ದಿನಕ್ಕೆ 1300 ದೋಸೆ ಮಾರಾಟ, 45 ಸಿಬ್ಬಂದಿಗಳ ಸಾಥ್; ವಿದ್ಯಾರ್ಥಿ ಭವನ ದುಡಿಮೆ ಬಗ್ಗೆ ಅರುಣ್ ಅಡಿಗ

ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದಿದ್ದೀರಾ? ಚಿಟ್ನಿ ರುಚಿ ಎಂಜಾಯ್ ಮಾಡಿದ್ದೀರಾ...ಜನರ ನೋಡಿ ಎಷ್ಟು ದೋಸೆ ಕಾಲಿ ಆಗ್ಬೋದು ಅಂತ ಲೆಕ್ಕ ಮಾಡಿದ್ದೀರಾ? ಇಲ್ಲಿದೆ ಮಾಹಿತಿ....

Arun adiga talks about gandhi bazar Vidhyarthi Bhavana seating and dosa sale

ಗಾಂಧಿ ಬಜಾರ್‌ನಲ್ಲಿ ಇರುವ ವಿದ್ಯಾರ್ಥಿ ಭವನ ಅಂದ್ರೆ ಯಾರಿಗೆ ಗೊತ್ತಿಲ್ಲ? ವೀಕೆಂಡ್ ಬಂದ್ರೆ ಸಾಕು ದೋಸೆ ಮತ್ತು ಬೈಟು ಕಾಫಿ ನೆನಪಿಸಿಕೊಂಡರೆ ಮೊದಲು ಓಡುವುದೇ ವಿದ್ಯಾರ್ಥಿ ಭವನ್‌ಗೆ. ಫಸ್ಟ್‌ ಕಮ್ ಫಸ್ಟ್‌ ಸರ್ವಿಸ್‌ ಫಾಲೋ ಮಾಡುವ ಇವರು ಯಾವತ್ತೂ ತಮ್ಮ ಗ್ರಾಹಕರಿಗೆ ಬೇಸರ ಮಾಡಿಲ್ಲ. ಜಾಗ ಇಲ್ಲದಿದ್ದರೂ ಜಾಗ ಮಾಡಿ ದೋಸೆ ರುಚ್ಚಿ ತೋರಿಸಿಯೇ ಕಳುಹಿಸುವುದು. ಹೋಟೆಲ್‌ ಹೊರಗೆ ನಿಂತಿರುವ ಜನರನ್ನು ನೋಡಿ ದಿನಕ್ಕೆ ಎಷ್ಟು ದೋಸೆ ಮಾರಾಟವಾಗುತ್ತಿದೆ? ಎಷ್ಟು ಜನ ಬಂದು ಹೋಗಿರುತ್ತಾರೆ? ಒಬ್ಬರಿಗೆ ಅಂದಾಜು ಎಷ್ಟು ಖರ್ಚು ಆಗಬಹುದು ಅನ್ನೋ ಲೆಕ್ಕಾಚಾರ ಮಾಡಿರುತ್ತೀರಿ. ಅದಕ್ಕೆ ಸ್ವತಃ ಅರುಣ್ ಉತ್ತರಿಸಿದ್ದಾರೆ. 

