ತಾಜ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ರಾಜ ಮರ್ಯಾದೆ, ರತನ್ ಟಾಟಾ ಸೂಚನೆ ಭಾರಿ ಮೆಚ್ಚುಗೆ!

ಮುಂಬೈ ತಾಜ್ ಹೊಟೆಲ್ ಯಾರಿಗೆ ಗೊತ್ತಿಲ್ಲ ಹೇಳಿ? ದುಬಾರಿ ಹಾಗೂ ಐಷಾರಾಮಿ ಹೊಟೆಲ್‌ನಲ್ಲಿ ಸೆಲೆಬ್ರೆಟಿಗಳು, ಶ್ರೀಮಂತರು, ಉದ್ಯಮಿಗಳು ಉಳಿದುಕೊಳ್ಳುತ್ತಾರೆ. ಸುಮ್ಮನೆ ಹೊಟೆಲ್ ನೋಡಲು ಇಲ್ಲಿ ಅವಕಾಶವಿಲ್ಲ. ಆದರೆ ಬೀದಿ ನಾಯಿಗೆ ಫ್ರೀ ಎಂಟ್ರಿ. ಬೀದಿ ಹೊಟೆಲ್ ಒಳ ಪ್ರವೇಶಿಸಿದರೆ, ಮಲಗಿದ್ದರೆ ರಾಜ ಮರ್ಯಾದೆ ನೀಡಲಾಗುತ್ತದೆ. ಇದಕ್ಕೆ ಕಾರಣ ರತನ್ ಟಾಟಾ.
 

Stray dog can enter Mumbai Taj Hotel takes nap People praise Ratan Tata Instruction ckm

ಮುಂಬೈ(ಮೇ.30) ವಾಣಿಜನ್ಯ ನಗರಿ ಮುಂಬೈನ ಫೈವ್ ಸ್ಟಾರ್ ಹೊಟೆಲ್ ತಾಜ್ ಹೊಟೆಲ್‌ನಲ್ಲಿ ಶ್ರೀಮಂತರು, ಉದ್ಯಮಿಗಳು, ಸೆಲೆಬ್ರೆಟಿಗಳು ಉಳಿದುಕೊಳ್ಳುತ್ತಾರೆ. ತಾಜ್ ಹೊಟೆಲ್ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಹೊಟೆಲ್. ದುಬಾರಿ ಹಾಗೂ ಐಷಾರಾಮಿ ಹೊಟೆಲ್‌ನಲ್ಲಿ ವಿದೇಶಿಗರ ಸಂಖ್ಯೆ ಕೂಡ ಹೆಚ್ಚು. ಇನ್ನು ತಾಜ್ ಹೊಟೆಲ್ ಅತ್ಯಂತ ಆಕರ್ಷಕವಾಗಿದೆ. ಈ ದುಬಾರಿ ಹೊಟೆಲ್‌ನಲ್ಲಿ ಜನಸಾಮಾನ್ಯರು ಉಳಿದುಕೊಳ್ಳುವುದು ಕಷ್ಟಸಾದ್ಯ. ಆದರೆ ಬೀದಿ ನಾಯಿಗೆ ಎಂಟ್ರಿ ಫ್ರೀ. ಇಷ್ಟೇ ಅಲ್ಲ ಬೀದಿ ನಾಯಿ ಮಲಗಿದ್ದರೆ ಯಾರೂ ಎಬ್ಬಿಸುವಂತಿಲ್ಲ, ನೀರು, ಆಹಾರ ನೀಡಬೇಕು.  ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ರಾಜ ಮರ್ಯಾದೆ ನೀಡಲು ಮುಖ್ಯ ಕಾರಣ ಮಾಲೀಕ ರತನ್ ಟಾಟಾ.

ಹೌದು, ರತನ್ ಟಾಟಾ ಮಾಲೀಕತ್ವದ ತಾಜ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ಅತ್ಯಂತ ಗೌರವ ನೀಡಲಾಗುತ್ತದೆ. ರತನ್ ಟಾಟಾ ಖಡಕ್ ಸೂಚನೆ ಮೇರೆಗೆ ತಾಜ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಮುಂಬೈನಲ್ಲಿ ಬಿಸಿ ಗಾಳಿ, ಉರಿ ಬಿಸಿಲು ಹೆಚ್ಚಾಗಿದೆ. ಬಿಸಿಲಿನಿಂದ ಜನರು, ಪ್ರಾಣಿ ಪಕ್ಷಿಗಳು ಹೈರಾಣಾಗುತ್ತಿದೆ. ಹೀಗಾಗಿ ಸಂಪೂರ್ಣ ಸೆಂಟ್ರಲ್ ಎಸಿಯಿಂದ ಕೂಡಿರುವ ತಾಜ್ ಹೊಟೆಲ್‌ನ ಮುಂಭಾಗದ ರೆಸೆಪ್ಶನ್, ಲಾಂಜ್, ವಿಶ್ರಾಂತಿ ವಲಯದಲ್ಲಿ ಬೀದಿ ನಾಯಿ ಆಗಮಿಸಿದರೆ, ಮಲಗಿದ್ದರೆ ಯಾರೂ ತೊಂದರೆ ಕೊಡಬಾರದು ಎಂದು ರತನ್ ಟಾಟಾ ಸೂಚನೆ ನೀಡಿದ್ದಾರೆ.

