Asianet Suvarna News Asianet Suvarna News

ಬೇಕಾಬಿಟ್ಟಿ ಚಾಕೋಲೇಟ್ ತಿನ್ನೋರ ಗಮನಕ್ಕೆ: ಇದು ಎಷ್ಟು ಸಿಹಿಯೋ ಅಷ್ಟೇ ಆರೋಗ್ಯಕ್ಕೆ ಕಹಿ!

ಚಾಕೋಲೇಟ್ ಎಲ್ಲರ ಫೆವರೆಟ್. ಇದನ್ನು ನಿತ್ಯ ಸೇವನೆ ಮಾಡೋದು ತುಂಬಾ ಡೇಂಜರಸ್. ಇದ್ರಲ್ಲಿರುವ ಕೆಲ ಲೋಹ ನಮ್ಮ ಆರೋಗ್ಯ ಹಾಳು ಮಾಡುತ್ತದೆ. ಕ್ಯಾನ್ಸರ್ ನಂತಹ ರೋಗಕ್ಕೆ ಕಾರಣವಾಗುತ್ತದೆ. 

Dangerous Amounts Of Lead And Cadmium Are Being Found In Chocolate roo
Author
First Published Oct 28, 2023, 2:49 PM IST

ಚಾಕೋಲೇಟ್ ಯಾರಿಗೆ ಇಷ್ಟವಿಲ್ಲ.. ಈ ಪ್ರಶ್ನೆ ಕೇಳಿದ್ರೆ ಬಹುಷ್ಯ ಒಂದೆರಡು ಕೈ ಮಾತ್ರ ಮೇಲೆ ಬರಬಹುದು. ಯಾಕೆಂದ್ರೆ ಚಾಕೋಲೇಟ್ ಇಷ್ಟಪಡದ ಜನರಿಲ್ಲ. ಊಟವಾದ್ಮೇಲೆ, ಆಹಾರ ಸೇವನೆ ಮಾಡಿದ್ಮೇಲೆ ಸಿಹಿ ತಿನ್ನುವ ಅಭ್ಯಾಸವನ್ನು ಅನೇಕರು ಹೊಂದಿರುತ್ತಾರೆ. ಅವರ ಕೈಗೆ ಮೊದಲು ಸಿಗೋದು ಚಾಕೋಲೇಟ್. ಮಕ್ಕಳು ಯಾವ ಸಮಯದಲ್ಲಿ ನೀಡಿದ್ರೂ ಚಾಕೋಲೇಟ್ ಬೇಡ ಎನ್ನಲು ಸಾಧ್ಯವೇ ಇಲ್ಲ. ಒಂದೇ ಬೈಟಕ್ ಗೆ ದೊಡ್ಡ ದೊಡ್ಡ ಚಾಕೋಲೇಟ್ ಖಾಲಿ ಮಾಡೋರಿದ್ದಾರೆ. ಪ್ರತಿ ದಿನ ಒಂದಾದ್ರೂ ಚಾಕೋಲೇಟ್ ತಿನ್ನದೆ ಹೋದ್ರೆ ಹೇಗೆ ಎನ್ನುವವರೂ ಇದ್ದಾರೆ. ನಿಮ್ಮ ಚಾಕೋಲೇಟ್ ಪ್ರೀತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಸೂಕ್ತ. ಈ ಚಾಕೋಲೇಟ್ ಸದ್ದಿಲ್ಲದೆ ನಿಮ್ಮ ಆರೋಗ್ಯವನ್ನು ಹಾಳು ಮಾಡ್ತಿದೆ. ದೊಡ್ಡ ಖಾಯಿಲೆಗಳಿಗೆ ಕಾರಣವಾಗುವ ಅಂಶಗಳನ್ನು ಚಾಕೋಲೇಟ್ ನಲ್ಲಿ ಮೆಲ್ಟ್ ಮಾಡಲು ಬಳಸಲಾಗ್ತಿದೆ. ನಿಮ್ಮನ್ನು ಭಯಗೊಳಿಸೋಕೆ ನಾವು ಈ ವಿಷ್ಯವನ್ನು ಹೇಳ್ತಿಲ್ಲ. ತನಿಖೆಯೊಂದರಲ್ಲಿ ಈ ಭಯಾನಕ ಸಂಗತಿ ಹೊರಗೆ ಬಿದ್ದಿದೆ.

