Asianet Suvarna News Asianet Suvarna News

ನ್ಯೂ ಇಯರ್ ಪಾರ್ಟಿಗೆ ಸ್ಪೈಸೀ ನೆಗೆಟ್ಸ್‌ ಟ್ರೈ ಮಾಡಿ!

ಹೊಸ ವರ್ಷದ ಸೆಲೆಬ್ರೇಷನ್‌ ವರ್ಷಪೂರ್ತಿ ನೆನಪಿಟ್ಟುಕೊಳ್ಳೋ ಹಾಗಾಗ್ಬೇಕು. ರುಚಿ ರುಚಿ ಗರಿಗರಿಯಾದ ತಿನಿಸುಗಳು ಪಾರ್ಟಿ ಸಂಭ್ರಮ ಹೆಚ್ಚಿಸುತ್ತೆ. ಅಂತಾ ರೆಸಿಪಿಯೊಂದು ಇಲ್ಲಿದೆ. ಇದರ ವಿಶೇಷತೆ ಏನ್‌ ಗೊತ್ತಾ ಚಕಾಚಕ್‌ ಅಂತ ಅರ್ಧ ಗಂಟೆಯೊಳಗೆ ಮುಗಿಸಬಹುದು.  ಹೊರಗಿನ ಆಹಾರ ತಿಂದು ಹೊಟ್ಟೆ ಕೆಡಿಸಿಕೊಳ್ಳೋದು ತಪ್ಪುತ್ತೆ. ನಾವೇ ನಮ್ಮ ಕೈಯಾರೆ ಮಾಡಿದ ತಿನಿಸುಗಳು ಮನಸ್ಸಿಗೂ ಖುಷಿ ಕೊಡುತ್ತವೆ.

easy and tasty Spicy nuggets recipe
Author
Bangalore, First Published Dec 28, 2019, 11:50 AM IST
  • Facebook
  • Twitter
  • Whatsapp

ಟೇಸ್ಟಿ ಟೇಸ್ಟಿ ವೆಜ್‌ ನಗೆಟ್ಸ್‌

ಮಾಡಲು ಬೇಕಾದ ಸಮಯ- 25 ರಿಂದ 30 ನಿಮಿಷ
ಸಂದರ್ಭ : ಸಂಜೆ ಪಾರ್ಟಿ ತಿನಿಸು

ಇದೊಂದು ಸಿಂಪಲ್‌  ರೆಸಿಪಿ. ಬೇರೆ ಬೇರೆ ತರಕಾರಿ ಬಳಸಿ ಮಾಡಬಹುದು. ಪಾರ್ಟಿ ಶುರುವಿನಲ್ಲಿ ಹಂಚಲು ಹೇಳಿ ಮಾಡಿಸಿದ ಹಾಗಿರುತ್ತೆ. ಟೇಸ್ಟಿ ಟೇಸ್ಟಿ ನಗೆಟ್ಸ್‌ಅನ್ನು ಸವಿಯುತ್ತಲೇ ಪಾರ್ಟಿ ಶುರು ಮಾಡಿದ್ರೆ ಆ ರುಚಿಗೆ ಪಾರ್ಟಿ ಉತ್ಸಾಹ ಹೆಚ್ಚುತ್ತೆ. ಟೊಮೆಟೋ ಸಾಸ್‌ ಅಥವಾ ಗ್ರೀನ್‌ ಚಟ್ನಿ ಜೊತೆಗೆ ಇದನ್ನು ತಿನ್ನಬಹುದು. ಸೈಡ್ಸ್‌ ಇಲ್ಲದೆಯೂ ಸವಿಯಬಹುದು. ನಾನ್‌ವೆಜ್‌ನಲ್ಲಿ ನಗೆಟ್ಸ್‌ ಮಾಡೋದು ಕಾಮನ್‌. ಅದರಲ್ಲೂ ಚಿಕನ್‌ ನಗೆಟ್ಸ್‌ ಸಖತ್‌ ಪಾಪ್ಯುಲರ್‌. ಆದರೆ ಸಸ್ಯಾಹಾರಿಗಳಿಗೋಸ್ಕರ ಈ ವೆಜ್‌ ನಗೆಟ್ಸ್‌ . ಬರೀ ಹದಿನೈದು ನಿಮಿಷಗಳಲ್ಲಿ ಇದನ್ನು ಮಾಡಬಹುದು.

