ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಇಲ್ಲಿದೆ ರುಚಿಕರವಾದ ಐಸ್ ಟೀ ಮಾಡುವ ವಿಧಾನ. ಪೌಷ್ಟಿಕಾಂಶ ತಜ್ಞೆ ಪಾಲಕ್ ನಾಗ್‌ಪಾಲ್ ಅವರ ರೆಸಿಪಿಯೊಂದಿಗೆ, ನಿಂಬೆ, ಕಿತ್ತಳೆ, ಪುದೀನಾ ಮತ್ತು ಜೇನುತುಪ್ಪ ಬಳಸಿ ಐಸ್ ಟೀ ತಯಾರಿಸಿ.
ಬೇಸಿಗೆಯಲ್ಲಿ ಹೆಚ್ಚಿನ ಜನ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಬಹುತೇಕರು ಎಳನೀರು ಕಬ್ಬುಜ್ಯೂಸ್, ಹಣ್ಣುಗಳ ರಸಕ್ಕೆ ಐಸ್ ಬೆರೆಸಿ, ಅಥವಾ ಮಿಲ್ಕ್ ಶೇಕ್ ಮಾಡಿ ಬೇಸಿಗೆಯ ದಾಹ ತಣ್ಣಿಸಿಕೊಳ್ಳಲು ಯತ್ನಿಸುತ್ತಾರೆ. ಹೀಗಿರುವಾಗ ನಾವಿಲ್ಲಿ ಬೇಸಿಗೆಯಲ್ಲಿ ಮನಸ್ಸು ಮತ್ತು ದೇಹವನ್ನು ತಂಪಾಗಿಸಲು ಒಂದು ವಿಭಿನ್ನ ಐಸ್ ಟೀ ತಯಾರಿಸುವ ವಿಧಾನದ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. . ಪೌಷ್ಟಿಕಾಂಶ ತಜ್ಞೆ ಪಾಲಕ್ ನಾಗ್‌ಪಾಲ್ ಅವರು ಈ ರೆಸಿಪಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರ. ಹಾಗಿದ್ರೆ ದೇಹಕ್ಕೆ ನಿರಾಳತೆ ನೀಡುವುದರ ಜೊತೆಗೆ ರುಚಿಕರವಾದ ಐಸ್ ಟೀ ಮಾಡೋದು ಹೇಗೆ ಅಂತಾ ಇಲ್ಲಿ ನೋಡೋಣ.
ಐಸ್ ಟೀ ಮಾಡಲು ಬೇಕಾಗುವ ಪದಾರ್ಥಗಳು
ನಿಂಬೆ ಹರ್ಬಲ್ ಟೀ ಬ್ಯಾಗ್‌ಗಳು : 2
ಬಿಸಿ ನೀರು: 1/2 ಲೀಟರ್
ಕಿತ್ತಳೆ : 1
ಪುದೀನಾ ಎಲೆಗಳು : ಸ್ವಲ್ಪ
ಜೇನುತುಪ್ಪ : 1-2 ಟೀಸ್ಪೂನ್ (ಬೇಕಿದ್ರೆ)
ತಯಾರಿಸುವ ವಿಧಾನ
ಮೊದಲು ಟೀ ಬ್ಯಾಗ್‌ಗಳನ್ನು ಬಿಸಿ ನೀರಿನಲ್ಲಿ ಹಾಕಿ 5 ರಿಂದ 7 ನಿಮಿಷಗಳ ಕಾಲ ನೆನೆಸಿಡಿ. ತಣ್ಣಗಾದ ನಂತರ ಕಿತ್ತಳೆ ಹಣ್ಣಿನ ಹೋಳುಗಳು ಮತ್ತು ಪುದೀನಾ ಎಲೆಗಳನ್ನು ಸೇರಿಸಿ. ನಂತರ ಸ್ವಲ್ಪ ಜೇನುತುಪ್ಪ ಸೇರಿಸಿ. ನಂತರ ಇದನ್ನು ಚೆನ್ನಾಗಿ ತಣ್ಣಗಾಗಲು ಫ್ರಿಡ್ಜ್‌ನಲ್ಲಿ ಇಡಿ. ಚೆನ್ನಾಗಿ ತಣ್ಣಗಾದ ನಂತರ ಸೋಸಿಕೊಳ್ಳಿ. ನಂತರ ಐಸ್ ಸೇರಿಸಿ. ನಂತರ ಗ್ಲಾಸಿನಲ್ಲಿ ಹಾಕಿ ಕುಡಿಯಿರಿ. ಈಗ ನಿಮ್ಮ ನೆಚ್ಚಿನ ಐಸ್ ಟೀ ರೆಡಿಯಾಗಿದೆ.
