Asianet Suvarna News Asianet Suvarna News

ಗ್ಯಾಸ್‌ ಸ್ಟೌವಲ್ಲಿ ಗಡುಗೆ ಇಟ್ಟು, ಅಡುಗೆ ಮಾಡುವಾಗಆಯ್ತು ಎಡವಟ್ಟು! ಅಯ್ಯಯ್ಯೋ!

ಗ್ಯಾಸ್‌ ಸ್ಟೌ ಮೇಲೆ ಮಣ್ಣಿ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಎಚ್ಚರಿಕೆಯಿಂದಿರಬೇಕು! ಫುಡ್ ಬ್ಲಾಗರ್ ಮಣ್ಣಿನ ಪಾತ್ರೆ ಗ್ಯಾಸ್‌ ಸ್ಟೌವ್ ಮೇಲೆ ಅಡುಗೆ ಮಾಡುವಾಗ ಏನಾಯಿತು ನೋಡಿ. ವೈರಲ್ ಆಗಿದೆ ಈ ವಿಡಿಯೋ!

Cooking on a gas stove with a clay pot is not right see video here rav
Author
First Published Sep 7, 2023, 11:18 AM IST

ನಮ್ಮ ಹಿರಿಯರು ಮಣ್ಣಿನ ಪಾತ್ರೆಗಳನ್ನು ಬಳಸುತ್ತಿದ್ದಾಗ ಅವು ಬಡತನದ ಸಂಕೇತಗಳಾಗಿದ್ದವು. ಸ್ಟೀಲ್ ಪಾತ್ರೆಗಳನ್ನು ಬಳಸುವುದು ಪ್ರತಿಷ್ಠೆಯ ವಿಷಯವಾಗಿತ್ತು. ಅಡುಗೆಮನೆಯಲ್ಲಿ ಸ್ಟೀಲ್ ಪಾತ್ರೆಗಳದ್ದೇ ಪಾರುಪತ್ಯ ಎಂಬಂತಾಯಿತು. ಮಣ್ಣಿನ ಮಡಕೆಗಳನ್ನು ಯಾವ ಮಟ್ಟಿಗೆ ನಿರ್ಲಕ್ಷಿಸಲಾಯಿತು ಎಂದರೆ ಅವುಗಳ ಉಪಯೋಗ ಕೇವಲ ವ್ಯಕ್ತಿ ಮೃತಪಟ್ಟಾಗ ಹೆಗಲಮೇಲೆ ಹೊತ್ತು ಮೂರು ಸುತ್ತು ತಿರುಗುವುದಕ್ಕೆ ಮಾತ್ರ ಸಿಮೀತಗೊಳಿಸಲಾಯಿತು. ಇನ್ನೇನು ಪೂರ್ತಿ ಕಣ್ಮರೆಯಾದವು ಅಂದುಕೊಂಡಿದ್ದೆವು. ಕಾಲಚಕ್ರ ಬದಲಾಯಿತು ನೋಡಿ, 

ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಅಡುಗೆಯಿಂದ ಆರೋಗ್ಯಕರ ಪ್ರಯೋಜನಗಳನ್ನು ತಿಳಿದ ಬಳಿಕ ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಅಡುಗೆ ಮಾಡುವ ಪರಿಕಲ್ಪನೆಯು ಜನಪ್ರಿಯವಾಗುತ್ತಿದೆ. ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ಅಡುಗೆ ಮಾಡುವುದು, ಜನರು ಚಟ್ನಿಗಳನ್ನು ರುಬ್ಬಲು ಮಿಕ್ಸರ್ ಬದಲು ಒರಳುಗಲ್ಲು ಬಳಸಲಾರಂಭಿಸಿದ್ದಾರೆ.

Cooking Tips : ಮಣ್ಣಿನ ಪಾತ್ರೆ ಆರೋಗ್ಯಕ್ಕೆ ಒಳ್ಳೇಯದು ಹೌದು, ಆದರೆ ಇರಲಿ ಈ ಕಡೆ ಗಮನ

ಆದರೆ ಮಣ್ಣಿನ ಪಾತ್ರೆಗಳನ್ನು ಹೇಗೆ ಬಳಸಬೇಕೆಂಬುದು ಗೊತ್ತಿಲ್ಲದಿದ್ರೆ ಅನಾಹುತಗಳು ಆಗುತ್ತವೆ. ಇತ್ತೀಚಿನ ವೈರಲ್ ವೀಡಿಯೊ ವಿವರಿಸಿದಂತೆ ಎಲ್ಲಾ ಅಡುಗೆ ವಿಧಾನಗಳು ಆಧುನಿಕ ಅಗತ್ಯಗಳಿಗೆ ಸೂಕ್ತವಲ್ಲ ಎಂಬುದನ್ನಂತೂ ತೋರಿಸಿದೆ.  ಫರ್ಹಾ ಅಫ್ರೀನ್ (@homely_ccorner) ಎಂಬ ಹೆಸರಿನ ಫುಡ್ ಬ್ಲಾಗರ್ ಒಬ್ಬರು ಮಣ್ಣಿನ ಮಡಕೆಯೊಂದಿಗೆ ಗ್ಯಾಸ್ ಸ್ಟೌವ್‌ನಲ್ಲಿ ಅಡುಗೆ ಮಾಡಿದ ಅನುಭವವನ್ನು ಇಸ್ಟ್‌ಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಗ್ಯಾಸ್‌ಸ್ಟೌನಿಂದ ಅಡುಗೆ ಮಾಡುವಾಗ ಏನಾಯಿತು ಗೊತ್ತೇ?