'ಈಗಿನ ಲೆಕ್ಕ ತೆಗೆದುಕೊಂಡು ಸುಮಾರು ದಿನಕ್ಕೆ 1200 ರಿಂದ 1300 ದೋಸೆಗಳು ಸೇಲ್ ಆಗುತ್ತದೆ. ವೀಕೆಂಡ್‌ನಲ್ಲಿ ಸುಮಾರು 3 ಸಾವಿರ ದೋಸೆಗಳು ಸೇಲ್ ಆಗುತ್ತದೆ. ವೇಡ್‌ಡೇಗಳಲ್ಲಿ ಬರುವವರು ರೆಗ್ಯೂಲರ್‌ಗಳು ಹೀಗಾಗಿ ಡಬಲ್ ದೋಸೆ ತಿನ್ನುವುದು ಕಡಿಮೆ ವೀಕೆಂಡ್‌ನಲ್ಲಿ ಪ್ಲ್ಯಾನ್ ಮಾಡ್ಕೊಂಡು ಬಂದಿರುವವರು ಹೆಚ್ಚಾಗಿ ಸೇವಿಸುತ್ತಾರೆ. ಮೊದಲು 98 ಜನರನ್ನು ಕೂರಿಸುವ ವ್ಯವಸ್ಥೆ ಇತ್ತು ಈಗ 126 ಜನ ಕುಳಿತುಕೊಂಡು ತಿನ್ನಲು ಜಾಗವಿದೆ. ಪಾರ್ಸಲ್ ಸೆಕ್ಷನ್ ಸೈಡ್‌ಗೆ ಹಾಕಿಕೊಂಡ ಮೇಲೆ ಆ ಜಾಗದಲ್ಲಿ ವಿಐಪಿ ಏರಿಯಾ ಅಂತ ಎರಡು ಟೇಬಲ್ ಇದೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಅರುಣ್ ಮಾತನಾಡಿದ್ದಾರೆ. 

ಬಟ್ಟೆ ಮೇಲೆ ಚಿಟ್ಟೆ,ಕಾರ್ಟೂನ್, ಧಾರ್ಮಿಕ ಚಿಹ್ನೆ ಇರ್ಲೇ ಬಾರದು; ಬಿಗ್ ಬಾಸ್ ಸೀಕ್ರೆಟ್ ರಿವೀಲ್ ಮಾಡಿದ ರಜತ್ ಪತ್ನಿ

'ನಮ್ಮಲ್ಲಿ ಟೇಬಲ್ ಶೇರಿಂಗ್‌ ಇದೆ. ನಮ್ಮಲ್ಲಿ ಸುಮಾರು ಜನ ಕಾಯುತ್ತಿದ್ದಾರೆ ಹೀಗಾಗಿ ಶೇರಿಂಗ್ ಮಾಡುತ್ತಾರೆ. ಕೆಲವರಿಗೆ ಶೇರಿಂಗ್ ಮಾಡಲು ಇಷ್ಟ ಆಗದೆ ಜಗಳ ಮಾಡಿದ್ದಾರೆ. ನಮ್ಮದು ಫೈನ್‌ ಡೈನ್ ರೆಸ್ಟೋರೆಂಟ್ ಅಲ್ಲ ಸುಮ್ಮನೆ ಕುಳಿತುಕೊಂಡು ಮಾತನಾಡಿಕೊಂಡು ಟೈಮ್ ಪಾಸ್ ಮಾಡಲು. ಕೆಲವೊಮ್ಮೆ ರಶ್ ಇಲ್ಲದೆ ಇದ್ದಾಗ ಇಬ್ಬರೇ ಕುಳಿತುಕೊಳ್ಳುತ್ತಾರೆ. ಹೀಗಾಗಿ ಒಂದು ಟೇಬಲ್‌ಗೆ ಎರಡು ಮೂರು ಬಿಲ್ ಆಗುತ್ತದೆ. ಒಬ್ಬರಿಗೆ ಏನೇ ಅಂದ್ರು 120 ರಿಂದ 140 ರೂಪಾಯಿಗಳು ಆಗುತ್ತದೆ. 45 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ದೋಸೆ ಮಾಡಲು ಮುಖ್ಯವಾದ ದೋಸೆ ಮಾಸ್ಟರ್‌ಗಳು ಅಂತ 4 ಜನ ಇದ್ದಾರೆ' ಎಂದು ಅರುಣ್ ಹೇಳಿದ್ದಾರೆ. 

ದೊಡ್ಡಮ್ಮ ಬೆಂಕಿ ಹಾಕೊಂಡಾಗ ದರ್ಶನ್ ಬಂದು ನಮ್ಗೆ ಸಹಾಯ ಮಾಡಿದ್ದು; ಯಾರಿಗೂ ಗೊತ್ತಿರದ ಸತ್ಯ ಹೇಳಿದ ರಕ್ಷಿತಾ

Latest Videos
Follow Us:
Download App:
  • android
  • ios