Food Trend: ವೈರಲ್ ಆಗ್ತಿದೆ ಮಸಾಲೆ ದೋಸೆ ಐಸ್ ಕ್ರೀಂ ರೋಲ್
ಐಸ್ ಕ್ರೀಂ (Ice Cream) ಅಂದ್ರೆ ಹಲವರಿಗೆ ಇಷ್ಟ. ಊಟ ಬಿಟ್ಬಿಟ್ಟು ಐಸ್ ಕ್ರೀಂನ್ನೇ ಬೇಕಾದ್ರೂ ತಿನ್ತಾರೆ. ಹಾಗೆ ಮಸಾಲೆ ದೋಸೆ (Masala Dosa) ಹಲವರ ಫೇವರಿಟ್. ಸಂಜೆ ಹೊತ್ತು ಬಿಸಿ ಬಿಸಿಯಾದ ಮಸಾಲೆ ದೋಸೆಯೊಂದು ಸಿಕ್ಕಿಬಿಟ್ರೆ ಮತ್ತೇನೂ ಬೇಡ. ಐಸ್ ಕ್ರೀಂ, ಮಸಾಲೆ ದೋಸೆ ತಿನ್ನೋಕೆ ಎರಡೂ ಚೆನ್ನಾಗಿರುತ್ತೆ. ಆದ್ರೆ, ಇವೆರಡೂ ಮಿಕ್ಸ್ ಆದ್ರೆ ಹೇಗಿರುತ್ತೆ ?
ಭಾರತೀಯರು ಸ್ವಭಾತಹಃ ಆಹಾರಪ್ರಿಯರು. ವೆರೈಟಿ ವೆರೈಟಿ ಫುಡ್ (Food) ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಏನನ್ನಾದರೂ ಎಕ್ಸಮರಿಮೆಂಟ್ ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ. ಹಾಗೆ ಸದ್ಯ ವೈರಲ್ ಆಗ್ತಿರೋ ಫುಡ್ ಮಸಾಲೆ ದೋಸೆ ಐಸ್ ಕ್ರೀಂ ರೋಲ್ (Masala Dosa Ice Cream Roll).
ಯಪ್ಪಾ..ಮಸಾಲೆ ದೋಸೆ ಐಸ್ ಕ್ರೀಂ ರೋಲಾ ಅಂತ ಗಾಬರಿಯಾಗ್ಬೇಡಿ. ಇಂಥದ್ದೇ ಅದೆಷ್ಟೋ ವಿಚಿತ್ರ ಫುಡ್ ಕಾಂಬಿನೇಷನ್ ಗಳು ಈಗಾಗ್ಲೇ ವೈರಲ್ (Viral) ಆಗಿವೆ. ಅದ್ರಲ್ಲಿ ಕೆಲವು ಮ್ಯಾಗಿ ಮಿಲ್ಕ್ ಶೇಕ್, ಚಿಕನ್ ಗೋಲ್‌ಗಪ್ಪಾ, ಓರಿಯೋ ಪಕೋಡಾ, ಓಲ್ಡ್ ಮಾಂಕ್ ಗುಲಾಬ್ ಜಾಮೂನ್, ಚಾಕೋಲೇಟ್ ಮ್ಯಾಗಿ ಮೊದಲಾದವು.
Food Trend 2021: ಮ್ಯಾಗಿ ಮಿಲ್ಕ್ ಶೇಕ್, ಚಿಕನ್ ಗೋಲ್‌ಗಪ್ಪಾ, 2021ರ ವಿಚಿತ್ರ ಆಹಾರಗಳಿವು
ಐಸ್ ಕ್ರೀಂ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಡಿಫರೆಂಟ್ ಫ್ಲೇವರ್‌ನಲ್ಲಿ ಸಿಗೋ ಐಸ್ ಕ್ರೀಂನ್ನು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಸೌತ್ ಇಂಡಿಯನ್ ಫುಡ್ (South Indian Food)ನಲ್ಲಿ ಮಸಾಲೆ ದೋಸೆಯಂತೂ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಬಿಸಿ ಬಿಸಿ ದೋಸೆ, ಆಲೂ ಪಲ್ಯ, ಖಾರ ಚಟ್ನಿ ನೆಂಚಿಕೊಂಡು ತಿಂದ್ರೆ ಸ್ವರ್ಗಕ್ಕೆ ಮೂರೇ ಗೇಣು. ಆದ್ರೆ ಹೀಗೆ ಪ್ರತ್ಯೇಕವಾಗಿ ರುಚಿಯಾಗಿರೋ ಎರಡು ಫುಡ್‌ನ್ನು ಮಿಕ್ಸ್ ಮಾಡಿದ್ರೆ ಏನಾಗ್ಬೋದು. ಅದುವೇ ಮಸಾಲೆ ದೋಸೆ ಐಸ್ ಕ್ರೀಮ್ ರೋಲ್.
