ಮಂಕಿಪಾಕ್ಸ್ ಸೋಂಕು ತಗುಲುವ ಭಯಾನ ? ದಿನಾ ಮೊಟ್ಟೆ, ಪಪ್ಪಾಯಿ ತಿನ್ನಿ
ಪ್ರಪಂಚಾದ್ಯಂತ ಮಂಕಿಪಾಕ್ಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಹಲವು ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಹೀಗಿರುವಾಗ್ ಮಂಕಿಪಾಕ್ಸ್ ಸೋಂಕು ತಗುಲದಂತೆ, ಸೋಂಕು ತಗುಲಿದರೆ ಶೀಘ್ರ ಚೇತರಿಸಿಕೊಳ್ಳಲು ನೆರವಾಗುವ ಆಹಾರಗಳು ಯಾವುದೆಂದು ತಿಳಿಯೋಣ.
ಕೋವಿಡ್ ಮೂರು ಅಲೆಗಳ ನಂತರ, ಮಂಕಿಪಾಕ್ಸ್ ವೈರಸ್ ಹಠಾತ್ ಜಾಗತಿಕವಾಗಿ ಕಳವಳವನ್ನು ಹೆಚ್ಚಿಸುತ್ತಿದೆ. ಭಾರತದಲ್ಲಿ ಇಲ್ಲಿಯವರೆಗೆ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ. ಸುದ್ದಿ ಸಂಸ್ಥೆಗಳ ಪ್ರಕಾರ, ಮಂಕಿಪಾಕ್ಸ್‌ನ ಲಕ್ಷಣಗಳು ಸೌಮ್ಯವಾಗಿರುತ್ತವೆ ಮತ್ತು ಜ್ವರ, ತಲೆನೋವು, ಸ್ನಾಯು ನೋವು, ಬೆನ್ನುನೋವು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳೊಂದಿಗೆ ಸುಮಾರು 2-3 ವಾರಗಳವರೆಗೆ ಇರುತ್ತದೆ. ತಡೆಗಟ್ಟುವ ಕ್ರಮವಾಗಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ಉತ್ತಮ ಚೇತರಿಕೆಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಆಹಾರಗಳು ಯಾವುದೆಂದು ತಿಳಿಯೋಣ.
ಪುದೀನಾ: ಪುದೀನಾ (Mint) ಎಲೆಗಳು ಮೆಂಥಾಲ್‌ನಲ್ಲಿ ಸಮೃದ್ಧವಾಗಿವೆ. ಇದು ಸ್ನಾಯುಗಳು ಮತ್ತು ಜೀರ್ಣಾಂಗವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುವ ಅದರ ಪ್ರಾಥಮಿಕ ಸಂಯುಕ್ತಗಳಲ್ಲಿ ಒಂದಾಗಿದೆ. ತಜ್ಞರ ಪ್ರಕಾರ, ಪುದೀನ ಎಲೆಗಳ ನಿಯಮಿತ ಸೇವನೆಯು ಸೈನಸ್ ಸೋಂಕುಗಳು, ಕೆಮ್ಮು, ಅಸ್ತಮಾದಂತಹ ಸಾಮಾನ್ಯ ಉಸಿರಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಪುದೀನಾ ಎಲೆಗಳು ಸಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಮಂಕಿಪಾಕ್ಸ್ ಪತ್ತೆಗಾಗಿ ಆರ್‌ಟಿಪಿಸಿಆರ್ ಕಿಟ್; 50 ನಿಮಿಷದಲ್ಲೇ ನಿಖರ ಫಲಿತಾಂಶ
ತುಳಸಿ: ತುಳಸಿಯು (Basil) ಹಲವು ಆರೋಗ್ಯ (Health)ಕರ ಅಂಶಗಳನ್ನು ಹೊಂದಿದೆ ಎಂಬುದು ಹಲವರಿಗೆ ತಿಳಿದಿದೆ. ತಾಜಾ ತುಳಸಿಯು ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ತಲೆನೋವನ್ನು ಶಮನಗೊಳಿಸುತ್ತದೆ. ಈ ಮೂಲಿಕೆ ಸಾಮಾನ್ಯ ಶೀತ ಮತ್ತು ಜ್ವರವನ್ನು ಶಮನಗೊಳಿಸಲು ಸಹಕಾರಿಯಾಗಿದೆ.
ಬೇ ಎಲೆಗಳು: ಅಧ್ಯಯನಗಳ ಪ್ರಕಾರ, ಬೇ ಎಲೆಗಳು ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ, ಮೂತ್ರವರ್ಧಕ ಮತ್ತು ಜೀರ್ಣಕಾರಿ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿವೆ. ಅವುಗಳು ಯುಜೆನಾಲ್ ಎಂಬ ಅಂಶವನ್ನು ಹೊಂದಿರುತ್ತವೆ. ಇದನ್ನು ಸಾಮಾನ್ಯವಾಗಿ ಸೌಮ್ಯವಾದ ನೋವು ನಿವಾರಕ ಮತ್ತು ನಂಜುನಿರೋಧಕವಾಗಿ ಬಳಸಲಾಗುತ್ತದೆ. ಈ ಎಲೆಗಳು ಕೆಮ್ಮು, ಜ್ವರ ಮತ್ತು ಆಸ್ತಮಾ ಚಿಕಿತ್ಸೆಯಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ. ಅತಿಸಾರ, ಅನಿಲ ಮತ್ತು ವಾಕರಿಕೆ ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.
