ಚಿಕನ್ ಅಥವಾ ಫಿಶ್‌, Weight Loss ಮಾಡೋ ಪ್ಲಾನಿದ್ದರೆ ಯಾವುದು ಬೆಸ್ಟ್ ?

ತೂಕ ಇಳಿಸ್ಕೊಂಡು ಸಣ್ಣಗಾಗ್ಬೇಕು ಅಂತ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಆದ್ರೆ ಡಯೆಟ್‌. ಎಕ್ಸರ್‌ಸೈಸ್ ಅಂತ ಅದೆಷ್ಟೇ ಸರ್ಕಸ್ ಮಾಡಿದ್ರೂ ಅಷ್ಟು ಸುಲಭವಾಗಿ ಸಣ್ಣಗಾಗೋಕೆ ಆಗೋದಿಲ್ಲ. ಅದರಲ್ಲೂ ನಾನ್‌ವೆಜ್ ತಿನ್ನೋರಿಗಂತೂ ತೂಕ ನಷ್ಟ ತುಂಬಾ ಕಷ್ಟದ ಕೆಲಸ. ಆದ್ರೆ ಆಹಾರದ ಆಯ್ಕೆಯ ಮೂಲಕ ಸುಲಭವಾಗಿ ತೂಕ ಕಳೆದುಕೊಳ್ಳಬಹುದು. ಹೇಗೆ ತಿಳ್ಕೊಳ್ಳಿ..

Health tips: Chicken versus fish, Whats better for weight loss Vin

ಇತ್ತೀಚಿಗೆ ತೂಕ ಹೆಚ್ಚಳ ಹಲವರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಹೀಗಾಗುತ್ತಿದೆ. ತೂಕವನ್ನು ಕಳೆದುಕೊಳ್ಳಲು ಹೆಚ್ಚಿನವರು ವರ್ಕೌಟ್‌, ಡಯೆಟ್‌ ಮೊದಲಾದವುಗಳನ್ನು ಮಾಡುತ್ತಾರೆ. ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ, ನಿಯಮಿತ ವ್ಯಾಯಾಮದ ಜೊತೆಗೆ, ಆಹಾರದ ಬಗ್ಗೆಯೂ ಗಮನ ಹರಿಸಬೇಕು. ಆಹಾರದಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್‌ನ್ನು ಸೇರಿಸುವುದರಿಂದ ಬೇಗನೇ ತೂಕವನ್ನು ಕಳೆದುಕೊಳ್ಳಬಹುದು. ಪ್ರೋಟೀನ್ ಹೆಚ್ಚು ಕಾಲ ಹೊಟ್ಟೆ ತುಂಬಿರಲು ಸಹಾಯ ಮಾಡುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸಲು ನೆರವಾಗುತ್ತದೆ. ಪ್ರೋಟೀನ್‌ನ 2 ಸಾಮಾನ್ಯ ಮೂಲಗಳು ಮೀನು ಮತ್ತು ಕೋಳಿಗಳನ್ನು ಒಳಗೊಂಡಿವೆ. ಆದರೆ ತೂಕ ನಷ್ಟಕ್ಕೆ ನಿಮ್ಮ ಆಹಾರದಲ್ಲಿ ಯಾವುದನ್ನು ಸೇರಿಸಬೇಕು? ತೂಕನಷ್ಟಕ್ಕೆ ಮೀನು ಅಥವಾ ಕೋಳಿ ಯಾವುದು ಒಳ್ಳೆಯದು ತಿಳಿಯೋಣ.

10 ದಿನದಲ್ಲಿ ತೂಕ ಇಳಿಸ್ಕೊಳ್ಬೋದು, ಮಲಗೋ ಮುನ್ನ ಇಷ್ಟ್ ಮಾಡಿ ಸಾಕು

ಮೀನನ್ನು ಆಹಾರದಲ್ಲಿ ಯಾಕೆ ಸೇರಿಸಬೇಕು ?
ಸಂಶೋಧನೆಯ ಪ್ರಕಾರ, ಇತರ ರೀತಿಯ ಪ್ರೋಟೀನ್‌ಗಳಿಗೆ ಹೋಲಿಸಿದರೆ ಮೀನು (Fish)ಗಳನ್ನು ತಿನ್ನುವುದು ದೀರ್ಘಕಾಲದ ವರೆಗೆ ಪೂರ್ಣವಾಗಿರಲು ಸಹಾಯ ಮಾಡುತ್ತದೆ. ಮೀನು ಒಂದು ತೆಳ್ಳಗಿನ ಮಾಂಸವಾಗಿದ್ದು, ತೂಕ ನಷ್ಟದ ಜೊತೆಗೆ, ಸ್ನಾಯುಗಳನ್ನು ನಿರ್ಮಿಸಲು ಮತ್ತು ದೇಹ (Body)ದಲ್ಲಿ ಶಕ್ತಿಯ ಮಟ್ಟವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮೀನಿನ ಸೇವನೆಯ ದೊಡ್ಡ ಪ್ರಯೋಜನವೆಂದರೆ ಇದು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ, ಇದು ಆರೋಗ್ಯಕರ ಕೊಬ್ಬುಗಳು ಮತ್ತು ಹೃದಯದ (Heart) ಆರೋಗ್ಯಕ್ಕೆ ಒಳ್ಳೆಯದು.

ಜರ್ನಲ್ ನ್ಯೂಟ್ರಿಷನ್, ಮೆಟಾಬಾಲಿಸಮ್ ಮತ್ತು ಕಾರ್ಡಿಯೋವಾಸ್ಕುಲರ್ ಡಿಸೀಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸ್ಲಿಮ್ ಆಗಲು ಮೀನುಗಳನ್ನು ತಿನ್ನುವುದು ಇತರ ಮಾಂಸದ ಮೂಲಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ. ಎಂಟು ವಾರಗಳ ವರೆಗೆ ಕೇವಲ ಮೀನುಗಳನ್ನು ಸೇವಿಸಿದ ಜನರು ಮತ್ತು ಇತರ ರೀತಿಯ ಮಾಂಸವನ್ನು ಸೇವಿಸದ ಜನರು ಮೀನುಗಳನ್ನು ತಿನ್ನದವರಿಗೆ ಹೋಲಿಸಿದರೆ ಉತ್ತಮ ತೂಕ ನಷ್ಟ (Weight Loss) ಫಲಿತಾಂಶಗಳನ್ನು ದಾಖಲಿಸಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. 

ಜೀವಾನೇ ಕಿತ್ತುಕೊಳ್ತು Weight Lose ಮಾಡ್ಕೊಳ್ಳೋಕೆ ತಗೊಂಡ ಟ್ಯಾಬ್ಲೆಟ್ಸ್‌!

ಚಿಕನ್‌ನ್ನು ಆಹಾರದಲ್ಲಿ ಯಾಕೆ ಸೇರಿಸಬೇಕು ?
ಚಿಕನ್ ತೂಕ ನಷ್ಟವನ್ನು ಉತ್ತೇಜಿಸುವ ಆರೋಗ್ಯಕರ ಪೋಷಕಾಂಶಗಳನ್ನು ಹೊಂದಿದೆ. ಇದಲ್ಲದೆ, ನಿಯಮಿತವಾಗಿ ಚಿಕನ್ ಸೇವನೆಯು ಮೂಳೆ (Bone)ಗಳನ್ನು ಬಲಪಡಿಸುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸುತ್ತದೆ. ಹುರಿದ ಚಿಕನ್ ಅಥವಾ ಹೆಚ್ಚು ಸಂಸ್ಕರಿಸಿದ ಕೋಳಿಯ ಆಹಾರಗಳು ಒಳ್ಳೆಯದಲ್ಲ 

ತೂಕ ನಷ್ಟಕ್ಕೆ ಯಾವುದು ಒಳ್ಳೆಯದು ?
ತಜ್ಞರ ಪ್ರಕಾರ, ತೂಕ ನಷ್ಟಕ್ಕೆ ಚಿಕನ್ ಅತ್ಯುತ್ತಮ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಕಡಿಮೆ ಉಪ್ಪಿನೊಂದಿಗೆ ಬೇಯಿಸಿದ ಚಿಕನ್ ಮಾಂಸ ಮತ್ತು ಚಿಕನ್ ಸೂಪ್‌ಗಳು ಸಹ ಉತ್ತಮ ಆಯ್ಕೆಗಳಾಗಿವೆ. ಚಿಕನ್‌ಗಿಂತ ಮೀನಿನ ಪ್ರಯೋಜನವೆಂದರೆ ಮೀನಿನಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳ ಅಂಶ. ಪ್ರೋಟೀನ್, ಮೀನು ಮತ್ತು ಚಿಕನ್ ಸಮೃದ್ಧ ಮೂಲಗಳಾಗಿರುವುದರಿಂದ ತೂಕ ನಷ್ಟ ಆಹಾರ (Food)ದಲ್ಲಿ ಸೇರಿಸಲು ಎರಡೂ ಉತ್ತಮ ಆಯ್ಕೆಗಳಾಗಿವೆ. ನೀವು ಎರಡನ್ನೂ ತಿನ್ನಬಹುದು.

ಆದರೆ ಯಾವುದೇ ಮಾಂಸಾಹಾರವಾದರೂ ಮಿತ ಪ್ರಮಾಣದಲ್ಲಿ ತಿನ್ನುವುದು ತುಂಬಾ ಒಳ್ಳೆಯದು. ನೀವು ಅತಿಯಾಗಿ ತಿನ್ನುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ಅತಿಯಾದ ಪ್ರೋಟೀನ್ ದೇಹದಲ್ಲಿ ಸಂಗ್ರಹವಾಗುವುದರಿಂದ ತೂಕ ಹೆಚ್ಚಾಗಬಹುದು. ಈ ಮೂಲಕ ನೀವು ನಾನ್‌ವೆಜ್ ಪ್ರಿಯರಾಗಿದ್ದರೂ ಸರಿಯಾದ ಆಹಾರವನ್ನು ಆಯ್ಕೆ ಮಾಡುವ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು 

Latest Videos
Follow Us:
Download App:
  • android
  • ios