ಬ್ಲಾಗರ್ ತನ್ನ ಗ್ಯಾಸ್ ಸ್ಟೌವ್‌ನಲ್ಲಿ ಮಣ್ಣಿನ ಪಾತ್ರೆಯಲ್ಲಿ ಒಂದು ಟೀ ಚಮಚ ತುಪ್ಪ, ಜೀರಿಗೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಬೇಯಿಸಿದ್ದಾಳೆ. ಈ ವೇಳೆ ಗ್ಯಾಸ್ ಸ್ಟೌ ಬೆಂಕಿಯ ಜ್ವಾಲೆ ಹೆಚ್ಚಾಗಿ ಮಣ್ಣಿನ ಪಾತ್ರೆ ಒಡೆದುಹೋಗಿದೆ. ಪಾತ್ರೆಯಲ್ಲಿದ್ದ ಎಲ್ಲ ಪದಾರ್ಥವೂ ಚೆಲ್ಲಪಿಲ್ಲಿಯಾಗಿ ಬಿದ್ದಿದೆ. ಮಣ್ಣಿನ ಪಾತ್ರೆಗಳು ಗ್ಯಾಸ್‌ ಸ್ಟೌಗಳಿಗೆ ಸೂಕ್ತವಲ್ಲ. ಎಚ್ಚರಿಕೆ ವಹಿಸುವಂತೆ ಬ್ಲಾಗರ್ ಸೂಚಿಸಿದ್ದಾರೆ.

ಮಣ್ಣಿನ ಪಾತ್ರೆಯಲ್ಲಿ ತುಂಬಿಸಿಟ್ಟ ನೀರು ಕುಡಿದ್ರೆ ಅಸಿಡಿಟಿ ಸಮಸ್ಯೆ ಕಾಡಲ್ಲ

ಇನ್ನು ಮಣ್ಣಿನ ಮಡಕೆ ಒಡೆದ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆಗಳ  ಹರಿದುಬಂದಿದೆ. ವೀಡಿಯೊ ಬರೋಬ್ಬರಿ 4.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು 90 ಸಾವಿರ ಲೈಕ್‌ಗಳನ್ನು ಗಳಿಸಿದೆ. 'ಹೊಸಬರು ಮಣ್ಣಿನ ಮಡಕೆಯನ್ನು ಬಳಸುವ ಮೊದಲು ಹಿರಿಯರನ್ನು ಕೇಳಬೇಕು ಅಥವಾ ಸ್ವಲ್ಪ ಸಂಶೋಧನೆ ಮಾಡಬೇಕು. ಮಣ್ಣಿನ ಪಾತ್ರೆ ಅಡುಗೆಗೆ ಬಳಸುವುದಕ್ಕೆ ಅದರದೇ ಆದ ಒಂದು ವಿಧಾನವಿದೆ. ಎಂದು ಬಳಕೆದಾರರು ಸಲಹೆ ನೀಡಿದ್ದಾರೆ.. "ನೀವು ಅದನ್ನು ಬಳಸುವ ಮೊದಲು ರಾತ್ರಿಯಿಡೀ ನೆನೆಸಿ ನಂತರ ಅದನ್ನು ಹೆಚ್ಚಿನ ಉರಿಯಲ್ಲಿ ಬೇಯಿಸುವ ಮೊದಲು ಒಣಗಿಸಬೇಕು" ಎಂದು ಇನ್ನೊಬ್ಬರು ಹೇಳಿದ್ದಾರೆ.

ಇನ್ನೂ ಕೆಲವರು ಅಡುಗೆಗೆಂದೇ ಬೇರೆ ಬೇರೆ  ಮಣ್ಣಿನ ಪಾತ್ರೆಗಳಿವೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮಣ್ಣಿನ ಪಾತ್ರೆಗಳ ಪ್ರಾಮುಖ್ಯತೆ ಇಂದಿ ಪೀಳಿಗಿಗೆ ಅರಿವಾಗಿದೆ ಆದರೆ ಹೇಗೆ ಬಳಕೆ ಮಾಡಬೇಕೆಂಬುದರ ಬಗ್ಗೆ ಹಿರಿಯರಿಂದ ತಿಳಿದುಕೊಳ್ಳಬೇಕಾಗಿದೆ. 

Follow Us:
Download App:
  • android
  • ios