ಆಹಾ ಆಹಾ... ಪಾನಿಪುರಿ ಸವಿಯುತ್ತಿರುವ ಆನೆ... ವಿಡಿಯೋ ಸಖತ್ ವೈರಲ್
ಆನೆಗೆ ಪಾನಿಪುರಿ (Panipuri) ತಿನ್ನುವ ಆಸೆಯಾಗಿದೆ ನೋಡಿ, ರಸ್ತೆ ಬದಿಗೆ ತನ್ನ ಮಾಲೀಕನೊಂದಿಗೆ ಬಂದ ಗಜೇಂದ್ರ (Gajendra), ಒಂದೊಂದೇ ಪಾನಿಪುರಿಯನ್ನು ಗುಳುಂ ಗುಳುಂ ಮಾಡುತ್ತಿದೆ.
ಗುವಾಹಟಿ: ಗೋಲ್ಗಪ್ಪ ಅಥವಾ ಪಾನಿಪುರಿಯನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ. ಭಾರತದಲ್ಲಿ ಇದೊಂದು ರಸ್ತೆಬದಿಯ ಜನಪ್ರಿಯ ತಿನಿಸಾಗಿದ್ದು, ಇದನ್ನು ಇಷ್ಟಪಡದವರಿಲ್ಲ. ಅದರಲ್ಲೂ ರಸ್ತೆ ಬದಿ ಪಾನಿಪುರಿ ಚಾಟ್ಸ್ ತಿನ್ನೋಣ ಎಂದರೆ ಕ್ಷಣದಲ್ಲಿ ರೆಡಿಯಾಗ್ತಾರೆ ನಮ್ ಹುಡ್ಗೀರು. ಪಾನಿಪುರಿಯ ಪಾನಿ ಹಾಗೆ ಮಾಡ್ತಾರೆ ಹೀಗೆ ಮಾಡ್ತಾರೆ ಕ್ಲೀನ್ ಇಲ್ಲ ಗಲೀಜು, ರಸ್ತೆಯ ಧೋಳೆಲ್ಲಾ ಪಾನಿಪುರಿಯಲ್ಲಿರುತ್ತೆ ಎಂದು ಹಲವು ನಕರಾತ್ಮಕ ವರದಿಗಳು ಹೇಳಿಕೆಗಳು ಬಂದ ನಂತರವೂ ರಸ್ತೆ ಬದಿ ಪಾನಿಪುರಿಯ ಮೇಲಿನ ಡಿಮಾಂಡ್ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಅದೇನೋ ಗೊತ್ತಿಲ್ಲ. ಪಾನಿಪುರಿಯ ಕ್ರೇಜ್ ಮಾತ್ರ ದಿನೇ ದಿನೇ ಹೆಚ್ತಿದೆ.
ಹಾಗೆಯೇ ಇಲ್ಲೊಂದು ಆನೆಗೆ ಪಾನಿಪುರಿ (Panipuri) ತಿನ್ನುವ ಆಸೆಯಾಗಿದೆ ನೋಡಿ, ರಸ್ತೆ ಬದಿಗೆ ತನ್ನ ಮಾಲೀಕನೊಂದಿಗೆ ಬಂದ ಗಜೇಂದ್ರ (Gajendra), ಪಾನಿಪುರಿವಾಲಾ ಮಾಡಿಕೊಟ್ಟ ಒಂದೊಂದೇ ಪಾನಿಪುರಿಯನ್ನು ಗುಳುಂ ಗುಳುಂ ಮಾಡುತ್ತಿದೆ. ಅಂದಹಾಗೆ ಈ ದೃಶ್ಯ ಕಂಡು ಬಂದಿದ್ದು, ಅಸ್ಸಾಂನ (Assam) ತೇಜ್‌ಪುರದ (Tezpur) ಬಳಿ. ಪಾನಿಪುರಿ ಶಾಪೊಂದರ ಬಳಿ ನಿಂತ ಆನೆ ಒಂದೊಂದೇ ಗೋಲ್ಗಪ್ಪವನ್ನು ಬಾಯಿ ಚಪ್ಪರಿಸಿ ತಿನ್ನುತ್ತಿದೆ. ಪಾನಿಪುರಿ ಮಾರುವಾತನೂ ಆನೆಗೆ ಖುಷಿ ಖುಷಿಯಿಂದ ಗೋಲ್ಗಪ್ಪ ತಿನ್ನಿಸುತ್ತಿದ್ದಾನೆ. ಜನರು ಕೈಯಿಂದ ಪಾನಿಪುರಿ ತೆಗೆದುಕೊಳ್ಳುವಂತೆ ಆನೆ ತನ್ನ ಸೊಂಡಿಲಿನಿಂದ ಪಾನಿಪುರಿ ತೆಗೆದುಕೊಂಡು ಬಾಯಿಗಿಡುತ್ತಿದೆ. ಈ ದೃಶ್ಯ ನೋಡುತ್ತಿದ್ದಂತೆ ಅಲ್ಲಿ ಸುತ್ತಮುತ್ತ ಇದ್ದವರೆಲ್ಲಾ ಆನೆಯ ಬಳಿ ಬಂದು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಶಿಕ್ಷಣದ ವೆಚ್ಚ ಪೂರೈಸಲು ಪಾನಿಪುರಿ ಮಾರುವ ಹುಡುಗಿ: ವಿಡಿಯೋ ವೈರಲ್
ಆನೆ ಪಾನಿಪುರಿ ಸವಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದು, ನೋಡುಗರು ಖುಷ್ ಆಗಿದ್ದಾರೆ. ಬರೀ ಸುಕ್ಕ ಪುರಿಯನ್ನು ಕೂಡ ಆನೆಗೆ ನೀಡುವಂತೆ ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಯಾಕೆ ಮನುಷ್ಯರೇ ಎಲ್ಲಾ ಖುಷಿಯನ್ನು ಅನುಭವಿಸಬೇಕು, ನಾನೂ ಪಾನಿಪುರಿ ತಿನ್ನುವೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತದಲ್ಲಿ ಇತರ ಎಲ್ಲಾ ಪ್ರಾಣಿಗಳು ಆನೆಗ ಪಾಲಿಗೆ ಇಲಿಯಂತೆ, ಇಲಿ ಆನೆ ಎರಡನ್ನು ಇಲ್ಲಿ ಪೂಜೆ ಮಾಡುತ್ತಾರೆ. ಇಲ್ಲಿ ಹುಲಿ ಮನುಷ್ಯನೊಂದಿಗೆ ಬೋಟ್‌ನಲ್ಲಿ ತೆರಳುತ್ತದೆ. ಆನೆ ಗೋಲ್ಗಪ್ಪ ತಿನ್ನುತ್ತೆ. ಇಲಿಗಳು ದೇಗುಲದಲ್ಲಿ ಹಾಲು ಕುಡಿಯುತ್ತವೆ, ಪರಿಸರ ಹಾಗೂ ಪ್ರಾಣಿಗಳ ಮೇಲಿನ ಪ್ರೀತಿ ಇಲ್ಲಿನ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕಳೆದೋದ ಕಂದನ ಹುಡುಕಿಕೊಟ್ಟ ಅರಣ್ಯ ಸಿಬ್ಬಂದಿ: ಥ್ಯಾಂಕ್ಸ್ ಹೇಳಿದ ಅಮ್ಮ
ಕೆಲದಿನಗಳ ಹಿಂದೆ ಹಸು ಹಾಗೂ ಕರುವೊಂದು ಬೀದಿಯಲ್ಲಿ ಪಾನಿಪುರಿ ತಿನ್ನುತ್ತಿರುವ ವಿಡಿಯೋವೊಂದು ಇದೇ ರೀತಿ ಸಾಕಷ್ಟು ವೈರಲ್ ಆಗಿತ್ತು. ಅದೇನೆ ಇರಲಿ, ಪಾನಿಪುರಿ ಮಾಡುವವನ ಮುಂದೆ ಬಾಯಲ್ಲಿ ನೀರೂರಿಸುತ್ತಾ, ಜನ ಹೆಚ್ಚಿದ್ರೆ ನಮಗ್ಯಾವಾಗ ಕೊಡ್ತಾನೋ ಅಂತ ಬಾಯ್ಬಿಡುತ್ತಾ ನಿಲ್ಲೋದ್ರಲ್ಲೇನೋ ಖುಷಿ ಇದೆ ಬಿಡಿ.