ಜನಪ್ರಿಯ ರೆಸ್ಟೋರೆಂಟ್ ವಿದ್ಯಾರ್ಥಿ ಭವನದಲ್ಲಿ ಯಾವ ಸಮಯ ಹೋದರೂ ರಶ್, ಸೀಟು ಸಿಗಲು, ಆಹಾರ ಸವಿಯಲು ಕಾಯಬೇಕು. ಆದರೆ ಇದನ್ನು ತಪ್ಪಿಸಲು ವಿದ್ಯಾರ್ಥಿ ಭವನ ಮೊದಲೇ ಸೀಟು ಕಾಯ್ದಿರಿಸವ ಸೇವೆ ಆರಂಭಿಸಿದೆ. ಆದರೆ ಈ ಸೇವೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  

ಬೆಂಗಳೂರು(ಮಾ.2) ವಿದ್ಯಾರ್ಥಿ ಭವನದಲ್ಲಿ ಆಹಾರ ಖಾದ್ಯ ಸವಿಯಲು ಜನರು ಕ್ಯೂ ನಿಲ್ಲುತ್ತಾರೆ. ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಅತ್ಯಂತ ಜನಪ್ರಿಯ ಜೊತೆಗೆ ರುಚಿ ರುಚಿಯಾದ ಖಾದ್ಯಗಳನ್ನು ನೀಡುವ ರೆಸ್ಟೋರೆಂಟ್ ಅನ್ನೋ ಹೆಗ್ಗಳಿಗೆ ವಿದ್ಯಾರ್ಥಿ ಭವನ ಪಾತ್ರವಾಗಿದೆ. ಹಲವು ಸೆಲೆಬ್ರೆಟಿಗಳು, ರಾಜಕಾರಣಗಳು, ಉದ್ಯಮಿಗಳು ಇಲ್ಲಿಗೆ ಬೇಟಿ ನೀಡುತ್ತಾರೆ. ವಿದ್ಯಾರ್ಥಿ ಭವನ ಯಾವುದೇ ಸಮಯದಲ್ಲೂ ಫುಲ್ ತುಂಬಿರುತ್ತದೆ. ತಕ್ಷಣಕ್ಕೆ ಆಹಾರ ಸವಿದು ಬರಲು ಸಾಧ್ಯವಿಲ್ಲ. ಇದಕ್ಕಾಗಿ ಕಾಯಬೇಕು. ಇದೀಗ ಈ ಕಾಯುವಿಕೆ ತಪ್ಪಿಸಲು ವಿದ್ಯಾರ್ಥಿ ಭವನ ಹೊಸ ಸೇವೆ ಆರಂಭಿಸಿದೆ. ಮೊದಲೇ ಸೀಟುಗಳನ್ನು ಬುಕ್ ಮಾಡಬಹುದು. ಕರೆ ಮಾಡಿ ಮುಂಗಡವಾಗಿ ಸೀಟು ಬುಕ್ ಮಾಡಿದರೆ ಮುಗೀತು. ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿ ಭವನಕ್ಕೆ ತೆರಳಿದರೆ ಸಾಕು. ಯಾವುದೇ ಚಿಂತೆ ಇಲ್ಲದೆ ಆಹಾರ ಸವಿಯಬಹುದು. ಆದರೆ ಈ ಹೊಸ ಸೇವೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

1943ರಲ್ಲಿ ಆರಂಭಗೊಂಡ ಈ ವಿದ್ಯಾರ್ಥಿ ಭವನ ಇದೀಗ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ರೆಸ್ಟೋರೆಂಟ್ ಆಗಿ ಹೊರಹೊಮ್ಮಿದೆ. ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕಾಯುವಿಕೆ ತಪ್ಪಿಸಲು ವಿದ್ಯಾರ್ಥಿ ಭವನ ಆಡಳಿತ ಮಂಡಳಿ ಈ ಹೊಸ ಯೋಜನೆ ಜಾರಿ ಮಾಡಿದೆ. ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ನೀವು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಲು ಇಚ್ಚಿಸಿದ್ದರೆ, ಮೊದಲೇ ಸೀಟು ಬುಕ್ ಮಾಡಿಕೊಳ್ಳಿ. ಇದರಿಂದ ಕಾಯುವಿಕೆ, ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ವಿದ್ಯಾರ್ಥಿ ಭವನ ಈ ಮಾಹಿತಿಯಲ್ಲಿ ಹೇಳಿದೆ.

