ಈ ಮಧ್ಯೆ ಪುಟ್ಟ ಬಾಲಕಿಯೊಬ್ಬಳು ಗಣೇಶನ ವಿಗ್ರಹವನ್ನು ತಬ್ಬಿಕೊಂಡು ಜೋರಾಗಿ ಅಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ನೋಡುಗರನ್ನು ಇದು ಭಾವುಕಗೊಳಿಸಿದೆ.

ಗಣೇಶನ ಹಬ್ಬವನ್ನು ಗಣೇಶ ಚತುರ್ಥಿಯಿಂದ ಆರಂಭವಾಗಿ ಸುಮಾರು ಒಂದು ತಿಂಗಳ ಕಾಲ ಜನ ದೇಶಾದ್ಯಂತ ಆಚರಿಸುತ್ತಾರೆ. ಬಹುತೇಕ ಮನೆಗಳು ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು ಕೂರಿಸಿ ಬಹಳ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಜನ ಆಚರಿಸುತ್ತಾರೆ. ಯುವಕರಂತು ಸಂಭ್ರಮಿಸಲು ಖುಷಿ ಪಡಲು ಇದೊಂದು ಕಾರಣವೆಂದು ಸಖತ್ ಆಗಿ ಡಾನ್ಸ್ ಮಾಡುತ್ತಾ ಕೂರಿಸಿದ ಗಣೇಶನನ್ನು ಕಳುಹಿಸಿಕೊಡುತ್ತಾರೆ. ಆದರೆ ಗಣೇಶನನ್ನು ವಾಪಸ್‌ ಕಳುಹಿಸಿ ಕೊಡುವ ವೇಳೆ ಬಹಳಷ್ಟು ಜನ ತಮ್ಮ ಮನೆ ಮಗನನ್ನು ಕಳುಹಿಸಿ ಕೊಡುವಂತೆ ಭಾವುಕವಾಗುವುದನ್ನು ನೋಡಿದ್ದೇವೆ.

ಈ ಮಧ್ಯೆ ಪುಟ್ಟ ಬಾಲಕಿಯೊಬ್ಬಳು ಗಣೇಶನ ವಿಗ್ರಹವನ್ನು ತಬ್ಬಿಕೊಂಡು ಜೋರಾಗಿ ಅಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ನೋಡುಗರನ್ನು ಇದು ಭಾವುಕಗೊಳಿಸಿದೆ. ಬಹುತೇಕರು ಈ ದೃಶ್ಯವನ್ನು ನೋಡಿ ತಾವು ಕೂಡ ಭಾವುಕರಾಗಿದ್ದಾರೆ. ಗಣೇಶನನ್ನು (Loard Ganesh) ಕಳುಹಿಸಿ ಕೊಡುವ ಹಿಂದಿನ ಭಾವುಕತೆಯನ್ನು ಜನ ಅರ್ಥಮಾಡಿಕೊಂಡಿದ್ದಾರೆ.

