Asianet Suvarna News Asianet Suvarna News

ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ವಿಶ್ವದ ಬೆಸ್ಟ್‌ ಸಿಂಗಲ್‌ ಮಾಲ್ಟ್‌ ವಿಸ್ಕಿ ಗೌರವ ಪಡೆದ ಭಾರತದ Godawan Century!

Diageo India Godawan Century ಪ್ರತಿಷ್ಠಿತ ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ಗೋಡಾವನ್ಸಿಂಗಲ್ ಮಾಲ್ಟ್ ವಿಸ್ಕಿ, ಭರ್ಜರಿ 96 ಅಂಕಗಳನ್ನು ಗಳಿಸುವ ಮೂಲಕ ವಿಶ್ವದ ಅತ್ಯುತ್ತಮ ಭಾರತೀಯ ಪ್ರಾಡಕ್ಟ್‌ ಎನ್ನುವ ಹಿರಿಮೆ ಸಂಪಾದಿಸಿದೆ.

Godawan Single Malt Whisky Clinched Top spot in 2024 London Spirits Competition san
Author
First Published Apr 20, 2024, 2:57 PM IST

ನವದೆಹಲಿ (ಏ.20): 2024 ರ ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ಸಿಂಗಲ್ ಮಾಲ್ಟ್ ವಿಸ್ಕಿ ವಿಭಾಗದಲ್ಲಿ ಭಾರತದ ಸಿಂಗಲ್ ಮಾಲ್ಟ್ ವಿಸ್ಕಿಯಾದ ಗೋಡಾವನ್ ಸೆಂಚುರಿ ಅತ್ಯಧಿಕ ಸ್ಕೋರ್ ಗಳಿಸಿದೆ. ಆ ಮೂಲಕ ಭಾರತದ ಟಾಪ್ ಸ್ಕೋರಿಂಗ್ ಉತ್ಪನ್ನವಾಗಿ ಮನ್ನಣೆ ಸಂಪಾದಿಸಿದೆ. ಮತ್ತೊಮ್ಮೆ, 2024 ರ ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯ ಫಲಿತಾಂಶಗಳು ಗುಣಮಟ್ಟ, ಮೌಲ್ಯ ಮತ್ತು ಪ್ಯಾಕೇಜಿಂಗ್‌ನಂತಹ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾದ ವಿಶ್ವದಾದ್ಯಂತ ಅತ್ಯುತ್ತಮವಾದ ಸ್ಪಿರಿಟ್‌ಗಳನ್ನು ಎತ್ತಿ ತೋರಿಸಿದೆ. ಗೋಡಾವನ್ 100 ಅಂಕಗಳ ಪೈಕಿ 96 ಅಂಕಗಳನ್ನು ಸಂಪಾದನೆ ಮಾಡುವ ಮೂಲಕ ಜಾಗತಿಕವಾಗಿ ಅಗ್ರ ಸಿಂಗಲ್‌ ಮಾಲ್ಟ್‌ ವಿಸ್ಕಿ ಎನ್ನುವ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಮಾಡಿಕೊಂಡಿದೆ. ಲಂಡನ್‌ ಸ್ಪಿರಿಟ್ಸ್ ಕಾಂಪಿಟೇಷನ್‌ ನೀಡಿರುವ ಟೇಸ್ಟಿಂಗ್‌ ನೋಟ್‌ಗಳ ಪ್ರಕಾರ,  ಗೋಡಾವನ್ ಸೆಂಚುರಿ ಅತ್ಯಂತ ಹಗುರವಾದ, ಹಾಗೂ ಶಾರ್ಟ್‌ ಫಿನಿಶ್‌ನ ಸ್ವಾದವನ್ನು ನೀಡುತ್ತದೆ. ಇದು ಕ್ಯಾರಮೆಲ್, ಚಾರ್ಕೋಲ್‌, ದಾಲ್ಚಿನ್ನಿ ಮತ್ತು ಸೋಂಪುಗಳ ಸೂಕ್ಷ್ಮ ಅಂಶಗಳು ಇದರಲ್ಲಿ ಕಾಣಿಸಿದ್ದು ವಿಸ್ಕಿ ಮಧುರಾನುಭೂತಿಯನ್ನು ನೀಡುತ್ತದೆ ಎಂದು ತಿಳಿಸಿದೆ.

ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ, ಎಲ್ಲಾ ರೀತಿಯ ಸ್ಪಿರಿಟ್‌ಗಳನ್ನು ಗ್ರಾಹಕರ ದೃಷ್ಟಿಕೋನಕ್ಕೆ ಅನುಗುಣವಾಗಿ  ನಿಖರವಾಗಿ ನಿರ್ಣಯಿಸಲಾಗುತ್ತದೆ. ಅದರಲ್ಲೂ ಮೂರು ಪ್ರಮುಖ ಮಾನದಂಡಗಳ ಮೇಲೆ ಇವುಗಳ ವರ್ಗೀಕರಣವಾಗುತ್ತದೆ. ಗುಣಮಟ್ಟ, ಮೌಲ್ಯ ಮತ್ತು ಪ್ಯಾಕೇಜಿಂಗ್. ಪದಕ ಗೆಲ್ಲಲೂ ಈ ಮೂರು ವಿಭಾಗಗಳಲ್ಲಿ ಸ್ಪಿರಿಟ್‌ ಉತ್ತಮ ಅಂಕಗಳನ್ನು ಗಳಿಸಬೇಕು. ಹೆಚ್ಚಿನ ಅಂಕ ಸಂಪಾದಿಸಿದ ವಿಸ್ಕಿಗೆ ಜಾಗತಿಕ ಮನ್ನಣೆ ಸಿಗುತ್ತದೆ. ಡಿಯಾಜಿಯೊ ಇಂಡಿಯಾದಿಂದ ರಚಿಸಲಾಗಿರುವ, ಗೋಡಾವನ್  ಸಿಂಗಲ್ ಮಾಲ್ಟ್ ವಿಸ್ಕಿಯು ಅದರ ಮೂಲ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಸುಸ್ಥಿರತೆಯನ್ನು ಉತ್ತೇಜಿಸುವ ಹಾಗೂ ಕೊರತೆಯಲ್ಲೂ ಸೌಂದರ್ಯವನ್ನು ಕಂಡುಕೊಳ್ಳುವ ರಾಜಸ್ಥಾನಿ ನೀತಿಯಿಂದ ಸ್ಫೂರ್ತಿ ಪಡೆದಿರುವ ಗೋಡಾವನ್ ತನ್ನ ಉತ್ಪಾದನಾ ಪ್ರಕ್ರಿಯೆಯಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡಿದೆ.

ಈ ಅಪರೂಪದ ವಿಸ್ಕಿಯನ್ನು ವಿಶೇಷವಾಗಿ ಆಯ್ಕೆಮಾಡಿದ ಪೀಪಾಯಿಗಳಲ್ಲಿ ಪಕ್ವಗೊಳಿಸಲಾಗುತ್ತದೆ, ಇದನ್ನು ವಿಸ್ಕಿಯ ಲುಕ್‌ಅನ್ನು ಇನ್ನಷ್ಟು ಹೆಚ್ಚಿಸಲು ಭಾರತೀಯ ಸಸ್ಯಶಾಸ್ತ್ರದ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ದೇಶದ ಪ್ರಮುಖ ಬೆವರೇಜ್‌ ಕಂಪನಿಯಾದ ಡಿಯಾಜಿಯೊ ಇಂಡಿಯಾದಿಂದ ಗೊಡಾವನ್ 100 ಅನ್ನು ಪ್ರಸ್ತುತಪಡಿಸುತ್ತದೆ, ಇದು ಕೇವಲ 100 ಬಾಟಲಿಗಳನ್ನು ಒಳಗೊಂಡಿರುವ ಬೆಸ್ಪೋಕ್ ಕಲೆಕ್ಟರ್‌ಗಳ ಆವೃತ್ತಿಯ ಸಿಂಗಲ್ ಮಾಲ್ಟ್ ಆಗಿದೆ. ಈ ವಿಶೇಷ ಬಿಡುಗಡೆಯು ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗೆ ಗೌರವವನ್ನು ಸಲ್ಲಿಸುತ್ತದೆ, ಇದನ್ನು ಪ್ರೀತಿಯಿಂದ ಗೊಡಾವನ್ ಎಂದು ಕರೆಯಲಾಗುತ್ತದೆ.

ಜಗತ್ತಿನಲ್ಲಿಯೇ ಅತಿವೇಗವಾಗಿ ಬೆಳೆಯತ್ತಿರುವ Single Malt ವಿಸ್ಕಿ ಎನ್ನುವ ದಾಖಲೆ ಬರೆದ ಭಾರತದ Indri

ಗೊಡಾವನ್ ಸಿಂಗಲ್ ಮಾಲ್ಟ್ ರಿಚ್ ಮತ್ತು ರೌಂಡೆಡ್ ಆರ್ಟಿಸನ್ ವಿಸ್ಕಿ ಮತ್ತು ಗೋಡಾವನ್ ಸಿಂಗಲ್ ಮಾಲ್ಟ್ ಫ್ರೂಟ್ ಮತ್ತು ಸ್ಪೈಸ್ ಆರ್ಟಿಸನ್ ವಿಸ್ಕಿ ಎರಡೂ 2024 ರ ಲಂಡನ್ ಸ್ಪಿರಿಟ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡಿವೆ.

ವಿಸ್ಕಿ ಮಾರಾಟದಲ್ಲೂ 'ಆತ್ಮನಿರ್ಭರ', ಜಾಗತಿಕ ದೈತ್ಯ ವಿಸ್ಕಿ ಕಂಪನಿಗಳ ಮೀರಿಸಿದ ಮೇಡ್‌ ಇನ್‌ ಇಂಡಿಯಾ ಲಿಕ್ಕರ್ಸ್‌!

Follow Us:
Download App:
  • android
  • ios