ದೆಹಲಿಯ ಅಂಗಡಿಯೊಂದರಲ್ಲಿ ಈ ಮಸಾಲೆ ದೋಸೆ ಐಸ್ ಕ್ರೀಂ ರೋಲ್ ಸಿದ್ಧಪಡಿಸಲಾಗುತ್ತಿದ್ದು, ಸೋಷಿಯಲ್ ಮೀಡಿಯಾ (Social Media)ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
‘ದಿ ಗ್ರೇಟ್ ಇಂಡಿಯನ್ ಫುಡೀ’ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ, ವ್ಯಕ್ತಿಯೊಬ್ಬರು ಮಸಾಲಾ ದೋಸೆ ಐಸ್‌ಕ್ರೀಂ ತಯಾರಿಸುವುದನ್ನು ಕಾಣಬಹುದು. ಇದನ್ನು ತಯಾರಿಸಲು ಮೊದಲಿಗೆ ದೋಸೆಯನ್ನು ಪುಡಿ ಮಾಡಿಕೊಂಡು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವೆನಿಲ್ಲಾ ಐಸ್ ಕ್ರೀಂ ಸೇರಿಸುತ್ತಾರೆ. ನಂತರ ದೋಸೆ ಮತ್ತು ಐಸ್ ಕ್ರೀಂನ್ನು ಚೆನ್ನಾಗಿ ಮಿಕ್ಸ್ ಮಾಡಿ ಹರಡಿಕೊಳ್ಳುತ್ತಾರೆ. ನಂತರ ಐಸ್ ಕ್ರೀಂನ ರೋಲ್‌ಗಳನ್ನು ಕಟ್ ಮಾಡಿ ತೆಗೆಯುತ್ತಾರೆ. ಬಳಿಕ ಆಲೂಗಡ್ಡೆಯ ಪಲ್ಯ ಮತ್ತು ಚಟ್ನಿಯೊಂದಿಗೆ ಅದನ್ನು ಸರ್ವ್ ಮಾಡುವುದನ್ನು ನೋಡಬಹುದು.
ಮಸಾಲೆ ಹಾಗೂ ಐಸ್ ಕ್ರೀಂ ಕಾಂಬಿನೇಷನ್ ನೋಡಲು ಅದ್ಭುತವಾಗಿ ಕಾಣುತ್ತದೆ. 'ಮಸಾಲಾ ದೋಸೆ ಐಸ್ ಕ್ರೀಮ್ ರೋಲ್' ನ್ನು ಫಟಾಫಟ್ ತಯಾರಿಸುವ ರೀತಿಯೂ ಚಕಿತಗೊಳಿಸುತ್ತದೆ. ಹೀಗಾಗಿಯೇ ಈ ವೀಡಿಯೋ (Video)ವನ್ನು ಇಲ್ಲಿಯವರೆಗೆ 1.5 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಇಲ್ಲಿಯವರೆಗೆ 18,494ಕ್ಕೂ ಹೆಚ್ಚು ಮಂದಿ ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ. 'ಮಸಾಲಾ ದೋಸೆ ಐಸ್ ಕ್ರೀಮ್ ರೋಲ್' ತಯಾರಿಸುವ ವೀಡಿಯೋಗೆ ಮೂರು ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.
South Indian Special Food: ಇಡ್ಲಿ ಅಲ್ಲ, ಕೊಟ್ಟೆ ಕಡುಬು ತಿಂದ್ರೆ ಆರೋಗ್ಯಕ್ಕೆ ಬೆಸ್ಟ್
ಕೆಲವರು ಇದೊಂದು ಡಿಫರೆಂಟ್ ಫುಡ್, ನೋಡಲು ಖುಷಿಯಾಗುತ್ತದೆ ಎಂದರೆ, ಇನ್ನು ಕೆಲವರು ಇದೆಂಥಹಾ ಅಸಹ್ಯ ಕಾಂಬಿನೇಷನ್ ಎಂದು ಕಮೆಂಟಿಸಿದ್ದಾರೆ. ಇನ್ನೂ ಕೆಲವೊಬ್ಬರು ಐಸ್ ಕ್ರೀಂ, ಮಸಾಲೆ ದೋಸೆ ಎರಡು ಸ್ವಾದಿಷ್ಟಕರವಾಗಿರುತ್ತದೆ. ಇದೆರಡನ್ನೂ ಮಿಕ್ಸ್ ಮಾಡಿ ಕೆಟ್ಟ ಕಾಂಬಿನೇಷನ್ ಮಾಡಿದ್ದೀರಿ ಎಂದು ಹೀಯಾಳಿಸಿದ್ದಾರೆ. ಇನ್ನು ಕೆಲ ಮಂದಿ, ದೋಸೆಯೆಂದರೆ ಇಷ್ಟ. ಆದರೆ ಇದೇನು ವಿಚಿತ್ರ ಎಂದಿದ್ದಾರೆ. ಒಟ್ನಲ್ಲಿ 'ಮಸಾಲೆ ದೋಸೆ ಐಸ್ ಕ್ರೀಮ್ ರೋಲ್' ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿರೋದಂತೂ ನಿಜ.