'ಬ್ರಾಹ್ಮಿಣ್ಮ್ಸ್ ಕುಕ್ಕೀಸ್' ಸಿದ್ಧ ಮಾಡಿದ ಬೇಕರಿಗೆ ನೆಟ್ಟಿಗರ ಟಾಂಗ್!
ಉಪನಯನ ಕಾರ್ಯಕ್ರಮಗಳಿಗೆಂದೇ ವಿಶೇಷವಾಗಿ ''ಬ್ರಾಹ್ಮಿಣ್ಮ್ಸ್ ಕುಕ್ಕೀಸ್' ಸಿದ್ಧ ಮಾಡಿದ್ದ ಫ್ರೆಡ್ಡೀಸ್ ಬೇಕಿಂಗ್ ಸ್ಟುಡಿಯೋ ವಿರುದ್ಧ ನೆಟಿಜನ್‌ಗಳಿ ಕಿಡಿಕಾರಿದ್ದಾರೆ. ಖಾದ್ಯಗಳಲ್ಲೂ ಜಾತಿ ತಂದಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು (ಜ.31): ರಾಜಧಾನಿಯಲ್ಲಿ ಶಂಕರಮಠ, ಚಾಮರಾಜಪೇಟೆ, ಬಸವನಗುಡಿ ದಾರಿಯಲ್ಲಿ ಒಂದು ಸುತ್ತು ಹಾಕಿದ್ರೆ, ಎಷ್ಟೆಲ್ಲಾ ಬ್ರಾಹ್ಮಿಣ್ಸ್ ತಟ್ಟೆ ಇಡ್ಲಿಗಳು, ಅಯ್ಯಂಗಾರ್ ಬೇಕರಿಗಳು ಕಾಣಸಿಗುತ್ತದೆ. ಆದರೆ, ಇಲ್ಲೊಂದು ಕಡೆ ಬೇಕರಿಯೊಂದು ತನ್ನ ಖಾದ್ಯಕ್ಕೆ 'ಬ್ರಾಹ್ಮಿಣ್ಮ್ಸ್ ಕುಕ್ಕೀಸ್' ಎಂದು ಹೆಸರಿಟ್ಟಿದ್ದೇ ತಪ್ಪಾಗಿದೆ. ತಿನ್ನುವ ಖಾದ್ಯಗಳಲ್ಲಿ ಜಾತಿಯನ್ನು ತಂದಿದ್ದೇಕೆ ಎಂದು ಬೇಕರಿ ವಿರುದ್ಧವೇ ಸೋಶಿಯಲ್ ಮೀಡಿಯಾಗಳಲ್ಲಿ ಕಿಡಿಕಾರಿದ್ದಾರೆ. ಉಪನಯನ ಆಚರಣೆಯನ್ನು ಹಿಂದೂ ಬ್ರಾಹ್ಮಣ ಕುಟುಂಬಗಳಲ್ಲಿ ಮಹತ್ವದ ಆಚರಣೆ ಎಂದು ಪರಿಗಣಿಸಲಾಗಿದೆ. ಈ ಸಮಾರಂಭದ ಭಾಗವಾಗಿ, ಬ್ರಾಹ್ಮಣ ಪುರುಷರಿಗೆ ಗುರುಗಳಿಂದ ವೇದ ಪಾಠದ ದಾರವನ್ನು ಹಾಕಲಾಗುತ್ತದೆ. ಒಂದು ನಿರ್ದಿಷ್ಟ ರೀತಿಯಲ್ಲಿ ಗಂಟು ಹಾಕಿದ ಪವಿತ್ರ ದಾರವನ್ನು ಎಡ ಭುಜದ ಮೇಲೆ ಇರಿಸುವ ಆಚರಣೆ ನಡೆಯುತ್ತದೆ. ಇದನ್ನು ಜನಿವಾರ ಎಂದು ಕರೆಯುತ್ತಾರೆ ಇತ್ತೀಚೆಗೆ, ಬ್ರಾಹ್ಮಣ ಕುಟುಂಬದ ಉಪನಯನ ಸಮಾರಂಭಕ್ಕಾಗಿ ಬೇಕರಿಯೊಂದು ಕಸ್ಟಮೈಸ್ ಮಾಡಲಾದ (ವ್ಯಕ್ತಿಯ ಅಗತ್ಯಕ್ಕೆ ಅನುಸಾರ) 'ಬ್ರಾಹ್ಮಿಣ್ಮ್ಸ್ ಕುಕ್ಕೀಸ್' ಸಿದ್ಧ ಮಾಡಿತ್ತು. ಈಕುಕ್ಕೀ ಈಗ ವೈರಲ್ ಆಗಿದೆ. ಇದು ಜಾತೀಯತೆಯನ್ನು ಹೇರುವ ಹುನ್ನಾರ. ಖಾದ್ಯಗಳಿಗೆ ಜಾತಿಯ ಹೆಸರನ್ನೇಕೆ ಇಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಫ್ರೆಡ್ಡೀಸ್ ಬೇಕಿಂಡ್ ಸ್ಟುಡಿಯೋ ಇತ್ತೀಚೆಗೆ ಬ್ರಾಹ್ಮಣ ಕುಟುಂಬದ ಉಪನಯನ ಕಾರ್ಯಕ್ರಮಕ್ಕೆ ಕಸ್ಟಮೈಸ್ ಆದ ಬ್ರಾಹ್ಮಿಣ್ಮ್ಸ್ ಕುಕ್ಕೀಸ್' ಸಿದ್ಧ ಮಾಡಿತ್ತು. ಕಸ್ಟಮ್-ನಿರ್ಮಿತ ಕುಕೀಗಳು ಅಂಡಾಕಾರದ ಆಕಾರವನ್ನು