Diwali 2022: ಬೇಕಾಬಿಟ್ಟಿ ತಿಂದು ಆರೋಗ್ಯ ಕೆಡ್ಬಾರ್ದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

ವರ್ಷದ ಕೊನೆಯ ಹಬ್ಬ ದೀಪಾವಳಿ. ಹೀಗಾಗಿಯೇ ಹಬ್ಬವನ್ನು ತುಸು ಗ್ರ್ಯಾಂಡ್ ಆಗಿಯೇ ಸೆಲಬ್ರೇಟ್ ಮಾಡಲಾಗುತ್ತೆ. ಬಗೆಬಗೆಯ ತಿನಿಸು, ಸ್ವೀಟ್ಸ್‌ಗಳನ್ನು ಸಿದ್ಧಪಡಿಸಲಾಗುತ್ತೆ. ಆದ್ರೆ ಹಬ್ಬದ ಖುಷಿಯಲ್ಲಿ ಇವೆಲ್ಲವನ್ನು ಬೇಕಾಬಿಟ್ಟಿ ತಿನ್ನೋದು ಒಳ್ಳೇದಲ್ಲ ನೋಡಿ. ಹಬ್ಬದ ದಿನ, ಹಬ್ಬದ ನಂತರ ಆರೋಗ್ಯ ಕೆಡ್ಬಾರ್ದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು.

Diwali 2022:  Ayurvedic Principles To Follow For Guilt Free Festive Season Vin

ಹಬ್ಬಗಳ ಸಮಯದಲ್ಲಿ ನಾವು ಮನೆಯಲ್ಲಿ ವಿಶೇಷ ಅಡುಗೆಯನ್ನು ಮಾಡುತ್ತೇವೆ,  ತಯಾರಿಸಿದ ಬಗೆಬಗೆಯ ತಿನಿಸುಗಳನ್ನು ತುಸು ಹೆಚ್ಚಿನ ಪ್ರಮಾಣದಲ್ಲೇ ತಿನ್ನುತ್ತೇವೆ. ಹೀಗೆ ಭರ್ಜರಿ ಊಟದ ನಂತರ ಆರೋಗ್ಯ ಸಮಸ್ಯೆ ಕಾಡಲು ಶುರುವಾಗುತ್ತದೆ. ಈ ರೀತಿಯ ಚಿಂತೆಗಳು ಹಬ್ಬದ ಸಂಭ್ರಮವನ್ನು ಹಾಳುಮಾಡುತ್ತವೆ. ಅನಗತ್ಯ ಮತ್ತು ಕ್ಯಾಲೋರಿಗಳು ಎಂದಿಗೂ ಆರೋಗ್ಯಕ್ಕೆ ಉತ್ತಮವಲ್ಲ. ಹೀಗಾಗಿ ಮಿತವಾದ ಸೇವನೆಯ ಬಗ್ಗೆ ಆಯ್ಕೆ ಮಾಡಬೇಕು. ಸಾಮಾನ್ಯ ಉಪಹಾರವನ್ನು ತ್ಯಜಿಸಲು ಮತ್ತು ದೀಪಾವಳಿ ವಿಶೇಷ ತಿಂಡಿಗಳನ್ನು ತಿನ್ನಲು ಬಯಸುತ್ತಿದ್ದರೆ ಅದು ಅತಿರೇಕಕ್ಕೆ ಹೋಗುವುದನ್ನು ತಡೆಯಬೇಕು. ಎಲ್ಲವೂ ಮಿತವಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಅಂಗಡಿಯ ತಿಂಡಿಗಿಂತ ಮನೆಯಲ್ಲೇ ತಯಾರಿಸಿದ ಆಹಾರ ಪದಾರ್ಥಗಳು ಬಹಳ ಒಳ್ಳೆಯದು. 

ಹಬ್ಬದ ಆಹಾರವನ್ನು (Festival food) ಆನಂದಿಸುವ ಮೊದಲು ಮತ್ತು ನಂತರ ನೀವು ಏನು ಸೇವಿಸುತ್ತೀರಿ ಅಥವಾ ಮಾಡುತ್ತೀರಿ ಎಂಬುದೂ ಆರೋಗ್ಯದ (Health) ಮೇಲೆ ಬಹಳಷ್ಟು ವ್ಯತ್ಯಾಸವನ್ನು ಉಂಟುಮಾಡಬಹುದು. ಹೆಚ್ಚು ನಡೆಯುವುದು, ಹೆಚ್ಚು ನಾರಿನಂಶವಿರುವ ಆಹಾರ ಸೇವನೆ, ಸಾಕಷ್ಟು ನೀರು (Water) ಕುಡಿಯುವುದು, ವ್ಯಾಯಾಮ ಮಾಡುವುದು ಮತ್ತು ಕ್ಯಾಲೋರಿ ಅಂಶದಲ್ಲಿ ಸ್ವಲ್ಪ ಹೆಚ್ಚಿರುವ ವಿಷಯವನ್ನು ಸಮತೋಲನಗೊಳಿಸಲು ಆಹಾರದಲ್ಲಿ ಕೆಲವು ಪರಿಣಾಮಕಾರಿ ಪ್ರೋಬಯಾಟಿಕ್‌ಗಳನ್ನು ಸೇರಿಸುವುದು ಒಳ್ಳೆಯದು. ಆದರೆ ಇವಿಷ್ಟು ಅಲ್ಲದೆಯೂ ಆರೋಗ್ಯ ಕಾಪಾಡಲು ನೀವು ಕೆಲವೊಂದು ಟಿಪ್ಸ್ ಫಾಲೋ ಮಾಡಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ.