Scroll to load tweet…


ಬಹುತೇಕರು ಭಾದ್ರಪದ ಶುಕ್ಲದ (Bhadrapada shukla) ಚೌತಿಯಂದು ಕೂರಿಸಿದ ಗಣೇಶನನ್ನು 10 ದಿನದ ಬಳಿಕ ಅನಂತ ಚತುರ್ದಶಿಯಂದು (Anantha chaturdasi) ಹರಿಯುವ ನೀರಿನಲ್ಲಿ ಬಿಟ್ಟಿಬಿಡುತ್ತಾರೆ. ಕೆಲವರು ಒಂದೇ ದಿನ ಪೂಜೆ ಮಾಡಿದರೆ ಮತ್ತೆ ಕೆಲವರು 10 ದಿನ ಪೂಜೆ ಮಾಡುತ್ತಾರೆ ಮತ್ತೆ ಕೆಲವೆಡೆ ತಿಂಗಳ ಕಾಲವೂ ಪೂಜೆ ಮಾಡುತ್ತಾರೆ. ಈ ಮಧ್ಯೆ ಮನೆಯೊಂದರಲ್ಲಿ ಕೂಡಿಸಿದ್ದ ಗಣೇಶನನ್ನು ಅನಂತ ಚತುರ್ದಶಿ ದಿನವಾದ ನಿನ್ನೆ ಕಳುಹಿಸಿಕೊಡಲು ಕುಟುಂಬದವರು ಸಿದ್ಧರಾಗಿದ್ದು, ಈ ವೇಳೆ ಗಣೇಶನನ್ನು ಕಳುಹಿಸಿಕೊಡಲು ಒಪ್ಪದ ಪುಟ್ಟ ಬಾಲಕಿಯೊಬ್ಬಳು ಗಣೇಶ ಮೂರ್ತಿಯನ್ನು (Ganesha Idol) ತಬ್ಬಿಕೊಂಡು ಜೋರಾಗಿ ಕಳುಹಿಸಿ ಕೊಡುವುದು ಬೇಡ ಎಂದು ಅಳುತ್ತಿರುವ ವಿಡಿಯೋವೊಂದು ಎಲ್ಲರನ್ನು ಭಾವುಕವಾಗಿಸಿದೆ.

View post on Instagram

ಕರೀನಾ ಕಪೂರ್ ಖಾನ್ ಮನೆಯಲ್ಲಿ ಗಣೇಶ ಸಂಭ್ರಮ: ಮೋದಕ ಮೇಲೆಯೇ ಪುತ್ರನ ಕಣ್ಣು

ರಾಮೇಶ್ವರ್ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಗಣೇಶ ಹೋಗುವುದು ಬೇಡ ಎಂದು ಮಗು ಗಣೇಶನನ್ನು ಹಿಡಿದುಕೊಂಡು ಜೋರಾಗಿ ಅಳುತ್ತಿದ್ದಾಳೆ. ಈ ವೇಳೆ ಅಲ್ಲೇ ಇರುವ ಅನೇಕರು ಗಣಪತಿ ಅವನ ಮನೆಗೆ ಹೋಗುತ್ತಿದ್ದಾನೆ. ಮುಂದಿನ ವರ್ಷ ಬರುತ್ತಾನೆ ಎಂದು ಹೇಳಿ ಬಾಲಕಿಯನ್ನು ಸಂತೈಸಲು ನೋಡುತ್ತಾರೆ. ಆದರೂ ಬಾಲಕಿ ಅಳು ನಿಲ್ಲಿಸುವುದಿಲ್ಲ. ಗಣೇಶನನ್ನು ಕಳುಹಿಸುವುದು ಬೇಡ ಎಂದು ಅಳುತ್ತಾಳೆ. ಕೊನೆಗೂ ಆಕೆಯನ್ನು ಗಣೇಶನ ಮೂರ್ತಿ ಸಮೀಪದಿಂದ ಕರೆದೊಯ್ಯುವಲ್ಲಿ ಆಕೆಯ ಪೋಷಕರು ಯಶಸ್ವಿಯಾಗುತ್ತಾರೆ. ಈ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. 

ಗಣೇಶನ ಮೆರವಣಿಗೆಯಲ್ಲಿ ಅಲ್ಲು ಅರ್ಜುನ್; ಮಗಳನ್ನು ಎತ್ತಿಕೊಂಡೇ ಕುಣಿದ 'ಪುಷ್ಪ' ಸ್ಟಾರ್

ಈ ವಿಡಿಯೋ ನೋಡಿದವರು ಮಗುವಿನದ್ದು ಅತ್ಯಂತ ಶುದ್ಧವಾದ ಭಕ್ತಿ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಅತ್ಯಂತ ಮುದ್ದಾದ ವಿಡಿಯೋ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಮಗೂ ಇದೇ ರೀತಿಯ ಅನುಭವ ಆಗಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.