ಅಮೆರಿಕ (America) ದ ಲಾಭೋದ್ದೇಶವಿಲ್ಲದ ಸಂಸ್ಥೆಯೊಂದು ಗ್ರಾಹಕ ವೇದಿಕೆ ಸಹಾಯದಿಂದ ವಿವಿಧ ಚಾಕೊಲೇಟ್ (Chocolate) ಉತ್ಪನ್ನಗಳನ್ನು ತನಿಖೆ ಮಾಡಿದೆ. ಈ ತನಿಖೆಯಲ್ಲಿ ಸೀಸ (lead) ಮತ್ತು ಕ್ಯಾಡ್ಮಿಯಂನಂತಹ ಹೆಚ್ಚಿನ ಪ್ರಮಾಣದ ಹಾನಿಕಾರಕ ಲೋಹ ಚಾಕೋಲೇಟ್ ನಲ್ಲಿ ಇರೋದು ಕಂಡು ಬಂದಿದೆ.  

ಕಪ್ಪು ಒಣದ್ರಾಕ್ಷಿ ನೀರು ಸೇವಿಸಿದ್ರೆ ಗರ್ಭಧಾರಣೆ ಸುಲಭ, ಲೈಂಗಿಕ ಆರೋಗ್ಯಕ್ಕೂ ಬೆಸ್ಟ್ ಮದ್ದು!

48 ಚಾಕೊಲೇಟ್ ಉತ್ಪನ್ನಗಳನ್ನು ತನಿಖೆ ಮಾಡಲಾಗಿದೆ. ಅದರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಅಂದ್ರೆ 16 ಉತ್ಪನ್ನಗಳಲ್ಲಿ  ಸೀಸ ಮತ್ತು ಕ್ಯಾಡ್ಮಿಯಂನಂತಹ ಭಾರೀ ಲೋಹ ಇರುವುದು ಪತ್ತೆಯಾಗಿದೆ. ಡಾರ್ಕ್ ಚಾಕೊಲೇಟ್ ಬಾರ್, ಮಿಲ್ಕ್ ಚಾಕೊಲೇಟ್ ಬಾರ್, ಕೋಕೋ ಪೌಡರ್, ಚಾಕೊಲೇಟ್ ಚಿಪ್ಸ್ ಸೇರಿದಂತೆ 7 ವಿಭಾಗಗಳ ಒಟ್ಟು 48 ಉತ್ಪನ್ನಗಳ ತನಿಖೆ ನಡೆದಿದೆ. ಅಮೆರಿಕದ ಅತಿದೊಡ್ಡ ಚಾಕೊಲೇಟ್ ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಹರ್ಷೆಸ್ ಕೂಡ ತನ್ನ ಉತ್ಪನ್ನಗಳಲ್ಲಿ ಈ ಭಾರವಾದ ಲೋಹಗಳನ್ನು ಬಳಸುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಈ ಲೋಹಗಳನ್ನು ಬಳಕೆ ಮಾಡ್ತಿದ್ದು, ಅದನ್ನು ಕಡಿಮೆ ಮಾಡುವಂತೆ ಸಂಸ್ಥೆಗೆ ವಿನಂತಿ ಮಾಡಲಾಗಿದೆ. ಹಿಂದಿನ ವರ್ಷವೂ ಇದ್ರ ಬಗ್ಗೆ ತನಿಖೆ ನಡೆದಿತ್ತು. ಡಾರ್ಕ್ ಚಾಕೋಲೇಟ್ ಒಂದರಲ್ಲಿ ಶೇಕಡಾ ೨೩ರಷ್ಟು ಸೀಸ ಮತ್ತು ಕ್ಯಾಡ್ಮಿಯಮ್ ಪತ್ತೆಯಾಗಿತ್ತು.

