Asianet Suvarna News Asianet Suvarna News

ರಾತ್ರಿ 9 ಗಂಟೆಯ ನಂತ್ರ ಊಟ ಮಾಡ್ತೀರಾ ? ಹಾಗಿದ್ರೆ ನೆನಪಿನ ಶಕ್ತಿ ಕಡಿಮೆಯಾಗೋದು ಖಂಡಿತ

ನೀವು ತಡರಾತ್ರಿ ಊಟ ಮಾಡುತ್ತಿದ್ದರೆ ಇಂದೇ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಇಲ್ಲದಿದ್ದರೆ ಅದು ನಿಮ್ಮನ್ನು ಹಲವು ರೀತಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿಸಬಹುದು.ತಡವಾಗಿ ತಿನ್ನುವುದರಿಂದ ಆಹಾರ ತ್ವರಿತವಾಗಿ ಜೀರ್ಣವಾಗುವುದಿಲ್ಲ. ಮಾತ್ರವಲ್ಲ ಇದರಿಂದ ಹಲವಾರು ಕಾಯಿಲೆಗಳು ಕಾಡಲು ಶುರುವಾಗುತ್ತವೆ. ಆ ಬಗ್ಗೆ ತಿಳಿಯೋಣ.

Health Tips: Why Eating Late At Night May Be Particularly Bad For You  Vin
Author
First Published Dec 3, 2022, 4:22 PM IST

ರಾತ್ರಿಯ ಊಟವು ನಮ್ಮ ಆರೋಗ್ಯ (Health)ದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಸಮರ್ಪಕ ರೀತಿಯಲ್ಲಿ ಊಟ ಮಾಡುವುದು ಮುಖ್ಯ. ಆದರೆ ಬಿಡುವಿಲ್ಲದ ಜೀವನಶೈಲಿ (Lifestyle) ಅಥವಾ ತಡರಾತ್ರಿಯ ಕೆಲಸದ ಕಾರಣದಿಂದಾಗಿ ಅನೇಕ ಜನರು ತಡರಾತ್ರಿ ಊಟ ಮಾಡುತ್ತಾರೆ. ತಡವಾಗಿ ತಿನ್ನುವ ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನೀವು ಸಹ ತಡರಾತ್ರಿ ಊಟ ಮಾಡುತ್ತಿದ್ದರೆ ಇಂದೇ ಈ ಅಭ್ಯಾಸ (Habit)ವನ್ನು ಬದಲಿಸಿಕೊಳ್ಳಿ. ಇಲ್ಲದಿದ್ದರೆ ಅದು ನಿಮ್ಮನ್ನು ಹಲವು ರೀತಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿಸಬಹುದು.ತಡವಾಗಿ ತಿನ್ನುವುದರಿಂದ ಆಹಾರ ತ್ವರಿತವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹಲವಾರು ಕಾಯಿಲೆಗಳು ಕಾಡಲು ಶುರುವಾಗುತ್ತವೆ.

ಸಂಶೋಧನೆಯ ಪ್ರಕಾರ ರಾತ್ರಿ 9 ಗಂಟೆಯ ನಂತರ ಊಟ ಮಾಡುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಏಕೆಂದರೆ ನಿದ್ರೆ ಮತ್ತು ಊಟದ ನಡುವೆ 2 ಗಂಟೆಗಳ ಅಂತರವನ್ನು ಹೊಂದಿರುವುದು ಬಹಳ ಮುಖ್ಯ. ಜನರು ಆಹಾರವನ್ನು ಸೇವಿಸಿದ ತಕ್ಷಣ ಮಲಗಿದಾಗ, ಆಹಾರವು ಸರಿಯಾಗಿ ಜೀರ್ಣವಾಗದಿದ್ದಾಗ ದೇಹದ (Body) ಚಯಾಪಚಯವು ನಿಧಾನಗತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ದೇಹವು ಅನೇಕ ರೋಗಗಳನ್ನು ಆಹ್ವಾನಿಸುತ್ತದೆ. ತಡರಾತ್ರಿಯಲ್ಲಿ ತಿನ್ನುವುದು ಮಲಬದ್ಧತೆ (Constipation), ಗ್ಯಾಸ್, ಅಧಿಕ ರಕ್ತದ ಸಕ್ಕರೆ, ಬೊಜ್ಜು ಮತ್ತು ಹೃದ್ರೋಗದಂತಹ ಅನೇಕ ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು. ಹೆಚ್ಚಿನ ಅಧ್ಯಯನಗಳಲ್ಲಿ, ಸಂಜೆ 6 ರಿಂದ ರಾತ್ರಿ 8 ರವರೆಗೆ ಆಹಾರವನ್ನು ಸೇವಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ. ತಡರಾತ್ರಿ ಆಹಾರ ಸೇವಿಸುವುದರಿಂದ ಯಾವ ರೀತಿಯ ಕಾಯಿಲೆಗಳು ಬರಬಹುದು ಎಂಬುದನ್ನು ತಿಳಿಯೋಣ.

ಈ ಆಹಾರದಿಂದಲೂ ತಲೆನೋವು ಬರಬಹುದು: ತಿನ್ನೋ ಮುನ್ನ ಎಚ್ಚರ!

