ಚಪಾತಿ ಜೊತೆ ಸವಿಯಲು ಸೂಪರ್ ಕೆನೆ ಮೊಟ್ಟೆ ಕರಿ ಮಾಡಿ
ಮೊಟ್ಟೆಗಳಿಂದ ತುಂಬಾ ಆರೋಗ್ಯ ಪ್ರಯೋಜನಗಳಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ರೂ ಯಾವಾಗಲೂ ಬೇಯಿಸಿದ ಮೊಟ್ಟೆಯನ್ನು ತಿನ್ನೋಕೆ ಬೇಜಾರು ಅಲ್ವಾ. ಹಾಗಾಗಿ ಮೊಟ್ಟೆಯಿಂದ ಮಾಡಬಹುದಾದ ಸ್ಪೆಷಲ್ ರೆಸಿಪಿಯೊಂದು ಇಲ್ಲಿದೆ.
ದಿನಕ್ಕೊಂದು ಮೊಟ್ಟೆ ತಿಂದ್ರೆ ಯಾವುದೇ ಕಾಯಿಲೆಯಿಲ್ಲದೆ ಆರೋಗ್ಯವಾಗಿರಬಹುದು ಎಂದು ತಿಳಿದವರು ಹೇಳ್ತಾರೆ. ಮೊಟ್ಟೆ ದೇಹಕ್ಕೆ ಪ್ರೋಟೀನ್ ಮತ್ತು ಒಮೆಗಾ -3 ಆಸಿಡ್ ಗಳಂತಹ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಮೊಟ್ಟೆ ತಿನ್ನೋದರ ಪ್ರಯೋಜನಗಳಲ್ಲಿ ತೂಕ ನಿಯಂತ್ರಿಸೋದು, ಕಣ್ಣಿನ ಆರೋಗ್ಯ ಸುಧಾರಿಸೋದು, ಪ್ರೋಟೀನ್ ಮತ್ತು ಒಮೆಗಾ -3 ಆಸಿಡ್ ಗಳಂತಹ ಅನೇಕ ಪೋಷಕಾಂಶಗಳನ್ನು ಒದಗಿಸೋದು ಇತ್ಯಾದಿ ಸೇರಿವೆ. ಮೊಟ್ಟೆ ಪ್ರೋಟೀನ್ ನ ಅತ್ಯುತ್ತಮ ಮೂಲ, ಜೊತೆಗೆ ವಿಟಮಿನ್ ಬಿ 12, ಬಯೋಟಿನ್, ಥಯಾಮಿನ್ ಮತ್ತು ಸೆಲೆನಿಯಂ ಸಹ ಸೇರಿವೆ. ಅಷ್ಟೇ ಅಲ್ಲ ಮೊಟ್ಟೆ ಅಗತ್ಯವಿರುವ ಎಲ್ಲಾ ಒಂಬತ್ತು ಅಮೈನೋ ಆಮ್ಲಗಳನ್ನು ಹೊಂದಿವೆ. ಅವು ದೇಹದ ಅಗತ್ಯಗಳನ್ನು ಪೂರೈಸುತ್ತವೆ. ಅಲ್ಲದೇ ಮೊಟ್ಟೆಯಲ್ಲಿ ವಿಟಮಿನ್ ಎ, ಬಿ, ಕ್ಯಾಲ್ಸಿಯಂ, ರಂಜಕದಂತಹ ಪೋಷಕಾಂಶಗಳ ಆಗರವಾಗಿದೆ.
ನಮ್ಮಲ್ಲಿ ಎಷ್ಟೋ ಮಂದಿ ಪ್ರೋಟೀನ್ ಭರಿತ ಆಹಾರವನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಆದರೆ ಹಾಗೆ ಮಾಡಲು ವಿಫಲರಾಗುತ್ತಾರೆ. ಯಾಕೆಂದರೆ ಪನೀರ್, ಸಲಾಡ್ ಮೊದಲಾದವುಗಳನ್ನು ಯಾವಾಗಲೂ ಸಿದ್ಧಪಡಿಸಲು ಕಷ್ಟವಾಗುತ್ತದೆ. ಆದರೆ ಯಾವುದೇ ದಿನದಲ್ಲಿ ಯಾವುದೇ ಸಮಯದಲ್ಲಿ ಸೇವಿಸಬಹುದಾದ ಯಾವುದೇ ಪ್ರೋಟೀನ್-ಪ್ಯಾಕ್ಡ್ ಅಂಶವಿದ್ದರೆ ಅದು ಮೊಟ್ಟೆಗಳು. ಮೊಟ್ಟೆಗಳು (Egg)ಸುಲಭವಾಗಿ ಲಭ್ಯವಿರುತ್ತವೆ. ದುಬಾರಿ ಅಲ್ಲ ಮತ್ತು ಬೇಯಿಸುವುದು ಸುಲಭ. ಆದರೂ ಯಾವಾಗಲೂ ಒಂದೇ ರೀತಿಯ ಮೊಟ್ಟೆಯ ಪಾಕವಿಧಾನ (Recipe)ಗಳನ್ನು ತಿಂದು ನಿಮಗೆ ಬೇಸರವಾಗಿದ್ದರೆ, ಕೆನೆ ಮೊಟ್ಟೆ ಕರಿಯನ್ನು ಪ್ರಯತ್ನಿಸಬಹುದು.
