Healthy Food : ರಾತ್ರೀಯೂ ರೊಟ್ಟಿ ತಿಂತೀರಾ, ಆರೋಗ್ಯಕ್ಕೆ ಹೇಳಿ ಮಾಡಿಸಿದ್ದಲ್ಲವಿದು!

ಡಯಟ್ ಅಂದಾಗ ಮೊದಲು ನೆನಪಾಗೋದು ರೊಟ್ಟಿ. ಅನೇಕರು ಪ್ರತಿ ದಿನ ರಾತ್ರಿ ರೊಟ್ಟಿ ಸೇವನೆ ಮಾಡ್ತಾರೆ. ಆದ್ರೆ ನೈಟ್ ರೊಟ್ಟಿ ತಿನ್ನೋದು ಆರೋಗ್ಯದ ಮೇಲೆ ದುಶ್ಪರಿಣಾಮ ಬೀರುತ್ತೆ ಎನ್ನುತ್ತಾರೆ ತಜ್ಞರು.
 

Chapati Disadvantages Of Eating Roti At Night Know

ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಜನರು ಅನೇಕ ರೀತಿಯ ಕ್ರಮಗಳನ್ನು ಅನುಸರಿಸುತ್ತಾರೆ. ತೂಕ ಇಳಿಸಲು, ಶುಗರ್ ಕಂಟ್ರೋಲ್ ಮಾಡಲು  ಹೀಗೆ ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಡಯಟ್ ಅಥವಾ ವ್ಯಾಯಾಮಗಳ ಮೊರೆಹೋಗುತ್ತಾರೆ. ಒಳ್ಳೆಯ ಆರೋಗ್ಯಕ್ಕಾಗಿ ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡ್ತಿರುತ್ತಾರೆ.  

ಕೆಲವರು ವ್ಯಾಯಾಮ (Exercise) ದ ಮೂಲಕ ಉತ್ತಮ ಆರೋಗ್ಯ (Health ) ಹೊಂದಿದರೆ ಇನ್ಕೆಲವರು ಸೀಮಿತ ಆಹಾರ ಸೇವಿಸುವುದರ ಮೂಲಕ ಫಿಟ್ ಆಗಿರುತ್ತಾರೆ. ಬಹಳ ಮಂದಿ ರಾತ್ರಿ (night) ಯ ಹೊತ್ತು ಊಟ ಮಾಡದೇ ಹಣ್ಣು ತರಕಾರಿ ಅಥವಾ ಮೊಳಕೆ ಕಾಳನ್ನು ತಿನ್ನುತ್ತಾರೆ ಅಥವಾ ಹಾಲನ್ನು ಕುಡಿಯುತ್ತಾರೆ ಇಲ್ಲವೇ ಅನ್ನದ ಹೊರತಾಗಿ ರೊಟ್ಟಿ, ಚಪಾತಿ ಮುಂತಾದವುಗಳನ್ನು ತಿನ್ನುತ್ತಾರೆ. ಇಂತಹ ಡಯಟ್ ಗಳು ಶರೀರದ ಸಮತೋಲನವನ್ನು ಕಾಪಾಡುತ್ತದೆ. ಆದರೆ ಕೆಲವೊಮ್ಮೆ ಇದರಿಂದ ಅನೇಕ ಖಾಯಿಲೆಗಳು ಆವರಿಸುತ್ತವೆ. ಇಂದು ಅನೇಕ ಮಂದಿ ರಾತ್ರಿಯ ಸಮಯದಲ್ಲಿ ರೊಟ್ಟಿಯನ್ನು ಮಾತ್ರ ತಿನ್ನುತ್ತಾರೆ. ಅಂತವರು ಜಾಗರೂಕರಾಗಿರಬೇಕು. ಏಕೆಂದರೆ ಪ್ರತಿನಿತ್ಯ ರಾತ್ರಿ ರೊಟ್ಟಿಯ ಸೇವನೆ ಶರೀರಕ್ಕೆ ಬಹಳ ಅಪಾಯಕಾರಿ. ಪ್ರತಿದಿನ ರಾತ್ರಿ ರೊಟ್ಟಿ ತಿನ್ನುವುದರಿಂದ ಉಂಟಾಗುವ ನಷ್ಟಗಳು ಹೀಗಿವೆ..

