ಬ್ರೌನ್ ರೈಸ್ ಬಿಟ್ಟಾಕಿ, ಕಪ್ಪು ಅಕ್ಕಿಯಲ್ಲಿದೆ ಸೂಪರ್ ಆರೋಗ್ಯ, ತಿಂಗಳಿಗೆ 4 ಬಾರಿ ತಿಂದರೆ ಸಾಕು!
ಕಪ್ಪು ಕೌನಿ ಅಕ್ಕಿಯಲ್ಲಿ ಹಲವು ಪೋಷಕಾಂಶಗಳಿದ್ದು, ದೇಹದ ದೌರ್ಬಲ್ಯ, ಮಲಬದ್ಧತೆ ನಿವಾರಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹೃದ್ರೋಗ ತಡೆಯುತ್ತದೆ.

ನಾವು ಚಿಕ್ಕಂದಿನಿಂದಲೂ ಬಿಳಿ ಅಕ್ಕಿಯನ್ನು ತಿಂದು ಬೆಳೆದಿದ್ದೇವೆ. ಆದರೆ, ಈಗ ಪ್ರತಿದಿನ ಬಿಳಿ ಅಕ್ಕಿ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಬಿಳಿ ಅಕ್ಕಿಗೆ ಬದಲಾಗಿ ಕೆಲವರು ಕಂದು ಅಕ್ಕಿ ತಿನ್ನುತ್ತಾರೆ. ಈಗ ಕಂದು ಅಕ್ಕಿಗೆ ಬದಲಾಗಿ ಕಪ್ಪು ಕೌನಿ ಅಕ್ಕಿ ತಿನ್ನಲು ಆರಂಭಿಸಿದ್ದಾರೆ. ಹಾಗಾದರೆ, ಈ ಕಪ್ಪು ಕೌನಿ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದೇ? ಪ್ರತಿದಿನ ತಿನ್ನದಿದ್ದರೂ, ತಿಂಗಳಿಗೆ ನಾಲ್ಕು ಬಾರಿ ತಿಂದರೂ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈಗ ತಿಳಿದುಕೊಳ್ಳೋಣ.
ಈ ಕಾಲದಲ್ಲಿ 40 ವರ್ಷಕ್ಕೆ ಮುನ್ನವೇ ಮೊಣಕಾಲು ನೋವು, ದೇಹದ ದೌರ್ಬಲ್ಯ ಮುಂತಾದವು ಬರುತ್ತವೆ. ಇವೆಲ್ಲದಕ್ಕೂ ನಮ್ಮ ಆಹಾರ ಪದ್ಧತಿಗಳೇ ಕಾರಣ. ನಾವು ಆಗಾಗ್ಗೆ ಕಪ್ಪು ಅಕ್ಕಿ ತಿನ್ನಲು ಆರಂಭಿಸಿದರೆ. 70 ವರ್ಷ ದಾಟಿದರೂ ಮೊಣಕಾಲು ನೋವು, ದೇಹದ ದೌರ್ಬಲ್ಯದಂತಹ ಸಮಸ್ಯೆಗಳು ಇರುವುದಿಲ್ಲ. ಕಪ್ಪು ಕೌನಿ ಅಕ್ಕಿಯನ್ನು ತಿನ್ನುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಇಲ್ಲಿದೆ ಈ ಬಗ್ಗೆ ಮಾಹಿತಿ.
Black Rice Cultivation: ಆರೋಗ್ಯಕರ ಈ ಬೆಳೆ ಬೆಳೆದ್ರೆ ಬಾಳು ಬಂಗಾರ!
ಕಪ್ಪು ಕೌನಿ ಅಕ್ಕಿಯನ್ನು ಹಿಂದಿನ ಕಾಲದಲ್ಲಿ ರಾಜರು ಮಾತ್ರ ತಿನ್ನುತ್ತಿದ್ದರಂತೆ. ಈಗ ಎಲ್ಲರಿಗೂ ಸಿಗುತ್ತದೆ. ಕಪ್ಪು ಕೌನಿ ಅಕ್ಕಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಕಪ್ಪು ಅಕ್ಕಿಯಲ್ಲಿ ಪ್ರೋಟೀನ್, ವಿಟಮಿನ್‌ಗಳು, ಹಲವು ರೀತಿಯ ಖನಿಜಗಳಿವೆ, ಇವು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವುದಿಲ್ಲ. ಹಾಗಾಗಿ, ನಮ್ಮ ದೇಹವು ದುರ್ಬಲವಾಗುವುದಿಲ್ಲ. ಕಪ್ಪು ಅಕ್ಕಿಯು ಉತ್ಕರ್ಷಣ ನಿರೋಧಕ ಗುಣಗಳಿಂದ ತುಂಬಿದೆ, ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಹಲವು ರೀತಿಯ ಕಾಯಿಲೆಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ.
