Asianet Suvarna News Asianet Suvarna News

ನಿಮ್ಮ ದಿನನಿತ್ಯದ ಆಹಾರದ ಪಟ್ಟಿ ಹೀಗಿರಲಿ, ಅನಾರೋಗ್ಯ ದೂರ ಮಾಡಿ..

ಉತ್ತಮ ಆಹಾರವು ಉತ್ತಮ ಆರೋಗ್ಯ ಪಡೆಯಲು ಸಹಾಯಕಾರಿ. ನಮ್ಮ ದೇಹಕ್ಕೆ ಪೋಷಕಾಂಶ ಕೊಡುವ ಆಹಾರ ಸೇವನೆ, ಖಂಡಿತವಾಗಿಯೂ ಹಲವಾರು ರೀತಿ ಅನಾರೋಗ್ಯಗಳನ್ನು ದೂರ ಮಾಡುತ್ತದೆ.

Eat these foods daily and stay away from diseases
Author
First Published Sep 27, 2022, 6:58 PM IST

ನಾವು ದಿನನಿತ್ಯ ಸೇವಿಸುವ ಆಹಾರಗಳು ನಮ್ಮ ಆರೋಗ್ಯ  ಕ್ಕೆ ಬಹಳ ಮುಖ್ಯ. ಆದ್ದರಿಂದ ದೇಹದ ಆರೋಗ್ಯವನ್ನು  ಕಾಪಾಡಿಕೊಳ್ಳಲು ಉತ್ತಮ ಆಹಾರ ಸೇವಿಸಬೇಕು. ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಬೀಜಗಳಲ್ಲಿ ಹಲವಾರು ಪೋಷಕಾಂಶಗಳು ಅಡಗಿವೆ. ಇವು ದೇಹದ ಆರೋಗ್ಯದ ಜತೆಗೆ ಕೆಲವೊಂದು ಅಂಗಾಂಗಗಳನ್ನು ರಕ್ಷಿಸುತ್ತವೆ. ನಿತ್ಯವೂ ಸರಿಯಾದ ಆಹಾರ ಸೇವಿಸಿದರೆ ಖಂಡಿತವಾಗಿಯೂ ಹಲವಾರು ರೀತಿ ಅನಾರೋಗ್ಯಗಳನ್ನು ದೂರವಿಡಬಹುದು. ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಪಡೆದುಕೊಳ್ಳಬೇಕು ಎಂದರೆ ಪ್ರತಿನಿತ್ಯ ಪೌಷ್ಟಿಕಾಂಶಗಳು, ವಿಟಮಿನ್ಸ್ ಹಾಗೂ ಜೀವಸತ್ವಗಳು ಇರುವ ಆಹಾರವನ್ನು ತಪ್ಪದೇ ಸೇವಿಸುವುದು ಸೂಕ್ತ. ಅವುಗಳ ಪಟ್ಟಿ ಇಂತಿದೆ.

ಬೆಳ್ಳುಳ್ಳಿ:

ಬೆಳ್ಳುಳ್ಳಿಯನ್ನು ನಾವು  ದಿನನಿತ್ಯ ಸೇವಿಸುವುದರಿಂದ ಹಲವು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಸಿ ಬೆಳ್ಳುಳ್ಳಿ (Garlic) ಕೆಮ್ಮು ಮತ್ತು ಶೀತದ ಸೋಂಕನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಖಾಲಿ ಹೊಟ್ಟೆಯಲ್ಲಿ ಎರಡು ಪುಡಿಮಾಡಿದ ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ಪ್ರಯೋಜನ ಸಿಗುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದ್ದು, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಅದಲ್ಲದೆ ಬೆಳ್ಳುಳ್ಳಿಯುಲ್ಲಿನ ಉತ್ಕರ್ಷಣ ನಿರೋಧಕವು ಮೆದುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಬುದ್ಧಿಮಾಂದ್ಯತೆಯಂತಹ  ಕಾಯಿಲೆಗಳ ವಿರುದ್ಧ ಇದು ಪರಿಣಾಮಕಾರಿಯಾಗಿದೆ. ಹಾಗೆ ಬೆಳ್ಳುಳ್ಳಿ ಕರುಳಿನಲ್ಲಿನ ಕೆಟ್ಟ ಬ್ಯಾಕ್ಟೀರಿಯಾವನ್ನು (bacteria) ನಾಶಪಡಿಸುತ್ತದೆ ಮತ್ತು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ರಕ್ಷಿಸುತ್ತದೆ.

ಸೌತೆಕಾಯಿ:

ಸೌತೆಕಾಯಿಯನ್ನು ಸೇವಿಸುವುದರಿಂದ ಹೆಚ್ಚು  ಪೌಷ್ಟಿಕಾಂಶವನ್ನು ನಮ್ಮ ದೇಹಕ್ಕೆ ಸಿಗುತ್ತದೆ . ಸೌತೆಕಾಯಿಯಲ್ಲಿ (Cucumber) ಶೇ.96 ರಷ್ಟು ನೀರಿನ ಅಂಶವನ್ನು ಹೊಂದಿದ್ದು,  ದೇಹದಲ್ಲಿನ ನಿರ್ಜಲೀಕರಣವನ್ನು ತಡೆಯಲು  ಸೂಕ್ತವಾಗಿವೆ. ಅದಲ್ಲದೆ ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಸಿ (Vitamin C), ರಂಜಕ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 1 ಅನ್ನು ಸಹ  ಇದು ಹೊಂದಿರುತ್ತವೆ. ಇನ್ನು ಸೌತೆಕಾಯಿ ಮತ್ತು ಪುದೀನಾವನ್ನು ಬಳಸಿ ತಯಾರಿಸಿದ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ವಿಷವನ್ನು ಪರಿಣಾಮಕಾರಿಯಾಗಿ ತೆಗೆದುಹಾಕಬಹುದಾಗಿದೆ. ಹಾಗೆ  ವಯಸ್ಸಾದವರಲ್ಲಿ, ಅಧಿಕ ರಕ್ತದೊತ್ತಡ ಹೊಂದಿರುವವರು, ಸೌತೆಕಾಯಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವು ಮಲಬದ್ಧತೆಯನ್ನು ತಡೆಯಲು ಸಹಾಯಕಾರಿಯಾಗಿದೆ. ಸೌತೆಕಾಯಿಗಳು ಉತ್ತಮ ಸೌಂದರ್ಯ ವರ್ಧಕವಾಗಿದ್ದು,, ಚರ್ಮದ ಮೇಲೆ ಅದ್ಭುತ ಪರಿಣಾಮವನ್ನು ಬೀರುತ್ತದೆ. ಸೌತೆಕಾಯಿಯ ಚೂರುಗಳನ್ನು ಸುಮಾರು 10 ನಿಮಿಷಗಳ ಕಾಲ ಕಣ್ಣುಗಳ ಮೇಲೆ ಇಡುವುದರಿಂದ ನಮ್ಮ ಕಣ್ಣುಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ಕಣ್ಣಿನ ಸುತ್ತಲಿನ ಊತವನ್ನು ಕಡಿಮೆ ಮಾಡುತ್ತದೆ.

ಟೊಮೆಟೊ:

ದಿನನಿತ್ಯದ ಟೊಮೆಟೊ ಸೇವನೆ ಆರೋಗ್ಯಕರ ರಕ್ತನಾಳಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಟೊಮೆಟೊಗಳನ್ನು (Tomato) ಆಗಾಗ್ಗೆ ತಿನ್ನುವುದರಿಂದ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮೊಡವೆಗಳು ಮತ್ತು ಸಣ್ಣ ಸುಟ್ಟಗಾಯಗಳ ಕಲೆಗಳನ್ನು ಶಮನಮಾಡಲು ಸಹಾಯಕಾರಿಯಾಗುತ್ತದೆ. ಟೊಮೆಟೊದಲ್ಲಿ ವಿಟಮಿನ್ ಎ (Vitamin A)ಮತ್ತು ಸಿ ಹೆಚ್ಚಾಗಿರುವುದರಿಂದ  ಇದು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು  ಸಹಾಯಕವಾಗಿದೆ.  ಕಣ್ಣಿನ ಪೊರೆಗಳ ಬೆಳವಣಿಗೆಯ ಅಪಾಯವನ್ನು ತಡೆಯಬಹುದು. ಹಾಗೆ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ  ಅನ್ನು  ಟೊಮೆಟೊ ಹೊಂದಿರುವುದರಿಂದ  ಮೂಳೆ ಮತ್ತು ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ. 