BUSINESS NEWS : ಸಕ್ಕರೆ ತಿನ್ನೋದ ಈಗ್ಲೇ ಕಡಿಮೆ ಮಾಡಿಲ್ಲ ಅಂದ್ರೆ ಪರ್ಸ್ ಖಾಲಿಯಾಗುತ್ತೆ…

ತೂಕ ಹೆಚ್ಚಳ : ಸಾಮಾನ್ಯವಾಗಿ ಒಂದು ರೊಟ್ಟಿಯಲ್ಲಿ 71 ಕ್ಯಾಲೊರಿಗಳು ಇರುತ್ತದೆ. ರಾತ್ರಿಯ ಸಮಯದಲ್ಲಿ ನೀವು ಎರಡು ಅಥವಾ ಅದಕ್ಕಿಂತ ಹೆಚ್ಚು ರೊಟ್ಟಿ ತಿಂದರೆ ನಿಮ್ಮ ಶರೀರಕ್ಕೆ ಎಷ್ಟು ಕ್ಯಾಲೊರಿಗಳು ಸೇರಿಕೊಂಡವು ಎಂಬುದನ್ನು ನೀವೇ ಊಹಿಸಿ. ರೊಟ್ಟಿಯ ಜೊತೆ ಕಾಳಿನ ಪಲ್ಯ, ತರಕಾರಿ ಪಲ್ಯ ಮತ್ತು ಅನ್ನವನ್ನು ತಿನ್ನುತ್ತಾರೆ. ಇದರಿಂದ ಶರೀರದಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಾಗಿ ತೂಕ ಕೂಡ ಹೆಚ್ಚಾಗುತ್ತದೆ. ರಾತ್ರಿ ಊಟವಾದ ನಂತರ ನೀವು ವಾಕ್ ಮಾಡದೇ ಇದ್ದಲ್ಲಿ ನೀವು ರೊಟ್ಟಿ ಸೇವಿಸುವುದು ಕೂಡ ವ್ಯರ್ಥವೇ ಆಗುತ್ತದೆ. ಹಾಗಾಗಿ ರಾತ್ರಿಯ ಸಮಯದಲ್ಲಿ ಸೀಮಿತ ಆಹಾರ ಸೇವಿಸಿ, ಸ್ವಲ್ಪ ದೂರ ನಡೆಯುವ ಅಭ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು.

ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಳ (Sugar Level in Blood) : ರಾತ್ರಿಯ ಸಮಯದಲ್ಲಿ ರೊಟ್ಟಿಯ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ. ಈ ರೀತಿಯ ಅಭ್ಯಾಸ ಡಯಾಬಿಟೀಸ್ ಮತ್ತು ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಾರಕವಾಗಬಹುದು. ರೊಟ್ಟಿ ರಕ್ತದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದು ಇನ್ಸುಲಿನ್ ಉತ್ಪಾದನೆಯ ಕ್ರಿಯೆಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಶರೀರದ ಉಳಿದ ಅಂಗಗಳು ಕೂಡ ಇದರಿಂದ ತೊಂದರೆಗೆ ಒಳಗಾಗುತ್ತವೆ.

Health Tips : ಡಯಟ್‌ಗೆ ಮರುಳಾಗಬೇಡಿ, ನಿಮ್ಮ ಈ ಚಟ ಲಿವರ್ ಅನ್ನೇ ಹಾಳ್ಮಾಡ್ಬಹುದು

ಚಯಾಪಚಯ ಕ್ರಿಯೆ (Digestive Process) ಸ್ಥಗಿತಗೊಳ್ಳುತ್ತೆ :  ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾದಾಗ ಮಾತ್ರ ದೇಹಕ್ಕೆ ಶಕ್ತಿ ಸಿಗುತ್ತದೆ. ಆಹಾರ ಜೀರ್ಣವಾಗಲು ಚಯಾಪಚಯ ಕ್ರಿಯೆ ಸರಿಯಾಗಿರಬೇಕು. ಚಯಾಪಚಯ ಕ್ರಿಯೆಯು ಎಷ್ಟು ವೇಗವಾಗಿ ನಡೆಯುತ್ತದೆಯೋ ಅಷ್ಟು ಬೇಗ ತೂಕದಲ್ಲಿ ಇಳಿಕೆಯಾಗುತ್ತದೆ. ಈ ಕ್ರಿಯೆಗೆ ಕೂಡ ಶಕ್ತಿಯ ಅವಶ್ಯಕತೆ ಇರುತ್ತದೆ. ಅಂತಹ ಶಕ್ತಿ ನಾರಿನ ಪದಾರ್ಥ ಮತ್ತು ಆರೋಗ್ಯಕರ ಪಾನೀಯಗಳಲ್ಲಿ ಇರುತ್ತದೆ.

ರೊಟ್ಟಿಯು ಒಂದು ಕಾರ್ಬೊಹೈಡ್ರೇಟ್ ಆಹಾರವಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹಾಳುಮಾಡಿ ಸ್ಥಗಿತಗೊಳ್ಳುವಂತೆ ಮಾಡುತ್ತದೆ. ರೊಟ್ಟಿ ಕರುಳಿನ ಚಲನೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆ ಕಾರಣಕ್ಕಾಗಿಯೇ ರೊಟ್ಟಿಯ ಬದಲು ನಾರಿನಂಶವಿರುವ ಆಹಾರವನ್ನು ಸೇವಿಸುವುದು ಉತ್ತಮವಾಗಿದೆ. ನಾರಿನಂಶವಿರುವ ಆಹಾರಗಳು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರ ಕೂಡ ಆಗಿದೆ. ಕೆಲವರ ದೇಹ ಪ್ರಕೃತಿಗೆ ರೊಟ್ಟಿ ಹೊಂದುವುದಿಲ್ಲ. ಪ್ರತಿನಿತ್ಯ ರೊಟ್ಟಿ ಸೇವಿಸುವುದರಿಂದ ಕೆಲವರಿಗೆ ಮಲಬದ್ಧತೆಯ ಸಮಸ್ಯೆ, ಎದೆಯುರಿ, ಎಸಿಡಿಟಿ ಮುಂತಾದ ಸಮಸ್ಯೆಗಳು ಕೂಡ ಎದುರಾಗುತ್ತವೆ.
 

Latest Videos
Follow Us:
Download App:
  • android
  • ios