Asianet Suvarna News Asianet Suvarna News

ಇನ್ಮುಂದೆ ಹೋಟೆಲ್ ಪ್ರಿಯರ ಜೇಬಿಗೆ ಕತ್ತರಿ , ಕಾಫಿ-ತಿಂಡಿ ದರ ನಾಳೆಯಿಂದಲೇ ಏರಿಕೆ, ಹೊಸ ದರ ಇಲ್ಲಿದೆ

ಹೋಟೆಲ್ ತಿಂಡಿಗಳ ಬೆಲೆ ಶೇ. 10ರಷ್ಟು ದರ ಏರಿಕೆ ಮಾಡಲಾಗುತ್ತಿದೆ. ಆಗಸ್ಟ್ 1 ರಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

Food Prices At Bengaluru Restaurants and Hotels To Increase from august 1st gow
Author
First Published Jul 31, 2023, 11:51 AM IST

ಬೆಂಗಳೂರು (ಜು.31): ಇನ್ನು ಮುಂದೆ ನೀವು ಹೋಟೆಲ್‌ ಗೆ ಹೋಗಿ ತಿನ್ನಬೇಕು ಎಂದಾದರೆ ಕೊಂಚ ಯೋಚಿಸೋದು ಬಹಳ ಮುಖ್ಯ. ಹೋಟೆಲ್‌ಗೆ ಹೋಗಿ ತಿನ್ನುವ ದರದಲ್ಲಿ ಹೊಟ್ಟೆತುಂಬಾ ಮನೆಯಲ್ಲಿಯೇ ನಿಮ್ಮಷ್ಟದ ತಿಂಡಿಯನ್ನು ಮಾಡಿಕೊಂಡು ತಿನ್ನುವುದು ಒಳ್ಳೆಯದು. ಯಾಕೆಂದರೆ ಹಾಲಿನ ದರ ಏರಿಕೆಯ ಜೊತೆಗೆ ದಿನಬಳಕೆಯ ವಸ್ತುಗಳ ದರ ಕೂಡ ಹೆಚ್ಚಳವಾಗುತ್ತಿದೆ. ಹೀಗಾಗಿ ಹೋಟೆಲ್ ತಿಂಡಿಗಳ ಬೆಲೆ ಶೇ. 10ರಷ್ಟು ದರ ಏರಿಕೆ ಮಾಡಲಾಗುತ್ತಿದೆ. ಆಗಸ್ಟ್ 1 ರಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

ಪರಿಷ್ಕೃತ ದರಗಳ ಪಟ್ಟಿ ಇಲ್ಲಿದೆ:
1. ರೈಸ್ ಬಾತ್ 
ಸದ್ಯದ ಬೆಲೆ  40-50 ರೂ.
ನಾಳೆಯಿಂದ   44-55 ರೂ

2. ಇಡ್ಲಿ 
ಸದ್ಯದ ಬೆಲೆ(ಎರಡಕ್ಕೆ) 30-40 ರೂ
ನಾಳೆಯಿಂದ      35-45 ರೂ

3. ಸೆಟ್  ದೋಸೆ  
ಸದ್ಯದ ದರ‌‌‌‌‌‌‌      60- 65 ರೂ
ನಾಳೆಯಿಂದ      65-70 ರೂ

4. ಬೆಣ್ಣೆ ಮಸಾಲೆ 
 ಸದ್ಯದ ದರ ‌‌‌‌   70 ರೂ
ನಾಳೆಯಿಂದ 80 ರೂ

 5. ಚೌಚೌ ಬಾತ್ 
 ಸದ್ಯದ ದರ- 40-50 ರೂ
ನಾಳೆಯಿಂದ 45-55 ರೂ

 6. ಪೂರಿ 
 ಸದ್ಯದ ದರ 50-60 ರೂ
ನಾಳೆಯಿಂದ 55-65 ರೂ

 7. ಮಿನಿ ಮಿಲ್ಸ್ 
 ಸದ್ಯದ ದರ 60- 65 ರೂ
ನಾಳೆಯಿಂದ 75-80 ರೂ

8. ರೈಸ್ - ಸಂಬಾರ್ ,
ಸಾಧ್ಯದ ದರ ‌‌‌ 40- 50 ರೂ 
ನಾಳೆಯಿಂದ 45-55 ರೂ

9. ಕಾಫಿ-ಟೀ
ಸದ್ಯದ ದರ 12-15 ರೂ
ನಾಳೆಯಿಂದ 15-18 ರೂ

10. ಬಾದಾಮಿ  ಹಾಲು 
ಸದ್ಯದ ದರ 15  ರೂ
ನಾಳೆಯಿಂದ18 ರೂ

11. ಕರ್ಡ್ ರೈಸ್ 
ಸದ್ಯದ ದರ   40-50 ರೂ
ನಾಳೆಯಿಂದ 45-55 ರೂ

12. ಚಪಾತಿ(ಎರಡಕ್ಕೆ) 
ಸದ್ಯದ ದರ : 40-50 ರೂ
ನಾಳೆಯಿಂದ 45-65 ರೂ

13. ಬಿಸಿಬೇಳೆ ಬಾತ್ 
ಸದ್ಯದ ದರ    40-50 ರೂ
ನಾಳೆಯಿಂದ 45-55 ರೂ.

Follow Us:
Download App:
  • android
  • ios