ರೆಸಿಪಿ: ಪನ್ನೀರ್ ಇಲ್ಲದೆ ಪನ್ನೀರ್ ಭುರ್ಜಿ ಮಾಡುವ ವಿಧಾನ ಇಲ್ಲಿದೆ!
ಮನೆಗೆ ಯಾರಾದರೂ ಗೆಸ್ಟ್ ಬಂದಾಗ ಪನ್ನೀರ್ ಭುರ್ಜಿ ಮಾಡಲು ಸುಲಭದ ಜೊತೆಗೆ ರುಚಿಕರ ತಿನಿಸು ಕೂಡ ಹೌದು. ಆದರೆ ಮನೆಯಲ್ಲಿ ಪನ್ನೀರ್ ಇಲ್ಲ ಎಂದು ಯೋಚಿಸುವ ಅಗತ್ಯವಿಲ್ಲ. ಪನ್ನೀರ್ ಇಲ್ಲದೆ ಸಹ ಭುರ್ಜಿ ಮಾಡಬಹುದು. ಹೌದು ನಿಜ. ಇಲ್ಲಿದೆ ನೋಡಿ ಪನ್ನೀರ್ ಇಲ್ಲದೆ ಪನ್ನೀರ್ ಭುರ್ಜಿ ಮಾಡುವ ವಿಧಾನ.
ಮೊದಲು ಒಂದು ಕ್ಯಾಪ್ಸಿಕಂ, ಎರಡು ಟೊಮ್ಯಾಟೊ, ಒಂದು ಈರುಳ್ಳಿ, ಸ್ವಲ್ಪ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಅದಕ್ಕೆ ಒಂದು ಟೀಸ್ಪೂನ್ ಜೀರಿಗೆ ಸೇರಿಸಿ.
ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಎರಡು ಮೂರು ನಿಮಿಷಗಳ ಕಾಲ ಈರುಳ್ಳಿಯನ್ನು ಚೆನ್ನಾಗಿ ಫ್ರೈ ಮಾಡಿ.
ಈರುಳ್ಳಿಗೆ ಹಸಿರು ಮೆಣಸಿನಕಾಯಿ ಮತ್ತು ಕ್ಯಾಪ್ಸಿಕಂ ಸೇರಿಸಿ. ಚೆನ್ನಾಗಿ ಹುರಿಯಿರಿ.
ನಂತರ ಇದಕ್ಕೆ ಮನೆಯಲ್ಲಿರುವ ಮಸಾಲೆಗಳನ್ನು ಸೇರಿಸಿ. ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಮಸಾಲೆ ಸೇರಿಸಿದ ನಂತರ ಅದಕ್ಕೆ ಟೊಮ್ಯಾಟೊ ಹಾಕಿ ಮುಚ್ಚಿ ಚೆನ್ನಾಗಿ ಬೇಯಲು ಬಿಡಿ.
ಈ ಮಧ್ಯದಲ್ಲಿ ಭುರ್ಜಿಗೆ ನಕಲಿ ಪನೀರ್ ತಯಾರಿಸಿ ಕೊಳ್ಳಿ. ಅದಕ್ಕಾಗಿ ಬ್ರೆಡ್ ಪೀಸ್ ಅಗತ್ಯ.
ಬ್ರೆಡ್ ಅನ್ನು ಸ್ವಲ್ಪ ಸಮಯದವರೆಗೆ ಹಾಲಿನಲ್ಲಿ ನೆನೆಸಿಡಿ. ಹಾಲು ಹೀರಿದ ನಂತರ ಬ್ರೆಡ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು.
ಅಷ್ಟೊತ್ತಿಗೆ ಟೊಮ್ಯಾಟೊ ಕೂಡ ಚೆನ್ನಾಗಿ ಮಸಾಲೆ ಜೊತೆ ಬೆಂದಿರುತ್ತದೆ. ಎರಡು ಚಮಚ ಕೆನೆ ಸೇರಿಸಿ. ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಹಾಲಿನಲ್ಲಿ ನೆನೆಸಿದ ಬ್ರೆಡ್‌ಗಳನ್ನು ತರಕಾರಿ ಮಿಶ್ರಣದೊಂದಿಗೆ ಸೇರಿಸಿ.
ತರಕಾರಿಗಳೊಂದಿಗೆ ಬ್ರೆಡ್ ಪನ್ನೀರ್‌ನ ಹಾಗೆಯೇ ಸೇರಿಕೊಳ್ಳುತ್ತದೆ. ಕೆಲವು ನಿಮಿಷಗಳ ನಂತರ ಗ್ಯಾಸ್ ಅಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಈ ಪನ್ನೀರ್ ಭುರ್ಜಿಯನ್ನು ಪನ್ನೀರ್‌ನಿಂದ ಅಲ್ಲ ಬ್ರೆಡ್‌ನಿಂದ ತಯಾರಿಸಲಾಗಿದೆ ಯಾರಿಗೂ ಸಾಧ್ಯವಾಗುವುದಿಲ್ಲ.