ಹೊಸವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಕಳೆಯುತ್ತಿರುವ ವರ್ಷದಲ್ಲಿ ಭಾರತೀಯರ ನೆಚ್ಚಿನ ಆಹಾರ ಯಾವುದಾಗಿತ್ತು, ಅವರು ಹೆಚ್ಚು ಇಷ್ಟಪಟ್ಟು ತಿಂದ ಸ್ವೀಟ್ ಯಾವುದು, ಬದಲಾಗುತ್ತಿರುವ ಭಾರತೀಯರ ಆಹಾರ ಶೈಲಿ ಮುಂತಾದ ವಿಷಯಗಳ ಬಗ್ಗೆ ಜನಪ್ರಿಯ ಆಹಾರ ಡೆಲಿವರಿ ಆ್ಯಪ್ ಸರ್ವೆ ನಡೆಸಿದೆ. ಅದರ ಫಲಿತಾಂಶ ಹೀಗಿದೆ...

ಬಿರಿಯಾನಿ ಬೆಸ್ಟ್

ವರ್ಷದಲ್ಲಿ ಅತಿ ಹೆಚ್ಚು ಜನ ಆರ್ಡರ್ ಮಾಡಿದ ಆಹಾರವೆಂದರೆ ಅದು ಬಿರಿಯಾನಿ. ವರ್ಷದ ಎಲ್ಲ ಭಾಗಗಳಲ್ಲೂ ಬಿರಿಯಾನಿ ಆರ್ಡರ್ ಮಾಡಿದವರ ಸಂಖ್ಯೆ ಹೆಚ್ಚು. ಅದರಲ್ಲೂ ಈ ಒಂದು ಆ್ಯಪ್‌ಗೆ ನಿಮಿಷಕ್ಕೆ 95 ಬಿರಿಯಾನಿ ಆರ್ಡರ್‌ಗಳು ಬರುತ್ತಿದ್ದವೆಂದರೆ, ಇದು ಬಹುಜನ ಪ್ರಿಯ ತಿನಿಸು ಎನ್ನಲು ಯಾವ ಗೊಂದಲವೂ ಬೇಡ. ಅದರಲ್ಲೂ ಚಿಕನ್ ಬಿರಿಯಾನಿಯದು ಮೇಲುಗೈ.

ನ್ಯೂ ಇಯರ್ ಪಾರ್ಟಿಗೆ ಸ್ಪೈಸೀ ನೆಗೆಟ್ಸ್‌ ಟ್ರೈ ಮಾಡಿ!

ಇವಿಷ್ಟೂ ಬಿರಿಯಾನಿಗಳಲ್ಲಿ ಮುಂಬೈನ ಚಲ್ ಧನ್ನೋ ತವಾ ಬಿರಿಯಾನಿ ಅತಿ ಕಡಿಮೆ ಎಂದರೆ 19 ರುಪಾಯಿಗೆ ಮಾರಾಟವಾಗಿದ್ದರೆ, ಪುಣೆಯ ಚಿಕನ್ ಸಜುಕ್ ಟುಪ್ ಬಿರಿಯಾನಿ ಅತಿ ಹೆಚ್ಚು ಎಂದರೆ 1500 ರುಪಾಯಿಗೆ ಮಾರಾಟವಾಗಿದೆ.

ಟಾಪ್ 10 ಆಹಾರ ಪದಾರ್ಥಗಳು

ಹೀಗೆ ಫುಡ್ ಡೆಲಿವರಿ ಆ್ಯಪ್‌ನಲ್ಲಿ ಆರ್ಡರ್ ಆದ ಟಾಪ್ ಟೆನ್ ಆಹಾರ ಪದಾರ್ಥಗಳೆಂದರೆ ಟಾಪ್ 1ರಲ್ಲಿ ಚಿಕನ್ ಬಿರಿಯಾನಿಯಿದ್ದರೆ, ಎರಡು ಹಾಗೂ ಮೂರರಲ್ಲಿ ಮಸಾಲೆ ದೋಸೆ ಹಾಗೂ ಪನೀರ್ ಬಟರ್ ಮಸಾಲೆ ಇವೆ. ನಂತರದಲ್ಲಿ ಚಿಕನ್ ಫ್ರೈಡ್ ರೈಸ್, ಮಟನ್ ಬಿರಿಯಾನಿ, ಚಿಕನ್ ದಮ್ ಬಿರಿಯಾನಿ, ವೆಜ್ ಫ್ರೈಡ್ ರೈಸ್, ವೆಜ್ ಬಿರಿಯಾನಿ, ತಂದೂರಿ ಚಿಕನ್ ಹಾಗೂ ದಾಲ್ ಮಖನಿಗಳಿವೆ. 

