Viral Video: ರಸ್ತೆ ಬದಿಯಲ್ಲಿ ವಿಶಿಷ್ಟ ಮೊಮೊ ಮಾಡಿ ಫೇಮಸ್ ಆದ ಹುಡುಗಿ

ಆಹಾರ ರುಚಿಯಾಗಿದ್ರೆ ಎಲ್ಲರೂ ಇಷ್ಟಪಡ್ತಾರೆ. ಅದು ಬೀದಿ ಬದಿಯದ್ದಾಗಿರಲಿ ಇಲ್ಲ ಮನೆಯಲ್ಲಿ ತಯಾರಿಸಿದ್ದಾಗಿರಲಿ. ರುಚಿ ಜೊತೆ ಶುಚಿತ್ವಕ್ಕೆ ಮಹತ್ವ ನೀಡ್ರೆ ಮತ್ತಷ್ಟು ಗ್ರಾಹಕರನ್ನು ಸೆಳೆಯೋದು ಸುಲಭ. ಈ ಹುಡುಗಿ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದಾಳೆ.

B Tech Pass Girl Sets Up Roadside Stalls Sells Unique Types Of Momos Video Viral

ಈಗಿನ ದಿನಗಳಲ್ಲಿ ರಸ್ತೆ ಬದಿ ಆಹಾರ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಮೊದಲು ಜನರು ಸ್ಟ್ರೀಟ್ ಫುಡ್ ತಿನ್ನೋಕೆ ಸ್ವಲ್ಪ ಹೆದರುತ್ತಿದ್ದರು. ಅದಕ್ಕೆ ಯಾವ ನೀರು ಬಳಸ್ತಾರೋ, ಧೂಳು ಎಷ್ಟು ಸೇರಿರುತ್ತೋ ಎಂದು ಕೆಲವರು ಹೇಳಿದ್ರೂ, ಬಿದಿ ಬದಿ ಆಹಾರಕ್ಕೆ ಮಾರುಹೋಗದವರಿಲ್ಲ. ವಾರದಲ್ಲಿ ಒಮ್ಮೆಯಾದ್ರೂ ಬೀದಿಬದಿ ಆಹಾರ ಸೇವನೆ ಮಾಡದೆ ಹೋದ್ರೆ ತಿಂಡಿ ಪ್ರೇಮಿಗಳ ಮನಸ್ಸು ಶಾಂತವಾಗೋದಿಲ್ಲ.

ಹಿಂದೆ ಕಡಿಮೆ ಓದಿದವರಿಗೆ ಸ್ಟ್ರೀಟ್ ಫುಡ್ (Street Food) ವ್ಯವಹಾರ ಎಂಬ ನಂಬಿಕೆಯೊಂದಿತ್ತು. ಈಗ ಸ್ಟ್ರೀಟ್ ಫುಡ್ ಪರಿಕಲ್ಪನೆಯೇ ಬದಲಾಗಿದೆ. ಹೆಚ್ಚು ಓದಿಕೊಂಡಿರುವ ಜನರು ತಮ್ಮ ಶಿಕ್ಷಣ (Education) ಕ್ಕೆ ತಕ್ಕ ಉದ್ಯೋಗ ಹುಡುಕುತ್ತಿಲ್ಲ. ಕಚೇರಿಯಲ್ಲಿ ಕೆಲಸ ಮಾಡೋದು ಅನೇಕರಿಗೆ ಇಷ್ಟವಾಗ್ತಿಲ್ಲ. ರುಚಿಯಾದ ಅಡುಗೆಯನ್ನು ಬಂಡವಾಳ ಮಾಡಿಕೊಂಡು ಬೀದಿ ಬದಿಯಲ್ಲಿ ಸ್ಟಾಲ್ ಹಾಕಿ ಆಹಾರ ಮಾರಾಟ ಮಾಡ್ತಿದ್ದಾರೆ. ಎಂಬಿಎ ಚಾಯ್ ವಾಲಾ (Chai Wala) ಮಾತ್ರವಲ್ಲ ಉನ್ನತ ಶಿಕ್ಷಣ ಮುಗಿಸಿದ ಅನೇಕರು ಸ್ವಂತ ಉದ್ಯೋಗ ಶುರು ಮಾಡಿ ಯಶಸ್ವಿಯಾಗ್ತಿದ್ದಾರೆ. ಬೀದಿ ಬದಿಗೆ ಟೀ, ಕಾಫಿ, ಪಾನಿಪುರಿ ಶಾಪ್ ಗಳನ್ನು ಹಾಕಿ ಕೈತುಂಬ ಸಂಪಾದನೆ ಮಾಡ್ತಿದ್ದಾರೆ.

