಸ್: ಇಲ್ಲದಿದ್ರೆ ಪ್ರಾಣಕ್ಕೇ ಕುತ್ತು, ಜಾಗ್ರತೆ!
ತೆರೆಯ ಪಾತ್ರೆಯಲ್ಲಿ ಬೇಳೆ ಬೇಯಿಸಿದಾಗ ಬಿಳಿಯ ನೊರೆ ಸರಿಯಾಗಿ ಕಾಣಿಸುತ್ತದೆ. ಇದು ಅತ್ಯಂತ ಹಾನಿಕರವಾಗಿದೆ. ಏಕೆಂದರೆ ಇದು ವಿಷಕಾರಿಯುಕ್ತ ಸಪೋನಿನ್‌ಗಳೆಂಬ ಗ್ಲೈಕೋಸೈಡ್‌ಗಳನ್ನು ಹೊಂದಿರುತ್ತದೆ. ಈ ನೊರೆಯು ಬೇಳೆಯ ನೀರಿನ ಒತೆ ಕರಗುತ್ತವೆ. ಇದು ನೋಡಲು ಕೂಡ ಸೋಪ್‌ನಂತೆಯೇ ಇರುತ್ತದೆ. ನೋಡಲು ಮಾತ್ರವಲ್ಲದೇ ಇದು ಸೋಪ್ ನೊರೆಯಷ್ಟೇ ಸೇವಿಸಿದರೆ ಹಾನಿಕರವಾಗಿದೆ. ಈ ಸಪೋನಿನ್‌ಗಳು ಸಾಬೂನಿಗೆ ಹೋಲುವ ಗುಣಲಕ್ಷಣಗಳನ್ನು ಹೊಂದಿವೆ.
ಅದಕ್ಕಾಗಿ ತೆರೆಯ ಪಾತ್ರೆಯಲ್ಲಿ ಬೇಳೆ ಬೇಯಿಸುವ ಸಂದರ್ಭದಲ್ಲಿ ನೊರೆ ಬಂದರೆ ಅದನ್ನು ಸೌಟ್‌ನಿಂದ ತೆಗೆದು ಹಾಕಬೇಕು. ಹಾಗಿದ್ದರೆ ಕುಕ್ಕರ್‌ನಲ್ಲಿ ಬೇಳೆ ಬೇಯಿಸಿದಾಗ ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡುತ್ತದೆ. ಇದಕ್ಕೆ ಉತ್ತರವಿಲ್ಲ. ಏಕೆಂದರೆ, ಈ ನೊರೆ ಬೇಳೆಯ ಜೊತೆ ಮಿಕ್ಸ್ ಆಗುವ ಕಾರಣ ಅದನ್ನು ಸೇವಿಸದೇ ಬೇರೆ ವಿಧಿಯಿಲ್ಲ. ಇದೇ ಕಾರಣಕ್ಕೆ ತಜ್ಞರು ಹೇಳುವಂತೆ ಬೇಳೆಯನ್ನು ಕುಕ್ಕರ್‌ನಲ್ಲಿ ಬೇಯಿಸಲೇಬಾರದು. ಮೊದಲೇ ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಬೇಳೆ ನೆನೆಸಿಟ್ಟು ಬಳಿಕ ಪಾತ್ರೆಯಲ್ಲಿಯೇ ಅದನ್ನು ಬೇಯಿಸಬೇಕು. ಹೀಗೆ ಮಾಡಿದಾಗ ನೊರೆ ಬಂದರೆ ಸುಲಭದಲ್ಲಿ ತೆಗೆಯಬಹುದು. ಒಂದು ವೇಳೆ ಅರ್ಧ ಗಂಟೆ ಮೊದಲು ಬೇಳೆ ನೆನೆಸಿ ಇಟ್ಟರೆ ಈ ರೀತಿಯ ನೊರೆ ಬರುವುದಿಲ್ಲ. ಎನ್ನುವುದು ಅವರ ಮಾತು. ಇಲ್ಲದಿದ್ದರೆ ಆರೋಗ್ಯಕ್ಕೆ ಈ ನೊರೆ ಮಾರಕ. ಪ್ರತಿನಿತ್ಯವೂ ಇದನ್ನು ಸೇವಿಸುತ್ತಾ ಬಂದರೆ ದೇಹ ಏನು ಆಗಬಹುದು ಎನ್ನುವುದನ್ನು ನೀವೇ ಊಹಿಸಿ.