ಜೀರ್ಣಕಾರಿ ಸಮಸ್ಯೆಗಳು: ತಡರಾತ್ರಿಯಲ್ಲಿ ಆಹಾರವನ್ನು ತಿನ್ನುವ ಅಭ್ಯಾಸದ ದೊಡ್ಡ ಕೆಟ್ಟ ಪರಿಣಾಮವೆಂದರೆ ಇದು ಜೀರ್ಣಕಾರಿ ಶಕ್ತಿಯ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ರಾತ್ರಿ ಊಟದ ನಂತರ ಹೆಚ್ಚಾಗಿ ಯಾವುದೇ ಚಟುವಟಿಕೆಯಿರುವುದಿಲ್ಲ. ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದಾಗಿ ಅಸಿಡಿಟಿ, ಹೊಟ್ಟೆ ಉಬ್ಬುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ತೂಕ ಹೆಚ್ಚಾಗಬಹುದು: ತಡರಾತ್ರಿ ತಿನ್ನುವುದರಿಂದ ತೂಕ ಹೆಚ್ಚಾಗುವ (Weight gain) ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಸಮಯಕ್ಕೆ ಆಹಾರ ಸೇವಿಸದ ಕಾರಣ ದೇಹದ ಚಯಾಪಚಯವು ನಿಧಾನಗೊಳ್ಳುತ್ತದೆ. ಇದರಿಂದಾಗಿ ತೆಗೆದುಕೊಂಡ ಕ್ಯಾಲೋರಿಗಳು ಸರಿಯಾಗಿ ಬರ್ನ್ ಆಗುವುದಿಲ್ಲ ಮತ್ತು ದೇಹದಲ್ಲಿ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ ರಾತ್ರಿ ಊಟದ ನಂತರ ಯಾವುದೇ ಚಟುವಟಿಕೆ ಇಲ್ಲದಿದ್ದರೂ ಊಟ ಮತ್ತು ಮಲಗುವ ನಡುವೆ ಎರಡು ಗಂಟೆಗಳ ಅಂತರ ಅಗತ್ಯ.

ರಕ್ತದೊತ್ತಡ: ಸಂಶೋಧನಾ ವರದಿಯ ಪ್ರಕಾರ, ತಡರಾತ್ರಿಯ ಆಹಾರವನ್ನು ನಿರಂತರವಾಗಿ ಸೇವಿಸುವ ಅಭ್ಯಾಸವು ಬಿಪಿ, ಕೊಲೆಸ್ಟ್ರಾಲ್ ಮತ್ತು ಮಧುಮೇಹದ ಅಪಾಯ (Danger)ವನ್ನು ಹೆಚ್ಚಿಸುತ್ತದೆ. ತಡವಾಗಿ ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಅನಿಯಂತ್ರಿತವಾಗುತ್ತದೆ. ನಂತರ ಇದು ಹೃದಯ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

Weight Loss Tips: ಬೇಗ ತೂಕ ಇಳಿಸ್ಕೋಬೇಕಾ, ಚಪಾತಿಗೆ ತುಪ್ಪ ಹಚ್ಕೊಂಡು ತಿನ್ನಿ ಸಾಕು

ನಿದ್ರೆಯ ಕೊರತೆ: ತಡರಾತ್ರಿಯಲ್ಲಿ ತಿನ್ನುವ ಅಭ್ಯಾಸವು ನಿದ್ರಾಹೀನತೆಗೆ ಕಾರಣವಾಗಬಹುದು. ಜನರು ಸಾಮಾನ್ಯವಾಗಿ ರಾತ್ರಿಯಲ್ಲಿ ಸುಲಭವಾಗಿ ನಿದ್ರೆ ಮಾಡುವುದಿಲ್ಲ ಎಂದು ದೂರುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ತಡವಾಗಿ ತಿನ್ನುವುದು. ತಡವಾದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ನಮ್ಮ ದೇಹಕ್ಕೆ ಸಾಧ್ಯವಾಗುವುದಿಲ್ಲ, ಇದರಿಂದಾಗಿ ನಿದ್ರೆಯ ಕೊರತೆ ಉಂಟಾಗುತ್ತದೆ.

ಶಕ್ತಿಯ ಮಟ್ಟದಲ್ಲಿ ಇಳಿಕೆ: ರಾತ್ರಿ ತಡವಾಗಿ ಊಟ ಮಾಡುವುದರಿಂದ ಮರುದಿನ ಮಲಬದ್ಧತೆ, ತಲೆನೋವು ಮತ್ತು ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ, ಸರಿಯಾದ ಜೀರ್ಣಕ್ರಿಯೆಯ (Digestion) ಕೊರತೆಯಿಂದಾಗಿ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ ಮತ್ತು ಶಕ್ತಿಯ ಮಟ್ಟವು ಕಡಿಮೆ ಇರುತ್ತದೆ. 

ಮೆದುಳಿಗೆ ಹಾನಿಕಾರಕ: ತಡರಾತ್ರಿಯಲ್ಲಿ ಆಹಾರವನ್ನು ಸೇವಿಸುವ ಪರಿಣಾಮವು ಮೆದುಳಿಗೆ (Brain) ತುಂಬಾ ಹಾನಿಕಾರಕವೆಂದು ಸಾಬೀತುಪಡಿಸಬಹುದು. ರಾತ್ರಿಯಲ್ಲಿ ನಿದ್ರಾಹೀನತೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಇತರ ಅನೇಕ ಸಮಸ್ಯೆಗಳಿಂದಾಗಿ, ಇದು ಮರುದಿನ ಏಕಾಗ್ರತೆ ಮತ್ತು ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿಯ ಊಟದಲ್ಲಿ ನಾರಿನಂಶ ಹೆಚ್ಚು ಸೇವಿಸಿದರೆ ಉತ್ತಮ. ಹೀಗಾಗಿ ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ನಿಮ್ಮದಾಗಿದ್ದರೆ ಇಂದೇ ಬದಲಾಯಿಸಿಕೊಳ್ಳಿ. ಬೇಗ ಊಟ ಮಾಡಿ, ಆರೋಗ್ಯವಾಗಿರಿ.

Follow Us:
Download App:
  • android
  • ios