HEALTH TIPS: ಉಪ್ಪು ಅಥವಾ ಸಕ್ಕರೆ, ಮೊಸರನ್ನು ಯಾವುದರ ಜೊತೆ ತಿಂದ್ರೆ ಆರೋಗ್ಯಕ್ಕೆ ಉತ್ತಮ

ಸಾಮಾಜಿಕ ಜಾಲತಾಣದಲ್ಲಿ ಈಗ ಮೊಮೊಸ್ (Momos) ಮಾಡ್ತಿರುವ ಹುಡುಗಿಯೊಬ್ಬಳು ಸುದ್ದಿಯಾಗಿದ್ದಾಳೆ. ಮೊಮೊಸ್ ಪ್ರೇಮಿಗಳ ಸಂಖ್ಯೆ ಹೆಚ್ಚಾಗ್ತಿದೆ. ಚೈನಿಸ್ ಹೆಸರು ಹೊಂದಿರುವ ಮೊಮೊಸ್ ನೇಪಾಳ ಮತ್ತು ಟಿಬೆಟ್ ಮೂಲದಿಂದ ಬಂದಿದೆ. ಮೊಮೊಸ್ ನಲ್ಲಿ ನಾನಾ ಬಗೆಯಿದೆ. ತರಕಾರಿ ಮೊಮೊಸ್, ಮಾಂಸಹಾರಿ ಮೊಮೊಸ್ ಗಳನ್ನು ನಾವು ತಯಾರಿಸಬಹುದು. ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ಹುಡುಗಿ ವಿಶಿಷ್ಟ ಮೊಮೊಸ್ ತಯಾರಿಸಿದ್ದಾಳೆ. ಬೀದಿ ಬದಿಯಲ್ಲಿ ಆಹಾರ ಮಳಿಗೆ ಶುರು ಮಾಡಿರುವ ಹುಡುಗಿ ಹೊಸ ಶೈಲಿಯಲ್ಲಿ ಮೊಮೊಗಳನ್ನು ಮಾರಾಟ ಮಾಡುತ್ತಿದ್ದಾಳೆ. ಈ ಮೊಮೊಗಳನ್ನು ನಾಲ್ಕು ಸಣ್ಣ ಭಾಗಗಳಾಗಿ ವಿಂಗಡಿಸಲಾಗಿದೆ. ಈ ಭಾಗಗಳಲ್ಲಿ  ಹುಡುಗಿ ನಾಲ್ಕು ವಿಧದ ಚಟ್ನಿಗಳನ್ನು ಸೇರಿಸುವ ಮೂಲಕ ತನ್ನ ಗ್ರಾಹಕರಿಗೆ ಮೊಮೊ ಸರ್ವ್ ಮಾಡ್ತಾಳೆ.  

Healthy Food: ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿದ್ರೆ ಕೂಲ್ ಆಗಿರ್ತೀರಿ

ಸ್ವಾವಲಂಭಿ ಹುಡುಗಿಯ ಕೆಲಸವನ್ನು ಬಳಕೆದಾರರು ಮೆಚ್ಚಿಕೊಂಡಿದ್ದಾರೆ. thehungrysurati ಹೆಸರಿನ ಇನ್ಸ್ಟಾಗ್ರಾಮ್ ( Instagram) ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದ್ರ ಜೊತೆಯಲ್ಲೇ ಬಳಕೆದಾರ ಲೊಕೇಶನ್ ಕೂಡ ಹಂಚಿಕೊಂಡಿದ್ದಾರೆ. ಈಕೆ ಬಿ.ಟೆಕ್ ಓದಿದ್ದು, ಸ್ವಂತ ವ್ಯವಹಾರಕ್ಕೆ ಕೈ ಹಾಕಿದ್ದಾಳೆ. ಕಾಲೇಜು ಹುಡುಗಿ ರುಚಿಕರವಾದ ಮೊಮೊಸ್ ಮಾರುತ್ತಿದ್ದಾಳೆ.. ನೀವು ಇದನ್ನು ಪ್ರಯತ್ನಿಸಿದ್ದೀರಾ? ಎಂಬ ಶೀರ್ಷಿಕೆ ಹಾಕಲಾಗಿದೆ. 
ಮೊಮೊಸ್ ಒಳಗೆ ಸ್ಟಪ್ಪಿಂಗ್ ಹಾಕಿ ಉಗಿಯಲ್ಲಿ ಬೇಯಿಸುವ ಹುಡುಗಿ ನಂತ್ರ ನಾಲ್ಕೂ ಭಾಗಕ್ಕೆ ಒಂದೊಂದು ರೀತಿಯ ಚಟ್ನಿಯನ್ನು ಹಾಕುತ್ತಾಳೆ. ನಂತ್ರ ಶುದ್ಧ ಪ್ಲೇಟ್ ನಲ್ಲಿ ಮೊಮೊಸ್ ಇಟ್ಟು ಗ್ರಾಹಕರಿಗೆ ನೀಡ್ತಾಳೆ. ಶುದ್ಧತೆ ಬಗ್ಗೆಯೂ ಹುಡುಗಿ ಹೆಚ್ಚು ಗಮನ ನೀಡಿದ್ದಾಳೆ. 

ಸಾಮಾಜಿಕ ಜಾಲತಾಣ ಬಳಕೆದಾರರು ಹೇಳೋದೇನು? : ಈ ವಿಡಿಯೋವನ್ನು ಈವರೆಗೆ 8 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಕೊನೆಗೂ ಹೈಜಿನಿಂಗ್ ಸ್ಟ್ರೀಟ್ ಫುಡ್ ಇಂಡಿಯಾದಲ್ಲಿ ಸಿಗ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಬಿ.ಟೆಕ್ ಪಾನಿಪುರಿ ಹುಡುಗಿಯಂತೆ ಈಕೆ ಫೋಸ್ ನೀಡ್ತಾ ಇಲ್ಲ. ತನ್ನ ಕೆಲಸ ತಾನು ಮಾಡ್ತಿದ್ದಾಳೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇಂಥ ರೀಲ್ಸ್ ಇಷ್ಟವಾಗುತ್ತೆ, ಯುವಜನತೆಯನ್ನು ಇದು ಪ್ರೋತ್ಸಾಹಿಸುತ್ತೆ ಅಂತಾ ಒಬ್ಬರು ಬರೆದ್ರೆ, ಒಬ್ಬರೇ ಎಲ್ಲ ಮೊಮೊಸ್ ಗೆ ಚಟ್ನಿ ಹಾಕೋದು ಕಷ್ಟ. ಜನ ಜಾಸ್ತಿ ಬರ್ತಿದ್ದಂತೆ ಹೊಣೆ ಹೆಚ್ಚಾಗುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ. 

Latest Videos
Follow Us:
Download App:
  • android
  • ios