ದಿನಕ್ಕೆ 1300 ದೋಸೆ ಮಾರಾಟ, 45 ಸಿಬ್ಬಂದಿಗಳ ಸಾಥ್; ವಿದ್ಯಾರ್ಥಿ ಭವನ ದುಡಿಮೆ ಬಗ್ಗೆ ಅರುಣ್ ಅಡಿಗ

ವಿದ್ಯಾರ್ಥಿ ಭವನಕ್ಕೆ ಕರೆ ಮಾಡಿ ಸೀಟುಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಿ, ಈ ವೇಳೆ ಟೋಕನ್ ನೀಡಲಾಗುತ್ತದೆ. ಬಳಿಕ ಭೇಟಿ ನೀಡಿದಾಗ ಟೋಕನ್ ನಂಬರ್ ಹೇಳಿ ನಿಮ್ಮ ಬುಕ್ ಮಾಡಿದ ಸೀಟುಗಳನ್ನು ಕುಳಿತು ಆರಾಮವಾಗಿ ಆಹಾರ ಸವಿಯಿರಿ ಎಂದು ವಿದ್ಯಾರ್ಥಿ ಭವನ ಹೇಳಿದೆ. ಇದಕ್ಕಾಗಿ ವಿದ್ಯಾರ್ಥಿ ಭವನ ಶೇಕಡಾ 50 ರಷ್ಟು ಸೀಟುಗಳನ್ನು ಮುಂಗಡ ಬುಕಿಂಗ್‌ಗಾಗಿ ಮೀಸಲಿಟ್ಟಿದೆ. ಇನ್ನುಳಿದ 50 ಶೇಕಡಾ ಆಸನಗಳು ನೇರವಾಗಿ ಬಂದವರಿಗೆ, ಬುಕಿಂಗ್ ಮಾಡದೇ ಬಂದವರಿಗೆ ಮೀಸಲಿಡಲಾಗಿದೆ. ಪ್ರಮುಖವಾಗಿ ಮುಂಗಡವಾಗಿ ಪ್ಲಾನ್ ಮಾಡಿ ವಿದ್ಯಾರ್ಥಿ ಭವನಕ್ಕೆ ಬರುವವರಿಗೆ ಅನುಕೂಲವಾಗಲು ಈ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ವಿರೋದ ವ್ಯಕ್ತಪಡಿಸಿದ್ದಾರೆ.

Scroll to load tweet…

ಕರೆ ಮಾಡಿ ಬುಕ್ ಮಾಡುವ ಬದಲು ಆನ್‌ಲೈನ್ ವ್ಯವಸ್ಥೆ ಮಾಡಲು ಕೆಲವರು ಮನವಿ ಮಾಡಿದ್ದಾರೆ. ಇದರಿಂದ ಬೆಂಗಳೂರಿಗರು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಸುಲಭವಾಗಿ ವಿದ್ಯಾರ್ಥಿ ಭವನಕ್ಕೆ ಆಗಮಿಸುಲ ಸಾಧ್ಯವಾಗುತ್ತದೆ. ಎಲ್ಲರೂ ಕರೆ ಮಾಡಿ ಬುಕ್ ಮಾಡುವ ಕಾರಣ ಕರೆಗಳು ಸಂಪರ್ಕಕ್ಕೆ ಸಿಗದಿರುವ ಸಾಧ್ಯತೆ ಇದೆ. ಹೀಗಾಗಿ ಡಿಜಿಟಲ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಮತ್ತೆ ಕೆಲವರು ಇದು ಉತ್ತಮ ಯೋಜನೆ. ಹಲವು ಬಾರಿ ವಿದ್ಯಾರ್ಥಿ ಭವನಕ್ಕೆ ಬಂದು ಸೀಟಿಗಾಗಿ ಕಾದಿದ್ದೇನೆ. ಇದೀಗ ಬುಕಿಂಗ್ ವ್ಯವಸ್ಥೆ ಜಾರಿ ಮಾಡಿರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ.

ಆದರೆ ಒಂದಷ್ಟು ಮಂದಿ ಇದು ಉತ್ತಮ ಯೋಜನೆಯಲ್ಲ ಎಂದಿದ್ದಾರೆ.ಹಲವರು ಬುಕ್ ಮಾಡಿ ಬರದೇ ಇದ್ದರೆ, ಅಥವಾ ಬುಕ್ ಮಾಡಿದ ಸಮಯಕ್ಕೆ ಬರಲು ಸಾಧ್ಯವಾಗದಿದ್ದರೆ, ಆ ಸಮಯದಲ್ಲಿನ ಸೀಟು ಖಾಲಿಯಾಗಿ ಉಳಿದಿರುತ್ತದೆ. ಇದರಿಂದ ಬುಕ್ ಮಾಡದೇ ಬಂದವರಿಗೂ ಕಷ್ಟವಾಗಲಿದೆ. ಇತರರಿಗೂ ತೊಂದರೆಯಾಗಲಿದ ಎಂದಿದ್ದಾರ. ಮತ್ತೆ ಕೆಲವರು ಬುಕ್ ಮಾಡಿ ಬರುವುದು ಉಚಿತವಲ್ಲ, ಇಷ್ಟು ವರ್ಷದಿಂದ ಸೀಟಿನ ಸಮಸ್ಯೆಗೆ ಈ ರೀತಿಯ ಪರಿಹಾರ ಉಚಿತವಲ್ಲ. ಬೇರೆ ರೀತಿಯ ಪರಿಹಾರ ಸೂಚಿಸಿ ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಶುಕ್ರವಾರದ ರಜೆ ಯಾಕೆ..? ಇದಕ್ಕಿದೆ ಐತಿಹಾಸಿಕ ಹಿನ್ನೆಲೆ..