Asianet Suvarna News Asianet Suvarna News

ಬಣ್ಣ ಮಾತ್ರವಲ್ಲ ರುಚಿಯಲ್ಲೂ ಭಿನ್ನತೆ ಹೊಂದಿದೆ ಡೊಳ್ಳು ಮೆಣಸು

ಸಲಾಡ್ ನಲ್ಲಿ ನೀವು ಹಳದಿ, ಕೆಂಪು ಬಣ್ಣದ ಕ್ಯಾಪ್ಸಿಕಂ ನೋಡ್ತಿರಿ. ಪಿಜ್ಜಾದಲ್ಲಿ ಕೂಡ ಬಣ್ಣ ಬಣ್ಣದ ಕ್ಯಾಪ್ಸಿಕಂ ಕಾಣಸಿಗುತ್ತದೆ. ಈ ಡೊಳ್ಳು ಮೆಣಸು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗೆ ಬಣ್ಣ ಬಣ್ಣದ ಕ್ಯಾಪ್ಸಿಕಂ ಬೇರೆ ಬೇರೆ ಪ್ರಯೋಜವನ್ನು ನಮಗೆ ನೀಡುತ್ತದೆ. 
 

Different Types Of Capsicum
Author
First Published Nov 18, 2022, 1:11 PM IST

ತರಕಾರಿ, ಹಣ್ಣುಗಳಲ್ಲಿ ಸಾಕಷ್ಟು ವೆರೈಟಿಗಳಿವೆ. ತರಕಾರಿ ಹಾಗೂ ಹಣ್ಣುಗಳ ಆಕಾರದಲ್ಲಿ ವ್ಯತ್ಯಾಸವನ್ನು ನಾವು ನೋಡಬಹುದು. ಒಂದೇ ತರಕಾರಿಯ ಆಕಾರ, ಬಣ್ಣಗಳು ಬೇರೆ ಬೇರೆಯಾಗಿರುವುದನ್ನು ನಾವು ನೋಡಬಹುದು. ಉದಾಹರಣೆಗೆ ಬದನೆಕಾಯಿಯಲ್ಲಿಯೇ ಅನೇಕ ವಿಧಗಳಿವೆ. ಉದ್ದದ ಬದನೆಕಾಯಿ, ಸಣ್ಣ ಬದನೆಕಾಯಿ, ಗುಂಡಗಿರುವ ಬದನೆಕಾಯಿ. ಹಾಗೆ ಅವುಗಳ ಬಣ್ಣ ಕೂಡ ಭಿನ್ನವಾಗಿರುತ್ತವೆ. ಬದನೆಕಾಯಿ ಮಾತ್ರವಲ್ಲ ನೀವು ಕುಂಬಳಕಾಯಿ, ಹಾಗಲಕಾಯಿ ಸೇರಿದಂತೆ ಬಹುತೇಕ ತರಕಾರಿಗಳಲ್ಲಿ ಈ ವಿಧ ನೋಡಬಹುದು. ಅವುಗಳಲ್ಲಿ ಕ್ಯಾಪ್ಸಿಕಂ ಕೂಡ ಸೇರಿದೆ. ಇದನ್ನು ಡೊಳ್ಳು ಮೆಣಸು ಎಂದು ಕರೆಯಲಾಗುತ್ತದೆ. ಡೊಳ್ಳು ಮೆಣಸಿನಲ್ಲಿ ಕೂಡ ವಿಧಗಳಿವೆ. ನಮಗೆ ಈ ಮೆಣಸು  ಕೆಂಪು, ಹಸಿರು ಮತ್ತು ಹಳದಿ ಬಣ್ಣದಲ್ಲಿ ಸಿಗುತ್ತದೆ.