ಕಿಚಡಿ, ಸೂಪರ್‌ಫುಡ್

ಕಿಚಡಿ ಬಗ್ಗೆ ಜನರಲ್ಲಿ ಹಿಂದೆಂದಿಗಿಂತ ಪ್ರೀತಿ ಹೆಚ್ಚುತ್ತಿದೆ. ಹಲವಾರು ಭಾರತೀಯರು ಈ ಸೂಪರ್‌ಫುಡ್ಡನ್ನು ಒಪ್ಪಿಕೊಳ್ಳಲು ಶುರು ಮಾಡಿದ್ದಾರೆ. ಇಜರ ಫಲವಾಗಿ 2019ರಲ್ಲಿ ಕಿಚಡಿ ಆರ್ಡರ್‌ ಮಾಡುವವರ ಸಂಖ್ಯೆಯಲ್ಲಿ ಶೇ.128ರಷ್ಟು ಹೆಚ್ಚಳ ಕಂಡುಬಂದಿದೆ. ಅದರಲ್ಲೂ ನವರಾತ್ರಿ ಸಂದರ್ಭದಲ್ಲಿ ಕಿಚಡಿ ಆರ್ಡರ್ ಹೆಚ್ಚಾಗುತ್ತದೆಯಂತೆ. 

ಸಿಹಿತಿಂಡಿ

ಸ್ವೀಟ್‌ಗಳ ವಿಷಯಕ್ಕೆ ಬಂದರೆ ಗುಲಾಬ್ ಜಾಮೂನ್‌ಗಿಂತ ಜನಮೆಚ್ಚುಗೆ ಗಳಿಸಿದ ಮತ್ತೊಂದು ಸಿಹಿ ಇಲ್ಲ ಎಂಬುದು ಈ ವರದಿಯಲ್ಲಿ ಸಾಬೀತಾಗಿದೆ. ಈ ವರ್ಷ ಇದೊಂದು ಪುಡ್ ಡೆಲಿವರಿ ಆ್ಯಪ್‌ಗೆ 1.76 ದಶಲಕ್ಷದಷ್ಟು ಬಾರಿ ಗುಲಾಬ್ ಜಾಮೂನ್‌ಗಾಗಿ ಆರ್ಡರ್ ಬಂದಿದೆ. ಸಿಹಿತಿನಿಸಿನ ವರ್ಗದಲ್ಲಿ ಸೆಕೆಂಡ್ ಪ್ಲೇಸ್ ಪಡೆದು ಬೀಗುತ್ತಿರುವುದು ಹಲ್ವಾ. ನಂತರದ ಸ್ಥಾನದಲ್ಲಿ ಫಲೂದಾ ಇದ್ದು, 1.2 ದಶಲಕ್ಷ ಜನರು ಇದನ್ನು ಆರ್ಡರ್ ಮಾಡಿದ್ದಾರೆ. ಇತರೆ ಜನಪ್ರಿಯ ಸಿಹಿಗಳೆಂದರೆ ಡೆತ್ ಬೈ ಚಾಕೋಲೇಟ್, ತಿರಾಮಿಸು ಐಸ್‌ಕ್ರೀಂ, ಕೇಸರ್ ಹಲ್ವಾ, ಟೆಂಡರ್ ಕೋಕೋನಟ್ ಐಸ್‌ಕ್ರೀಂ. 

ಮಾಡೋ ಅಡುಗೆ ಸೂಪರ್‌ ಆಗಿರ್ಬೇಕಂದ್ರೆ ಕಿಚನ್‌ಗೆ ಸ್ವಲ್ಪ ಬದಲಾವಣೆ ತನ್ನಿ!

ಆರೋಗ್ಯಕರ ಆಹಾರ

ಅಚ್ಚರಿಯ ಬೆಳವಣಿಗೆ ಎಂದರೆ ಜನರಲ್ಲಿ ಆಹಾರದ ವಿಷಯದಲ್ಲಿ ಆರೋಗ್ಯ ಕಾಳಜಿ ಹೆಚ್ಚಿದೆ. ತಮ್ಮ ಡಯಟ್ ಬಗ್ಗೆ ಅವರು ಹೆಚ್ಚು ಯೋಚಿಸಲಾರಂಭಿಸಿದ್ದಾರೆ. ಕಿಟೋ ಡಯಟ್ ಕುರಿತ ಒಲವು ಹೆಚ್ಚುತ್ತಿದ್ದು, ಈ ವರ್ಷ ಜನರು ಆರೋಗ್ಯಕರ ಆಹಾರವನ್ನು ಸ್ವಿಗ್ಗಿಯೊಂದರಲ್ಲೇ 3.5 ಲಕ್ಷ ಬಾರಿ ಆರ್ಡರ್ ಮಾಡಿದ್ದಾರೆ. ಕೀಟೋ ಡಯಟ್‌ಗೆ ಸಂಬಂಧಿಸಿದಂತೆ ಜನರು ಹೆಚ್ಚು ಆರ್ಡರ್ ಮಾಡಿದ ಆಹಾರ ಪದಾರ್ಥಗಳೆಂದರೆ ಟುಸ್ಕನ್ ಚಿಕನ್, ಕಿಟೋ ಬ್ರೌನೀಸ್, ರೆಡ್ ರೈಸ್ ಪೋಹಾ. ಕಿಟೋಗೆ ಸಂಬಂಧಿಸಿದ ಆರ್ಡರ್ ಈ ವರ್ಷ ಶೇ.306ರಷ್ಟು ಹೆಚ್ಚಿದೆ. 

ಎಲ್ಲ ಆಹಾರಕ್ಕೂ ಅದರದೇ ದಿನಗಳಿವೆ

ಇವೆಲ್ಲಕ್ಕಿಂತ ಮೇಲಾಗಿ, ಕೆಲವೊಂದು ಆಹಾರಗಳ ದಿನವೆಂದು ಆಹಾರಪ್ರಿಯರು ಸೆಲೆಬ್ರೇಟ್ ಮಾಡಿದ ಹಿನ್ನೆಲೆಯಲ್ಲಿ ಆಯಾ ದಿನದಂದು ಆ ಆಹಾರಕ್ಕೆ ದಾಖಲೆ ಮಟ್ಟದ ಆರ್ಡರ್‌ಗಳು ಬಂದಿವೆಯಂತೆ. ಅಂದರೆ, ಜನ ಈ ವಿಶೇಷ ದಿನಕ್ಕೆ ಅದೆಷ್ಟು ಪ್ರಾಶಸ್ತ್ಯ ಕೊಡುತ್ತಾರೆಂಬುದು ಅರಿವಾಗುತ್ತದೆ.  ಅಪ್ಪನ ದಿನ, ಅಮ್ಮನ ದಿನ, ಗೆಳೆಯರ ದಿನದಂತೆ ಈ ಆಹಾರಗಳಿಗೂ ಇವುಗಳದ್ದೇ ಆದ ದಿನವಿದೆ. ಅದು ಯಾವ ಯಾವ ದಿನ ನೋಡೋಣ.

ಗುಲಾಬ್ ಜಾಮೂನ್- ಫೆಬ್ರವರಿ 17

ಡೋನಟ್- ಫೆಬ್ರವರಿ 24

ಕಾಫಿ- ಮೇ 12

ಈರುಳ್ಳಿ ಹೆಚ್ಚುವಾಗ ಮಾತ್ರ ಕಣ್ಣೀರು ಆರೋಗ್ಯಕ್ಕೆ ಪನ್ನೀರು!

ಐಸ್ ಕ್ರೀಂ- ಮೇ 12

ಫ್ರೆಂಚ್ ಫ್ರೈಸ್- ಜೂನ್ 16

ಪಿಜ್ಜಾ- ಸೆಪ್ಟೆಂಬರ್ 22

ಕಿಚಡಿ- ಸೆಪ್ಟೆಂಬರ್ 29

ಬಿರಿಯಾನಿ- ಅಕ್ಟೋಬರ್ 20

ಕಬಾಬ್- ಅಕ್ಟೋಬರ್ 20

ಟೀ- ಅಕ್ಟೋಬರ್ 20