ಹ್ಯಾಪಿ ಚಾಕಲೇಟ್ ಅಂತ ಚಂದದ್ದೊಂದು ನಗುವಿನ ಜೊತೆ ಸಿಹಿಯಾದ ಚಾಕಲೇಟ್ ಕೊಡೋದದ ಜೊತೆಜೊತೆಗೇ ಈ ದಿನದ ಬಗ್ಗೆ ಸ್ವಲ್ಪ ತಿಳ್ಕೊಳೋಣ..? ಈ ಆಚರಣೆ ಆರಂಭವಾಗಿದ್ದು ಹೇಗೆ..? ಏನಿದರ ಅರ್ಥ..? ಇಲ್ಲಿ ಓದಿ

ರೋಸ್ ಡೇ ಮತ್ತು ಪ್ರಪೋಸ್ ಡೇ ನಂತರ ಈಗ ಚಾಕಲೇಟ್ ಡೇ ದಿನ. ಫೆಬ್ರವರಿ 9ರಂದು ಚಾಕಲೇಟ್ ಡೇ ಆಚರಿಸಲಾಗುತ್ತದೆ. ಈ ಸ್ಪೆಷಲ್ ದಿನ ನಿಮ್ಮ ಸುಂದರ ಸಂಬಂಧಗಳಿಗೆ ಇನ್ನೊಂದಷ್ಟು ಸಿಹಿ ಬೆರೆಸಿ

ವ್ಯಾಲೆಂಟೈನ್ಸ್ ವೀಕ್‌ನ ಪ್ರತಿ ದಿನಕ್ಕೂ ಅದರದ್ದೇ ಆದ ವಿಶೇಷತೆ ಇದೆ. ಚಾಕಲೇಟ್ ಡೇ ದಿನ ಪರಸ್ಪರ ಪ್ರಿತಿಯಿಂದ ಚಾಕಲೇಟ್ಸ್, ಹೂವುಗಳೂ, ಉಡುಗೊರೆಗಳನ್ನೂ ನೀಡಲಾಗುತ್ತದೆ.

ವ್ಯಾಲೆಂಟನ್ಸ್‌ ಡೇಗೆ ದಿನಗಣನೆ: ರಂಗೇರಿದ ಮಾರುಕಟ್ಟೆಗಳು

ತಮ್ಮ ಜೀವನದ ಸ್ಪೆಷಲ್ ವ್ಯಕ್ತಿಗಾಗಿ ತಾವೇ ಚಾಕಲೇಟ್ ತಯಾರಿಸಿಕೊಡಬೇಕೆಂದು ಮೊದಲೇ ಸಿದ್ಧತೆ ಮಾಡಿಕೊಂಡು ಸ್ವತಃ ತಾವೇ ಚಾಕಲೇಟ್ ತಯಾರಿಸಿಕೊಡುವವರೂ ಇದ್ದಾರೆ.

ಹಾಗಾಗಿ ಚಾಕಲೇಟ್ ಬಾಕ್ಸ್ ಓಪನ್ ಮಾಡಿ, ನಿಮ್ಮ ಫೇವರೇಟ್ ಫ್ಲೇವರ್‌ನ ಚಾಕಲೇಟ್‌ನ್ನು ಮನಸ್ಫೂರ್ಥಿಯಾಗಿ ಸವಿಯಿರಿ. ಅಯ್ಯೋ ಎಷ್ಟೊಂದ್ ಚಾಕಲೇಟ್ ತಿಂದೆ ಎಂದು ಟೆನ್ಶನ್ ಮಾಡೋದೇನೂ ಬೇಡ, ಇದು ನಿಮ್ಮ ತ್ವಚೆಗೆ ಇನ್ನಷ್ಟು ಹೊಳಪು ಕೊಟ್ಟು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಆತಂಕವನ್ನೂ ದೂರ ಮಾಡುತ್ತದೆ.

ಯಾರಿಗೋ ಕಳಿಸಿದ ಪ್ರೇಮ ಚೀಟಿ ಇನ್ಯಾರಿಗೋ ಸಿಕ್ಕರೆ ಎಂಥ ಪಜೀತಿ!

ಈ ವಿಶೇಷ ಸಂದರ್ಭದಲ್ಲಿ ಕೇಕ್ ಹೌಸ್, ಸಿಹಿ ಅಂಗಡಿ, ಚಾಕಲೇಟ್ ಶಾಪ್‌ಗಳು ವಧುವಿನಂತೆ ಸಿಂಗಾರಗೊಳ್ಳುತ್ತವೆ. ತಮ್ಮ ದೈನಂದಿನ ಮೆನುಗಳಲ್ಲಿ ಒಂದಷ್ಟು ಸ್ಪೆಷಲ್ ಚಾಕಲೇಟ್ ಹೆಸರುಗಳು ಸೇರಿಕೊಳ್ಳುತ್ತವೆ.

ಇತ್ತೀಚಿನ ದಿನಗಳಲ್ಲಿ ಚಾಕಲೇಟ್ ಡೇ ಪ್ರೇಮಿಗಳ ಮಧ್ಯೆ ಮಾತ್ರವಲ್ಲ, ಫ್ಯಾಮಿಲಿ ಫ್ರೆಂಡ್ಸ್‌ ಜೊತೆಯೂ ಆಚರಿಸಲಾಗುತ್ತಿದೆ. ಇದಾದ ಮೇಲೆ ಟೆಡ್ಡೀ ಡೇ, ಪ್ರಾಮಿಸ್ ಡೇ, ಕಿಸ್ ಡೇ, ಹಗ್ ಡೇ ಬರುತ್ತದೆ. ಈ ಎಲ್ಲ ದಿನಗಳೂ ಪ್ರೇಮಿಗಳಿಗೆ ವಿಶೇಷ ದಿನಗಳು