Asianet Suvarna News Asianet Suvarna News

ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿದೆ ಜಗತ್ತಿನ ಅತೀ ಉದ್ದದ ಕೋನ್‌ ಐಸ್‌ಕ್ರೀಂ, ಅಬ್ಬಬ್ಬಾ ಇಷ್ಟೊಂದು ಕೆಜಿನಾ?

ಐಸ್‌ಕ್ರೀಂ ಅಂದರೆ ಬಹುತೇಕರಿಗೆ ಇಷ್ಟ. ಕ್ಯಾಂಡಿ, ಕೋನ್, ಕಪ್‌ ಐಸ್‌ಕ್ರೀ ಹೀಗೆ ವೆರೈಟಿ ವೆರೈಟಿ ಐಸ್‌ಕ್ರೀಂನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಗಿನ್ನೆಸ್ ವರ್ಲ್ಡ್‌ ರೆಕಾರ್ಡ್‌ನಲ್ಲಿರೋ ಜಗತ್ತಿನ ದೈತ್ಯ ಐಸ್‌ಕ್ರೀಂ ಬಗ್ಗೆ ನಿಮ್ಗೆ ಗೊತ್ತಿದ್ಯಾ?

Guinness World Records shares throwback to worlds tallest ice cream cone Vin
Author
First Published May 23, 2024, 2:25 PM IST

ಐಸ್‌ಕ್ರೀಂ ಅಂದರೆ ಬಹುತೇಕರಿಗೆ ಇಷ್ಟ. ಕ್ಯಾಂಡಿ, ಕೋನ್, ಕಪ್‌ ಐಸ್‌ಕ್ರೀ ಹೀಗೆ ವೆರೈಟಿ ವೆರೈಟಿ ಐಸ್‌ಕ್ರೀಂನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಜಗತ್ತಿನ ದೈತ್ಯ ಐಸ್‌ಕ್ರೀಂ ಬಗ್ಗೆ ನಿಮ್ಗೆ ಗೊತ್ತಿದ್ಯಾ?  ಇನ್‌ಸ್ಟಾಗ್ರಾಂನಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ಅತಿ ಎತ್ತರದ ಐಸ್ ಕ್ರೀಮ್ ಕೋನ್‌ನ ಥ್ರೋ ಬ್ಯಾಕ್‌ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಥ್ರೋಬ್ಯಾಕ್ ಪೋಸ್ಟ್‌ನಲ್ಲಿ ಜುಲೈ 26, 2015 ರಂದು ನಾರ್ವೆಯ ಕ್ರಿಸ್ಟಿಯಾನ್ಸಾಂಡ್‌ನಲ್ಲಿ ಹೆನ್ನಿಗ್-ಓಲ್ಸೆನ್ ಮತ್ತು ಟ್ರೊಂಡ್ ಎಲ್ ವೊಯೆನ್ ತಯಾರಿಸಿದ 3.08 ಮೀಟರ್ (10 ಅಡಿ ಮತ್ತು 1.26 ಇಂಚುಗಳು) ಎತ್ತರವಾದ ಅತ್ಯಂತ ಎತ್ತರದ ಐಸ್ ಕ್ರೀಮ್ ಕೋನ್‌ನ್ನು ನೋಡಬಹುದು.

ದೇಶದ 'ಐಸ್‌ಕ್ರೀಂ ಮ್ಯಾನ್' ಎಂದೇ ಖ್ಯಾತಿ ಪಡೆದಿದ್ದ ಮಂಗಳೂರು ಮೂಲದ ರಘುನಂದನ್ ಕಾಮತ್ ನಿಧನ

ಇದು ಬರೋಬ್ಬರಿ 60 ಕೆಜಿ ಚಾಕೊಲೇಟ್ ಲೈನಿಂಗ್, 1,080 ಲೀಟರ್ ಐಸ್ ಕ್ರೀಮ್, ಮತ್ತು 40 ಕೆಜಿ ಜಾಮ್‌ನ್ನು ಒಳಗೊಂಡಿದೆ. ಫ್ಯಾಕ್ಟರಿ ಫ್ರೀಜರ್‌ನಲ್ಲಿ ಅಳೆಯಲ್ಪಟ್ಟ ನಂತರ, ಇದನ್ನು ಹೆಲಿಕಾಪ್ಟರ್‌ನಲ್ಲಿ ಶಿಫ್ಟ್ ಮಾಡಲಾಯಿತು. ಕ್ರಿಸ್ಟಿಯಾನ್ಸಾಂಡ್ ಹಾರ್ಬರ್‌ನಲ್ಲಿ ನಡೆದ ಟಾಲ್ ಶಿಪ್ಸ್ ರೇಸ್ ಈವೆಂಟ್‌ನಲ್ಲಿ ಈ ಬೃಹತ್ ಕೋನ್‌ನ್ನು ವಿತರಿಸಲಾಯಿತು ಎಂದು ಗಿನ್ನೆಸ್ ವೆಬ್‌ಸೈಟ್ ವರದಿ ಮಾಡಿದೆ. ಈ ವೈರಲ್‌ ವೀಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು, 'ರೆಕಾರ್ಡ್ ಮಾಡಲು ಆಹಾರ ತಯಾರಿಸುವದರಿಂದ ಆಗುವ ಉತ್ತಮ ವಿಷಯವೆಂದರೆ ಅಗತ್ಯವಿರುವವರಿಗೆ ಇದರಿಂದ ಅನುಕೂಲವಾಗುತ್ತದೆ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಉತ್ತಮವಾದ ದಾಖಲೆ. ಇದರಿಂದ ಯಾರಿಲ್ಲವಾದರೂ ಮಕ್ಕಳಾದರೂ ತುಂಬಾ ಖುಷಿ ಪಟ್ಟಿರುವುದು ಖಂಡಿತ' ಎಂದು ಹೊಗಳಿದ್ದಾರೆ.

ತೂಕ ಇಳಿಸೋ ಐಸ್‌ಕ್ರೀಂ ಇದು, ದೀಪಿಕಾ ಪಡುಕೋಣೆ ನೀಡೋ ಫಿಟ್ನೆಸ್ ಟಿಪ್ಸ್ ಇದು

Latest Videos
Follow Us:
Download App:
  • android
  • ios