ಪ್ರೊಟೀನ್ ಭರಿತ ಆಹಾರಗಳು: ಮಂಕಿಪಾಕ್ಸ್‌ನಿಂದ ಬಳಲುತ್ತಿರುವವರಿಗೆ ಪ್ರೋಟೀನ್ ಹೆಚ್ಚು ಪ್ರಯೋಜನಕಾರಿಯಾಗಿದೆ. ಹೀಗಾಗಿ ಸೋಯಾ, ಕಾಟೇಜ್ ಚೀಸ್, ಮೊಗ್ಗುಗಳು ಮತ್ತು ಮೊಸರುಗಳಂತಹ ಪ್ರೋಟೀನ್-ಭರಿತ ಆಹಾರಗಳ ಸೇವನೆಯನ್ನು ಹೆಚ್ಚಿಸಲು ಸೂಚಿಸಲಾಗುತ್ತದೆ.
ದೇಹದ ಸಣ್ಣ ಗಾಯವೂ ಮಂಕಿಪಾಕ್ಸ್ ಲಕ್ಷಣವಾಗಿರಬಹುದು, ಎಚ್ಚರ !
ಮೊಟ್ಟೆಗಳು: ಮೊಟ್ಟೆ (Egg)ಗಳಲ್ಲಿ ಸೆಲೆನಿಯಮ್ ಸಮೃದ್ಧವಾಗಿದೆ, ಇದು ಆಕ್ಸಿಡೇಟಿವ್ ಹಾನಿ ಮತ್ತು ಸೋಂಕಿನಿಂದ ರಕ್ಷಿಸುವ ಅಗತ್ಯ ಪೋಷಕಾಂಶವಾಗಿದೆ. ಅಧ್ಯಯನಗಳ ಪ್ರಕಾರ, ಇದು ದೇಹ (Body)ವನ್ನು ಸೋಂಕುಗಳಿಂದ ರಕ್ಷಿಸುತ್ತದೆ.
ಪಪ್ಪಾಯಿ: ಪಪ್ಪಾಯಿ ಮತ್ತು ನಿಂಬೆ, ಆಮ್ಲಾ, ಕಿತ್ತಳೆ ಮತ್ತು ಚೆರ್ರಿಗಳಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಇತರ ಆಹಾರಗಳು ಆರೋಗ್ಯಕರವಾಗಿದ್ದು, ವಿವಿಧ ಸೆಲ್ಯುಲಾರ್ ಕಾರ್ಯಗಳನ್ನು ಬೆಂಬಲಿಸುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇಂಥಾ ಆಹಾರದ ಸೇವನೆಯಿಂದ ಸುಲಭವಾಗಿ ಸೋಂಕು ತಗಲುವುದನ್ನು ತಪ್ಪಿಸಬಹುದು.
ಕೊರೋನಾ ಸೋಂಕು ಬಳಿಕ ಇದೀಗ ಹಲವು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಈಗಾಗ್ಲೇ ನಾಲ್ಕು ಮಂಕಿಪಾಕ್ಸ್ ಪ್ರಕರಣ ದಾಖಲಾಗಿದ್ದು, ಆತಂಕ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಮಂಕಿಪಾಕ್ಸ್ ಎಂದರೇನು ? ಇದರ ರೋಗಲಕ್ಷಣಗಳೇನು ಎಂಬುದನ್ನು ಮೊದಲು ತಿಳಿದುಕೊಳ್ಳೋಣ.
ಮಂಕಿಪಾಕ್ಸ್ ಎಂದರೇನು?
ಮಂಕಿಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದೆ, ಇದರಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಸೇರಿವೆ. ಮಂಕಿಪಾಕ್ಸ್ ಸಿಡುಬು ರೋಗದ ಲಕ್ಷಣಗಳನ್ನೇ ಹೊಂದಿದ್ದು, ಅದರ ತೀವ್ರತೆ ಕಡಿಮೆ. ವ್ಯಾಕ್ಸಿನೇಷನ್ ನಿಂದಾಗಿ 1980ರಲ್ಲಿ ಪ್ರಪಂಚದಾದ್ಯಂತ ಸಿಡುಬು ನಿರ್ಮೂಲನೆಯಾಯಿತು, ಮಂಕಿಪಾಕ್ಸ್ ಇನ್ನೂ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಇತರೆಡೆಗಳಲ್ಲಿ ಅಸ್ತಿತ್ವದಲ್ಲಿದೆ.
ಮಂಕಿಪಾಕ್ಸ್ ರೋಗಲಕ್ಷಣಗಳು
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ರೋಗದ ಆರಂಭಿಕ ಲಕ್ಷಣಗಳು (symptoms) ಜ್ವರ, ತಲೆನೋವು, ಬೆನ್ನು ಮತ್ತು ಕುತ್ತಿಗೆ ನೋವು ಮುಂತಾದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ನಡುಕ ಮತ್ತು ಆಯಾಸವೂ ಇರಬಹುದು. ದೇಹದ ಮೇಲೆ ಸಣ್ಣ ಕಲೆಗಳು ಕಾಣಿಸಿಕೊಳ್ಳುತ್ತವೆ. ದಡಾರ, ಸ್ಕರ್ವಿ ಮತ್ತು ಸಿಫಿಲಿನ್ ಕೆಲವು ರೋಗಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತವೆ.