ದೇಹದ ಸಮಸ್ಯೆಗೆ 'ಕಿವಿ' ಹಿಂಡೋ ಹಣ್ಣಿದು, ತೂಕವನ್ನೂ ಇಳಿಸುತ್ತೆ
ಕಿವಿ ಹಣ್ಣು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದರಿಂದ ಹೃದಯದ ಆರೋಗ್ಯ, ಉತ್ತಮ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ. ದೈನಂದಿನ ಆಹಾರದಲ್ಲಿ ಒಂದು ಕಿವಿ ಹಣ್ಣನ್ನು ಸೇವಿಸುವುದರಿಂದ ಅನೇಕ ಲಾಭಗಳಿವೆ
ಹಣ್ಣುಗಳು ಉತ್ತಮ ಆರೋಗ್ಯಕ್ಕೆ ಸಹಾಯಕಾರಿ. ಹಣ್ಣುಗಳಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್’ಗಳು ಸಮೃದ್ಧವಾಗಿರುವುದರಿಂದ ಇವುಗಳನ್ನು ನಾವು ದಿನಾಲೂ ಸೇವಿಸಬೇಕು. ಅದೇ ರೀತಿ ಕಿವಿ ಹಣ್ಣು ಸೇವಿಸುವುದರಿಂದ ಅದ್ಭುತ ಪ್ರಯೋಜನಗಳಿವೆ. ಕಿವಿ ಹಣ್ಣನ್ನು ಅನೇಕ ರೋಗಗಳಿಗೆ ರಾಮಬಾಣ ಎಂದರೆ ತಪ್ಪಾಗಲಾರದು. ಈ ಹಣ್ಣನ್ನು ತಿನ್ನುವುದರಿಂದ ರಕ್ತದಲ್ಲಿ ಪ್ಲೇಟ್ಲೆಟ್’ಗಳು ಹೆಚ್ಚುತ್ತದೆ. ಡೆಂಘೀ ಜ್ವರ ಮತ್ತು ಕಾಮಾಲೆ ಖಾಯಿಲೆ ಇದ್ದರೆ ಕಿವಿ ಹಣ್ಣನ್ನು ತಿನ್ನುವುದರಿಂದ ಪರಿಹಾರ ಕಾಣಬಹುದು. ಹಾಗೂ ಡಿಎನ್ ಎ ಅನ್ನು ಉತ್ತಮಗೊಳಿಸಬಹುದು. ಸೂಪರ್ ಫುಡ್ ಗಳಲ್ಲಿ ಸ್ಥಾನ ಪಡೆದಿರುವ ಕಿವಿ ಹಣ್ಣಿನಿಂದ ಸಿಗುವ ಇನ್ನಿತರ ಪ್ರಯೋಜನಗಳು ಇಲ್ಲಿವೆ.
ತೂಕವನ್ನು ಕಡಿಮೆ ಮಾಡುತ್ತದೆ
ಕಿವಿ ಹಣ್ಣು (kiwi fruit) ಹೆಚ್ಚು ಫೈಬರ್ ಗುಣವನ್ನು ಹೊಂದಿದ್ದು, ಇದು ಹಸಿವನ್ನು ಕಡಿಮೆ ಮಾಡಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಫೈಬರ್ ಅನ್ನು ಹೆಚ್ಚು ತಿನ್ನುವವರು ಕಡಿಮೆ ಫೈಬರ್ ತಿನ್ನುವ ಜನರಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಕಿವಿ ಹಣ್ಣಿನ ಕೊಬ್ಬು-ಮುಕ್ತ, ಕಡಿಮೆ-ಕ್ಯಾಲೋರಿ ಮತ್ತು ಕಡಿಮೆ-ಕಾರ್ಬೋಹೈಡ್ರೇಟ್ ಸ್ವಭಾವವು ತೂಕ ಕಳೆದುಕೊಳ್ಳಲು( Weight loss) ಸಹಾಯವಾಗುತ್ತದೆ. ಇನ್ನು ಒಂದು ಕಪ್ ಕತ್ತರಿಸಿದ ಕಿವಿಹಣ್ಣು 5 ಗ್ರಾಂ ಫೈಬರ್ ಒದಗಿಸುತ್ತದೆ. ಹಾಗೇ ಮಹಿಳೆಯರು ದಿನಕ್ಕೆ ಕನಿಷ್ಠ 25 ಗ್ರಾಂ ಫೈಬರ್, ಪುರುಷರು 38 ಗ್ರಾಂ. ಫೈಬರ್ ಸೇವಿಸಬೇಕು.
ಕಿವಿಯಲ್ಲಿನ ಫೈಬರ್ ಅಂಶವು ಕೊಲೆಸ್ಟ್ರಾಲ್ (cholesterol) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಲ್ಲದೆ ನೈಸರ್ಗಿಕವಾಗಿ ಕಿವಿಯಲ್ಲಿ ಸೋಡಿಯಂ ತುಂಬಾ ಕಡಿಮೆಯಿದ್ದು, ಪೊಟ್ಯಾಸಿಯಮ್ ಉತ್ತಮವಾಗಿದೆ. ಇದು ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ. ಹೃದಯರಕ್ತನಾಳವನ್ನು ರಕ್ಷಿಸುವುದರಿಂದ ಹೃದಯದ ಸಮಸ್ಯೆಗಳಿಂದ ದೂರವಿರಬಹುದು.
Health Tips : ಹೊಟ್ಟೆಯಲ್ಲಿ ಸದಾ ಕಾಡುವ ಗ್ಯಾಸ್ ಗೆ ಹೇಳಿ ಗುಡ್ ಬೈ
ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ
ತ್ವಚೆಗೆ (Skin) ಕಿವಿ ಹಣ್ಣಿನಿಂದ ಅನೇಕ ಪ್ರಯೋಜನಗಳಿವೆ. ಕಿವಿಯು ವಿಟಮಿನ್ ಎ, ಸಿ ಮತ್ತು ಇ ಗಳ ಸಮೃದ್ಧ ಮೂಲವಾಗಿದೆ., ಇದು ಚರ್ಮದ (Skin) ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಅಂಗಾಂಶಗಳು , ಕೀಲುಗಳನ್ನು ಬಲಪಡಿಸಲು ಮತ್ತು ಮೂಳೆಗಳನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಅದಲ್ಲದೆ ಕಿವಿ (kiwi) ಹಣ್ಣಿನಲ್ಲಿ ಪ್ರೋಟೀನ್, ಸೋಡಿಯಂ, ಸಕ್ಕರೆ, ಕ್ಯಾಲ್ಸಿಯಂ (Calcium), ವಿಟಮಿನ್ ಇ ಮತ್ತು ಕಬ್ಬಿಣಾಂಶವೂ ಇದೆ. ಇದು ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಲಿದೆ.
ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ
ಕಿವಿ ಆರೋಗ್ಯಕರ ಜೀರ್ಣಕ್ರಿಯೆಗೆ( Digestion) ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಕಿವಿಯಲ್ಲಿನ ಉತ್ತಮ ನಾರಿನ ಮೂಲವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅದಲ್ಲದೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ.
Kiwi Fruit ಗರ್ಭಿಣಿಗಷ್ಟೇ ಅಲ್ಲ, ಭ್ರೂಣದ ಬೆಳವಣಿಗೆಗೂ ಸಹಾಯಕ
ಅಧಿಕ ವಿಟಮಿನ್ಸ್ & ಪೊಟ್ಯಾಷಿಯಮ್
ಕಿವಿಯಲ್ಲಿ ಹೆಚ್ಚು ವಿಟಮಿನ್ ಸಿ (Vitamin C) ಇದ್ದು ರೋಗ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಅಂಗಾಂಶ, ರಕ್ತನಾಳಗಳು, ಸ್ನಾಯುಗಳು ಮತ್ತು ಚರ್ಮದ (Skin) ರಚನೆಗೆ ಕಿವಿ ಉತ್ತಮವಾಗಿದೆ. ಕಿವಿ ವಿಟಮಿನ್ ಕೆ ನ ಮೂಲವಾಗಿದ್ದು, ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ವಿಟಮಿನ್ ಡಿ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಅದಲ್ಲದೆ ಕಿವಿ ಹಣ್ಣಿನಲ್ಲಿನ ಪೊಟ್ಯಾಸಿಯಮ್ ನಮ್ಮ ದೇಹದ ದ್ರವಗಳು ಮತ್ತು ಇತರ ಖನಿಜಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿನ ಹೆಚ್ಚು ಪೊಟ್ಯಾಸಿಯಮ್’ನಿಂದ ಪಾರ್ಶ್ವವಾಯು ಮತ್ತು ಅನಿಯಮಿತ ಹೃದಯ ಬಡಿತದಂತಹ ಅನಾರೋಗ್ಯವನ್ನು ತಡೆಯಬಹುದು. ಒಂದು ಕಪ್ ಕಿವಿಯಲ್ಲಿ 552mg ಪೊಟ್ಯಾಸಿಯಮ್ ಇದೆ. ಪೊಟ್ಯಾಸಿಯಮ್ ಭರಿತ ಆಹಾರವು ರಕ್ತದೊತ್ತಡವನ್ನು (blood pressure) ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಕ್ತ ಹೀನತೆ ಸಮಸ್ಯೆ ದೂರ ಮಾಡುತ್ತದೆ
ಕಿವಿ ಕಬ್ಬಿಣದ (Iron ) ಕೊರತೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಕಿವಿ ಮೂಲತಃ ಕಬ್ಬಿಣದ ಪ್ರಮುಖ ಮೂಲವಲ್ಲ. ಆದರೆ ವಿಟಮಿನ್ ಸಿ ಯ ಕಿವಿಯ ಮೂಲಗಳಲ್ಲಿ ಒಂದಾಗಿದ್ದು, ವಿಟಮಿನ್ ಸಿ ಕಬ್ಬಿಣದ (Iron) ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ಹೀಗಾಗಿ ದೇಹದಲ್ಲಿನ ರಕ್ತ ಹೀನತೆ ಸಮಸ್ಯೆಯನ್ನು ಬಗೆಹರಿಸಬಹುದು. ಕಿವಿ ಉಸಿರಾಟದ ಸೋಂಕುಗಳ ಅವಧಿಯನ್ನು ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಶೀತ (Cold), ಗಂಟಲು ನೋವು, ಜ್ವರದಂತಹ ಸಣ್ಣ ಪುಟ್ಟ ಕಾಯಿಲೆಗಳನ್ನು ಶಮನ ಮಾಡುವಲ್ಲಿ ಸಹಾಯಕಾರಿಯಾಗಿದೆ.
ಕಿವಿ ಹಣ್ಣು ವರ್ಷವಿಡೀ ಮಾರುಕಟ್ಟೆಯಲ್ಲಿ ಸಿಗುವ ಹಣ್ಣಾಗಿದ್ದು, ಇದನ್ನು ಸೂಪರ್ ಫುಡ್ ಎಂತಲೂ ಕರೆಯಬಹುದು. ನಮ್ಮ ಆರೋಗ್ಯಕ್ಕೆ ಇದು ಬಹಳ ಮುಖ್ಯವಾದ ಹಲವಾರು ಪೋಷಕಾಂಶಗಳು (Vitamins) ನೀಡುತ್ತದೆ. ನೀವು ಇದರ ಪ್ರಯೋಜನ ಪಡೆಯಬುಹುದು.