ಡೊಳ್ಳು ಮೆಣಸು (Capsicum) ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಇದು ಹೆಸರಿಗೆ ಮೆಣಸು ಅಷ್ಟೆ ಎನ್ನಬಹುದು. ಯಾಕೆಂದ್ರೆ ಎಲ್ಲ ಮೆಣಸಿನಂತೆ ಹೆಚ್ಚು ಖಾರವಾಗಿರುವುದಿಲ್ಲ. ಆಹಾರ (Food) ದ ರುಚಿಯನ್ನು ಹೆಚ್ಚಿಸಲು ಇದನ್ನು ಬಳಸಲಾಗುತ್ತದೆ. ಪಿಜ್ಜಾ (Pizza) , ಪಾಸ್ತಾಕ್ಕೆ ಕೂಡ ಈ ಡೊಳ್ಳು ಮೆಣಸನ್ನು ಬಳಸಲಾಗುತ್ತದೆ. ಇದು ಕೊಬ್ಬು, ಪ್ರೋಟೀನ್ (Protein), ಸಕ್ಕರೆ ಸೇರಿದಂತೆ ಆರೋಗ್ಯಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಡೊಳ್ಳು ಮೆಣಸು ಹೃದಯ (Heart) ದಿಂದ ಹಿಡಿದು ಜೀರ್ಣಕ್ರಿಯವೆರೆಗೆ ಸಾಕಷ್ಟು ಪ್ರಯೋಜನ ಹೊಂದಿದೆ. ಡೊಳ್ಳು ಮೆಣಸಿನಲ್ಲಿ ಮೊದಲೇ ಹೇಳಿದಂತೆ ಮೂರು ವಿಧಗಳಿವೆ. ಬರೀ ಬಣ್ಣದಲ್ಲಿ ಮಾತ್ರವಲ್ಲ ಈ ಮೆಣಸುಗಳಲ್ಲಿರುವ ಕೆಲ ಅಂಶಗಳು ಕೂಡ ಭಿನ್ನವಾಗಿವೆ. ನಾವಿಂದು ಮೂರು ವಿಧದ ಕ್ಯಾಪ್ಸಿಕಂಗಳ ನಡುವಿನ ವ್ಯತ್ಯಾಸವನ್ನು ಹೇಳ್ತೆವೆ.

ಟೀ ಕುಡಿದ ತಕ್ಷಣ ನೀರು ಕುಡಿದು ಯಡವಟ್ಟು ಮಾಡ್ಕೊಳ್ಬೇಡಿ

ಹಸಿರು (Green) ಡೊಳ್ಳು ಮೆಣಸು  : ಹಳದಿ ಮತ್ತು ಕೆಂಪು ಕ್ಯಾಪ್ಸಿಕಂಗಿಂತ ಹಸಿರು ಕ್ಯಾಪ್ಸಿಕಂ ಅನ್ನು ನಾವು ಹೆಚ್ಚಿನ ಪ್ರಮಾಣದಲ್ಲಿ ಬಳಸ್ತೇವೆ. ಅನೇಕರ ಮನೆಯಂಗಳದಲ್ಲಿ ಇದನ್ನು ಬೆಳೆಯುತ್ತಾರೆ. ಇದ್ರಿಂದ ಅನೇಕ ಪದಾರ್ಥಗಳನ್ನು ತಯಾರಿಸಬಹುದು. ಹಸಿರು ಕ್ಯಾಪ್ಸಿಕಂನಲ್ಲಿ ವಿಟಮಿನ್ ಎ, ಸಿ ಮತ್ತು ಫೈಬರ್ ನಂತಹ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ತೂಕವನ್ನು ಕಡಿಮೆ ಮಾಡಲು, ಕಬ್ಬಿಣದ ಕೊರತೆಯನ್ನು ಹೋಗಲಾಡಿಸಲು ಮತ್ತು ನಮ್ಮ ದೃಷ್ಟಿ ಚುರುಕುಗೊಳಿಸುವ ಕೆಲಸವನ್ನು ಇದು ಮಾಡುತ್ತದೆ.  

ಹಳದಿ ಕ್ಯಾಪ್ಸಿಕಂ (Yellow Capsicum) :  ಹಳದಿ ಡೊಳ್ಳು ಮೆಣಸುಗಳನ್ನು ಮನೆಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವುದಿಲ್ಲ. ಹಳದಿ ಕ್ಯಾಪ್ಸಿಕಂ ಅನ್ನು ಹೆಚ್ಚಾಗಿ ಪಿಜ್ಜಾ, ಪಾಸ್ತಾಗೆ ಬಳಸಲಾಗುತ್ತದೆ. ಕೆಲವೆ ಕೆಲವು ಮಂದಿ ಮಾತ್ರ ಇದನ್ನು ಪ್ರತಿನಿತ್ಯ ಬಳಸ್ತಾರೆ. ವಿಟಮಿನ್ ಸಿ ಮುಖ್ಯ ಮೂಲ . ಹಳದಿ ಕ್ಯಾಪ್ಸಿಕಂ. ಇದು ದೇಹ ಕೊಳೆಯನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಇದರಲ್ಲಿರುವ ಫೈಬರ್ ಹೊಟ್ಟೆ ಸಮಸ್ಯೆ ದೂರವಿಡುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ತಂಪಾಗಿರಿಸಲು ನೆರವಾಗುತ್ತದೆ. ಹಸಿರು ಕ್ಯಾಪ್ಸಿಕಂಗೆ ಹೋಲಿಕೆ ಮಾಡಿದ್ರೆ ಇದ್ರ ರುಚಿ ಸ್ವಲ್ಪ ಸಿಹಿ.

ಈ ಟಿಪ್ಸ್ ಬಳಸಿ, ಮನೆಯಲ್ಲಿಯೇ ರೆಸ್ಟೋರೆಂಟ್ ರೀತಿ ಫ್ಲಫಿ ಅನ್ನ ತಯಾರಿಸಿ!

ಕೆಂಪು ಕ್ಯಾಪ್ಸಿಕಂ (Red Capsicum) : ಸಾಮಾನ್ಯವಾಗಿ ಆರಂಭದಲ್ಲಿ ಹಸಿರಾಗಿರುವ ಕ್ಯಾಪ್ಸಿಕಂ ಹಣ್ಣಾಗ್ತಿದ್ದಂತೆ ಕೆಂಪು ಬಣ್ಣಕ್ಕೆ ಬರುತ್ತದೆ. ಅದರ ಬಣ್ಣ ಹಸಿರು ಬಣ್ಣದಿಂದ ಹಳದಿ ಮತ್ತು ನಂತರ ಹಳದಿಯಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅದೇನೇ ಇದ್ದರು ಕೆಂಪು ಕ್ಯಾಪ್ಸಿಕಂ ಹಸಿರು ಕ್ಯಾಪ್ಸಿಕಂಗಿಂತ ಸ್ವಲ್ಪ ಹೆಚ್ಚು ಪ್ರಯೋಜನಕಾರಿಯಾಗಿದೆ.  ಇತರ ಎರಡು ಕ್ಯಾಪ್ಸಿಕಂಗಳಿಗೆ ಹೋಲಿಸಿದರೆ, ಕೆಂಪು ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಪ್ರಮಾಣವು ಹೆಚ್ಚಿರುತ್ತದೆ.  ಕೆಂಪು ಡೊಳ್ಳು ಮೆಣಸು ಇತರ ಮೆಣಸಿಗಿಂತ ಸಿಹಿಯಾಗಿರುತ್ತದೆ. ಹಾಗಾಗಿಯೇ ಇದನ್ನು ಸಲಾಡ್ ಗೆ ಹೆಚ್ಚಾಗಿ ಬಳಸಲಾಗುತ್ತದೆ. ಜೊತೆಗೆ ಈ ಕೆಂಪು ಮೆಣಸನ್ನು ಅಲಂಕಾರಕ್ಕೆ ಹೆಚ್ಚಾಗಿ ಬಳಕೆ ಮಾಡ್ತಾರೆ. 
 

Follow Us:
Download App:
  • android
  • ios