Healthy Food: ಹಸಿರು ಮೆಣಸಿನ ಕಾಯಿ ಉಪ್ಪಿನಕಾಯಿಯಲ್ಲೂ ಇದೆ ಆರೋಗ್ಯ
ಹಸಿರು ಮೆಣಸಿನಕಾಯಿ ಹಾಗೆ ತಿನ್ನುವವರಿದ್ದಾರೆ. ಅದನ್ನು ಉಪ್ಪಿನಕಾಯಿ ರೂಪದಲ್ಲಿ ಸೇವನೆ ಮಾಡಿದ್ರೆ ರುಚಿ ಹೆಚ್ಚು. ಈ ಗ್ರೀನ್ ಮೆಣಸಿನಕಾಯಿ ಆರೋಗ್ಯ ವೃದ್ಧಿಸುವ ಗುಣ ಹೊಂದಿದೆ. ಈ ಉಪ್ಪಿನಕಾಯಿ ಸೇವನೆಯಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?
ಊಟಕ್ಕೆ ಉಪ್ಪಿನ ಕಾಯಿ ಇಲ್ಲ ಅಂದ್ರೆ ಹೇಗೆ ಹೇಳಿ? ಮೊಸರನ್ನದ ಜೊತೆ ಉಪ್ಪಿನಕಾಯಿ ನೆಚ್ಚಿಕೊಂಡ್ರೆ ಅನ್ನ ಒಳಗೆ ಹೋಗಿದ್ದು ತಿಳಿಯೋದಿಲ್ಲ. ಅನೇಕರು ಊಟಕ್ಕೆ ಮಾತ್ರವಲ್ಲ ಉಪಹಾರಕ್ಕೆ ಕೂಡ ಉಪ್ಪಿನಕಾಯಿ ಬಳಸ್ತಾರೆ. ಅನ್ನಕ್ಕೆ ಉಪ್ಪಿನಕಾಯಿ ಕಲಸಿ ತಿನ್ನುವವರಿದ್ದಾರೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ನಿಮಗೆ ಬಗೆ ಬಗೆಯ ಉಪ್ಪಿನಕಾಯಿ ಸಿಗುತ್ತದೆ. ಮನೆಯಲ್ಲಿಯೇ ಅನೇಕ ಮಹಿಳೆಯರು ಉಪ್ಪಿನಕಾಯಿ ಸಿದ್ಧ ಮಾಡ್ತಾರೆ. ಉಪ್ಪಿನಕಾಯಿಯನ್ನು ಅತಿಯಾಗಿ ಸೇವನೆ ಮಾಡಿದ್ರೆ ಆರೋಗ್ಯ ಹದಗೆಡುತ್ತದೆ. ಆದ್ರೆ ಸ್ವಲ್ಪ ಪ್ರಮಾಣದಲ್ಲಿ ಅದನ್ನು ತಿಂದ್ರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಭಾರತ (India) ದಲ್ಲಿ ಮಾವಿನ ಕಾಯಿ ಉಪ್ಪಿನಕಾಯಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಮಾವಿನ ಕಾಯಿ (Mango) ಜೊತೆಗೆ ನಿಂಬೆ ಕಾಯಿ, ಬೆಳ್ಳುಳ್ಳಿ, ಶುಂಠಿ, ಹಲಸು, ಕ್ಯಾರೆಟ್ ಹೀಗೆ ಬೇರೆ ಬೇರೆ ತರಕಾರಿಗಳಿಂದ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಇದ್ರಲ್ಲಿ ಮೆಣಸಿನಕಾಯಿ (Chilli) ಉಪ್ಪಿನಕಾಯಿ ಕೂಡ ಸೇರಿದೆ. ಮೆಣಸಿನಕಾಯಿ ಉಪ್ಪಿನಕಾಯಿ ಆಹಾರ (Food) ದ ರುಚಿ ಹೆಚ್ಚಿಸುವುದಲ್ಲದೆ ಆರೋಗ್ಯ (Health) ಕ್ಕೆ ತುಂಬಾ ಪ್ರಯೋಜನಕಾರಿ. ನಾವಿಂದು ಹಸಿ ಮೆಣಸಿನಕಾಯಿ ಉಪ್ಪಿನಕಾಯಿ ಸೇವನೆ ಮಾಡುವುದ್ರಿಂದ ಆಗುವ ಪ್ರಯೋಜನವೇನು ಎಂಬುದನ್ನು ನಿಮಗೆ ಹೇಳ್ತೆವೆ. ಹಸಿರು ಮೆಣಸಿನಕಾಯಿಯಿಂದ ಮಾಡಿದ ಉಪ್ಪಿನಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಸಿ, ಕಬ್ಬಿಣ, ತಾಮ್ರ, ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ. ಹಸಿರು ಮೆಣಸಿನಕಾಯಿಯಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ನಮಗೆ ಸಿಗುತ್ತದೆ.