ಕೊರೆವ ಚಳಿಗೆ ಮಾಡಿ ಮ್ಯಾನ್ ಚೋ ಸೂಪ್,ಕ್ಯಾರೆಟ್ ಸೂಪ್,ಪಾಲಕ್ ಸೂಪ್!

ಏನೇನು ಸಾಮಗ್ರಿ ಬೇಕು?:

 ಸಣ್ಣದಾಗಿ ಹೆಚ್ಚಿರುವ ಕ್ಯಾರೆಟ್‌ ಕಾಲು ಬೌಲ್‌ನಷ್ಟು, ಕ್ಯಾಬೇಜ್‌ ಚೂರುಗಳು ಸ್ವಲ್ಪ, ಚಿಕ್ಕದಾಗಿ ಹೆಚ್ಚಿರುವ ಬೀನ್ಸ್‌ ಚೂರುಗಳು, 2 ಸ್ಪೂನ್‌ ಬೇಯಿಸಿರುವ ಕಾರ್ನ್‌, ಹದವಾಗಿ ಬೆಂದ ಸ್ವಲ್ಪ ಬಟಾಣಿ ಕಾಳು, ಕ್ಯಾಪ್ಸಿಕಂ ಅರ್ಧ ಭಾಗ ಸಣ್ಣಗೆ ಕಟ್‌ ಮಾಡಿರೋದು, 2 ಬೇಯಿಸಿ ಪುಡಿ ಮಾಡಿದ ಆಲೂಗಡ್ಡೆ, 2 ಸ್ಪೂನ್‌ನಷ್ಟು  ತುರಿದ ಪನೀರ್‌, ಜಿಂಜರ್‌ ಗಾರ್ಲಿಕ್‌ ಪೇಸ್ಟ್‌ ಸ್ವಲ್ಪ, ಕಾಳು ಮೆಣಸಿನ ಪುಡಿ ಸ್ವಲ್ಪ, ಖಾರದ ಪುಡಿ, ಚಾಟ್‌ ಮಸಾಲಾ, ಕಾಲು ಕಪ್‌ ಬ್ರೆಡ್‌ ಪುಡಿ. ಅರ್ಧ ಸ್ಪೂನ್‌ ಉಪ್ಪು.

ಜೊತೆಗೆ 2 ಸ್ಪೂನ್‌ ಕಾರ್ನ್‌ಪ್ಲೋರ್‌, 2 ಸ್ಪೂನ್‌ ಮೈದಾ, ಕಾಳು ಮೆಣಸಿನ ಪುಡಿ, ಉಪ್ಪು, ಕಾಲು ಕಪ್‌ ನೀರು, 1 ಕಪ್‌ ಬ್ರೆಡ್‌ ಪೌಡರ್‌.

ಮಾಡೋ ವಿಧಾನ ಹೇಗೆ?

1. ದೊಡ್ಡ ಮಿಕ್ಸಿಂಗ್‌ ಬೌಲ್‌ ತೆಗೆದುಕೊಳ್ಳಿ. ಕ್ಯಾರೆಟ್‌, ಕ್ಯಾಬೇಜ್‌ , ಬಟಾಣಿ, ಕಾರ್ನ್‌, ಕ್ಯಾಪ್ಸಿಕಂ ಇತ್ಯಾದಿಯನ್ನು ಬೌಲ್‌ಗೆ ಹಾಕಿ

2. ಇದಕ್ಕೆ ಬೇಯಿಸಿದ ಆಲೂಗಟ್ಟೆ, ಪನೀರ್‌, ಜಿಂಜರ್‌ ಗಾರ್ಲಿಕ್‌ ಪೇಸ್ಟ್‌ ಹಾಕಿ.

3. ಮೇಲಿಂದ ಕಾಳು ಮೆಣಸಿನ ಪುಡಿ, ಖಾರದ ಪುಡಿ, ಚಾಟ್‌ ಮಸಾಲಾ ಹಾಗೂ ಉಪ್ಪನ್ನು ಸೇರಿಸಿ.

ಕಿಚಡಿ ಮಾಡುವುದು ಹೇಗೆಂದು ತಡಕಾಡಬೇಡಿ! ಸಿಂಪಲ್ಲಾಗಿ ಹೀಗ್ಮಾಡಿ!

4. ಚೆನ್ನಾಗಿ ಮಿಕ್ಸ್‌ ಮಾಡಿ. ಎಲ್ಲವೂ ಸರಿಯಾಗಿ ಮಿಶ್ರವಾಗಲಿ.

5. ಇದಕ್ಕೆ ಬ್ರೆಡ್‌ ಪೌಡರ್‌ ಹಾಕಿ ಮಿಕ್ಸ್‌ ಮಾಡಿ .

6. ಈ ಮಿಶ್ರಣವನ್ನು ಪುಡಿ ಮಾಡಿ ಮ್ಯಾಶ್‌ ಮಾಡಿ ಚೆನ್ನಾಗಿ ನಾದಿ. ಇದು ಚಪಾತಿ ಹಿಟ್ಟಿನ ಹದಕ್ಕೆ ಬರಬೇಕು.

7. ಈಗ ಇದಕ್ಕೆ ಹೊರ ಕವಚದಂತಿರುವ ಹಿಟ್ಟನ್ನು ರೆಡಿ ಮಾಡ್ಬೇಕು. 2 ಸ್ಪೂನ್‌ ಮೈದಾ ಹಿಟ್ಟು , 2 ಸ್ಪೂನ್‌ ಕಾರ್ನ್‌ ಪ್ಲೋರ್‌, ಪೆಪ್ಪರ್‌ ಪೌಡರ್‌ , ಉಪ್ಪು ಹಾಕಿ.

8. ಕಾಲು ಕಪ್ಪು ನೀರು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಹಿಟ್ಟು ರೆಡಿ ಮಾಡಿ.

9. ಮೊದಲೇ ಕಲಸಿಟ್ಟ ತರಕಾರಿಗಳ ಮಿಶ್ರಣವನ್ನು ಆಯತಾಕಾರದ ಉಂಡೆ ಮಾಡಿ.

10. ಇದನ್ನು ಹಿಟ್ಟಿನಲ್ಲಿ ಅದ್ದಿ.

11. ಹಿಟ್ಟಿನಲ್ಲಿ ಅದ್ದಿದ ಉಂಡೆಗಳನ್ನು ಬ್ರೆಡ್‌ ಪೌಡರ್‌ನಲ್ಲಿ ಮುಳುಗಿಸಿ.

12. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಮೀಡಿಯಂ ಪ್ಲೇಮ್‌ ಇರಲಿ.

ಉಡುಪಿ ಶೈಲಿಯ ಸಾಂಬಾರ್ ಪುಡಿ ಮಾಡೋದು ಹೇಗೆ?

13. ಕುದಿಯುವ ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ.

14. ತರಕಾರಿಗಳು ಬೆಂದು ಹೊರ ಭಾಗ ಬಂಗಾರದ ಬಣ್ಣಕ್ಕೆ ಬರುವವರೆಗೂ ಬೇಯಿಸಿ.

15. ಬಳಿಕ ತೆಗೆದು ಟಿಶ್ಯೂ ಪೇಪರ್‌ ಮೇಲೆ ಹಾಕಿ ಎಣ್ಣೆ ಜಿಡ್ಡು ತೆಗೆಯಿರಿ.
ಕ್ರಿಸ್ಪಿಯಾದ ರುಚಿಯಾದ ನಗೆಟ್ಸ್‌ ನಿಮ್ಮ ನ್ಯೂ ಯಿಯಿರ್‌ ಖುಷಿ ಹೆಚ್ಚಿಸಲಿ.

Follow Us:
Download App:
  • android
  • ios