Asianet Suvarna News Asianet Suvarna News

Healthy Food: ರಾತ್ರಿ ಮಲಗುವಾಗ ಅಜ್ವೈನ ಸೇವಿಸಿದ್ರೆ ಎಷ್ಟೆಲ್ಲ ಪ್ರಯೋಜನವಿದೆ ಗೊತ್ತಾ?

ಮಲಬದ್ಧತೆ, ನಿದ್ರಾಹೀನತೆ ಸೇರಿದಂತೆ ಅನೇಕ ಸಮಸ್ಯೆಗೆ ನಮ್ಮ ಮನೆಯಲ್ಲೇ ಮದ್ದಿದೆ. ಮಾತ್ರೆ ಸೇವನೆ ಮಾಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು ಅಡುಗೆ ಮನೆಯಲ್ಲಿರುವ ಕೆಲ ಮಸಾಲೆ ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಿ. 
 

Health Benefits Of Eating Ajwain Before Sleeping
Author
First Published Jan 24, 2023, 4:28 PM IST

ಭಾರತೀಯ ಅಡುಗೆಯಲ್ಲಿ ಬಳಸುವ ಬಹುಪಾಲು ಎಲ್ಲ ಮಸಾಲೆಗಳು ಶರೀರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ನಿತ್ಯದ ಅಡುಗೆಗೆ ನಾವು ಬಳಸುವ ಕೊತ್ತೊಂಬರಿ, ಮೆಂತ್ಯೆ, ಜೀರಿಗೆ, ಸಾಸಿವೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಹೀಗೆ ನೂರಾರು ಸಾಮಗ್ರಿಗಳನ್ನು ಪಟ್ಟಿಮಾಡಬಹುದು. ಇವೆಲ್ಲವೂ ಉತ್ತಮ ಆರೋಗ್ಯಕ್ಕೆ ಮನೆ ಮದ್ದಾಗಿವೆ. ಮನೆಯಲ್ಲಿ ಮಕ್ಕಳಿಗಾಗಲಿ, ದೊಡ್ಡವರಿಗಾಗಲಿ ಚಿಕ್ಕ ಪುಟ್ಟ ಸಮಸ್ಯೆಗಳು ಕಂಡುಬಂದಾಗ ನಾವು ಅಡುಗೆ ಮನೆಯಲ್ಲಿರುವ ಮಸಾಲೆ  ಬಳಸಿ ಔಷಧಿ ಸಿದ್ಧಪಡಿಸ್ತೇವೆ.

ಇಂತಹ ಮಸಾಲೆ (Spice) ಗಳ ಪೈಕಿ ಅಜ್ವೈನ (Ajwain) ಕೂಡ ಒಂದು . ಇದು ರುಚಿಯ ಜೊತೆಗೆ ಆರೋಗ್ಯ (Health) ಕ್ಕೂ ಬಹಳ ಒಳ್ಳೆಯದು. ಇದರಲ್ಲಿ ಪ್ರೊಟೀನ್, ಫ್ಯಾಟ್, ಮಿನರಲ್, ಕ್ಯಾಲ್ಸಿಯಮ್, ಐರನ್ ಮತ್ತು ನಿಕೋಟಿನ್ ಎಸಿಡ್ ಗಳು ಇರುತ್ತವೆ. ಇದರಲ್ಲಿರುವ ಈ ಎಲ್ಲ ಗುಣಗಳಿಂದ ಅನೇಕ ತರಹದ ಖಾಯಿಲೆಗಳು ದೂರವಾಗುತ್ತದೆ ಮತ್ತು ಜೀರ್ಣಕ್ರಿಯೆ (digestion) ಯು ಕೂಡ ಸರಾಗವಾಗುತ್ತದೆ. ರಾತ್ರಿ ಮಲಗುವ ಮುನ್ನ ಅಜ್ವೈನ ಸೇವಿಸುವುದರಿಂದ ಅನೇಕ ಲಾಭಗಳಿವೆ.

ನಿದ್ರೆಯ ಸಮಸ್ಯೆ ದೂರ :  ನಿದ್ರೆ ಮನುಷ್ಯನಿಗೆ ಬಹಳ ಮುಖ್ಯ. ರಾತ್ರಿ ನಿದ್ರೆ ಸರಿಯಾಗಿ ಆಗದಿದ್ದರೆ ಬೆಳಿಗ್ಗೆ ಕೆಲಸ ಮಾಡೋದು ಕಷ್ಟವಾಗುತ್ತದೆ. ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮುನ್ನ ಅಜ್ವೈನ ಸೇವಿಸಬೇಕು. ಇದರಿಂದ ನಿದ್ದೆ ಚೆನ್ನಾಗಿ ಬರುತ್ತದೆ ಮತ್ತು ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ.

ಸೊಂಟ ನೋವಿಗೆ ಇದು ಮದ್ದು : ಕಚೇರಿ ಕೆಲಸಕ್ಕೆ ಹೋಗುವವರು, ಮನೆ ಕೆಲಸ ಮಾಡುವವರು ಹೀಗೆ ಎಲ್ಲರಿಗೂ ಈಗ ಸೊಂಟನೋವು ಸಾಮಾನ್ಯ ಸಮಸ್ಯೆಯಾಗಿದೆ. ಸೊಂಟ ನೋವಿನ ಸಮಸ್ಯೆ ಇರುವವರು ರಾತ್ರಿ ಮಲಗುವಾಗ 1 ಚಮಚ ಬೇಯಿಸಿದ ಅಜ್ವೈನ ತಿಂದು ಒಂದು ಲೋಟ ಬಿಸಿನೀರನ್ನು ಕುಡಿಯಬೇಕು. ಅಜ್ವೈನ ಪೇಸ್ಟ್ ಅನ್ನು ತಯಾರಿಸಿ ಸೊಂಟದ ಭಾಗಕ್ಕೆ ಹಚ್ಚುವುದರಿಂದಲೂ ಸೊಂಟ ನೋವು ಶಮನವಾಗುತ್ತೆ.

