ಪ್ರೇಮಿಗಳ ದಿನಾಚರಣೆ ಮುಗಿದಿದೆ. ಅದೆಷ್ಟೋ ಕಾರ್ಡ್ ಗಳು ವಿನಿಮಯವಾಗಿವೆ. ಪ್ರೇಮ ನಿವೇದನೆ ಮಾಡಿಕೊಂಡವರು ಹಲವರು.. ಮುಂದಿನ ವರ್ಷಕ್ಕೆ ಪ್ಲಾನ್ ಮಾಡಿಟ್ಟುಕೊಂಡವರು ಹಲವರು.

ಆದರೆ ಈ ಮಹಿಳೆಗೆ ಆದ ಕತೆ ಮಾತ್ರ ಕೊಂಚ ವಿಚಿತ್ರ. ಅವಳು ಕಾರ್ಡ್ ಆರ್ಡರ್ ಮಾಡದಿದ್ದರೂ ಅವಳಿಗೊಂದು ಪತ್ರ ಬಂದಿದೆ.   24 ವರ್ಷದ ಮಹಿಳೆ ಪೈಗೆ ಈ  ವಿಚಿತ್ರ ವಿಚಾರವನ್ನು ಸೋಶಿಯಲ್ ಮೀಡಿಯಾ ಮುಖಾಂತನ ಹಂಚಿಕೊಂಡಿದ್ದಾರೆ. ಅಲ್ಲದೇ ಕಾರ್ಡ್ ಕಂಪನಿ ಮೂನ್ ಪಿಗ್ ಗೆ ಧನ್ಯವಾದ ಹೇಳುತ್ತಲೇ ಪ್ರಶ್ನೆ ಮಾಡಿದ್ದಾರೆ.

ಜೋಡಿಯಿಲ್ಲದ ಒಂಟಿ ಜೀವಗಳೇ ಸ್ಟ್ರಾಂಗ್ ಕಣ್ರೀ!

ಕಂಪನಿ ಆಕೆಗೊಂದು ವ್ಯಾಲೈಂಟೈನ್ ಡೇ ಕಾರ್ಡ್ ಕಳಿಸಿಕೊಟ್ಟಿದೆ. ಆದರೆ ಅದರಲ್ಲಿ ಮೈಕಲ್  ಎಂಬುವರ ವಿಳಾಸವಿದೆ. ಆಕೆ ಕಾರ್ಡ್ ಗೆ ಆರ್ಡರ್ ಮಾಡಿರಲಿಲ್ಲ. ಆದರೆ ಆಕೆಯ ಬಾಯ್ ಫ್ರೆಂಡ್  ಹೆಸರು ಮೈಕಲ್ ಅಲ್ಲ. ಈ ಕಾರ್ಡ್ ಆಕೆಗೆ ಬಂದಾಗ ವಂಚನೆಯ ಅನುಮಾನವೂ ಆಕೆಯ ಬಾಯ್ ಫ್ರೆಂಡ್‌ಗೆ ಕಾಡಿತ್ತು.

ಈ ಬಗ್ಗೆ ಕಂಪನಿಗೂ ಮಹಿಳೆ ಬರೆದಿದ್ದಾಳೆ. ನನ್ನ ಬಾಯ್ ಫ್ರೆಂಡ್ ಇದನ್ನು ಕಂಡು ಬ್ರೇಕ್ ಅಪ್ ಮಾಡಿಕೊಂಡರೆ ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಕಂಪನಿ ಆಕೆಯ ಬಳಿ ಸಾರಿ ಕೇಳಿದೆ.

ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ. ನಿಮ್ಮ ಮತ್ತು ನಿಮ್ಮ ಬಾ ಯ್ ಫ್ರೆಂಡ್ ಸಂಬಂಧ ಸದಾ ಹಸನಾಗಿರಲಿ ಎಂದು ಕಂಪನಿ ಹಾರೈಸಿದೆ.