ಮನೆಯಲ್ಲಿ ರುಚಿಕರ ಬಾಳೆಕಾಯಿ ಚಿಪ್ಸ್ ಮಾಡೋದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್!
ಸಂಜೆ ತಿಂಡಿಗೆ ಪರ್ಫೆಕ್ಟ್, ಮನೆಯಲ್ಲಿ ಮಾಡಿ ಸೌತ್ ಇಂಡಿಯನ್ ಸ್ಟೈಲ್ ಬಾಳೆಹಣ್ಣಿನ ಚಿಪ್ಸ್. ಈ ರೆಸಿಪಿ ನಿಮ್ಮ ಜೇಬಿಗೂ ಹಗುರ, ಆರೋಗ್ಯಕ್ಕೂ ಒಳ್ಳೆಯದು!

ಚಿಪ್ಸ್ ತಿನ್ನೋದ್ಯಾರಿಗೆ ಇಷ್ಟ ಆಗಲ್ಲ ಹೇಳಿ? ತಿಂಡಿಯಾಗಿ ನಾವು ಹೆಚ್ಚಾಗಿ ಹೊರಗಡೆಯಿಂದ ಆಲೂಗೆಡ್ಡೆ ಚಿಪ್ಸ್ ಅಥವಾ ಬಾಳೆಹಣ್ಣಿನ ಚಿಪ್ಸ್ ತರಿಸಿಕೊಂಡು ತಿಂತೀವಿ. ಅದು ನಮ್ಮ ಜೇಬನ್ನೂ ಖಾಲಿ ಮಾಡುತ್ತೆ, ಆರೋಗ್ಯಕ್ಕೂ ಒಳ್ಳೆಯದಲ್ಲ. ಇಲ್ಲಿ ನಾವು ಬಾಳೆಹಣ್ಣಿನ ಚಿಪ್ಸ್ ಮಾಡೋ ರೆಸಿಪಿ ಹೇಳ್ತೀವಿ. ಸಂಜೆ ತಿಂಡಿಗೆ ಪರ್ಫೆಕ್ಟ್ ಆಪ್ಷನ್. ಮನೆಯಲ್ಲಿ ಸೌತ್ ಇಂಡಿಯನ್ ಬಾಳೆಹಣ್ಣಿನ ಚಿಪ್ಸ್ ಮಾಡೋ ಸಿಂಪಲ್ ರೆಸಿಪಿ ನೋಡೋಣ:
ಬಾಳೆಹಣ್ಣಿನ ಚಿಪ್ಸ್‌ಗೆ ಬೇಕಾಗುವ ಸಾಮಗ್ರಿಗಳು:
4-5 ಕಚ್ಚಾ ಬಾಳೆಕಾಯಿಗಳು
2-4 ಕಪ್ ನೀರು
2 ದೊಡ್ಡ ಚಮಚ ಉಪ್ಪು
1 ಚಿಕ್ಕ ಚಮಚ ಅರಿಶಿನ ಪುಡಿ
2 ಕಪ್ ತೆಂಗಿನ ಎಣ್ಣೆ
ಇದನ್ನೂ ಓದಿ: ಈರುಳ್ಳಿ ದೀರ್ಘಕಾಲ ಹಾಳಾಗದಂತೆ ಸಂಗ್ರಹಿಸಲು ಸಿಂಪಲ್ ಟಿಪ್ಸ್: ಈ ತರಕಾರಿ ಜೊತೆಗೆ ಇಡಬೇಡಿ!
