Asianet Suvarna News Asianet Suvarna News

ಮಧುಮೇಹ ಕಾಡ್ಬಾರ್ದು ಅಂದ್ರೆ ಕೆಫೀನ್‌ ಮುಕ್ತ ಚಿಕೋರಿ ಕಾಫಿ ಕುಡೀರಿ

ಅನೇಕರಿಗೆ ಬೆಳಗ್ಗೆ ಒಂದು ಕಪ್ ಬಿಸಿ ಕಾಫಿಯು ದಿನದ ಕಿಕ್‌ಸ್ಟಾರ್ಟ್‌ಗೆ ಅತೀ ಅಗತ್ಯವಾಗಿದೆ. ಆದ್ರೆ ಕೆಫೀನ್‌ಯುಕ್ತ ಕಾಫಿ ಕುಡಿಯೋದ್ರಿಂದ ಕಾಡೋ ಹೆಲ್ತ್ ಪ್ರಾಬ್ಲೆಮ್ ಒಂದೆರಡಲ್ಲ. ಆದ್ರೆ ಈ ಸ್ಪೆಷಲ್‌ ಕೆಫೀನ್ ಮುಕ್ತ ಕಾಫಿ ಕುಡಿಯೋದ್ರಿಂದ ಆರೋಗ್ಯ ಸಮಸ್ಯೆಗಳು ಕಾಡೋದೆ ಇಲ್ಲ. 

Health Benefits Of Drinking This Lesser Known Beverage Vin
Author
Bengaluru, First Published Aug 23, 2022, 10:49 AM IST

ಬೆಳಗ್ಗೆ ಏಳುವಾಗ ಕೆಲವರಿಗೆ ಬೆಡ್ ಕಾಫಿ ಬೇಕೇ ಬೇಕು. ಒಂದು ದಿನ ಕಾಫಿ ಕುಡಿದಿಲ್ಲ ಎಂದರೆ ಸಾಕು ದಿವಿಡೀ ತಲೆನೋವು ಹಾಗೂ ಮೂಡ್ ಅಪ್ಸೆಟ್ ಆಗುತ್ತೆ. ಯಂಗ್ ಜನರೇಷನ್‌ನ ಬಹುತೇಕ ಮಂದಿ ಕಾಫಿಗೆ ಅಡಿಕ್ಟ್ ಆಗಿದ್ದಾರೆ. ಕಾಫಿ ಕುಡಿದರೆ ಅದೇನೊ ಒಂಥರಾ ರಿಲಾಕ್ಸ್ ಆಗುತ್ತೆ. ಜೊತೆಗೆ ಅತಿಯಾದ ಒತ್ತಡದಿಂದ ಬ್ಲಾಕ್ ಆಗಿದ್ದ ಮೈಂಡ್ ರೀಫ್ರೆಶ್ ಆಗಿ ಕೆಲಸ ಮಾಡಲಾರಂಭಿಸುತ್ತೆ ಅಂತ ಹೇಳ್ತಾರೆ. ಆದ್ರೆ ಕೆಫೀನ್‌ಯುಕ್ತ ಕಾಫಿ ಆರೋಗ್ಯದ ಮೇಲೆ ಬೀರೋ ಕೆಟ್ಟ ಪರಿಣಾಮ ಒಂದೆರಡಲ್ಲ. ಆರೋಗ್ಯಕ್ಕಾಗೋ ತೊಂದ್ರೆಯ ಬಗ್ಗೆ ಗೊತ್ತಿದ್ರೂ ಕಾಫಿ ಕುಡಿಯೋ ಅಭ್ಯಾಸ ಬಿಡೋಕಾಗಲ್ಲ ಅನ್ನೋರು ಈ ಸ್ಪೆಷಲ್ ಕಾಫಿ ಟ್ರೈ ಮಾಡ್ಬೋದು. ಅದುವೇ ಕೆಫೀನ್ ಮುಕ್ತ ಚಿಕೋರಿ ಕಾಫಿ. 

ಚಿಕೋರಿ ಕಾಫಿಯು, ಸಾದಾ ಕಾಫಿಯ ರುಚಿಯನ್ನೇ ಹೋಲುತ್ತದೆ. ಹೀಗಾಗಿ ಇದು ಕಾಫಿಗೆ ಆರೋಗ್ಯಕರ ಪರ್ಯಾಯವಾಗಿದೆ. ಚಿಕೋರಿ ಸಸ್ಯದ ಬೇರುಗಳನ್ನು ಹುರಿದು, ರುಬ್ಬುವ ಮತ್ತು ಕುದಿಸುವ ಮೂಲಕ ಇದನ್ನು ಸಸ್ಯದಿಂದ ತಯಾರಿಸಲಾಗುತ್ತದೆ. ಹೀಗಾಗಿಯೇ ಚಿಕೋರಿ ಕಾಫಿಯಲ್ಲಿ ಹಲವಾರು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳ ಉಪಸ್ಥಿತಿಯಿದ್ದು, ಹಲವು ಆರೋಗ್ಯ ಪ್ರಯೋಜನ (Health benefits) ಗಳನ್ನು ಹೊಂದಿದೆ. ಅಲ್ಲದೆ, ಚಿಕೋರಿ ಕಾಫಿ ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ. ತೂಕವನ್ನು ಕಳೆದುಕೊಳ್ಳಲು ಯತ್ನಿಸುತ್ತಿರುವವರು ಇದನ್ನು ಕುಡಿಯೋದು ತುಂಬಾ ಒಳ್ಳೇದು. 