ಹೊಂದಿದ್ದು, ತಲೆ ಬೋಳಿಸಿಕೊಂಡ, ಸಣ್ಣ ಜುಟ್ಟನ್ನು ಹೊಂದಿರುವ, ಭುಜದ ಮೇಲೆ ಪವಿತ್ರ ದಾರವನ್ನು ಧರಿಸಿರುವ ಬರಿಯ-ದೇಹದ ಬ್ರಾಹ್ಮಣ ವ್ಯಕ್ತಿಯನ್ನು ಅದರ ಮೇಲೆ ಚಿತ್ರಿಸಲಾಗಿತ್ತು. ಈ ನಡುವೆ ಟ್ವೀಟಿಗರೊಬ್ಬರು (@chippdnailss) ಬೇಕರಿಯ ಪೋಸ್ಟ್ ಅನ್ನು ಟ್ವೀಟ್ ಮಾಡಿದ್ದಾರೆ. ಬೇಕಿಂಗ್ ಸ್ಟುಡಿಯೋ ಈ ಆರ್ಡರ್ ಮೇಘಾ ಮತ್ತು ಅವರ ಕುಟುಂಬಕ್ಕಾಗಿ ಸಿದ್ಧಪಡಿಸಿದ್ದಾಗಿದೆ ಎಂದು ಬರೆದುಕೊಂಡಿತ್ತು.
ಜೆಎನ್‌ಯು ಕ್ಯಾಂಪಸ್‌ನಲ್ಲಿ ಬ್ರಾಹ್ಮಣ ವಿರೋಧಿ ಬರಹ, ವರದಿ ಕೇಳಿದ ಕುಲಪತಿ!
ಫ್ರೆಡ್ಡಿ ಅವರ ಬೇಕಿಂಗ್ ಸ್ಟುಡಿಯೋ ತನ್ನ ಕ್ಯಾಪ್ಶನ್‌ನಲ್ಲಿ ಒಬ್ಬರ ಸಂಪ್ರದಾಯಗಳನ್ನು ಕುಕೀಯಾಗಿ ಪರಿವರ್ತಿಸುವುದು ತಮ್ಮ ನೆಚ್ಚಿನ ಕೆಲಸಗಳಲ್ಲಿ ಒಂದಾಗಿದೆ ಎಂದು ಬಹಿರಂಗಪಡಿಸಿದೆ. ಬೇಕರಿಯು ನೆಟಿಜನ್‌ಗಳಿಗೆ ತಮ್ಮ ಕ್ರೇಜಿಯೆಸ್ಟ್ ಕುಕೀ ಪ್ಲ್ಯಾನ್‌ಗಳನ್ನು ಕಾಮೆಂಟ್ ಮಾಡುವಂತೆ ಹೇಳಿತ್ತು. ಸವಾಲಿನ ಕುಕ್ಕಿಯನ್ನು ತಾವು ಭೇದಿಸುವುದಾಗಿಯೂ ಭರವಸೆ ನೀಡಿತ್ತು.
ಬ್ರಾಹ್ಮಣರ ಟೀಕಿಸೋದು ಕೆಲವರಿಗೆ ಚಟವಾಗಿದೆ: ಬ್ರಾಹ್ಮಣ ಸಂಘಟನೆ ಆಕ್ರೋಶ
ಉಪನಯನ ಸಮಾರಂಭದಲ್ಲಿ ತಮ್ಮ ಗ್ರಾಹಕರೊಬ್ಬರು ಬಂದ ಅತಿಥಿಗಳಿಗೆ ಉಡುಗೊರೆಯಾಗಿ ನೀಡಲು ಬ್ರಾಹ್ಮಣ ಕುಕೀಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಬೇಕರಿ ಮಾಹಿತಿ ನೀಡಿತ್ತು.
ಈ ವೈರಲ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಬ್ರಾಹ್ಮಣ ಕುಕೀಗಳ ಪೋಸ್ಟ್ ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೆಟಿಜನ್‌ಗಳು ಈ ಬ್ರಾಹ್ಮಣ ಕುಕೀ ಮೂಲಕ ಜಾತೀಯತೆಯನ್ನು ಹೇರುತ್ತಿದ್ದಾರೆ ಎಂದು ಹೇಳಿದ್ದರೆ, ಇನ್ನೂ ಕೆಲವರು ಇಂಥ ಕುಕ್ಕಿಗಳನ್ನು ಸಿದ್ಧ ಮಾಡುವುದರಿಂದ ನೀವು ಜಾತೀಯ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಛೀಮಾರಿ ಹಾಕಿದ್ದಾರೆ. ಕೆಲವರು ಇದು ತೆನಾಲಿ ರಾಮನ ರೀತಿ ಕಾಣುತ್ತಿದೆ ಎಂದು ಗೇಲಿ ಮಾಡಿದ್ದಾರೆ. ಇನ್ನೂ ಕೆಲವರು ಇದನ್ನು ತಿನ್ನುವ ಮುನ್ನ ಹವನವನ್ನು ಮಾಡಬೇಕಾಗಬಹುದು ಎಂದು ಹೇಳಿದ್ದಾರೆ.