Festival Tips: ದೀಪಾವಳಿ ಅಂದ್ರೆ ಸಿಹಿ ಸಂಭ್ರಮ, ಡಯಟ್ ಮರೀಬೇಡಿ

ಹಬ್ಬದ ಸಮಯದಲ್ಲಿ ಪಾಲಿಸಬೇಕಾದ ಆರೋಗ್ಯ ಸಲಹೆಗಳು
ಸಮಯಕ್ಕೆ ಸರಿಯಾಗಿ ತಿನ್ನಿರಿ: ಹಬ್ಬದ ಸಮಯದಲ್ಲಿ ಬೇಕಾಬಿಟ್ಟಿ ತಿನ್ನುವ ಅಭ್ಯಾಸ (Habit) ಚೆನ್ನಾಗಿರುತ್ತದೆ. ಆದರೆ ಹಬ್ಬದ ಸಮಯದಲ್ಲಿ ಖುಷಿಯಲ್ಲಿ ಹೀಗೆ ಬೇಕಾಬಿಟ್ಟಿ ತಿಂದು ಬಿಟ್ಟರೆ ಆಮೇಲೆ ಆರೋಗ್ಯ ಸಮಸ್ಯೆ ಕಾಡಬಹುದು. ನಿಮಗೆ ಹಸಿವಾಗದಿದ್ದರೆ, ಲಘು ಆಹಾರವನ್ನು ಮಾತ್ರ ಸೇವಿಸಿ. ಮುಖ್ಯ ಊಟಗಳ ನಡುವೆ 4-6 ಗಂಟೆಗಳ ಅಂತರವನ್ನು ಇರಿಸಿ. ಎರಡು ಊಟದ ಮಧ್ಯೆ ನೀವು ಹಸಿದಿದ್ದಲ್ಲಿ ಮಾತ್ರ ಕೆಲವು ಬೀಜಗಳು, ಹಣ್ಣುಗಳು ಅಥವಾ ಸಲಾಡ್‌ಗಳು ಮತ್ತು ಹಣ್ಣು (Fruits), ತರಕಾರಿ (Vegetable) ರಸವನ್ನು ಸೇವಿಸಬಹುದು. ಇದು ನಿಮ್ಮ ಚಯಾಪಚಯವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ದೇಹಕ್ಕೆ (Body) ಸರಿಯಾದ ಪೋಷಣೆಯನ್ನು ಒದಗಿಸುತ್ತದೆ ಎಂದು ಖಚಿತಪಡಿಸುತ್ತದೆ.

ಅಡುಗೆಗೆ ತಾಜಾ ಮಸಾಲೆ ಪುಡಿ ಬಳಸಿ: ಹಬ್ಬದ ಅಡುಗೆಯಲ್ಲಿ ಬಳಸುವ ಮಸಾಲಾ ಪುಡಿಗಳು ಆರೋಗ್ಯಕರವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಳೆಯ ಸ್ಟಾಕ್ ಪುಡಿಗಳನ್ನು ಬಳಸುವುದಕ್ಕಿಂತ ತಾಜಾ ಮಸಾಲೆ ಪುಡಿಗಳನ್ನೇ ಹೆಚ್ಚು ಬಳಸಿ ಅಡುಗೆ ಮಾಡಿ. ಇವು ಆರೋಗ್ಯವನ್ನು ಚೆನ್ನಾಗಿಡುತ್ತದೆ. 

ಅಕ್ಕಿ ಗಂಜಿ ಸೇವಿಸಿ: ದಕ್ಷಿಣ ಭಾರತದ ಗಂಜಿ, ಉತ್ತರಭಾರತದ ಖಿಚಡಿ, ಅಕ್ಕಿ ಮತ್ತು ಮಸೂರದಿಂದ ತಯಾರಿಸಿದ ಆಹಾರ ಹೆಚ್ಚಿನ ಭಾರತೀಯರಿಗೆ ಆರಾಮದಾಯಕ ತಿನಿಸಾಗಿದೆ. ಇದು ಹೊಟ್ಟೆಯನ್ನು ಆರಾಮವಾಗಿಬಿಡುತ್ತದೆ. ಹೊಟ್ಟೆನೋವು (Stomach pain), ಮಲಬದ್ಧತೆ (Constipation) ಮೊದಲಾದ ಸಮಸ್ಯೆ ಕಾಡುವುದಿಲ್ಲ. ಹಬ್ಬದ ದಿನಗಳಲ್ಲಿ ಬಗೆಬಗೆಯ ಭಕ್ಷ್ಯ ತಿಂದ ನಂತರ ಒಂದು ಹೊತ್ತಿಗೆ ಗಂಜಿ ಸೇವಿಸುವುದನ್ನು ಮರೆಯದಿರಿ. 

