ಈ ರೆಸ್ಟೋರೆಂಟ್‌ನಲ್ಲಿ ಫುಡ್ ಡೆಲಿವರಿ ಮಾಡೋದು ಬಾಡಿ ಬಿಲ್ಡರ್ಸ್..! ತಿಂಗಳ ಆದಾಯ ಲಕ್ಷ ಲಕ್ಷ
ಎಲ್ಲ ಹೋಟೆಲ್ ಉದ್ಯಮ ನಷ್ಟದಲ್ಲಿದ್ರೆ ಇಲ್ಲೊಬ್ಬ ಮಾತ್ರ ತಿಂಗಳಿಗೆ 1.5 ಮಿಲಿಯನ್ ಗಳಿಸುತ್ತಿದ್ದಾನೆ. ಈತನ ಹೋಟೆಲ್‌ನಲ್ಲಿ ಫುಡ್ ಡೆಲಿವರಿ ಮಾಡೋರು ಬಾಡಿ ಬಿಲ್ಡರ್ಸ್.
ಕೊರೋನಾ ವೈರಸ್ ಜಗತ್ತಿನಾದ್ಯಂತ ಉದ್ಯಮಗಳಿಗೆ ಭಾರೀ ಹೊಡೆತ ನೀಡಿದೆ. ಇನ್ನು ಹೋಟೆಲ್ ಉದ್ಯಮವಂತೂ ಕೇಳೋದೇ ಬೇಡ. ಕೊರೋನಾದಿಂದ ಭಾರೀ ಹೊಡೆತ ಅನುಭವಿಸಿದ ಕ್ಷೇತ್ರಗಳಲ್ಲೊಂದು ಹೊಟೇಲ್ ಉದ್ಯಮ. ಇದೀಗ ರೆಸ್ಟೋರೆಂಟ್‌ಗಳನ್ನು ಮತ್ತೆ ತಮ್ಮ ಗ್ರಾಹಕರನ್ನು ಪಡೆಯಲು ವಿನೂತನ ರೀತಿಯಲ್ಲಿ ಚಿಂತಿಸುತ್ತಿವೆ.
ಗ್ರಾಹಕರಿಗೆ ಸುರಕ್ಷಿತ ಮತ್ತು ಸುಂದರವಾದ ಆಹಾರ ಸೇವನೆ ಅನುಭವ ನೀಡಲು ಹೋಟೆಲ್ ಮಾಲೀಕರು ಐಡಿಯಾ ಹುಡುಕುತ್ತಿದ್ದಾರೆ. ಹೋಂ ಡೆಲಿವರಿಯಂತೂ ಈಗ ಸಾಮಾನ್ಯವಾಗಿ ಬಿಟ್ಟಿದೆ.
ವೈಟ್ ರೈಸ್ ಸೇವನೆಯಿಂದ ಹೆಚ್ಚುತ್ತೆ ಡಯಾಬಿಟೀಸ್ ರಿಸ್ಕ್..!
ಬಹುತೇಕ ಎಲ್ಲ ರೆಸ್ಟೋರೆಂಟ್‌ಗಳೂ ಟೇಕ್ ಎವೇ ಆಪ್ಶನ್ ಕೊಡ್ತಿವೆ. ಜಪಾನ್‌ನ ಸುಶಿ ರೆಸ್ಟೋರೆಂಟ್ ಒಂದು ಸಿಕ್ಕಾಪಟ್ಟೆ ಡಿಫರೆಂಟ್ ಆಗಿ ಯೋಚಿಸಿ ಆಹಾರ ಡೆಲಿವರಿಗಾಗಿ ಮಾಡಲು ಬಾಡಿ ಬಿಲ್ಡರ್ಸ್‌ಗಳನ್ನು ನಿಯೋಜಿಸಿದೆ.
ಜಪಾನ್‌ನ ಇಮಾಝುಶಿ ರೆಸ್ಟೋರೆಂಟನ್ನು ಜನರು ಡೆಲಿವರಿ ಮಾಚೋ ಅಂತಲೇ ಕರೆಯುತ್ತಿದ್ದಾರೆ. ಈ ಐಡಿಯಾ ಈ ಹೋಟೆಲ್‌ನ 41 ವರ್ಷದ ಮಾಲೀಕ ಮಸನೋರಿ ಸುಗ್ಯುರದ್ದು.
ರಾತ್ರಿ ಊಟಕ್ಕೆ ಅನ್ನ ಅಥವಾ ಚಪಾತಿ, ಯಾವುದು ಒಳ್ಳೆಯದು?
ಮಸನೋರಿ ತನ್ನ ಬಾಡಿ ಬಿಲ್ಡರ್ಸ್ ಸ್ನೇಹಿತರನ್ನು ಆಹಾರ ಡೆಲಿವರಿ ಮಾಡೋಕೆ ನಿಯೋಜಿಸಿದ್ದಾರೆ. ಇದರಿಂದ ಉದ್ಯಮದ ಜೊತೆ ಕೆಲಸವೂ ಸೃಷ್ಟಿಯಾಯ್ತು. ಒಂದೇ ಒಂದು ಷರತ್ತು ಅಂದ್ರೆ ಇಲ್ಲಿ ಕನಿಷ್ಠ 7 ಸಾವಿರದ ಫೂಡ್ ಆರ್ಡ್‌ರ್ ಮಾಡಬೇಕು.
ಇದೀಗ ಈ ಐಡಿಯಾ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದು, ಟ್ವಿಟರ್‌ನಲ್ಲೂ ವೈರಲ್ ಆಗಿದೆ. ಅಂದ ಹಾಗೆ ಮಸನೋರಿಗೆ ದಿನಕ್ಕೆ 7 ಆರ್ಡ್‌ರ್ಸ್ ಸಿಗುತ್ತದೆ. ತಿಂಗಳ ಆದಾಯ 1.5 ಮಿಲಿಯನ್ ಯೆನ್.