ಇದನ್ನೂ ಓದಿ: HEALTHY DIET: ಅಬ್ಬಾ.. ರಾಗಿಯಿಂದ ನಮಗೆ ಸಿಗುತ್ತಾ ಈ ಅಚ್ಚರಿಯ ಲಾಭಗಳು

ಆವಕಾಡೊ:

ಉತ್ತಮ ಮೂಳೆ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವೆಂದರೆ ವಿಟಮಿನ್ ಕೆ. ಈ ವಿಟಮಿನ್ ಕೆಯನ್ನು (Vitamin K) ಪಡೆಯಲು ದಿನನಿತ್ಯ ಅರ್ಧ ಆವಕಾಡೊವನ್ನು ತಿನ್ನುವುದರಿಂದ  ಪಡೆಯಬಹುದು. ಅದಲ್ಲದೆ ಆವಕಾಡೊ ಸೇವನೆಯು ಬಾಯಿಯ ದುರ್ವಾಸನೆ ತಡೆಯುತ್ತದೆ. ಬಾಯಿಯ ದುರ್ವಾಸನೆಯು ಸಾಮಾನ್ಯವಾಗಿ ಕರುಳು ಮತ್ತು ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾದ ರಚನೆಯಿಂದ ಉಂಟಾಗುತ್ತದೆ. ಹಾಗೆ ಇದು  ಅಜೀರ್ಣವನ್ನು ಸುಲಭವಾಗಿ ನಿವಾರಿಸುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇನ್ನು ಆವಕಾಡೊ  ಸೂರ್ಯನ (Sun)ವಿವಿಧ ಹಾನಿಕಾರಕ ಪರಿಣಾಮಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಆವಕಾಡೊಗಳು ಆರೋಗ್ಯಕರ ಗರ್ಭಧಾರಣೆಗೆ ಅಗತ್ಯವಾದ ಪೋಷಕಾಂಶವನ್ನು ನೀಡುತ್ತದೆ. ಇದರ  ನಿಗದಿತ ಸೇವನೆಯು ಗರ್ಭಪಾತ ಮತ್ತು ನರ ಕೊಳವೆಯ ದೋಷಗಳಿಗೆ ಸಂಬಂಧಿಸಿದ ಅಪಾಯಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Fasting Tips: ಆರೋಗ್ಯಕರ ಉಪವಾಸ ಆರೋಗ್ಯ ಚೆನ್ನಾಗಿಡುತ್ತೆ!

ಬಾದಾಮಿ:

ಬಾದಾಮಿಯುಲ್ಲಿ ಕಬ್ಬಿಣ ( Iron), ಕ್ಯಾಲ್ಸಿಯಂ ಅಧಿಕವಾಗಿವೆ. ಕಬ್ಬಿಣವು ಸ್ನಾಯುವಿನ ಕಾರ್ಯ ಮತ್ತು ಆರೋಗ್ಯಕ್ಕೆ ನಿರ್ಣಾಯಕವಾಗಿದೆ, ಬಲವಾದ ಮೂಳೆಗಳು ಮತ್ತು ಹೃದಯ ಸ್ನಾಯುವಿನ ರಕ್ಷಣೆಗೆ ಕ್ಯಾಲ್ಸಿಯಂ ( Calcium) ಅವಶ್ಯಕವಾಗಿದೆ. ಬಾದಾಮಿಯಲ್ಲಿ ಬಹಳಷ್ಟು ವಿಟಮಿನ್ ಇ ಇದ್ದು, ಕಣ್ಣಿನ ಪೊರೆಯಿಂದ ರಕ್ಷಿಸುತ್ತದೆ. ಆದರೆ  ಬೆರಳೆಣಿಕೆಯಷ್ಟು ಮಾತ್ರ ದಿನನಿತ್ಯ ಸೇವಿಸಬೇಕು.

Follow Us:
Download App:
  • android
  • ios