Diwali 2022: ಹಬ್ಬದ ಖುಷೀಲಿ ಹೆಚ್ಚು ಡ್ರೈಫ್ರೂಟ್ಸ್ ತಿನ್ಬೇಡಿ, ತೂಕ ಹೆಚ್ಚಾಗ್ಬೋದು

ನಿಂಬೆ ರಸ ಸೇರಿಸಿದ ನೀರು ಕುಡಿಯಿರಿ: ಹಬ್ಬದೂಟದ ಸಮಯದಲ್ಲಿ ತಣ್ಣೀರು ಅಥವಾ ಐಸ್ ಕ್ಯೂಬ್‌ಗಳನ್ನು ತಪ್ಪಿಸಿ. ನೀವು ಅದನ್ನು ಸಕ್ಕರೆಯ ಬದಲಿಗೆ ಸಾವಯವ ಬೆಲ್ಲ (Jaggery) ಅಥವಾ ಜೇನುತುಪ್ಪದೊಂದಿಗೆ ಸಿಹಿಗೊಳಿಸಬಹುದು. ಅಥವಾ ನೀರಿಗೆ ನಿಂಬೆ ರಸವನ್ನು ಸೇರಿಸಿ ಕುಡಿಯುವುದು ತುಂಬಾ ಒಳ್ಳೆಯದು.

ಅರಿಶಿನ ಸೇರಿಸಿದ ಹಾಲು ಕುಡಿಯಿರಿ: ಹದ ಬಿಸಿಯಾಗಿರುವ ಹಾಲಿಗೆ ಒಂದು ಚಿಟಿಕೆ ಸಾವಯವ ಅರಿಶಿನ ಪುಡಿ (Turmeric powder) ಸೇರಿಸಿ ಅದನ್ನು ಸಾವಯವ ಜೇನುತುಪ್ಪ (Honey)ದೊಂದಿಗೆ ಸಿಹಿಗೊಳಿಸಿ ಕುಡಿಯುವುದು ತುಂಬಾ ಒಳ್ಳೆಯದು.

ಆಯುರ್ವೇದ ಗಿಡಮೂಲಿಕೆ ಚಹಾ ಸೇವನೆ: ಆರ್ಯುವೇದ ಗಿಡಮೂಲಿಕೆಗಳ ಚಹಾ (Tea) ಸೇವನೆ ಹೊಟ್ಟೆಯ ಆರೋಗ್ಯವನ್ನು ಸುಸ್ಥಿರವಾಗಿಡುತ್ತದೆ. ಅಜೀರ್ಣ, ಅತಿಸಾರ ಮೊದಲಾದ ಸಮಸ್ಯೆಗಳು ಕಾಡುವ ಭಯವಿರುವುದಿಲ್ಲ.

ಚೆನ್ನಾಗಿ ನಿದ್ರೆ ಮಾಡಿ: ಆಹಾರ, ವ್ಯಾಯಾಮ (Exercise) ಮತ್ತು ನಿದ್ರೆ ಆರೋಗ್ಯದ ಮೂರು ಆಧಾರಸ್ತಂಭಗಳು. ಆದ್ದರಿಂದ ದಯವಿಟ್ಟು ನೀವು ಆರೋಗ್ಯಕರವಾಗಿ ತಿನ್ನುವುದನ್ನು ಖಚಿತಪಡಿಸಿಕೊಳ್ಳಿ. ಹಬ್ಬವೆಂದು ದಿನವಿಡೀ ತಿರುಗಾಡುವ ಬದಲು ಕಣ್ತುಂಬಾ ನಿದ್ದೆ (Sleep) ಮಾಡಿ. ಸಾಕಷ್ಟು ವ್ಯಾಯಾಮವನ್ನು ಮಾಡಿ.

ಹಬ್ಬದ ಸಮಯದಲ್ಲಿ ಏನನ್ನು ತಿನ್ನಬಾರದು ?
ಶೀತ, ಹೆಪ್ಪುಗಟ್ಟಿದ, ಅರ್ಧ ಬೇಯಿಸಿದ ಮತ್ತು ಡೀಪ್ ಫ್ರೈ ಮಾಡಿದ ಆಹಾರಗಳನ್ನು ಸಾಧ್ಯವಾದಷ್ಟು ತಪ್ಪಿಸಿ. ಮೈದಾದಿಂದ ತಯಾರಿಸಿದ ಆಹಾರವನ್ನು ತಪ್ಪಿಸಿ.ಬಿಳಿ ಬ್ರೆಡ್, ಬನ್, ರಸ್ಕ್, ಪರೋಟಾಗಳು, ಬೇಕರಿ ವಸ್ತುಗಳು ಮತ್ತು ಇತರ ರೀತಿಯ ಆಹಾರಗಳ ಸೇವನೆ ಒಳ್ಳೆಯದಲ್ಲ. ಅಲ್ಕೋಹಾಲ್ ಸೇವನೆ ಮಾಡದಿರಿ.

Latest Videos
Follow Us:
Download App:
  • android
  • ios