ರತನ್ ಟಾಟಾ ಡ್ರೀಮ್ ಕಾರ್ ಕೊಂಡಾಡಿದ ಶಾಂತನು ನಾಯ್ಡು, ಭಾವನಾತ್ಮಕ ಪೋಸ್ಟ್ ವೈರಲ್!

ರತನ್ ಟಾಟಾ ಖಡಕ್ ಸೂಚನೆಯಿಂದ ತಾಜ್ ಸಿಬ್ಬಂದಿಗಳು ಯಾವುದೇ ಬೀದಿ ನಾಯಿ ತಾಜ್ ಹೊಟೆಲ್‌ಗ ಆಗಮಿಸಿದರೆ ಆತಿಥ್ಯ ನೀಡಲಾಗುತ್ತದೆ. ಬೀದಿ ನಾಯಿಯನ್ನು ಅಲ್ಲಿಂದ ಓಡಿಸುವ, ಎಬ್ಬಿಸುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ಬಿಸಿಲಿನ ತಾಪಮಾನ ಹೆಚ್ಚಾಗಿರುವ ಕಾರಣ ಇದೀಗ ಬೀದಿ ನಾಯಿಗಳು ತಾಜ್ ಹೊಟೆಲ್‌ನತ್ತ ಆಗಮಿಸಿ ವಿಶ್ರಾಂತಿ ಪಡೆಯುತ್ತಿರುವುದು ಸಾಮಾನ್ಯವಾಗಿದೆ. 

ಇತ್ತೀಚೆಗೆ ಮಾನಸಂಪನ್ಮೂಲ ಅಧಿಕಾರಿ ರುಬಿ ಖಾನ್ ಇದೇ ತಾಜ್ ಹೊಟೆಲ್‌ನಲ್ಲಿ ತಂಗಿದ್ದಾರೆ. ಈ ವೇಳೆ ತಾಜ್ ಹೊಟೆಲ್‌ನ ಮುಖ್ಯ ಪ್ರವೇಶ ದ್ವಾರದ ಒಳಗಡೆ ಬೀದಿ ನಾಯಿಯೊಂದು ಮಲಗಿತ್ತು. ಪಕ್ಕದಲ್ಲಿ ತಾಜ್ ಸಿಬ್ಬಂದಿಗಳು ತೆರಳುತ್ತಿದ್ದರೂ ಯಾರೂ ಕೂಡ ನಾಯಿಯನ್ನು ಎಬ್ಬಿಸುವವುದಾಗಲಿ, ಓಡಿಸುವುದಾಗಲಿ ಮಾಡಿಲ್ಲ. ಹೀಗಾಗಿ ಕುತೂಹಲಗೊಂಡು ತಾಜ್ ಸಿಬ್ಬಂದಿಗಳ ಬಳಿ ಕೇಳಿದಾಗ ಅಚ್ಚರಿಯಾಗಿತ್ತು ಎಂದು ರುಬಿ ಖಾನ್ ಹೇಳಿದ್ದಾರೆ.

ರತನ್ ಟಾಟಾ ಕಠಿಣ ಸೂಚನೆ ನೀಡಿದ್ದಾರೆ. ಯಾವುದೇ ಬೀದಿ ನಾಯಿ ತಾಜ್ ಹೊಟೆಲ್ ಎಂಟ್ರಾನ್ಸ್‌ನಲ್ಲಿ ಮಲಗಿದ್ದರೆ, ಒಳ ಪ್ರವೇಶಿಸಿದರೆ ಓಡಿಸುವಂತಿಲ್ಲ ಎಂದಿದ್ದಾರೆ. ಈ ಕುರಿತು ಖಡಕ್ ಸೂಚನೆ ನೀಡಿದ್ದಾರೆ ಎಂದು ಸಿಬ್ಬಂದಿ ಹೇಳಿದ್ದಾರೆ. ರತನ್ ಟಾಟಾ ಪ್ರಾಣಿ ಪ್ರೀಯರು. ಈಗಾಗಲೇ ಬೀದಿ ನಾಯಿಗಳಿಗೆ ರೇಡಿಯಂ ಕಾಲರ್ ಅಳವಡಿಸುವ ಮಹತ್ ಯೋಜನೆಗೂ ರತನ್ ಟಾಟಾ ಆರ್ಥಿಕ ನೆರವು ನೀಡಿದ್ದಾರೆ. ನಾಯಿಗಳನ್ನು ಅತೀಯಾಗಿ ಪ್ರೀತಿಸುವ ರತನ್ ಟಾಟಾ ಅವರ ಈ ನಡೆ ರುಬಿ ಖಾನ್ ಮಾತ್ರವಲ್ಲ, ಎಲ್ಲರ ಹೃದಯಕ್ಕೆ ನಾಟಿದೆ. ರತನ್ ಟಾಟಾ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ರತನ್ ಟಾಟಾ ಮಗನಂತೆ ಕಾಣೋ ಜನರಲ್ ಮ್ಯಾನೇಜರ್‌, ಅಬ್ಬಬ್ಬಾ ಕಿರಿಯ ವಯಸ್ಸಲ್ಲೇ ಮಾಡಿರೋ ಆಸ್ತಿ ಇಷ್ಟೊಂದಾ?
 

Latest Videos
Follow Us:
Download App:
  • android
  • ios