ಹಸಿರು ಮೆಣಸಿನಕಾಯಿ ಉಪ್ಪಿನಕಾಯಿ ಸೇವನೆಯಿಂದಾಗುವ ಪ್ರಯೋಜನ :
ಹೆಚ್ಚಾಗುತ್ತೆ ರೋಗ ನಿರೋಧಕ ಶಕ್ತಿ (Immunity Power) : ರೋಗ ನಿರೋಧಕ ಶಕ್ತಿಯ ಅಗತ್ಯತೆ ಈಗ ಹೆಚ್ಚಿದೆ. ಸಣ್ಣಪುಟ್ಟ ಕಾಯಿಲೆಯಿಂದ ನಮ್ಮನ್ನು ದೂರವಿಡಲು ನಾವು ರೋಗ ನಿರೋಧಕ ಶಕ್ತಿ ಹೊಂದಿರಬೇಕು. ಹಸಿರು ಮೆಣಸಿನಕಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇರುವುದ್ರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಸೋಂಕು ನಿಮ್ಮ ದೇಹ ತಲುಪದಂತೆ ಇದು ನಿಮ್ಮನ್ನು ರಕ್ಷಿಸುತ್ತದೆ.
ಹಸಿರು ಮೆಣಸಿನ ಕಾಯಿ ಉಪ್ಪಿನಕಾಯಿಯಲ್ಲಿದೆ ತೂಕ ಕಡಿಮೆ ಮಾಡುವ ಗುಣ : ಹಸಿರು ಮೆಣಸಿನಕಾಯಿ ಉಪ್ಪಿನಕಾಯಿಯಲ್ಲಿ ಕಂಡುಬರುವ ನಾರಿನ ಪ್ರಮಾಣ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಸೇವಿಸುವುದರಿಂದ ನಿಮ್ಮ ತೂಕ ಇಳಿಯುತ್ತದೆ. ಹಸಿರು ಮೆಣಸಿನಕಾಯಿ ಉಪ್ಪಿನಕಾಯಿಯನ್ನು ವಿನೆಗರ್‌ನಿಂದ ತಯಾರಿಸಲಾಗುತ್ತದೆ. ಇದು ಕ್ಯಾಲೊರಿಗಳನ್ನು ಶೂನ್ಯಕ್ಕೆ ಇಳಿಸುವ ಸಾಮರ್ಥ್ಯ ಹೊಂದಿದೆ. ತೂಕ ಕಡಿಮೆಯಾಗಬೇಕು ಎನ್ನುವವರು ಹಸಿರು ಮೆಣಸಿನಕಾಯಿ ಉಪ್ಪಿನಕಾಯಿಯನ್ನು ಸೇವನೆ ಮಾಡಿ.
ಅರಿಶಿನ ಬೆರೆಸಿದ ಹಾಲಲ್ಲ, ಕಾಫಿ ಕುಡಿಯೋದ್ರಿಂದ ಸಿಗುತ್ತೆ ಬಹಳಷ್ಟು ಲಾಭ
ಕರುಳಿನ ಆರೋಗ್ಯದಲ್ಲಿ (Guts Health) ಸುಧಾರಣೆ : ಹಸಿರು ಮೆಣಸಿನಕಾಯಿ ಉಪ್ಪಿನಕಾಯಿ ಉರಿಯೂತ ಗುಣಲಕ್ಷಣಗಳನ್ನು ಹೊಂದಿದೆ. ಇದಲ್ಲದೆ ಇದ್ರಲ್ಲಿ ಕರ್ಕ್ಯುಮಿನ್ ಎಂಬ ಪೋಷಕಾಂಶವಿದೆ. ಇದಲ್ಲದೆ ನೀವು ಹಸಿರು ಮೆಣಸಿನ ಕಾಯಿ ಸೇವನೆ ಮಾಡುವುದ್ರಿಂದ ಕರುಳಿನ ಆರೋಗ್ಯ ಸುಧಾರಿಸುವ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗುತ್ತದೆ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
ಕಿಚನ್‌ನಲ್ಲಿರೋ ಈ ಮಸಾಲೆ 2023ರಲ್ಲಿ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತೆ
ಈ ಪ್ರಮಾಣದಲ್ಲಿ ಹಸಿರು ಮೆಣಸಿನಕಾಯಿ ಉಪ್ಪಿನಕಾಯಿ ಸೇವನೆ ಮಾಡಿ : ಮೊದಲೇ ಹೇಳಿದಂತೆ ಹಸಿರು ಮೆಣಸಿನಕಾಯಿ ಉಪ್ಪಿನಕಾಯಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಇದರ ಅತಿಯಾದ ಸೇವನೆ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ. ಹಸಿಮೆಣಸಿನಕಾಯಿ ಉಪ್ಪಿನಕಾಯಿಯನ್ನು ಅತಿಯಾಗಿ ತಿನ್ನುವುದರಿಂದ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ಹಾಗೆಯೇ ಹೊಟ್ಟೆ ನೋವು ನಿಮ್ಮನ್ನು ಕಾಡಬಹುದು. ಹಸಿರು ಮೆಣಸಿನಕಾಯಿ ಉಪ್ಪಿನಕಾಯಿಯನ್ನು ದಿನಕ್ಕೆ 1-2 ತುಂಡುಗಳಿಗಿಂತ ಹೆಚ್ಚು ತಿನ್ನಬಾರದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ಒಂದು ವಾರದಲ್ಲಿ ಒಂದರಿಂದ ಎರಡು ಹಸಿರು ಮೆಣಸಿನಕಾಯಿ ಉಪ್ಪಿನಕಾಯಿ ತುಂಡನ್ನು ಮಾತ್ರ ನೀವು ಸೇವನೆ ಮಾಡಬೇಕು ಎನ್ನತ್ತಾರೆ ತಜ್ಞರು.