ಕಪ್ಪು ಕೌನಿ ಅಕ್ಕಿಯಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ, ಇದು ನಮ್ಮ ದೇಹವನ್ನು ಸ್ಥೂಲಕಾಯದಿಂದ ಕಾಪಾಡುತ್ತದೆ. ಇದಲ್ಲದೆ, ಇದರಲ್ಲಿರುವ ಹೆಚ್ಚಿನ ನಾರಿನಂಶವು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಗ್ಯಾಸ್ಟ್ರಿಕ್ ತೊಂದರೆ ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇದನ್ನು ಪ್ರತಿದಿನ ತಿನ್ನುವುದರಿಂದ ಯಾವುದೇ ತೊಂದರೆ ಇಲ್ಲ. ನಿಮಗೆ ದೇಹ ದೌರ್ಬಲ್ಯವಿದ್ದರೆ, ನೀವು ಕಪ್ಪು ಕೌನಿ ಅಕ್ಕಿ ತಿನ್ನಬಹುದು. ದೇಹ ದೌರ್ಬಲ್ಯವು ಕೆಲವೇ ದಿನಗಳಲ್ಲಿ ಮಾಯವಾಗುತ್ತಾ ಹೋಗುತ್ತದೆ. ನಿಮ್ಮ ದೇಹವನ್ನು ಬಲಪಡಿಸುತ್ತದೆ.
ಕೆಂಪಕ್ಕಿ, ಬಿಳಿ ಅಕ್ಕಿ ಗೊತ್ತು, ಇದ್ಯಾವಿದು ಕಪ್ಪಕ್ಕಿ? ಆರೋಗ್ಯಕ್ಕೆ ಒಳ್ಳೇದಂತೆ!
ರೋಗ ನಿರೋಧಕ ಶಕ್ತಿ ಇದೆ:
ಕಪ್ಪು ಕೌನಿ ಅಕ್ಕಿಯಲ್ಲಿರುವ ಪೋಷಕಾಂಶಗಳು ಮಧುಮೇಹ, ಅಲ್ಝೈಮರ್‌ನಂತಹ ಕಾಯಿಲೆಗಳಿಂದಲೂ ನಮ್ಮನ್ನು ಕಾಪಾಡುತ್ತವೆ. ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್ ಹೃದ್ರೋಗಗಳನ್ನು ತಡೆಯುತ್ತದೆ. ನೀವು ಈಗಾಗಲೇ ಇದನ್ನು ಸೇವಿಸುತ್ತಿದ್ದರೆ, ನಿಮಗೆ ಜೀವನಪರ್ಯಂತ ಯಾವುದೇ ಹೃದಯ ಸಮಸ್ಯೆಗಳು ಇರುವುದಿಲ್ಲ. ಇದಲ್ಲದೆ, ಇದರಲ್ಲಿ ಆಂಥೋಸಯಾನಿನ್ ಎಂಬ ನೀಲಿ ವರ್ಣದ್ರವ್ಯವಿದೆ, ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಅಕ್ಕಿಯನ್ನು ಬೇಯಿಸುವುದು ಹೇಗೆ?
ಮೊದಲಿಗೆ ಕಪ್ಪು ಅಕ್ಕಿಯನ್ನು ತಣ್ಣೀರಿನಲ್ಲಿ ತೊಳೆಯಿರಿ. ಅಡುಗೆ ಸಮಯವನ್ನು ಕಡಿಮೆ ಮಾಡಲು ಅಕ್ಕಿಯನ್ನು ರಾತ್ರಿ ಅಥವಾ ಹಲವಾರು ಗಂಟೆಗಳ ಕಾಲ ನೆನೆಸಿಡಿ . ಬಳಿಕ ಒಂದು ಪಾತ್ರೆಯಲ್ಲಿ ನೀರು ಕಾಯುಲು ಇಡಿ. ಬೇಕಾದರೆ ಸ್ವಲ್ಪ ಉಪ್ಪು ಸೇರಿಸಿ. ನೀರು ಬಿಸಿಯಾದಾಗ ಅಕ್ಕಿಯನ್ನು ಹಾಕಿ ಬೇಯುವವರೆಗೂ ಮುಚ್ಚಿಡಿ.