ಆರೋಗ್ಯಕರ ಪಾನಿಯದಿಂದ ಬೋರ್ನ್‌ವೀಟಾ ತೆಗೆದು ಹಾಕಿ, ಇ-ಕಾಮರ್ಸ್‌ಗೆ ಕೇಂದ್ರ ಸರ್ಕಾರ ಆದೇಶ!
ಕೇಂದ್ರ ಸರ್ಕಾರ ಮಹತ್ವದ ಆದೇಶ ನೀಡಿದೆ. ಬೋರ್ನ್‌ವೀಟಾ ಸೇರಿದಂತೆ ಕಲೆ ಪಾನೀಯಗಳನ್ನು ಹೆಲ್ದಿ ಡ್ರಿಂಕ್ ಪಟ್ಟಿಯಿಂದ ತೆಗೆದು ಹಾಕಲು ಇ ಕಾಮರ್ಸ್‌ಗೆ ಆದೇಶಿಸಿದೆ.
ನವದೆಹಲಿ(ಏ.13) ಉತ್ತಮ ಆರೋಗ್ಯಕ್ಕಾಗಿ ಸಾಮಾನ್ಯ ಆಹಾರದ ಜೊತೆಗೆ ವಿಟಮಿನ್‌ಯುಕ್ತ ಪಾನಿಯಗಳ ಅವಶ್ಯಕತೆ ಇದೆ. ಆದರೆ ಜಾಹೀರಾತು ನೋಡಿ ಪಾನೀಯಗಳನ್ನು ಸೇವಿಸುವುದು ಅಪಯಾಕಾರಿ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಬೋರ್ನ್‌ವೀಟಾ ಸೇರಿದಂತೆ ಇತರ ಕೆಲ ಪಾನೀಯಗಳನ್ನು ಆರೋಗ್ಯಕರ ಪಾನೀಯ ಪಟ್ಟಿಯಿಂದ ಕೈಬಿಡುವಂತೆ ಇ-ಕಾಮರ್ಸ್‌ಗೆ ಆದೇಶಿಸಿದೆ.
ಬೋರ್ನ್‌ವೀಟಾ ಸೇರಿದಂತೆ ಇತರ ಕೆಲ ಪಾನೀಯಗಳ ಕುರಿತು ಅಧ್ಯಯನ ನಡೆಸಿರುವ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ ಆಹಾರ ಸುರಕ್ಷತೆ ಕುರಿತು ವರದಿ ನೀಡಿದೆ.ಇತ್ತ ಎಫ್‌ಎಸ್‌ಎಸ್ ಆಕ್ಟ್ 2006ರ ಅಡಿಯಲ್ಲೂ ಹೆಲ್ದಿ ಡ್ರಿಂಕ್‌ನ್ನು ವ್ಯಾಖ್ಯಾನಿಸಿಲ್ಲ. ಉತ್ತಮ ಪಾನೀಯಾ ಅಥವಾ ಉತ್ತಮ ಆಹಾರ ಕುರಿತು ವ್ಯಾಖ್ಯಾನ ಅಥವಾ ಪ್ರಮಾಣೀಕೃತ ಇಲ್ಲದಿರುವ ಕಾರಣ ತಕ್ಷಣವೇ ಹೆಲ್ತಿ ಡ್ರಿಂಕ್ ಪಟ್ಟಿಯಿಂದ ಬೋರ್ನ್‌ವೀಟಾ ತೆಗೆದುಹಾಕುವಂತೆ ಇ-ಕಾಮರ್ಸ್‌ಗೆ ಸೂಚಿಸಿಲಾಗಿದೆ.
ಬೋರ್ನ್‌ವಿಟಾದಿಂದ ಚಿಕ್ಕ ಮಕ್ಕಳಲ್ಲಿ ಶುಗರ್, ಲೀಗಲ್ ನೋಟಿಸ್ ಬೆನ್ನಲ್ಲೇ ವೈರಲ್ ವಿಡಿಯೋ ಡಿಲೀಟ್!
ಆನ್‌ಲೈನ್ ಮೂಲಕ ಪಾನಿಯಾ ಸೇರಿದಂತೆ ಆಹಾರ ಖರೀದಿಸುವ ವ್ಯಾಕ್ತಿಗಳಿಗೆ ಇ-ಕಾಮರ್ಸ್ ಸೈಟ್ ಅಥವಾ ಆ್ಯಪ್‌ಗಳು ಆಯ್ಕೆಯನ್ನು ನೀಡುತ್ತದೆ. ಸಸ್ಯಾಹಾರ- ಮಾಂಸಾಹಾರ, ತರಕಾರಿ, ಹಣ್ಣು, ಹೀಗೆ ಪ್ರತಿಯೊಂದು ವಸ್ತುಗಳನ್ನು ಒಂದೊಂದು ವಿಭಾಗದ ಅಡಿಯಲ್ಲಿದೆ. ಹೀಗೆ ಬೋರ್ನ್‌ವೀಟಾವನ್ನು ಹೆಲ್ತಿ ಡ್ರಿಂಕ್ ಪಟ್ಟಿಯಲ್ಲಿ ಇ-ಕಾಮರ್ಸ್ ಪಟ್ಟಿ ಮಾಡಿದೆ. ಈ ಪಟ್ಟಿಯಿಂದ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಬೋರ್ನ್‌ವೀಟಾ ಕುರಿತು ಚರ್ಚೆ ಆರಂಭಗೊಂಡಿದ್ದು ಯೂಟ್ಯೂಬರ್ ರೇವಂತ್ ಹಿಮಂತ್‌ಸಿಂಗ್ಕಾ ತನ್ನ ವಿಡಿಯೋದಲ್ಲಿ ನೀಡಿದ ಸ್ಫೋಟಕ ಮಾಹಿತಿಯಿಂದ. ಯೂಟ್ಯೂಬರ್ ಬೋರ್ನ್‌ವೀಟ್ ಪೌಡರ್ ತಪಾಸನೆ ನಡೆಸಿದಾಗ ಅತೀಯಾದ ಸಕ್ಕರೆ, ಕೋಕೋ ಘನವಸ್ತುಗಳು ಹಾಗೂ ಹಾನಿಕಾರ ಬಣ್ಣಗಳು ಪತ್ತೆಯಾಗಿತ್ತು. ಇದು ಮಕ್ಕಳಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರವಾದ ಆರೋಗ್ಯ ಸಮಸ್ಯೆಗೆ ಕಾರಣಾಗಲಿದೆ ಅನ್ನೋ ಅಭಿಪ್ರಾಯವನ್ನು ಯೂಟ್ಯೂಬರ್ ರೇವಂತ್ ಹಿಮಂತ್‌ಸಿಂಗ್ಕಾ ವ್ಯಕ್ತಪಡಿಸಿದ್ದರು. ಈ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ತಪ್ಪು ಮಾಹಿತಿ ನೀಡುವ ಜಾಹೀರಾತು ತೆಗೆದು ಹಾಕಿ; ಬೋರ್ನ್‌ವೀಟಾಗೆ ಸೂಚನೆ
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಮಕ್ಕಳ ಹಕ್ಕುಗಳ ಆಯೋಗ(ಎನ್‌ಸಿಪಿಸಿಆರ್) ಬೋರ್ನ್‌ವೀಟಾಗೆ ಖಡಕ್ ವಾರ್ನಿಂಗ್ ನೀಡಿತ್ತು. ಮಕ್ಕಳು ಕುಡಿಯುವ ಬೋರ್ನ್‌ವೀಟಾದಲ್ಲಿ ಅಧಿಕ ಸಕ್ಕರೆ ಪ್ರಮಾಣವಿದ್ದು, ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂಬ ದೂರಿನ ಹಿನ್ನೆಲೆಯಲ್ಲಿ, ತನ್ನ ಎಲ್ಲ ದಾರಿ ತಪ್ಪಿಸುವ ಜಾಹೀರಾತು, ಪ್ಯಾಕೇಜಿಂಗ್ ಹಾಗೂ ಲೇಬಲ್‌ಗಳನ್ನು ಹಿಂತೆಗೆದುಕೊಳ್ಳುವಂತೆ ಮಕ್ಕಳ ಹಕ್ಕುಗಳ ಆಯೋಗ ಸೂಚಿಸಿತ್ತು.