MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ನೀವು ಇಷ್ಟಪಟ್ಟು ತಿನ್ನುವ ಮೊಮೊಸ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

ನೀವು ಇಷ್ಟಪಟ್ಟು ತಿನ್ನುವ ಮೊಮೊಸ್ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

Momos Side Effects: ಫಾಸ್ಟ್ ಫುಡ್ ಜಗತ್ತಿನಲ್ಲಿ ಮೊಮೊಸ್ ಜನರ ಮೊದಲ ಆಯ್ಕೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರೂ ಪ್ರತಿದಿನ ಮೊಮೊಸ್ ಬಹಳ ಪ್ರೀತಿಯಿಂದ ತಿನ್ನುತ್ತಲೇ ಇರುತ್ತಾರೆ. ನೀವು ಸಹ ಮೊಮೊಸ್ ಪ್ರಿಯರಾಗಿದ್ರೆ, ಅದನ್ನು ತಿನ್ನುವ ಮೊದಲು, ಅದರ ಅನಾನುಕೂಲತೆಗಳ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಿ.

2 Min read
Author : Suvarna News
Published : Nov 26 2022, 04:00 PM IST
Share this Photo Gallery
  • FB
  • TW
  • Linkdin
  • Whatsapp
17

ಈ ಫಾಸ್ಟ್ ಆಂಡ್ ಫ್ಯೂರಿಯಸ್ ಜಗತ್ತಿನಲ್ಲಿ, ಜನರು ಪ್ರತಿಯೊಂದಕ್ಕೂ ಆತುರದಲ್ಲಿರುತ್ತಾರೆ. ಅದು ಕೆಲಸವಾಗಿರಲಿ ಅಥವಾ ಆಹಾರವಾಗಿರಲಿ, ಎಲ್ಲವೂ ಈಗ ವೇಗವಾಗಿದೆ. ಈ ಬ್ಯುಸಿ ಜೀವನದಲ್ಲಿ, ಈಗ ಜನರ ಆಹಾರ ಪದ್ಧತಿಯೂ ಸಾಕಷ್ಟು ಬದಲಾಗಿದೆ. ಪ್ರಸ್ತುತ, ಪ್ರತಿಯೊಬ್ಬರೂ ತಮ್ಮ ಹೆಚ್ಚಿನ ಸಮಯವನ್ನು ಮನೆಯ ಹೊರಗೆ ಕಳೆಯುತ್ತಿದ್ದಾರೆ. ಹಾಗಾಗಿ, ಫಾಸ್ಟ್ ಫುಡ್ (fast food) ಮತ್ತು ಹೊರಗಿನ ಆಹಾರವು ಜನರ ದೈನಂದಿನ ದಿನಚರಿಯ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಪಿಜ್ಜಾ, ಬರ್ಗರ್ ಗಳು, ನೂಡಲ್ಸ್ ಗಳು ಜನರ ಇಷ್ಟ ಮತ್ತು ಅಗತ್ಯಗಳೆರಡೂ ಆಗುತ್ತಿವೆ. ಈ ಫಾಸ್ಟ್ ಫುಡ್ ಗಳಲ್ಲಿ ಒಂದಾದ ಮೊಮೊಸ್ (momos), ಈಗಂತೂ ಎಲ್ಲರ ಆಯ್ಕೆಯಾಗಿದೆ. ಬಹುತೇಕ ಎಲ್ಲರೂ ಆಫೀಸ್ ಅಥವಾ ಕಾಲೇಜೀಂದ ಹೊರ ಬಂದ ನಂತರ ಅಥವಾ ಸ್ನೇಹಿತರೊಂದಿಗೆ ವಿಹಾರದ ಸಮಯದಲ್ಲಿ ಮೋಮೋಸ್ ತಿನ್ನೋದನ್ನು ನೀವು ಕಂಡಿರಬಹುದು ಅಲ್ವಾ?
 

27

ಕೆಲವು ಸಮಯದಿಂದ, ಮೊಮೊಸ್ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಮಕ್ಕಳಿಂದ ವಯಸ್ಕರವರೆಗೆ, ಮೊಮೊಗಳು ಈ ದಿನಗಳಲ್ಲಿ ಎಲ್ಲರ ಆಯ್ಕೆಯಾಗಿ ಉಳಿದಿವೆ. ಆದರೆ ನೀವು ಪ್ರೀತಿಯಿಂದ ತಿನ್ನುವ ಮೊಮೊಸ್ ಆರೋಗ್ಯಕ್ಕೆ ತುಂಬಾ ಹಾನಿಕಾರಕ (dangerous for health) ಎಂದು ನಿಮಗೆ ತಿಳಿದಿದೆಯೇ? ಮೊಮೊಸ್ ಮಾತ್ರವಲ್ಲದೆ, ಅದರೊಂದಿಗೆ ಸೆವಿಸೋ ಕೆಂಪು ಚಟ್ನಿ ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಬನ್ನಿ ರುಚಿಕರವಾಗಿ ಕಾಣುವ ಮೊಮೊಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ತಿಳಿಯೋಣ.

37

ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತೆ: ಮೊಮೊಸ್ ತಯಾರಿಸಲು ಮೈದಾ ಬಳಸಲಾಗುತ್ತದೆ.  ಮೈದಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಪಿಷ್ಟದಿಂದಾಗಿ ಸ್ಥೂಲಕಾಯದ (obesity) ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ, ಮೈದಾ ತಿನ್ನುವುದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ (ಕೆಟ್ಟ ಕೊಲೆಸ್ಟ್ರಾಲ್) ಮಟ್ಟವನ್ನು ಹೆಚ್ಚಿಸಬಹುದು.

47

ಮೇದೋಜ್ಜೀರಕ ಗ್ರಂಥಿಗೆ ಹಾನಿಕಾರಕ:  ತಿನ್ನಲು ರುಚಿಕರವಾಗಿ ಕಾಣುವ ಮೊಮೊಗಳು ಸಹ ಸಾಕಷ್ಟು ಮೃದುವಾಗಿರುತ್ತವೆ. ವಾಸ್ತವವಾಗಿ, ಅದನ್ನು ಮೃದುವಾಗಿಸಲು, ಅಜೋಡಿಕಾರ್ಬೋನಾ ಮೆಡಿ ಮತ್ತು ಬೆಂಜೊಯಿಲ್ ಪೆರಾಕ್ಸೈಡ್ ಇತ್ಯಾದಿಗಳನ್ನು ಹಿಟ್ಟಿಗೆ ಸೇರಿಸಲಾಗುತ್ತೆ. ಈ ಎರಡೂ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಮತ್ತು ಅವು ಮೇದೋಜ್ಜೀರಕ ಗ್ರಂಥಿಗೆ ಅಪಾಯಕಾರಿ ಎಂದು ತಿಳಿದು ಬಂದಿದೆ.

57

ಏನೇನೋ ಬಳಸ್ತಾರೆ: ಮೊಮೊಸ್ ಒಳಗೆ ಸ್ಟಫಿಂಗ್ ಮಾಡಲು ತರಕಾರಿಗಳು ಮತ್ತು ಚಿಕನ್ ಇತ್ಯಾದಿಗಳನ್ನು ಬಳಸಲಾಗುತ್ತದೆ. ಆದರೆ ದೀರ್ಘಕಾಲದವರೆಗೆ ಇದನ್ನು ಇರಿಸೋದ್ರಿಂದ, ಅದು ಹದಗೆಡುತ್ತದೆ, ಇದರ ಸೇವನೆಯು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಇಷ್ಟೇ ಅಲ್ಲ, ಚಿಕನ್ ಇತ್ಯಾದಿಗಳಲ್ಲಿರುವ ಇ.ಕೋಲಿ ಬ್ಯಾಕ್ಟೀರಿಯಾಗಳು (e koli bacteria) ಸಹ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಬಹುದು.

67

ಮಸಾಲೆಯುಕ್ತ ಚಟ್ನಿಯಿಂದ ಸಮಸ್ಯೆ: ಮೊಮೊಸ್ ಜೊತೆ ಸವಿಯಲು ಖಾರ-ಕೆಂಪು ಚಟ್ನಿ (spicy red chutney) ಸಿಗುತ್ತೆ ಇದನ್ನು ಜನರು ಮೊಮೊಗಳೊಂದಿಗೆ ತಿನ್ನಲು ಇಷ್ಟಪಡ್ತಾರೆ. ಆದರೆ ಈ ಚಟ್ನಿಯಲ್ಲಿ ಕೆಂಪು ಮೆಣಸಿನಕಾಯಿಯ ಪ್ರಮಾಣವು ತುಂಬಾ ಹೆಚ್ಚಾಗಿರುತ್ತೆ, ಇದು ನಿಮ್ಮ ಆರೋಗ್ಯಕ್ಕೆ ವಿಷದಂತೆ ಕೆಲಸ ಮಾಡುತ್ತೆ. ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸುವುದು ಸಹ ಮೂಲವ್ಯಾಧಿ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡಬಹುದು.

77

ಮಧುಮೇಹದ ಅಪಾಯ ಹೆಚ್ಚಾಗುವುದು: ಮೊಮೊಗಳನ್ನು ಮೃದುವಾಗಿಸಲು ಬಳಸುವ ವಸ್ತುಗಳು ಮೇದೋಜ್ಜೀರಕ ಗ್ರಂಥಿಗೆ ಸಾಕಷ್ಟು ಹಾನಿಕಾರಕವಾಗಿವೆ. ಮೇದೋಜ್ಜೀರಕ ಗ್ರಂಥಿ ಹಾನಿಗೊಳಗಾದಾಗ ಇನ್ಸುಲಿನ್ ಹಾರ್ಮೋನ್ ಸ್ರವಿಸುವಿಕೆಯನ್ನು ಸರಿಯಾಗಿ ಮಾಡಲಾಗುವುದಿಲ್ಲ, ಇದು ಜನರಲ್ಲಿ ಮಧುಮೇಹದ (diabetes) ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚು ಮೊಮೊ ತಿನ್ನುವವರಲ್ಲಿ ಮಧುಮೇಹದ ಅಪಾಯ ಅನೇಕ ಪಟ್ಟು ಹೆಚ್ಚಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಕರಿದ ಎಣ್ಣೆ ಮರಳಿ ಬಳಸದಂತೆ ಏಮ್ಸ್ ವೈದ್ಯೆ ಎಚ್ಚರಿಕೆ, ಫಾಸ್ಟ್ ಫುಡ್ ಮಳಿಗೆಗಳಲ್ಲಿನ ಪರೀಕ್ಷೆಯ ಶಾಕಿಂಗ್ ಸತ್ಯ!
Recommended image2
ಅಡುಗೆಮನೆ ಗುಟ್ಟು; ಮೂರ್ನಾಲ್ಕು ವಿಷಲ್ ಕೂಗಿಸಿದ್ರೂ ತೊಗರಿಬೇಳೆ ಬೇಯುತ್ತಿಲ್ಲವೇ? ಈ ಟ್ರಿಕ್ಸ್ ಬಳಸಿ
Recommended image3
ಮೊಸರು ಅವಲಕ್ಕಿ ರುಚಿ ಡಬಲ್ ಮಾಡಲು ಅಮ್ಮ ಹೇಳಿಕೊಟ್ಟ ರಹಸ್ಯ! ಅದು ಬೇಡ, ಇದು ಇರಲಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved