ಬೆಳಗ್ಗೆ ವಾಕ್‌ ಮಾಡಿ ಬಂದ ಕೂಡ್ಲೇ ಸುಸ್ತಾಗಿದ್ಯಾ? ಹಾಗಿದ್ರೆ ಇಂಥಾ ಫುಡ್ ತಿಂದು ನೋಡಿ

ಹೆಲ್ದಿಯಾಗಿರ್ಬೇಕು ಅಂತ ಎಲ್ರೂ ಬಯಸ್ತಾರೆ. ಹೀಗಾಗಿ ಬೆಳಗ್ಗೆ (Morning) ಸುಖವಾದ ನಿದ್ರೆಯಿಂದ ಏಳೋದು ಕಷ್ಟವಾದ್ರೂ ಕಷ್ಟಪಟ್ಟು ಎದ್ದು ವಾಕ್ (Walk) ಅಥವಾ ರನ್ನಿಂಗ್ (Running) ಮಾಡ್ತಾರೆ. ಆದ್ರೆ ಹೀಗೆ ಮಾಡೋದ್ರಿಂದ ಸುಸ್ತಾಗುವ ಸಮಸ್ಯೆ ಹಲವರನ್ನು ಕಾಡುತ್ತೆ. ಇದಕ್ಕೇನು ಪರಿಹಾರ ?

Best Foods To Eat After A Morning Run Or Walk, Expert Advice Vin

ಆರೋಗ್ಯಕರ ಜೀವನಶೈಲಿಗೆ (Lifestyle) ಬಂದಾಗ, ಬೆಳಗಿನ ಓಟ (Run) ಅಥವಾ ವಾಕ್ (Walk) ಅನ್ನು ಉತ್ತಮ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಆದರೆ, ವಾಕ್‌ ಮಾಡೋದೇನು ಸರಿ, ಅದ್ರೆ ವಾಕ್‌ ಅಥವಾ ರನ್ನಿಂಗ್ ಮಾಡಿ ಬಂದ್ಮೇಲೆ ವಿಪರೀತ ಸುಸ್ತಾಗಿದ್ಯಾ ? ಸಿಕ್ಕಾಪಟ್ಟೆ ಹಸಿವಿನಿಂದ ಬಳಲುವಂತಾಗುತ್ತಾ ? ಇದಕ್ಕೆ ಕಾರಣ ವಾಕ್ ಅಥವಾ ಓಟದಿಂದ ನಿಮ್ಮ ದೇಹದ ಚೈತನ್ಯ ಕಡಿಮೆಯಾಗಿರುತ್ತದೆ. ಹೀಗಾಗಿ ವಾಕ್ ಮಾಡಿ ಬಂದ ಕೂಡ್ಲೇ ಏನನ್ನು ತಿನ್ನೋದು ಒಳ್ಳೆಯದು ಎಂಬುದನ್ನುಮೊದ್ಲು ತಿಳ್ಕೊಳ್ಳಿ. ವಾಕ್ ಅಥವಾ ರನ್ನಿಂಗ್‌ನ ಬಳಿಕ ಸರಿಯಾದ ಆಹಾರ (Food) ತಿನ್ನೋದ್ರಿಂದ ನೀವು ದಿನವಿಡೀ ಎನರ್ಜಿಟಿಕ್ ಆಗಿರಲು ಸಾಧ್ಯವಾಗುತ್ತದೆ. ಅಂಥಾ ಆಹಾರಗಳು ಯಾವುದೆಂದು ತಿಳಿಯೋಣ. 

ಕಡಲೆಕಾಯಿ ಬೆಣ್ಣೆಯೊಂದಿಗೆ ಬಾಳೆಹಣ್ಣು (Peanut butter with Banana)
ಬೆಳಗ್ಗೆದ್ದು ವೇಗವಾಗಿ ಓಡೋದ್ರಿಂದ ದೇಹದಿಂದ ಚೈತನ್ಯದ ನಷ್ಟವಾಗುತ್ತದೆ. ಹೀಗಾಗಿ ಶಕ್ತಿಯ ನಷ್ಟದಿಂದ ವೇಗವಾಗಿ ಚೇತರಿಸಿಕೊಳ್ಳಲು ಕಡಲೆಕಾಯಿ ಬೆಣ್ಣೆ ಯೊಂದಿಗೆ ಬಾಳೆಹಣ್ಣಿನ ಈ ರುಚಿಕರವಾದ ಸಂಯೋಜನೆಯನ್ನು ಸೇವಿಸಿ. ಇದು ಓಟದ ನಂತರ ಬಳಲಿದ ದೇಹಕ್ಕೆ ಇನ್ನಷ್ಟು ಎನರ್ಜಿಯನ್ನು ನೀಡುತ್ತದೆ.

ವಾಕಿಂಗ್ ಮಾಡ್ತಿರೇನೋ ನಿಜ, ಆದ್ರೆ ಸರಿಯಾದ ರೀತಿಯಲ್ಲಿ ಮಾಡ್ತಿದ್ದೀರಾ ? ಇಲ್ಲಾಂದ್ರೆ ನೋ ಯೂಸ್ !

ಕಲ್ಲಂಗಡಿ (Watermelon)
ಈ ಕಾಲೋಚಿತ ಹಣ್ಣು ಕೆಲವು ಕ್ಯಾಲೊರಿ (Calorie)ಗಳನ್ನು ಹೊಂದಿದೆ ಮತ್ತು ಸಿಟ್ರುಲಿನ್ ಮತ್ತು ಲೈಕೋಪೀನ್‌ನ ಉತ್ತಮ ಮೂಲವಾಗಿದೆ. ತಜ್ಞರ ಪ್ರಕಾರ, ಸಿಟ್ರುಲಿನ್ ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ ಮತ್ತು ವ್ಯಾಯಾಮದ ಆಯಾಸವನ್ನು ಕಡಿಮೆ ಮಾಡುತ್ತದೆ. ಕಲ್ಲಂಗಡಿ ಹಣ್ಣನ್ನು  ಕತ್ತರಿಸಿ ಉಪ್ಪನ್ನು ಸೇರಿಸಿ ಅಥವಾ ಉಳಿದ ಹಣ್ಣುಗಳನ್ನು ಸೇರಿಸಿ ಸಲಾಡ್‌ನಂತೆಯೇ ಸೇವಿಸಬಹುದು.

ಚಾಕೊಲೇಟ್ ಹಾಲು (Chocolate Milk)
ಈ ಅಧಿಕ-ಪ್ರೋಟೀನ್ ಮತ್ತು ವೇಗವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ ಪಾನೀಯವು ವ್ಯಾಯಾಮ-ಚೇತರಿಕೆ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ ಮತ್ತು ಸ್ನಾಯುವಿನ ಚೇತರಿಕೆ ಮತ್ತು ಶಕ್ತಿಯ ಮರುಪೂರಣಕ್ಕೆ ಸಹಾಯ ಮಾಡುತ್ತದೆ. 

ತರಕಾರಿಯ ಆಮ್ಲೆಟ್ (Vegetable Omelette)
ಇದು ಜೀವಸತ್ವಗಳು, ಖನಿಜಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಹೆಚ್ಚಿನ ಪ್ರೋಟೀನ್‌ಗಳಿಂದ ತುಂಬಿರುತ್ತದೆ. ಈ ಕಡಿಮೆ ಕ್ಯಾಲೋರಿ ಆಹಾರವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಆಯಾಸದಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕಂಡುಬಂದಿದೆ. ಆಮ್ಲೆಟ್ ಮಾಡುವ ಸಂದರ್ಭ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳನ್ನು ಸೇರಿಸೋದನ್ನು ಮಾತ್ರ ಮರೀಬೇಡಿ.

Walk After Dinner: ರಾತ್ರಿ ಊಟ ಮಾಡಿ ನಡೆದ್ರೆ ಆರೋಗ್ಯ ಹದಗೆಡೋ ಭಯವಿಲ್ಲ

ಹಾಲೊಡಕು ಪ್ರೋಟೀನ್ ಶೇಕ್ (Whey protein shake)
ತಜ್ಞರ ಪ್ರಕಾರ, ಹಾಲೊಡಕು ಪ್ರೋಟೀನ್ ಶೇಕ್ ನಿಮ್ಮ ದೇಹವು ಓಟದ ನಂತರ ಪುನರಾರಂಭಿಸಲು ಅಗತ್ಯವಿರುವ ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿದೆ. ಹೀಗಾಗಿ ನಿರಂತರವಾದ ಓಟದ ನಂತರವೂ ದೇಹಕ್ಕೆ ಹೆಚ್ಚು ಚೈತನ್ಯ ಒದಗಿಸುವಲ್ಲಿ ನೆರವಾಗುತ್ತದೆ. 

ತರಕಾರಿಗಳೊಂದಿಗೆ ಗ್ರಿಲ್ಡ್ ಚಿಕನ್ (Grilled Chicken With Veggies)
ಕೋಳಿ ಮಾಂಸವು ನೇರ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ ಮತ್ತು ಓಟದ ನಂತರ ಸ್ನಾಯುಗಳ ಪುನರ್ನಿರ್ಮಾಣ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಸುವಾಸನೆ ಮತ್ತು ಪೌಷ್ಟಿಕಾಂಶವನ್ನು ಸೇರಿಸಲು ಸುಟ್ಟ ತರಕಾರಿಗಳೊಂದಿಗೆ ಇದನ್ನು ತಿನ್ನಿರಿ. 

ಚೀಸ್ ಮತ್ತು ಹಣ್ಣು (Cheese and fruit)
ಚೀಸ್ ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿದೆ. ಓಟದ ಸಮಯದಲ್ಲಿ ಬೆವರುಗಳಲ್ಲಿ ಕಳೆದುಹೋದ ಎಲೆಕ್ಟ್ರೋಲೈಟ್ ಅನ್ನು ಮರುಪಡೆಯಲು ಸಹಾಯ ಮಾಡುತ್ತದೆ. ಹಣ್ಣುಗಳನ್ನು ಸೇರಿಸುವುದರಿಂದ ಇದು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಊಟವಾಗಿದೆ.

ಬೆಳಗ್ಗೆ ವಾಕ್‌ ಅಥವಾ ರನ್ನಿಂಗ್ ಮಾಡೋಕೇನೋ ಇಷ್ಟ. ಆದ್ರೆ ವಾಕ್ ಮಾಡಿ ಬಂದ್ ಕೂಡ್ಲೇ ಸಿಕ್ಕಾಪಟ್ಟೆ ಸುಸ್ತು, ಬೆಳಗ್ಗೆದ್ದು ಓಡೋ ಸಹವಾಸಾನೇ ಬೇಡ ಅನ್ಸೋದು. ನಿಮ್ಗು ಹೀಗಾಗ್ತಿದ್ರೆ ಇದಕ್ಕೆ ಈಝಿ ಸೊಲ್ಯೂಷನ್ ನಾವ್ ಹೇಳ್ತೀವಿ. 

Latest Videos
Follow Us:
Download App:
  • android
  • ios