ಬಾಳೆಹಣ್ಣಿನ ಚಿಪ್ಸ್ ಮಾಡುವ ವಿಧಾನ
1. ಬಾಳೆಕಾಯಿ ಸಿಪ್ಪೆ ಸುಲಿದು ಕತ್ತರಿಸಿ: ಕಚ್ಚಾ ಬಾಳೆಕಾಯಿ ತೆಗೆದುಕೊಂಡು ಸಿಪ್ಪೆ ಸುಲಿದು, ತೆಳುವಾಗಿ ಸಮನಾಗಿ ಹೋಳುಗಳನ್ನಾಗಿ ಕತ್ತರಿಸಿ. ಹೋಳುಗಳು ತೆಳುವಾಗಿದ್ದರೆ ಚೆನ್ನಾಗಿ ಕರಿಯಬಹುದು. ತಿನ್ನಲು ಕೂಡ ಕ್ರಿಸ್ಪಿ ಆಗಿರುತ್ತದೆ.
2. ಹೋಳುಗಳನ್ನು ನೀರಿನಲ್ಲಿ ನೆನೆಸಿ: ಒಂದು ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ. ಬಾಳೆಹಣ್ಣಿನ ಹೋಳುಗಳನ್ನು ಈ ನೀರಿನಲ್ಲಿ 10-15 ನಿಮಿಷ ನೆನೆಸಿಡಿ.
3. ಹೆಚ್ಚಿನ ನೀರು ತೆಗೆದುಹಾಕಿ: ಬಾಳೆಕಾಯಿ ಹೋಳುಗಳನ್ನು ನೆನೆಸಿಟ್ಟು 10-15 ನಿಮಿಷದ ನಂತರ ಹೋಳುಗಳಿಂದ ಹೆಚ್ಚಿನ ನೀರು ತೆಗೆದುಹಾಕಿ, ಅವುಗಳನ್ನು ಕಿಚನ್ ಪೇಪರ್ ಮೇಲೆ ಇಟ್ಟು ಒಣಗಿಸಿ. ಅಥವಾ ಕಾಟನ್ ಬಟ್ಟೆಯಿಂದ ಒರೆಸಬಹುದು.
4. ಡೀಪ್ ಫ್ರೈ ಮಾಡಿ: ಒಂದು ಪಾತ್ರೆಯಲ್ಲಿ ಮಧ್ಯಮ ಉರಿಯಲ್ಲಿ ತೆಂಗಿನ ಎಣ್ಣೆ ಕಾಯಿಸಿ. ಎಣ್ಣೆ ಕಾದ ನಂತರ ಬಾಳೆಕಾಯಿ ಹೋಳುಗಳನ್ನು ಹಾಕಿ, ಕಂದು ಬಣ್ಣ ಬರುವವರೆಗೆ, ಕ್ರಿಸ್ಪಿ ಆಗುವವರೆಗೆ ಕರಿಯಬೇಕು.
ಇದನ್ನೂ ಓದಿ: ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ 7 ಚಟಪಟ ತಿಂಡಿಗಳು
5. ಚಿಪ್ಸ್‌ಗೆ ಉಪ್ಪು ಹಾಕಿ: ಚಿಪ್ಸ್‌ಗಳನ್ನು ಪಾತ್ರೆಯಿಂದ ತೆಗೆದು ಕಿಚನ್ ಪೇಪರ್ ಮೇಲೆ ಇಟ್ಟು ಹೆಚ್ಚಿನ ಎಣ್ಣೆ ತೆಗೆದುಹಾಕಿ. ತಣ್ಣಗಾದ ನಂತರ ಸ್ವಲ್ಪ ಉಪ್ಪು ಹಾಕಿ, ಏರ್‌ಟೈಟ್ ಡಬ್ಬದಲ್ಲಿ ಶೇಖರಿಸಿ. ಇವುಗಳನ್ನು ಯಾವುದೇ ಅನುಮಾನವಿಲ್ಲದೇ ನೀವು ತಿನ್ನಬಹುದು. ಇದು ಆರೋಗ್ಯಕರ ತಿಂಡಿಯಾಗಿದೆ. ಮಕ್ಕಳು, ದೊಡ್ಡವರು, ವಯಸ್ಸಾದವರು ಯಾರಿಗೂ ಇದು ತಿನ್ನೋಕೆ ತೊಂದರೆ ಆಗಲ್ಲ.