ಶೀತ – ನೆಗಡಿಗೆ ರಾಮಬಾಣ ಅಜ್ವೈನ : ನೆಗಡಿಯ ಸಮಸ್ಯೆಯಿಂದ ಬಳಲುತ್ತಿರುವವರು ಒಂದು ಚಮಚ ಅಜ್ವೈನ ಮತ್ತು ಸ್ವಲ್ಪ ಕಪ್ಪು ಉಪ್ಪನ್ನು ಸೇರಿಸಿ ತಿನ್ನಬೇಕು. ನಂತರ ಒಂದು ಲೋಟ ಬಿಸಿಯಾದ ನೀರನ್ನು ಕುಡಿಯಬೇಕು. ಅಜ್ವೈನ ಈ ರೀತಿ ತಿನ್ನುವುದರಿಂದ ಶೀತ, ನೆಗಡಿಯಿಂದ ಮುಕ್ತಿ ಪಡೆಯಬಹುದು.

ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತೆ ಮೂಲಂಗಿ ಎಲೆ ಜ್ಯೂಸ್

ಮಲಬದ್ಧತೆ ಮಾಯ : ಇತ್ತೀಚಿನ ಕೆಟ್ಟ ಆಹಾರ ಕ್ರಮದಿಂದ ಹಲವರು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳು ಸರಿಯಾಗಿ ಆಹಾರ ಸೇವಿಸದೆ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾರೆ. ಮಲಬದ್ಧತೆಯ ಸಮಸ್ಯೆಗೆ ಅಜ್ವೈನ ತುಂಬ ಒಳ್ಳೆಯದು. ಒಂದು ಚಮಚ ಅಜ್ವೈನವನ್ನು ಬಾಣಲೆಯಲ್ಲಿ ಹುರಿಯಬೇಕು. ರಾತ್ರಿ ಮಲಗುವ ಮುನ್ನ ಹುರಿದ ಅಜ್ವೈನ ಜಗಿದು ತಿಂದು ಒಂದು ಲೋಟ ಬಿಸಿಯಾದ ನೀರನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆ ಕಡಿಮೆಯಾಗುತ್ತದೆ.

ಅತಿಸಾರಕ್ಕೂ ಅಜ್ವೈನ ಬಳಸಿ : ಅತಿಸಾರ ಕೂಡ ಅಜ್ವೈನದಿಂದ ಕಡಿಮೆಯಾಗುತ್ತೆ. ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಒಂದು ಚಮಚ ಅಜ್ವೈನವನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತ್ರ ಅಜ್ವೈನದ ನೀರನ್ನು ಕುಡಿಯಿರಿ. ಇದರಿಂದ ಅತಿಸಾರದ ತೊಂದರೆ ಮತ್ತು ಹೊಟ್ಟೆಯ ತೊಂದರೆ ದೂರವಾಗುತ್ತೆ.

ಕೀಲು ನೋವು ಶಮನ : ನಿಮ್ಮ ಕೀಲುಗಳಲ್ಲಿ ನೋವಿದ್ದರೆ ಬಿಸಿಯಾದ ನೀರಿಗೆ ಒಂದು ಚಮಚ ಅಜ್ವೈನ ಬೆರೆಸಿ ಕುಡಿಯಿರಿ. ಇದರಿಂದ ಕೀಲುನೋವು ದೂರವಾಗುತ್ತೆ.

ಆರೋಗ್ಯಕ್ಕೆ ಫ್ರುಟ್ಸ್ ಹೆಲ್ದೀ ನಿಜ, ಆದ್ರೆ ಬ್ರೇಕ್‌ಫಾಸ್ಟ್‌ಗೆ ಹಣ್ಣು ತಿನ್ನೋ ಅಭ್ಯಾಸ ಒಳ್ಳೇದಾ ?

ಈ ತೊಂದರೆಗೂ ಅಜ್ವೈನ ಬಳಸಬಹುದು : ಮುಟ್ಟಿನ ತೊಂದರೆ ಇರುವವರಿಗೆ ಕೂಡ ಅಜ್ವೈನ ಒಳ್ಳೆಯ ಪ್ರಭಾವ ಬೀರುತ್ತೆ. ಅಜ್ವೈನ ನೀರನ್ನು ಕುಡಿಯುವುದರಿಂದ ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಬಹುದು. ಇದು ಚಯಾಪಚಯ ಕ್ರಿಯೆಯನ್ನು ಕೂಡ ಬಲಪಡಿಸುತ್ತದೆ. ತೂಕ ಇಳಿಸಲು, ಬಾಯಿಯ ದುರ್ವಾಸನೆ ಹೋಗಲಾಡಿಸಲು, ತಲೆ ನೋವಿನಿಂದ ಬಳಲುತ್ತಿರುವವರು ಕೂಡ ಅಜ್ವೈನ ಬಳಕೆ ಮಾಡಬಹುದು.  

Follow Us:
Download App:
  • android
  • ios