Health Foods: ಪ್ರೀತಿ ಹೆಚ್ಚಾಗ್ಬೇಕಂದ್ರೆ ಇಂದಿನಿಂದ್ಲೇ ಇವನ್ನು ತಿನ್ನಿ
ಕೆನೆ ಮೊಟ್ಟೆ ಕರಿ ಎಂದರೇನು ?
ಹೆಸರೇ ಸೂಚಿಸುವಂತೆ, ಈ ಕೆನೆ ಮೊಟ್ಟೆ ಮೇಲೋಗರವು ಸೂಕ್ಷ್ಮವಾದ ಮತ್ತು ತಿಳಿ ಸುವಾಸನೆಗಳನ್ನು ಹೊಂದಿದ್ದು ಊಟ, ಚಪಾತಿಯೊಂದಿಗೆ ಸವಿಯಲು ಸೂಕ್ತವಾಗಿದೆ. ಆದರೆ ಈ ಪಾಕವಿಧಾನಲ್ಲಿ ಸಂಪೂರ್ಣವಾಗಿ ಕೆನೆ ಬಳಸುವುದಿಲ್ಲ. ಪರಿಮಳವನ್ನು ಹೆಚ್ಚಿಸಲು ಮತ್ತು ರುಚಿಯಲ್ಲಿ ಉತ್ಕೃಷ್ಟಗೊಳಿಸಲು ಮಾತ್ರ ಮಲೈ ಮತ್ತು ಹಾಲನ್ನು (Milk) ಸೇರಿಸಲಾಗುತ್ತದೆ. ಕರಿಯನ್ನು ಹೆಚ್ಚು ಖಾರ ಮಾಡಲು ಬಯಸಿದರೆ, ನೀವು ಇದಕ್ಕೆ ಹಸಿರು ಮೆಣಸಿನಕಾಯಿಯೊಂದಿಗೆ (Green chillies) ಜೋಡಿಸಬಹುದು. ನೀವು ಅತಿಥಿಗಳು ಬರುವಾಗ ಮತ್ತು ಏನು ಬೇಯಿಸುವುದು ಎಂದು ಖಚಿತವಾಗಿಲ್ಲದಿದ್ದಾಗ ಈ ಪಾಕವಿಧಾನವನ್ನು ಮಾಡಲು ಅದ್ಭುತವಾಗಿದೆ. 15 ನಿಮಿಷಗಳಲ್ಲಿ, ಬಿಸಿ ಬಿಸಿಯಾದ ಕೆನೆ ಮೊಟ್ಟೆ ಕರಿ ಸಿದ್ಧವಾಗಿರುತ್ತದೆ.
ಕ್ರೀಮ್ ಎಗ್ ಕರಿ ರೆಸಿಪಿ ಮಾಡುವ ವಿಧಾನ
ಮೊದಲಿಗೆ ಮೊಟ್ಟೆಗಳನ್ನು ಬೇಯಿಸಿ, ನಂತರ ಅರ್ಧ ಸ್ಲೈಸ್ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆ (Oil)ಯನ್ನು ಬಿಸಿ ಮಾಡಿ, ಈರುಳ್ಳಿ-ಮೆಣಸಿನಕಾಯಿ ಪೇಸ್ಟ್ ಅನ್ನು ಸೇರಿಸಿ ಮತ್ತು ಕಂದುಬಣ್ಣವನ್ನು ತಡೆಯಲು ನಿರಂತರವಾಗಿ ಬೆರೆಸಿ. ಸ್ವಲ್ಪ ಸಮಯದ ನಂತರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಬೆರೆಸಿ, ಉಪ್ಪು, ಧನಿಯಾ, ಜೀರಿಗೆ ಪುಡಿ ಮತ್ತು ಕರಿಮೆಣಸಿನ ಪುಡಿಯನ್ನು ಇದಕ್ಕೆ ಸೇರಿಸಿ ಮತ್ತು ಮಸಾಲಾ ಎಣ್ಣೆಯನ್ನು ಬದಿಗಳಲ್ಲಿ ಬಿಡುವವರೆಗೆ ಬೇಯಿಸಬೇಕು.
ರಾಷ್ಟ್ರೀಯ ಮೊಟ್ಟೆ ದಿನ 2022: ದಿನಕ್ಕೊಂದು ಮೊಟ್ಟೆ ತಿನ್ನಿ ಅಂತಾರಲ್ಲ, ಯಾಕೇಂತ ತಿಳ್ಕೊಳ್ಳಿ
ಮಸಾಲಾ ಸರಿಯಾಗಿ ಬೆಂದ ಮೇಲೆ ಉರಿಯನ್ನು ಆಫ್ ಮಾಡಿ. ಈಗ ಎಚ್ಚರಿಕೆಯಿಂದ ಹಾಲು ಸೇರಿಸಿ. ಸ್ವಲ್ಪ ಸಮಯದವರೆಗೆ ದಪ್ಪವಾಗಲು ಅನುಮತಿಸಿ. ಮುಂದೆ, ಸ್ವಲ್ಪ ಕೆನೆ ಸೇರಿಸಿ. ಕತ್ತರಿಸಿದ ಮೊಟ್ಟೆಗಳನ್ನು ಹಾಕಿ ಮತ್ತು ಅವುಗಳನ್ನು ಬಿಸಿ ಮಾಡಲು ಬಿಡಿ. ಧನಿಯಾ ಎಲೆಗಳಿಂದ ಅಲಂಕರಿಸಿ ಮತ್ತು ಬಡಿಸಿ. ಇದನ್ನು ಅನ್ನ ಮತ್ತು ಚಪಾತಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.