ಖಾಲಿ ಹೊಟ್ಟೇಲಿ ಹಸಿ ತೆಂಗಿನಕಾಯಿ ತುರಿ ತಿಂದ್ರೆ ಇಷ್ಟೆಲ್ಲಾ ಲಾಭ ಉಂಟಂತೆ!

ಸೀಸ, ಕ್ಯಾಡ್ಮಿಯಮ್‌ನಂತಹ ಭಾರವಾದ ಲೋಹಗಳು ನೈಸರ್ಗಿಕವಾಗಿ ದೊರೆಯುತ್ತವೆ. ಇವುಗಳನ್ನು ಆಟೋಮೊಬೈಲ್  ನಲ್ಲಿ ಬಣ್ಣಕ್ಕೆ, ಹೇರ್ ಡೈಗೆ, ಆಭರಣಗಳಿಗೆ ಮತ್ತು ಕ್ಯಾಂಡಿ ಸೇರಿದಂತೆ ಅನೇಕ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತದೆ. ಇವುಗಳ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಸೀಸ ಮತ್ತು ಕ್ಯಾಡ್ಮಿಯಮ್ ಅತಿಯಾದ ಸೇವನೆಯಿಂದಾಗುವ ನಷ್ಟ : ದಿನಕ್ಕೆ ಒಂದು ಚಾಕೋಲೇಟ್ ತಿಂದ್ರೆ ನಷ್ಟವೇನಿಲ್ಲ ಎಂದ್ಕೊಳ್ಬೇಡಿ. ಡಾರ್ಕ್ ಚಾಕೋಲೇಟ್ ಒಳ್ಳೆಯದು ಎಂದು ತಿನ್ನುತ್ತಿದ್ರೂ ಅದನ್ನು ಕಡಿಮೆ ಮಾಡುವುದು ಅಥವಾ ಸೇವನೆ ಬಿಡೋದು ಒಳ್ಳೆಯದು. ಮಕ್ಕಳಿಂದ ಚಾಕೋಲೇಟ್ ದೂರವಿಟ್ಟರೆ ಬಹಳ ಅನುಕೂಲ. ಈ ಸೀಸ ಮತ್ತು ಕ್ಯಾಡ್ಮಿಯಮ್ ಬೆರೆಸಿದ ಚಾಕೋಲೇಟ್ ಕ್ಯಾನ್ಸರ್ ನಂತಹ ಅಪಾಯಕಾರಿ ರೋಗಕ್ಕೆ ಕಾರಣವಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಮೂತ್ರಪಿಂಡದ ಸಮಸ್ಯೆ ಈ ಚಾಕೋಲೇಟ್ ತಿನ್ನೋದ್ರಿಂದ ಬರುವ ಅಪಾಯವಿದೆ. ಮೆದುಳಿನ ಸಮಸ್ಯೆ, ಅಧಿಕ ರಕ್ತದೊತ್ತಡದಂತಹೆ ಸಮಸ್ಯೆ ಕೂಡ ನಿಮ್ಮನ್ನು ಕಾಡುವ ಅಪಾಯವಿದೆ. ಗರ್ಭಿಣಿಯರಿಗೆ ಇದು ಬಹಳ ಅಪಾಯಕಾರಿ. ತಾಯಿ ಹಾಗೂ ಮಗುವಿನ ಆರೋಗ್ಯವನ್ನು ಇದು ಏರುಪೇರು ಮಾಡುತ್ತದೆ. ದೀರ್ಘಕಾಲ ಸೀಸ ಮತ್ತು ಕ್ಯಾಡ್ಮಿಯಮ್ ಸೇವನೆ ಮೂಳೆ ಸವೇತ, ಶ್ವಾಸಕೋಶ ಸಮಸ್ಯೆಗೆ ಕಾರಣವಾಗುತ್ತದೆ.
 

Follow Us:
Download App:
  • android
  • ios