ಕಾಫಿ ಅಡಿಕ್ಷನ್ ಇದ್ಯಾ? ಕಣ್ಣೂ ಹೋಗಬಹುದು ಹುಷಾರು!

ಕೆಫೀನ್‌ ಮುಕ್ತ ಚಿಕೋರಿ ಕಾಫಿಯ ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆಗೆ ಬೆಸ್ಟ್‌: ಚಿಕೋರಿ ಕಾಫಿ ನಿಮ್ಮ ಜೀರ್ಣಕ್ರಿಯೆಯ (Digestion) ಆರೋಗ್ಯಕ್ಕೆ ಒಳ್ಳೆಯದು. ಚಿಕೋರಿ ಸಸ್ಯದ ಬೇರು ಫೈಬರ್‌ನ ಉತ್ತಮ ಮೂಲವಾಗಿದೆ ಮತ್ತು ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಈ ಸ್ಪೆಷಲ್ ಪಾನೀಯ ಕರುಳಿನ ಸೂಕ್ಷ್ಮಜೀವಿಗಳ ಆರೋಗ್ಯವನ್ನು ಸುಧಾರಿಸುತ್ತದೆ, ನಂತರ ಒಟ್ಟಾರೆ ಕರುಳಿನ ಆರೋಗ್ಯ (Gut health)ವನ್ನು ಸುಧಾರಿಸಲು ಕೆಲಸ ಮಾಡುತ್ತದೆ.

ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತೆ: ಕೆಫೀನ್‌ ಮುಕ್ತ ಚಿಕೋರಿ ಕಾಫಿ ಸೇವನೆಯ ಅಭ್ಯಾಸ, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೀರ್ಘಕಾಲದ ಉರಿಯೂತವು ದೇಹಕ್ಕೆ ಹಾನಿಕಾರಕವಾಗಿದೆ ಏಕೆಂದರೆ ಇದು ಮಧುಮೇಹ (Diabetes) ಅಥವಾ ಹೃದ್ರೋಗದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಚಿಕೋರಿ ಸಸ್ಯದ ಮೂಲವು ದೇಹದಲ್ಲಿನ ಅಂತಹ ಉರಿಯೂತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದಾಗಿ ರೋಗಗಳ (Disease) ಅಪಾಯವನ್ನು ಕಡಿಮೆ ಮಾಡುತ್ತದೆ.

ಕಾಫಿ addiction ನಿಮಗಿದ್ಯಾ? ಚಟ ಬಿಟ್ಟು ಬಿಡಿ

ವಾಕರಿಗೆ, ತಲೆ ಸುತ್ತವ ಸಮಸ್ಯೆಯಿರಲ್ಲ: ಚಿಕೋರಿ ಕಾಫಿ ಕೆಫೀನ್ ಮುಕ್ತವಾಗಿದೆ. ಈ ಪಾನೀಯದಲ್ಲಿ ಕೆಫೀನ್ ಇರುವುದಿಲ್ಲ ಮತ್ತು ಇದನ್ನು ಕುಡಿಯುವುದ ಕೆಫೀನ್ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಫೀನ್‌ನ ಅತಿಯಾದ ಸೇವನೆಯು ನಿಮಗೆ ಕಿರಿಕಿರಿ, ವಾಕರಿಕೆ ಮತ್ತು ಇತರ ಹಲವಾರು ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು.

ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ: ಸ್ಪೆಷಲ್ ಕಾಫಿ, ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಸ್ಯದ ಬೇರುಗಳು ಇನ್ಯುಲಿನ್ ಅನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ಸುಲಿನ್ ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಅಂತಿಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಒಟ್ನಲ್ಲಿ ಆರೋಗ್ಯ ಹಾಳು ಮಾಡೋ ಕೆಫೀನ್‌ಯುಕ್ತ ಕುಡಿಯೋ ಬದ್ಲು ಇಂಥಾ ಹೆಲ್ದೀ ಕಾಫಿ ಕುಡಿದ್ರೆ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

Follow Us:
Download App:
  • android
  • ios